ದಿನದ ಓದು - ಉದಯ ಇಟಗಿ ಅವರ ಲಿಬಿಯಾ ಕಥನ

ಉದಯ ಇಟಗಿ ನಮ್ಮ ಯಲಬುರ್ಗದ ಮುಧೋಳದವರು. ವೃತ್ತಿಯಿಂದ ಇಂಗ್ಲೀಶ್ ಪ್ರಾಧ್ಯಾಪಕರಾಗಿರುವ ಇವರು ಕಳೆದ ಮೂರೂವರೆ ವರ್ಷಗಳಿಂದ ಲಿಬಿಯಾದ ಸೇಭಾ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದಾರೆ. ಇತ್ತ ಇವರು ಮಧ್ಯಂತರ ರಜೆಯ ಮೇಲೆ ಊರಿಗೆ ಬಂದರೆ ಅತ್ತ ಲಿಬಿಯಾದಲ್ಲಿ ದಂಗೆ ಪ್ರಾರಂಭವಾಗಿದೆ. ಟ್ಯುನೀಸಿಯ, ಈಜಿಪ್ಟ್ ನ ನಾಗರೀಕ ದಂಗೆಗಳಿಗೂ ಲಿಬಿಯಾದ ದಂಗೆಗೂ ಸಾಕಷ್ಟು ವ್ಯತ್ಯಾಸವಿದೆ. ಅಸಲು ಲಿಬಿಯಾದಲ್ಲಿ ದಂಗೆಗೆ ಕಾರಣವಾದರೂ ಏನು? ಇದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಲಿಬಿಯಾದ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಲು ಅಮೆರಿಕ ನಡೆಸುತ್ತಿರುವ ಹುನ್ನಾರವಿದು ಎಂಬ ಕೂಗುಗಳೂ ಇವೆ. ಇದಕ್ಕೆ ಸರಿಯಾಗಿ NATO ಎದ್ದು ಕೂತಿದೆ. ಲಿಬಿಯಾ ಮತ್ತೊಂದು ಅಫಾಘಾನಿಸ್ತನ ಇರಾಕ್ ಆಗಲಿದೆಯಾ? ಕಳೆದ ಮೂರೂವರೆ ವರ್ಷಗಳಿಂದ ಲಿಬಿಯಾದಲ್ಲಿ ನೆಲೆಸಿದ್ದ ಉದಯ್ ಇಟಗಿ ಬರೆದಿರುವ ಅಪರೂಪದ ವಿಶಿಷ್ಠ ಅನುಭವ ಮತ್ತು ಒಳನೋಟಗಳನ್ನೊಳಗೊಂಡ ಅಪರೂಪದ ಲೇಖನ, ಅವರ ಬಿಸಿಲಹನಿ ಬ್ಲಾಗಿನಲ್ಲಿ....

ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ

Proudly powered by Blogger
Theme: Esquire by Matthew Buchanan.
Converted by LiteThemes.com.