Our life and future is tied in with the decisions of the environment ministry. SHOMA CHAUDHURY on why we should be interested in the high-voltage story of Jairam Ramesh
ಕೇಂದ್ರ ಪರಿಸರ ಇಲಾಖೆಯ ನಿಜ ಸತ್ವವನ್ನು ಸಾರಿದವರು ನಮ್ಮ ಕನ್ನಡಿಗರೇ ಆದ ಜಯರಾಂ ರಮೇಶ್. ಇವತ್ತು ಪರ್ಯಾವರಣ ಭವನ `ಅಭಿವೃದ್ಧಿ' ಯಾ ಪ್ರಗತಿ ಎಂಬ ಇಂದಿನ ಬಹುಮುಖ್ಯ ಸಂವಾದದ ಕೇಂದ್ರ ವೇದಿಕೆಯಾಗಿದೆ. growth for the sake of growth is the philosophy of cancer cells. ಅಂತಾನೆ ಎಡ್ವರ್ಡ್ ಎಬ್ಬೆ. ಇವತ್ತಿನ ನಮ್ಮ gung -ho growth ನ ಹುಚ್ಚು ಅಮಲಿನ sermon ನಲ್ಲಿ ಇಂಥದೊಂದು ವಿವೇಕವನ್ನು ತುಂಬಲೆತ್ನಿಸುವುದಿದೆಯಲ್ಲ, ಅದು ಸಾಗರದ ವಿರುದ್ಧ ಈಜುವ ಸಾಹಸ. ಅಂಥದೊಂದು ಸಾಹಸದಲ್ಲಿ ನಮ್ಮ ಜಯರಾಂ ರಮೇಶ್ ನಿರತ. ಬೃಹತ್ ಕೈಗಾರಿಕೆಗಳನ್ನು ಮತ್ತು ರಾಷ್ಟ್ರದ ನೈಸರ್ಗಿಕ ಸಂಪತ್ತಿನ ದೋಚುವಿಕೆಗೊಂದು check dam ನಿರ್ಮಿಸಿ ಅತ್ತ ಅವರನ್ನು ಎದುರು ಹಾಕಿಕೊಳ್ಳುತ್ತಿದ್ದರೆ ಇತ್ತ ಅವರು ಒಂದು ಪ್ರಾಜೆಕ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟರೂ ನಮ್ಮ ಹೋರಾಟಗಾರರು ಹುಯಿಲೆಬ್ಬಿಸುತ್ತಾರೆ. ಆದರೆ ಯಾವುದೂ ಬ್ಲಾಕ್ & ವೈಟ್ ಅಲ್ಲ. ಪ್ರತಿಯೊಂದರಲ್ಲೂ ಒಂದು ಕೊಡು ಕೊಳ್ಳುವಿಕೆಯ balancing act ನಡೆದಿರುತ್ತದೆ. ರಮೇಶ್ ಮಾಡುತ್ತಿರುವುದೂ ಅದನ್ನೇ. ಈವರೆಗೂ ೩ ಬಾರಿ ಅವರು ಕೆಲಸ ಕಳೆದುಕೊಳ್ಳುತ್ತಿದ್ದರು. ಇದು ನಾಲ್ಕನೆಯ ಪರೀಕ್ಷೆ. ಈ ಹಿನ್ನೆಲೆಯಲ್ಲಿ ಜಯರಾಂ ರಮೇಶ್ ಅವರ ಮತ್ತು ವಿಸ್ತಾರವಾಗಿ ಅಭಿವೃದ್ಧಿ ಯಾ ಪ್ರಗತಿಯ ಕುರಿತು ನಡೆಯುತ್ತಿರುವ ಸಂವಾದದ ಮೇಲೊಂದು ಕ್ಷಕಿರಣ.
Post a Comment