2011ರ ರಾಜ್ಯ ಚುನಾವಣೆಗಳ ಕುರಿತ ವಿಶೇಷ ಸರಣಿ - Election `ಪಂಚಾಂಗ' - ನಾಳೆಯಿಂದಲೇ! - ನಿರೀಕ್ಷಿಸಿ..

2011 ಮತ್ತೊಂದು ಮಿನಿ ಮಹಾಸಮರದ ವರ್ಷ. ತಮಿಳು ನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೆರಿಗಳು ಚುನಾವಣೆಗೆ ನಡೆಯುತ್ತಿವೆ. ಅಸಾಮ್ನಲ್ಲಿ ಈಗಾಗಲೇ ಒಂದು ಕಂತಿನ ಮತದಾನವಾಗಿದೆ. ಇನ್ನು ಒಂದೂವರೆ ತಿಂಗಳು ಪ್ರಜಾಪ್ರಭುತ್ವದ ಹಬ್ಬವೇ.  

ಈ ಚುನಾವಣೆಗಳಲ್ಲಿ ಎಲ್ಲರ ಆಸಕ್ತಿ ಕೆರಳಿಸಿರುವುದು ಪಶ್ಚಿಮ ಬಂಗಾಳ. ಸತತ ೩೪ ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಡರಂಗ ಪತನವಾಗಲಿದೆಯೇ? ಇನ್ನು ನಮ್ಮ ನೆರೆಯ ಕೇರಳದಲ್ಲಿ ಎಡರಂಗದ ಸ್ಥಿತಿಯೇನಾಗಬಹುದು? ಒಟ್ಟಾರೆ ಭಾರತದ communist ರಾಜಕಾರಣದ ಸ್ಥಿತಿ ಏನಾಗಲಿದೆ? ಭಾರತದ ರಾಜಕಾರಣದ ಮೇಲೆ ಅದು ಯಾವ ರೀತಿಯ ಪ್ರಭಾವವನ್ನು ಬೀರಲಿದೆ? 

ಇನ್ನು ತಮಿಳು ನಾಡಿನಲ್ಲಿ ತಾನು ಹೋಗುವ ಮೊದಲೇ ತನ್ನ ವಾರಸುದಾರರಿಗೆ ನೆಲೆಗಳನ್ನು ಮಾಡಿಕೊಟ್ಟು ಹೊರಡಬೇಕೆಂದು ಹವಣಿಸುತ್ತಿರುವ ಕರುಣಾನಿಧಿಗೆ ಅಧಿಕಾರ ಅನಿವಾರ್ಯ. ಆದ್ರೆ ಪುರಚ್ಚಿ ತಲೈವಿ? ಯಾರು ಹಿಡಿದಾರು ಅಧಿಕಾರವ? 

ಇನ್ನು ಅಸ್ಸಾಂನಲ್ಲಿ ಸತತ ಎರಡು ಅವಧಿಗೆ ರಾಜ್ಯಭಾರ ನಡೆಸಿರುವ ಕಾಂಗ್ರೆಸ್ ತನ್ನ ಕೋಟೆಯನ್ನು ರಕ್ಷಿಸಿಕೊಳ್ಳಲಿದೆಯೋ? ಅಸ್ಸಾಂ ಗಣ ಪರಿಷತ್? ಅರಬಿಂದೋ ರಾಜಕ್ಹೊವಾನ ಶರಣಾಗತಿಯೊಂದಿಗೆ ಅಲ್ಲಿನ ಸರ್ಕಾರ ULFA ಜೊತೆ ನಡೆಸಿರುವ ಶಾಂತಿ ಮಾತುಕತೆಗಳ ಮುಂದಿನ ಹಾದಿ ಈಗ ಅಸ್ಸಾಮಿಗರ ಕೈಲಿದೆ. ಅಸಲಿಗೆ ಇಲ್ಲಿ ಇದೇ ಮುಖ್ಯ ಚುನಾವಣಾ ವಿಷಯ.  

ಈ ಕುರಿತು ವಿಶ್ಲೇಷಣಾತ್ಮಕ ಲೇಖನ ಸರಣಿ -  "Election `ಪಂಚಾಂಗ' ", ನಾಳೆಯಿಂದಲೇ!

ನಿರೀಕ್ಷಿಸಿ.......

Proudly powered by Blogger
Theme: Esquire by Matthew Buchanan.
Converted by LiteThemes.com.