ದುರಾಸೆ ಮತ್ತು ಷಾಮೀಲು - ಒಂದು ಪಕ್ಷಿ ನೋಟ

 ಕಳೆದ ವಾರ, ಸಾರ್ವಜನಿಕ ಭೂಮಿ ಸಂರಕ್ಷಣೆ ಮತ್ತು ಹಿಂಪಡೆಯುವ ಸಲುವಾಗಿ ರಚಿಸಲಾದ ಕಾರ್ಯಪಡೆಯ ಅಧ್ಯಕ್ಷರಾದ ವಿ.ಬಾಲಸುಬ್ರಮಣ್ಯಂ ಅವರ ವಿಸ್ತೃತ ಸಂದರ್ಶನದಲ್ಲಿ, ಅದರ ಹಿನ್ನೆಲೆ, ಒಂದು ವಿಹಂಗಮ ನೋಟ ಮತ್ತು ಕಾರ್ಯಪಡೆ ಮತ್ತು ಸಕರ್ಾರದ ನಡುವಿನ ತಿಕ್ಕಾಟದ ಕುರಿತು ನೇರವಾಗಿ ಅವರ ಬಾಯಲ್ಲೇ ಕೇಳಿದಿರಿ. ಆದರೆ ಈ ವರದಿಯ ಅಸ್ತಿತ್ವವನ್ನೇ ಈ ಸಕರ್ಾರ ಅಲ್ಲಗಳೆಯುತ್ತಿದೆ! ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೂ ಸೇರಿ ಅನೇಕ ಪ್ರಮುಖ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದರೂ ಕಂದಾಯ ಮಂತ್ರಿ ಕರುಣಾಕರ ರೆಡ್ಡಿ ಅಸಲು ಅದನ್ನು ಗುರುತಿಸುತ್ತಲೂ ಇಲ್ಲ. ಅಲ್ಲಿಗೆ ಈ ದೇಶದ ನೂರಾ ಎಂಟು ಕಮೀಷನ್ ಗಳ ಹಣೆ ಬರಹವೇ ಇದಕ್ಕೂ ಬಂದಿದೆ. ಕನಿಷ್ಠ ಈ ಕಾರ್ಯಪಡೆಯ ವರದಿ ಸರಕಾರೀ  ದಾಖಲೆ ಕೂಡ ಆಗಲಿಲ್ಲ. ಮೊದಲೆರಡು ದಿನ ದೊಡ್ಡ ಗದ್ದಲವೇ ಆಯಿತು. ಕರುಣಾಕರ ರೆಡ್ಡಿ ಪಟ್ಟು ಸಡಿಸಲಿಲ್ಲ. ಮೂರು ದಿನ ಗದ್ದಲ, ನಂತರ ನಿಶ್ಚಲ. ಮತ್ತೊಂದು ಸುದ್ದಿಯ ಬೆನ್ನತ್ತಿ ಸವಾರಿ ಹೊರಟೇ ಬಿಟ್ಟಿತು ಮಾಧ್ಯಮ. ಬಾಲಸುಬ್ರಮಣ್ಯಂಥರದವರು ಸೋಲುವುದೇ ಇಲ್ಲಿ. ಮೊನ್ನೆಯ ಸಂದರ್ಶನದಲ್ಲಿ ಸರ್ ಈ ಹೋರಾಟದ ಮುಂದಿನ ನಡೆ ಏನು ಎಂದು ಕೇಳಿದರೆ, ನನ್ನ ಕೆಲಸ ನಾನು ಮಾಡಿದ್ದೇನೆ. ವರದಿಯನ್ನು ಸಾರ್ವಜನಿಕವೂ ಮಾಡಿದ್ದೇನೆ. ಇನ್ನು ಆಸಕ್ತರು ಇದನ್ನು ಮುಂದುವರೆಸಬೇಕು - ಎಂದು ನಿಟ್ಟುಸಿರಿಟ್ಟಿದ್ದರು. ಯಾರದು ಆಸಕ್ತರು? ಯಾವ ರೀತಿಯ ಮುಂದುವರಿಕೆ? ಅಸಲಿಗೆ ಅದರ ಕುರಿತು ಯಾರೂ ಮಾತೂ ಕೂಡ ಆಡುತ್ತಿಲ್ಲವೆ? ಅಲ್ಲಿಗೆ ಈ ಕಾರ್ಯಪಡೆಯ 2 ವರ್ಷದ ಶ್ರಮ ಹೊಳೆಯ ಹುಣಿಸೇ ಹಣ್ಣು ತೊಳೆದ ಹಾಗೇನಾ? ಇವತ್ತು ಮಾಹಿತಿಯೇ ಒಂದು ಆಯುಧ. ಅದು ನಮ್ಮ ಹಕ್ಕು ಕೂಡ. ಬಾಲಸುಬ್ರಮಣ್ಯಂ ಅವರು ಕೂಡ ಇದೇ ನಿಟ್ಟಿನಲ್ಲಿ ವರದಿಯನ್ನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದಾರೆ. ವರದಿಯನ್ನು ಸರ್ಕಾರ ಗುರುತಿಸದೇ ಹೋದ ಸಂದರ್ಭದಲ್ಲಿ ಅದರ ವಿಸ್ತೃತ ಚರ್ಚೆ  ಕಾರ್ಯಪಡೆಗೆ ನಾವು ಸಲ್ಲಿಸುವ ಗೌರವ. ಈ ನಿಟ್ಟಿನಲ್ಲಿ ನಿಮ್ಮ ನನ್ನದೊಂದು ಸಣ್ಣ ಪ್ರಯತ್ನ. 
ನಿಮಗೀಗಾಗಲೇ ತಿಳಿದಿರುವಂತೆ, 2005ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದಿರುವ ಸರಕಾರೀ ಭೂಮಿಯ ಒತ್ತುವರಿಯನ್ನು ಗುರುತಿಸಲು ಎ.ಟಿ.ರಾಮಸ್ವಾಮಿಯವರ ನೇತೃತ್ವದ ಒಂದು ಜಂಟಿ ಸದನ ಸಮತಿಯನ್ನು ನೇಮಿಸಲಾಯಿತು. ಎರಡು ವರದಿ ಸಲ್ಲಿಸಿದ್ದ ಆ ಸಮಿತಿ ಇನ್ನೂ ಅಸ್ತಿತ್ವದಲ್ಲಿರುವಾಗಲೇ ವಿಧಾನಸಭೆಯೇ ವಿಸರ್ಜನೆಯಾಗಿ ಹೋಯಿತು. ನಂತರ ಈ ಸರ್ಕಾರ ಚುನಾಯಿತವಾಯಿತು. 2009ರಲ್ಲಿ ಎ.ಟಿ.ರಾಮಸ್ವಾಮಿಯವರ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಸದನದಲ್ಲಿ ಗದ್ದಲವೆದ್ದಾಗ, ಮುಖ್ಯಮಂತ್ರಿಗಳು ಅದಕ್ಕುತ್ತರವಾಗಿ ಈ ಕಾರ್ಯಪಡೆಯನ್ನು ರಚಿಸಿದರು. ಇದು ಬೆಂಗಳೂರು ನಗರವಲಯಕ್ಕಷ್ಟೇ ಸೀಮಿತವಾಗದೆ ಇಡಿಯ ರಾಜ್ಯಕ್ಕೆ ವಿಸ್ತರಿಸಬೇಕೆಂಬ ಆಗ್ರಹದ ಹಿನ್ನೆಲೆಯಲ್ಲಿ ಇದರ ಕಾರ್ಯವ್ಯಾಪ್ತಿಯನ್ನು ಇಡಿಯ ರಾಜ್ಯವೆಂದು ನಿಗದಿಗೊಳಿಸಿದರು. ಈ ಕುರಿತು 2009ರ ಸೆಪ್ಟೆಂಬರ್ 19ರಂದು ಸರಕಾರೀ ಆದೇಶ RD 556 LGB 2009, ಅನ್ನು ಹೊರಡಿಸಿ ಈ ಕಾರ್ಯಪಡೆಯನ್ನು ರಚಿಸಲಾಯಿತು. ಈ ಆದೇಶದಲ್ಲಿ ಈ ಕಾರ್ಯಪಡೆಯ ಮ್ಯಾಂಡೇಟನ್ನು ಕೂಡ ಅತ್ಯಂತ ಸ್ಪಷ್ಟವಾಗಿ 11 ಪಾಯಿಂಟುಗಳಾಗಿ ಪಟ್ಟಿ ಮಾಡಲಾಗಿದೆ. ಈ ಕಾರ್ಯಪಡೆಗೆ ವಿ. ಬಾಲಸುಬ್ರಮಣ್ಯಂ ಅವರು ಅಧ್ಯಕ್ಷರಾಗಿದ್ದರೆ ಅದಲ್ಲದೆ ಇತರೆ ತತ್ಸಂಬಂಧಿ ಇಲಾಖೆಗಳ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ. ಇವರ ಒಟ್ಟು ಸಂಖ್ಯೆ 16, ಒಟ್ಟು 17 ಸದಸ್ಯರ ಕಾರ್ಯಪಡೆ. ಮೊದಲಿಗೆ ರಾಜ್ಯಾದ್ಯಂತ ಸಾರ್ವಜನಿಕ ಭೂಮಿಯ ಒತ್ತುವರಿಯನ್ನು ಗುರುತಿಸಿವುದು. ಕಾರ್ಯಪಡೆ ಎರಡು ಬಾರಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಯಿತು. ಹೀಗೆ ಸಾರ್ವಜನಿಕ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಕೆಳಕಂಡಲ್ಲಿ ದೂರು ನೀಡಿ ಎಂದು ವಿನಂತಿಸಿದ್ದರು. ಇದಕ್ಕುತ್ತರವಾಗಿ ಒಟ್ಟು 1600 ದೂರುಗಳು ಬಂದವು. ಇದಲ್ಲದೆ ಕಂದಾಯ, ಅರಣ್ಯ, ಶಿಕ್ಷಣ, ವಕ್ಫ್, ಹೀಗೆ ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ತಮ್ಮ ಅವಗಾಹನೆಗೆ ಬಂದ ಒತ್ತುವರಿ ಪ್ರಕರಣಗಳನ್ನು ತಿಳಿಸುವಂತೆ ಕೋರಲಾಯಿತು. ಕಂದಾಯ ಇಲಾಖೆಯೊಂದೇ ಅಂದಾಜು 11 ಲಕ್ಷ ಎಕರೆಗಳನ್ನು ಮತ್ತು ಅರಣ್ಯ ಇಲಾಖೆ 1.65 ಲಕ್ಷ ಎಕರೆಗಳನ್ನು ವರದಿ ಮಾಡಿತು. ಇದರಲ್ಲಿ ಯಾವುದೇ ಭೇದಭಾವವೇ ಇಲ್ಲ. ಗುಡಿ-ಗುಂಡಾರ, ಗೋಮಾಳ, ಗುಂಡುತೋಪು, ಅರಣ್ಯ ಭೂಮಿ, ಕೆರೆಯಂಗಳ..ಎಲ್ಲವೂ ಕಬ್ಜಾ!

ಕರ್ನಾಟಕದಲ್ಲಿ ಒಟ್ಟು 484 ಲಕ್ಷ ಎಕರೆಗಳಷ್ಟು ಭೂಭಾಗ ಬರುತ್ತದೆ. ಅದರಲ್ಲಿ 265 ಲಕ್ಷ ಎಕರೆಗಳಷ್ಟು ಭೂಭಾಗ ಸಾಗುವಳಿಯಲ್ಲಿದೆ. ಇದರಲ್ಲಿ ಗೋಮಾಳ, ಗುಡಿ-ಗುಂಡಾರ, ಸ್ಮಶಾನ, ಗುಂಡುತೋಪು, ಕೆರೆಯಂಗಳ, ಅರಣ್ಯ, ಕಂದಾಯ, ವಕ್ಫ್ ಮತ್ತು ಮುಜರಾಯಿ ಇಲಾಖೆಗಳಡಿ ಒಟ್ಟು 109 ಲಕ್ಷ ಎಕರೆಗಳಿವೆ. ಅಂದರೆ ಕರ್ನಾಟಕದ ಒಟ್ಟು ಭೂಪ್ರದೇಶದ ಶೇ.22.5ರಷ್ಟು ಮತ್ತು ಶಾಗುವಳಿ ಭೂಮಿಯ ಶೇ.41ರಷ್ಟು ಭೂಪ್ರದೇಶ ಸರಕಾರದ್ದೇ ಸ್ವತ್ತು. ಇದರಲ್ಲಿ ಈ ಕಾರ್ಯಪಡೆ ಅಂದಾಜು 12 ಲಕ್ಷ ಎಕರೆಗಳಷ್ಟು ಅಕ್ರಮ ಒತ್ತುವರಿಯನ್ನು ಗುರುತಿಸಿದೆ. ಅಂದರೆ ಸರಕಾರೀ ಭೂಮಿಯ ಶೇ.10ರಷ್ಟು ಭೂಮಿ ಅಕ್ರಮ ಒತ್ತುವರಿಯಾಗಿದೆ. ಇದರಲ್ಲೂ ಅಪಸವ್ಯಗಳಿವೆ. ಕರ್ನಾಟಕವನ್ನು - ಬೆಂಗಳೂರು, ಮೈಸೂರು, ಬೆಳಗಾಂ, ಗುಲ್ಬರ್ಗ- ಎಂದು 4 ವಲಯಗಳನ್ನಾಗಿ ವಿಂಗಡಿಸಿಕೊಳ್ಳಲಾಗಿದೆ. ವರದಿಯ ಪ್ರಸ್ತಾವನೆಯಲ್ಲಿಯೇ ಬೆಳಗಾಂ ವಲಯದ ಕಾರ್ಯವಿಧಾನದ ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಏಳು ಜಿಲ್ಲೆಗಳಿಂದ ಕೂಡಿದ ಬೆಳಗಾವಿ ವಿಭಾಗವು ಕಂದಾಯ ಇಲಾಖೆಯ ಅಧಿಕಾರ ವ್ಯಾಪ್ತಿಯಡಿಯಲ್ಲಿ ಕೇವಲ 49,800 ಎಕರೆಗಳ ಒತ್ತುವರಿಯ ಬಗ್ಗೆ ವರದಿ ಮಾಡಿದರೆ, ಗುಲ್ಬರ್ಗ ವಿಭಾಗವು 1 ಲಕ್ಷ 25 ಸಾವಿರ ಎಕರೆಗಳ, ಮೈಸೂರು ವಿಭಾಗವು 4 ಲಕ್ಷ 47 ಸಾವಿರ 342 ಎಕರೆಗಳ, ಮತ್ತು ಬೆಂಗಳೂರು ವಿಭಾಗವು 3 ಲಕ್ಷ 1 ಸಾವಿರದ 708 ಎಕರೆಗಳ ಒತ್ತುವರಿಯ ಬಗ್ಗೆ ವರದಿ ಮಾಡಿದೆ. ಬೆಳಗಾವಿ ಮತ್ತು ಗುಲ್ಬರ್ಗ ವಿಭಾಗಗಳು ಪ್ರದೇಶ ಹಾಗೂ ಜಾನುವಾರುಗಳಿಗೆ ಸಂಬಂಧಿಸಿದಂತೆ ಬೃಹತ್ ಪ್ರಮಾಣದ್ದಾಗಿವೆ ಎನ್ನುವಾಗ, ಕಂದಾಯ ಇಲಾಖೆಯ ಅಧೀನದಲ್ಲಿರುವ ಸಮುದಾಯ ಜಮೀನುಗಳು ಹಾಗೂ ಒತ್ತುವರಿ ಜಮೀನುಗಳು ಸಹಜವಾಗಿಯೇ ಇನ್ನಷ್ಟು ಅಧಿಕ ಪ್ರಮಾಣದ್ದಿರಬೇಕು. ಒಂದು ಮಿತವಾದ ಅಂದಾಜಿಒನ ಪ್ರಕಾರ ಒಟ್ಟು ಒತ್ತುವರಿಯಾದ ಎಲ್ಲ ಸರಕಾರೀ ಜಮೀನುಗಳು ಸರಿಸುಮಾರು 12 ರಿಂದ 15 ಲಕ್ಷ ಎಕರೆಗಳು, ಅಂದರೆ ಇದು ಸರಕಾರೀ ಜಮೀನುಗಳ ಸುಮಾರು ಶೇ.12 ರಿಂದ ಶೇ.15ರಷ್ಟಾಯಿತು - ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಇನ್ನು ವರದಿಯ ಒಂದು ಪಕ್ಷಿನೋಟವನ್ನು ನಾವು ತೆಗೆದುಕೊಳ್ಳುವುದಾದರೆ, ಸಹಜವಾಗಿಯೇ ಕಂದಾಯ, ಅರಣ್ಯ, ಮುಜರಾಯಿ ಮತ್ತು ವಕ್ಫ್ ಇಲಾಖೆಗಳ ಬಳಿ ಬೃಹತ್ ಪ್ರಮಾಣದ ಭೂ ಹಿಡುವಳಿಗಳಿರುವುದರಿಂದ ಅದೇ ಕ್ರಮದಲ್ಲಿ ಈ ಇಲಾಖೆಯ ಭೂಮಿ ಒತ್ತುವರಿ ಪಟ್ಟಿಯೂ ಇದೆ. ಕಂದಾಯ ಇಲಾಖೆಯ 11 ಲಕ್ಷ ಎಕರೆಗಳು, ಅರಣ್ಯ ಇಲಾಖೆಯ 1.65 ಲಕ್ಷ ಎಕರೆಗಳು ಒತ್ತುವರಿಯಾಗಿದೆ. ಇನ್ನು ಜಿಲ್ಲಾವಾರು ಪ್ರಧೇಶಾವಾರು ತೆಗೆದುಕೊಂಡರೆ, ಈ ಕಾಳದಂಧೆಯ ಕೇಂದ್ರ ನೆಲೆ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು. ಇವು ಮೂರನ್ನೂ ನಾವು ಒಂದು ವಲಯವೆಂದೇ ಪರಿಗಣಿಸಬಹುದಾಗಿದೆ. ಈ ವಲಯದಲ್ಲಿ ಒಟ್ಟು 7 ಲಕ್ಷ, 21 ಸಾವಿರದ 225 ಎಕರೆಯಷ್ಟು ಸರಕಾರೀ ಭೂಮಿಯಿದ್ದು, 1 ಲಕ್ಷ 2 ಸಾವಿರದ 606 ಎಕರೆಗಳಷ್ಟು ಚಿನ್ನದ ಬೆಲೆಯ ಭೂಮಿ ಒತ್ತುವರಿಯಾಗಿದೆ.  ನಾವು ಬೆಂಗಳೂರು ನಗರಕ್ಕಷ್ಟೇ ಸೀಮಿತವಾಗಿ ನೋಡುವುದಾದರೆ, ವರದಿಯಾದ ಒತ್ತುವರಿ ಜಮೀನು 27 ಸಾವಿರದ 336 ಎಕರೆಗಳು ಅಂದರೆ ಜಿಲ್ಲೆಯ ಸರಕಾರೀ ಜಮೀನಿನ ಶೇ.21ರಷ್ಟು. ಭೂಮಿಗೆ ಚಿನ್ನದ ಬೆಲೆಯಿರುವ ಈ ಪ್ರದೇಶದಲ್ಲಿ ಒಂದು ಅಂದಾಜಿನಂತೆ ಒಂದು ಎಕರೆಗೆ 1.5 ಕೋಟಿ ಅಂತ ಸುಮ್ಮನೆ ಗುಣಿಸಿದರೆ ಸರ್ಕಾರದ ಬೊಕ್ಕಸಕ್ಕಾದ ನಷ್ಟ 40 ಸಾವಿರ ಕೋಟಿ! ಇನ್ನು ಬೆಂಗಳೂರನ್ನು ಹೊರತುಪಡಿಸಿದರೆ, ರಾಜ್ಯದಲ್ಲಿಯೇ ಘರಿಷ್ಠ ಒತ್ತುವರಿ ಕಂಡು ಬಂದಿರುವುದು ಚಿಕ್ಕಮಗಳೂರಿನ ಜಿಲ್ಲೆಯಲ್ಲಿ. ಅಂದಾಜು ಹದಿನೇಳೂಮುಕ್ಕಾಲು ಲಕ್ಷ ಎಕರೆಗಳ ವಿಸ್ತೀರ್ಣದ ಜಿಲ್ಲೆಯಲಲಿ ಅಂದಾಜು ಒಂಬ್ಬತ್ತೂವರೆ ಲಕ್ಷ ಎಕರೆಗಳಷ್ಟು ಸರ್ಕಾರದ ಸ್ವಾಮ್ಯದಲ್ಲಿದೆ. ಅದರಲ್ಲಿ 1 ಲಕ್ಷ 6 ಸಾವಿರದ 249 ಎಕರೆ ಮತ್ತು 35 ಸಾವಿರದ 946 ಎಕರೆಗಳು ಅಂದರೆ ಒಟ್ಟು 1 ಲಕ್ಷ 42 ಸಾವಿರದ 195 ಎಕರೆಗಳಷ್ಟು ಒತ್ತುವರಿಯಾಗಿದೆ! ಇದು ಬಹುತೇಕ ಶ್ರೀಮಂತ ಕಾಫಿ ಪ್ಲಾಂಟರುಗಳು ತಮ್ಮ ಎಸ್ಟೇಟಿನ ಬೇಲಿ ವಿಸ್ತರಿಸುತ್ತಲೇ ಹೋದ ಪರಿಣಾಮವೆ. ಇದನ್ನು ತೆರವುಗೊಳಿಸಲು ಹೋದರೆ ಮುಖ್ಯಮಂತ್ರಿ `ತಡೆಯಾಜ್ಞೆ' ಕೊಡುತ್ತಾರೆ. ಇನ್ನು ಮುಂದಿನ ಸ್ಥಾನ ಮುಖ್ಯಮಂತ್ರಿಗಳ ತವರು ಶಿವಮೊಗ್ಗೆಯೇ! ಅಂದಾಜು 21 ಲಕ್ಷ ಎಕರೆಗಳ ವಿಸ್ತೀರ್ಣದ ಈ ಜಿಲ್ಲೆಯಲ್ಲಿ 20 ಲಕ್ಷದ 19 ಸಾವಿರದ 883 ಎಕರೆಗಳಷ್ಟು ಸರಕಾರೀ ಸ್ವಾಮ್ಯದಲ್ಲಿಯೇ ಇದೆ! ಇದರಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಗಳ ಒಟ್ಟು 1 ಲಕ್ಷ 11 ಸಾವಿರದ 494 ಎಕರೆಗಳು ಒತ್ತುವರಿಯಾಗಿದೆ. ಅದರಲ್ಲಿ ಕಾರ್ಯಪಡೆಗೆ ತೆರವುಗೋಲೀಸಲು ಶಕ್ಯವಾಗಿರುವುದು ಬರಿಯ 407 ಎಕರೆಗಳಷ್ಟು ಮಾತ್ರ! ಇದು ಮುಖ್ಯಮಂತ್ರಿಯ ಕ್ಷೇತ್ರದ ಕೈಗನ್ನಡಿ.

Proudly powered by Blogger
Theme: Esquire by Matthew Buchanan.
Converted by LiteThemes.com.