ಕಳೆದೊಂದು ವಾರದಿಂದ ರಾಷ್ಟ್ರದ ಎಲ್ಲಾ ಮೀಡಿಯಾಗಳಿಗೂ ಸುಗ್ಗಿಯೋ ಸುಗ್ಗಿ! ಒಂದು ಕಡೆ ಗ್ಲಾಮರಸ್ ಆದ ಐಪಿಎಲ್, ಮತ್ತೊಂದೆಡೆ ಅತ್ಯಂತ ವಿವಾದಿತರಾದ ಶಶಿ ತರೂರ್ ಮತ್ತು ಲಲಿತ್ ಮೋದಿ, ಇವರಿಬ್ಬರ ಮಧ್ಯೆ ಸುನಂದಾ ಪುಷ್ಕರ್ ಎಂಬ ಲೇಡಿ. ಆಕೆ ಶಶಿಯ ಸ್ನೇಹಿತೆ ಬೇರೆ ಎಂಬ ಮಿರ್ಚಿ ಮಸಾಲ! ವ್ಹಾ...ಮೀಡಿಯಾಗೆ ಇದಕ್ಕಿಂತಲೂ ಇನ್ನೇನು ಬೇಕು? ಇದರಲ್ಲಿ ಒಂದು ಬಾಲಿವುಡ್ ಸಿನಿಮಾಗೆ ಬೇಕಾದ ಎಲ್ಲ ಮಸಾಲ ಇದೆ. ಬಿಡುವುದುಂಟೆ? ವಾರದಿಂದ ಯಾವ ಛಾನೆಲ್ಲು ಹಾಕಿದರೂ, ಯಾವ ಪತ್ರಿಕೆ ಓದಿದರೂ ಇದೇ ಸುದ್ದಿ.
ಶಶಿ ತರೂರ್ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ, ಆತನ ರಾಜೀನಾಮೆಗೆ ಆಗ್ರಹ, ಕಾಂಗ್ರೆಸ್ ಕೂಡ ತರೂರ್ರನ್ನು ಸಮರ್ಥಿಸುತ್ತಿಲ್ಲ, ಲಲಿತ್ ಮೋದಿಯ ಕಛೇರಿಗಳ ಮೇಲೆ ಇಡಿ ದಾಳಿ,....ಹೀಗೆ ನಡೆಯುತ್ತಿದೆ ಸುದ್ದಿ ಸ್ಫೋಟಗಳು. ಇದೆಲ್ಲಾ ಸರಿ. ಅಸಲಿಗೆ ನಡೆದಿರುವುದಾದರೂ ಏನು? ಶಶಿ ತರೂರ್ಗೂ ಐಪಿಎಲ್ಗೂ ಏನು ಸಂಬಂಧ? ಈ ಸುನಂದಾ ಪುಷ್ಕರ್ ಯಾರು? ಲಲಿತ್ ಮೋದಿ ಮಾಡಿದ್ದು ತಪ್ಪಾ? ಸದ್ಯ ಎಲ್ಲವೂ ಗೊಂದಲದ ಗೂಡಿನಂತೆ ಕಾಣುತ್ತಿದ್ದರೂ ವಿಷಯ ಸರಳ, ಸ್ಪಷ್ಟ.
ಐಪಿಲ್ ಎಬ್ಬಸಿರುವ ರಾಡಿ ಎಲ್ಲರಿಗೂ ತಿಳಿದಿರುವುದೆ. ಮೊದಲಿಗೆ ಬಿಸಿಸಿಐ ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನ ಅನುಕರಣೆಯಾಗಿ, ಕಪಿಲ್ ದೇವ್ರ ಸಕಾರಣ ಬಂಡಾಯದಿಂದ ಉಗಮವಾದ ಐಸಿಎಲ್ಗೆ ಸೆಡ್ಡು ಹೊಡೆಯಲೋಸುಗ, ಬಿಸಿಸಿಐನ ಉಪಾಧ್ಯಕ್ಷ ಲಲಿತ್ ಮೋದಿ ಎಂಬ ಉದ್ಯಮಿಯ ಮಸ್ತಿಷ್ಕದಲ್ಲಿ ಮೂಡಿದ್ದೇ ಐಪಿಎಲ್ನ ಐಡಿಯಾ. ಅಪಾರ ಪ್ರಮಾಣದ ಹಣದ ಠಿಠಣಜಟಿಣಚಿಟ ಇರುವ ಮಾರುಕಟ್ಟೆಯಾಗಿ ಕಂಡ ಇದನ್ನು ಬಿಸಿಸಿಐ ಜಾರಿಗೆ ತಂದಿತು. ಎಂಟು ತಂಡಗಳನ್ನು ಮಾಡಿ ಕೇವಲ ಆ ತಂಡಗಳ ಹರಾಜಿನಿಂದ ಸುಮಾರು 4000 ಕೋಟಿಗಳಷ್ಟು ಹಣವನ್ನು ಬಾಚಿಕೊಂಡಿತು. ಬಾಲಿವುಡ್ ಮತ್ತು ಇಂಡಿಯಾ ಇಂಕ್ನ ಅನೇಕರು ನೂರಾರು ಕೋಟಿ ಸುರಿದು ಈ ತಂಡಗಳ ಒಡೆಯರಾದರು. ನಂತರ ನಡೆದದ್ದೇ ಅಸಲಿ ತಮಾಷೆ ತಂಡದಲ್ಲಿ ಆಡಲು ಕ್ರಕೆಟಿಗರನ್ನು ಹರಾಜಿನ ಮೂಲಕ ಖರೀದಿಸಲಾಯಿತು. ಇದಕ್ಕೆ ಮೀಡಿಯಾ ಕೊಟ್ಟ ಸುದೀರ್ಘ ಕವರೇಜ್ನಿಂದಾಗಿ ಐಪಿಎಲ್ ತಕ್ಕ ಮಟ್ಟಿನ ಯಶಸ್ಸನ್ನೂ ಸಾಧಿಸುತ್ತಿದೆ. ಮೂರು ವರ್ಷಗಳ ಯಶಸ್ವಿ ಪ್ರದರ್ಶನದ ನಂತರ ಐಪಿಎಲ್ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸುವ ಕೆಲಸಕ್ಕೆ ಕೈ ಹಾಕಿತು. 2011ರ ಐಪಿಎಲ್ ಟೂರ್ನಿಗೆ ಮತ್ತೆರಡು ತಂಡಗಳನ್ನು ಸೇರಿಸುವ ಇರಾದೆಯೊಂದಿಗೆ 5 ನಗರಗಳನ್ನು ಪ್ರಪೋಸ್ ಮಾಡಲಾಯಿತು. ಅಹಮದಾಬಾದ್, ಲಕ್ನೌ, ನಾಗಪುರ, ಪುಣೆ ಮತ್ತು ಕೊಚ್ಚಿ. ಇದರಲ್ಲಿ ಕೇವಲ ಎರಡು ನಗರಗಳಿಗೆ ಐಪಿಎಲ್ ತಂಡದ ಗೌರವ ಸಿಗುವುದಿತ್ತು.
ಒಂದು 15 ದಿನಗಳ ಹಿಂದೆ ಚೆನ್ನೈನ ಐಟಿಸಿ ಪಾರ್ಕ್ ಶೆರಟಾನ್ ಹೋಟೆಲ್ನಲ್ಲಿ ಈ ತಂಡಗಳಿಗೆ ಬಿಡ್ಡಿಂಗ್ ಪ್ರಾಸೆಸ್ ನಡೆಯಿತು. ಅದೊಂದು ಕ್ಲೋಸ್ಡ್ ಎನ್ವಲಪ್ ಬಿಡ್ಡಿಂಗ್ ಪ್ರಾಸೆಸ್. ಅನೇಕ ಬಿಡ್ಡರ್ಗಳು ತಮಗಿಷ್ಟದ ತಂಡಗಳಿಗೆ ತಮ್ಮ ರೇಟ್ಗಳನ್ನು ಕೋಟ್ ಮಾಡಿದ್ದರು. ಅತಿ ಹೆಚ್ಚು ಬಿಡ್ ಮಾಡಿದವರ ಪಾಲಿಗೆ ತಂಡ! ಈ ವಿಧದಲ್ಲಿ ಸಹರ ಇಂಟರ್ನ್ಯಾಷನಲ್ ಸಂಸ್ಥೆಯು ಅಹಮದಾಬಾದ್, ಪುಣೆ ಮತ್ತು ನಾಗಪುರಗಳಿಗೆ ಬಿಡ್ ವಿನ್ನಿಂಗ್ ಪ್ರೈಸ್ ಅನ್ನು ಕೋಟ್ ಮಾಟ್ ಮಾಡಿತ್ತು. ಆದರೆ ಅವರು ಯಾವುದಾದರೂ ಒಂದು ತಂಡವನ್ನು ಮಾತ್ರ ಅವರ ಬಳಿ ಇಟ್ಟುಕೊಳ್ಳಬಹುದಿತ್ತು. ಅವರು ಪುಣೆಯನ್ನು ಆರಿಸಿಕೊಂಡರು. ಇನ್ನುಳಿದಂತೆ ರಾಂಡೆವೆಸ್ ಸ್ಪೋರ್ಟ್ಸ್ ಎಂಬ ಕಂಪೆನಿಯ ಸಮೂಹ ಕೇರಳದ ಕೊಚ್ಚಿ ತಂಡವನ್ನು ತನ್ನದಾಗಿಸಿಕೊಂಡಿತು. ಆಗ ಯಾವುದೇ ತಕರಾರುಗಳಿರಲಿಲ್ಲ. ಆದರೆ ವಾರ ಹತ್ತು ದಿನಗಳ ನಂತರ ಲಲಿತ್ ಮೋದಿ ತಮ್ಮ ಟ್ವಿಟರ್ ಅಕೌಂಟಿನಲ್ಲಿ ಕೆಲವು ಹೇಳಿಕೆಗಳನ್ನು ನೀಡುತ್ತಾ ಹೋದರು ಸತತವಾಗಿ. ವಿವಾದದ ಕಿಡಿ ಹೊತ್ತಿಸಿದ್ಧೇ ಅವರು.
ಈ ಕೊಚ್ಚಿ ತಂಡಕ್ಕೆ ಶಶಿ ತರೂರ್ ಮಾರ್ಗದರ್ಶಕ ಎಂದು ಕಂಪೆನಿ ಮತ್ತು ಸ್ವತಃ ಶಶಿಯೇ ಹೇಳಿಕೊಂಡಿದ್ದಾರೆ. ನೂತನ ಐಪಿಎಲ್ ತಂಡದ ಗೌರವ ಪಡೆಯಬಹುದಾದ ನಗರಗಳಲ್ಲಿ ಕೇರಳದ ಕೊಚ್ಚಿಯೂ ಇತ್ತು. ಕಮ್ಯೂನಿಸ್ಟರ ನಾಡು ಕೇರಳದಲ್ಲಿ ಮೊದಲಿಂದಲೂ ಹಾಕಿ, ಫುಟ್ಬಾಲ್ನದೇ ಪ್ರಾಬಲ್ಯ. ಅಲ್ಲಿ ಕ್ರಿಕೆಟ್ ಬಗೆಗೆ ಉತ್ಸಾಹ ಅಷ್ಟಕ್ಕಷ್ಟೆ. ಕಳೆದ 75 ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೀಶಾಂತ್ ಒಬ್ಬನೇ ಕೇರಳ ಮೂಲದ ಕ್ರಿಕೆಟಿಗ. ಈ ನಡುವೆ ಕೇರಳದಲ್ಲೂ ಕ್ರಿಕೆಟ್ ಜ್ವರ ಏರುತ್ತಿದೆ. ಕೇರಳದ ರಾಜಧಾನಿ ತಿರುವನಂತಪುರದ ಸಂಸದನಾಗಿರುವ ಶಶಿ ತರೂರ್ ಮೊದಲಿಂದಲೂ ಕ್ರಿಕೆಟ್ ಉತ್ಸಾಹಿ. ಶಶಿ ಭಾರತೀಯ ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಅವರಿಗೆ ಕ್ರಿಕೆಟ್ನಲ್ಲಿ ಆ ಮಟ್ಟದ ಎಂಟ್ರಿ ಇದೆ. ತನ್ನ ರಾಜ್ಯಕ್ಕೊಂದು ಐಪಿಎಲ್ ತಂಡ ಬೇಕೆಂದು ಯೊಚಿಸಿದ ಶಶಿ ರಂದೆವಾಸ್ ಸ್ಪೋರ್ಟ್ಸ್ ಎಂಬ ಬಿಸಿನೆಸ್ ಕನ್ಸಾರ್ಶಿಯಂ ಒಂದನ್ನು ಕೊಚ್ಚಿ ತಂಡದ ಪರ ಬಿಡ್ ಮಾಡಲು ಮನವೊಲಿಸಿದ್ದಾನೆ. ಅವರೂ ಸಹ ಶಶಿಯ ಮಾತುಗಳಿಂದ ಕನ್ವಿನ್ಸ್ ಆಗಿ ಹಾಗೇ ಮಾಡಿದ್ದಾರಷ್ಟೇ ಅಲ್ಲದೆ, ಶಶಿ ತರೂರ್ರನ್ನು ತಮ್ಮ ಮಾರ್ಗದರ್ಶಕ ಎಂದು ಕರೆದಿದ್ದಾರೆ. ಸರಿ ಅದರಲ್ಲೇನಿದೆ ಅಂದಿರಾ? ವಿಷಯ ಇಷ್ಟೇ ಅಲ್ಲ.
ಶಶಿ ತರೂರ್ ತನ್ನ ಕೆನಡಿಯನ್ ಹೆಂಡತಿಗೆ ವಿಚ್ಛೇದನ ನೀಡುತ್ತಿದ್ದಾನೆ. ಆತನಿಗೊಬ್ಬ ಹೊಸ ಗೆಳತಿಯಿದ್ದಾಳೆ. ಸುನಂದಾ ಪುಷ್ಕರ್! ಇದನ್ನು ಆತನೂ ಅಲ್ಲಗಳೆದಿಲ್ಲ, ಮೇಲಾಗಿ ಆತನೇ ಅವರಿಬ್ಬರ ಸಂಬಂಧದ ಬಗ್ಗೆ ನಿರ್ಭಿಡೆಯಿಂದ ಮಾತನಾಡಿದ್ದಾನೆ. ಶಶಿ ಆಕೆಯನ್ನು ಇಷ್ಟರಲ್ಲೇ ಮದುವೆಯಾಗಲಿದ್ದಾನೆಂಬ ಸುದ್ದಿಗಳೂ ಇದೆ. ಇಂತಿಪ್ಪ ಸುನಂದಾ ಪುಷ್ಕರ್ಳಿಗೆ ಕೊಚ್ಚಿ ಐಪಿಎಲ್ ತಂಡದಲ್ಲಿ ಶೇ.4.7ರಷ್ಟು ಸ್ವೆಟ್ ಈಕ್ವಿಟಿಯಿದೆ! ಅದರ ಮೌಲ್ಯ ಅಂದಾಜು 76 ಕೋಟಿ ರೂ.ಗಳು! ಮಿಸ್ಟರ್ ಲಲಿತ್ ಮೋದಿಯ ಕಿವಿಗಳು ಕೂಡಲೇ ನೆಟ್ಟಗಾಗಿವೆ. ಆತನಿಗೆ ಆತನದೇ ಆದ ಅಜೆಂಡಾ ಇತ್ತು. ಅದರ ಅಮಲಿಗೆ ಇದು ಸಹಕಾರಿಯಾಗಲಿತ್ತು.
ಕೂಡಲೇ ಟ್ವಿಟರ್ನಲ್ಲಿ ಐಪಿಎಲ್ ಕೊಚ್ಚಿ ತಂಡದ ಹೂಡಿಕೆದಾರರ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳಿವೆ. ತಂಡಕ್ಕೆ ಶಶಿ ಮಾರ್ಗದರ್ಶಕನಾಗಿದ್ದು, ಆತನ ಆಪ್ತೆ ಸುನಂದಾ ಪುಷ್ಕರ್ಳಿಗೆ ಶೇ.4.7ರಷ್ಟು ಫ್ರೀ ಈಕ್ವಿಟಿ ನೀಡಲಾಗಿದೆ ಎಂದು ಬಹಿರಂಗ ಪಡಿಸಿದನಲ್ಲದೆ, ಐಪಿಎಲ್ ಕೊಚ್ಚಿ ತಂಡದ ಹೂಡಿಕೆಯ ಸಂಪೂರ್ಣ ಬ್ರೇಕ್ ಅಪ್ ಅನ್ನು ಪ್ರಕಟಿಸಿಬಿಟ್ಟಿದ್ದಾನೆ. ಧಿಗ್ಗನೇ ಎದ್ದು ಕೂತರು ರಂದೆವಾಸ್ ಸ್ಪೋರ್ಟ್ಸ್ನವರು. ಅಸಲಿಗೆ ಹೂಡಿಕೆಯ ಬ್ರೇಕ್ ಅಪ್ ಅನ್ನು ಗೌಪ್ಯವಾಗಿರಿಸಬೇಕೆಂದು ಎಲ್ಲ ತಂಡಗಳೂ ಐಪಿಎಲ್ ಗವರ್ನಿಂಗ್ ಬಾಡಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಸೂಚಿಸಲಾಗಿದೆ. ಅದರಂತೆಯೇ ಈ ವರೆಗೂ ಕೂಡ ಇನ್ನುಳಿದ ಐಪಿಲ್ ತಂಡಗಳ ಹೂಡಿಕೆಯ ಬ್ರೇಕ್ ಅಪ್ ಬಹಿರಂಗವಾಗಿಲ್ಲ. ಹಾಗಾದರೆ ನಮ್ಮದು ಮಾತ್ರ ಯಾಕೆ? ಕೂಡಲೇ ಬಿಸಿಸಿಐ ಕೂಡ ಲಲಿತ್ ಮೋದಿಯನ್ನು ಗದುರಿಕೊಂಡಿತು. ಆಗ ಲಲಿತ್ ಮೋದಿ ಕೊಚ್ಚಿ ತಂಡದಲ್ಲಿ ಭ್ರಷ್ಟಾಚಾರ ನಡೆದಿದ್ದು, ತಾನು ಅದನ್ನು ಎಕ್ಸಪೋಸ್ ಮಾಡುತ್ತಿರುವುದಾಗಿ ಹೇಳಿಕೊಂಡ. ಆತನ ಆರೋಪ ಸರಳ. ಶಶಿ ತರೂರ್ ಕೊಚ್ಚಿ ತಂಡದ ಮಾರ್ಗದರ್ಶಕ, ಆತ ಮದುವೆಯಾಗಲಿದ್ದಾನೆಂದು ಸುದ್ದಿಯಿರುವ ಸುನಂದಾ ಪುಷ್ಕರ್ಗೆ ಆಕೆ ಯಾವುದೇ ಹೂಡಿಕೆ ಮಾಡದೇ ಶೇ.4.7ರಷ್ಟು ಈಕ್ವಿಟಿಯಿದೆ. ಅಂದರೆ ಸುನಂದಾ ಪುಷ್ಕರ್ ಶಶಿ ತರೂರ್ಗೆ ಪ್ರಾಕ್ಸಿ! ಇದನ್ನು ಸಮರ್ಥಿಸಲು ಆತ ಶಶಿ ತನಗೆ ದೂರವಾಣಿಯ ಮೂಲಕ ಕೊಚ್ಚಿ ತಂಡದ ಹೂಡಿಕೆದಾರರ ಬಗ್ಗೆ ಪ್ರಶ್ನಿಸಬಾರದು ಎಂದು ತಾಕೀತು ಮಾಡಿದರು ಎಂದು ದೂರಿದ್ದಾರೆ. ಅಲ್ಲಿಗೆ ಶಶಿ ತರೂರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ! ಬಿಜೆಪಿ ಮತ್ತು ಕಮ್ಯೂನಿಸ್ಟರು ಧಿಗ್ಗನೆ ಎದ್ದು ಕೂತರು - ಶಶಿ ತರೂರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸ ತೊಡಗಿದರು.
ಅಸಲಿಗೆ ಸುನಂದಾ ಪುಷ್ಕರ್ ಪಡೆದಿರುವುದು ಫ್ರೀ ಈಕ್ವಿಟಿ ಅಲ್ಲ, ಅದು ಸ್ವೆಟ್ ಈಕ್ವಿಟಿ. ಅಂದರೆ ಈ ಬಿಸಿನೆಸ್ ಪರ್ತ್ನರಶಿಪ್ಗಳಲ್ಲಿ ಹಣ ಹೂಡದೇ ಕೆಲಸ ಮಾಡಿ ಲಾಭಾಂಶದ ಪಾಲು ಪಡೆಯುವ ವರ್ಕಿಂಗ್ ಪಾರ್ಟ್ನರ್ನಂತಹುದು . ಸುನಂದಾ ಪುಷ್ಕರ್ ಬರಿಯ ಶಶಿಯ ಸ್ನೇಹಿತೆಯಲ್ಲ, ಆಕೆ ಒಬ್ಬ ಸ್ವತಂತ್ರ್ಯ ಬಿಸಿನೆಸ್ ವುಮೆನ್. ದುಬೈ, ಕೆನಡಾಗಳಲ್ಲಿ ಆಕೆ ಬ್ರಾಂಡ್ ಮ್ಯಾನೇಜ್ಮೆಂಟ್, ಪಿಆರ್ಒ, ಕನ್ಸಲ್ಟೆಂಟ್ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವಾಕೆ. ಆಕೆ ಐಪಿಎಲ್ ಕೊಚ್ಚಿ ತಂಡದ ಬ್ರಾಂಡ್ ಮ್ಯಾನೇಜ್ಮೆಂಟ್, ಆಡ್ ರೆವಿನ್ಯೂ ಮತ್ತು ಪಿಆರ್ನ ಮುಖ್ಯಸ್ಥಳಾಗಿ ದುಡಿಯುತ್ತಿದ್ದಾಳೆ. ಆಕೆಯ ಕೆಲಸಕ್ಕೆ ಸಂಬಳದ ಬದಲಿಗೆ ತಂಡದ ಈಕ್ವಿಟಿಯಲ್ಲಿ ಶೇ.4.7ರಷ್ಟುನ್ನು ಸ್ವೆಟ್ ಈಕ್ವಿಟಿಯಾಗಿ ನೀಡಲಾಗಿದೆ ಎಂಬುದು ಶಶಿ ಮತ್ತು ತಂಡದ ಮಾಲೀಕರ ವಾದ. ಇದು ವಾಡಿಕೆ ಕೂಡ. ಇದೇ ಸುನಂದಾ ಪುಷ್ಕರ್ಳನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಬ್ರಾಂಡ್ ಮ್ಯಾನೇಜ್ಮೆಂಟ್ಗೆಂದು ಅಪ್ರೋಚ್ ಮಡಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
ಆದರೆ ಇದು ನಾಣ್ಯದ ಒಂದು ಬದಿಯಷ್ಟೇ! ಮತ್ತೊಂದು ಬದಿಯಲ್ಲಿ ಲಲಿತ್ ಮೋದಿಯ ಕರಾಳ ಸಾಮ್ರಾಜ್ಯದ ದರ್ಶನವಾಗುತ್ತದೆ. ಮೋದಿಯ ಆರೋಪಗಳ ಬೆನ್ನ ಹಿಂದೆಯೇ ರಂದೆವಾಸ್ ಸ್ಪೋರ್ಟ್ಸ್ನ ಗಾಯಕ್ವಾಡ್ ಕೊಚ್ಚಿ ತಂಡದಿಂದ ಹಿಂದೆ ಸರಿಯಲು ಲಲಿತ್ ಮೋದಿ ತನಗೆ 50 ಕೋಟಿ ಲಂಚ ಕೊಡಲು ತಯಾರಿದ್ದ ಎಂದು ಸ್ಫೋಟಕ ಆರೋಪವನ್ನು ಮಾಡಿದ್ದಾರೆ. ಅವರ ಪ್ರಕಾರ ಲಲಿತ್ ಮೋದಿಗೆ ಬೇರೆಯದೇ ಆದ ಬಿಸಿನೆಸ್ ಇಂಟರೆಸ್ಟ್ಗಳಿದ್ದವು. ಆತನಿಗೆ ಕೊಚ್ಚಿ ನಗರ ಐಪಿಎಲ್ ತಂಡವನ್ನು ಗೆಲ್ಲುವುದು ಇಷ್ಟವಿರಲಿಲ್ಲ. ಆತನಿಗೆ ಅಹಮದಾಬಾದ್ ಗೆಲ್ಲಬೇಕಿತ್ತು. ಆತನಿಗೆ ಅಲ್ಲಿ ಕೆಲವು ಬಿಸಿನೆಸ್ ಇಂಟರೆಸ್ಟ್ಗಳಿದ್ದವು. ಹಾಗಾಗಿ ಕೊಚ್ಚಿ ತಂಡದ ಮಾಲೀಕತ್ವವನ್ನೇ ಪ್ರಶ್ನಾರ್ಹಗೊಳಿಸಿ ಅದನ್ನು ಸಾಧಿಸುವ ಹುನ್ನಾರ ಆತನದ್ದು ಎಂದು ದೂರಿದ್ದಾರೆ. ಹಾಗಾದರೆ ಶಶಿ ತರೂರ್ ಯಾಕೆ ಲಲಿತ್ ಮೋದಿಗೆ ಫೋನಾಯಿಸಿದ? ಅದು ತನ್ನ ಸಚಿವ ಪದವಿಯನ್ನು ದುರುಪಯೋಗ ಪಡಿಸಿಕೊಂಡಂತಲ್ಲವೇ? ಅದಕ್ಕೆ ಶಶಿಯ ಉತ್ತರ - ಲಲಿತ್ ಮೋದಿ ತಂಡದ ಫ್ರಾಂಚೈಸನ್ನು ನೀಡುವುದರಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದುದರಿಂದ ತಾನು ಫೋನಾಯಿಸಿ ವಿನಂತಿಸಿಕೊಂಡೆ ಅಷ್ಟೆ. ಹೂಡಿಕೆದಾರರ ಬಗ್ಗೆ ನಾನು ಮಾತನಾಡಲೇ ಇಲ್ಲ ಎನ್ನುತ್ತಾರೆ.
ಲಲಿತ್ ಮೋದಿ ಮೊದಲಿನಿಂದಲೂ ವಿವಾದಾತ್ಮಕ ವ್ಯಕ್ತಿಯೇ. ಈತ ಬಿಸಿಸಿಐ ಮತ್ತು ಐಪಿಎಲ್ ಸಂಸ್ಥೆಗಳಿಗಿಂತಲೂ larger than life ಆಗುತ್ತಿದ್ದಾನೆ, ಈತನ ರೆಕ್ಕೆ ಪುಕ್ಕ ಕತ್ತರಿಸಬೇಕು ಎಂದು ಬಿಸಿಸಿಐನಲ್ಲಿ ಅನೇಕರು ಕಾಯುತ್ತಿದ್ದಾರೆ. ಐಪಿಎಲ್ ಬಿಡ್ಡಿಂಗ್ ಒಂದು ಕ್ಲೋಸ್ಡ್ ಎನ್ವಲಪ್ ಪ್ರಾಸಸ್. ಅದನ್ನು ಶಶಿ ತರೂರ್ ಎಷ್ಟರ ಮಟ್ಟಿಗೆ ಪ್ರಭಾವಿಸಬಹುದು ಎಂಬುದು ಪ್ರಶ್ನಾರ್ಹವೇ. ಆದರೆ ಖಂಡಿತವಾಗಿಯೂ ಐಪಿಎಲ್ ಕಮೀಷನರ್ ಆಗಿರುವ ಲಲಿತ್ ಮೋದಿ ಪ್ರಭಾವಿಸಬಹುದು, ಅನುಮಾನವೇ ಇಲ್ಲ. ಈಗ ಆತನ ಮೇಲೂ ಇಂಥದೇ ಆರೋಪಗಳು ಬರುತ್ತಿವೆ. ಲಲಿತ್ ಮೋದಿ ರಾಜಸ್ಥಾನದವನು. ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಲಲಿತ್ ಮೋದಿಯ ಹೆಂಡತಿ ತಂಗಿಯ ಗಂಡ ಆದಿತ್ಯ ಚೆಲ್ಲರಾಮ್ ಎಂಬಾತನಿಗೆ ಶೇ.33.33ರಷ್ಟು ಹಿಡಿತವಿದೆ! ಲಲಿತ್ ಮೋದಿ ಕೊಚ್ಚಿ ತಂಡದ ಹೂಡಿಕೆಯ ಬ್ರೇಕ್ ಅಪ್ ಅನ್ನು ಪ್ರಕಟಿಸಿದ ಹಾಗೆಯೇ ರಾಜಸ್ಥಾನ್ ತಂಡದ ಹೂಡಿಕೆಯ ಬ್ರೇಕ್ ಅಪ್ ಅನ್ನೂ ಪ್ರಕಟಿಸಲಿ. ಇದೊಂದು ಸುಸಂದರ್ಭ. ಐಪಿಎಲ್ ಮತ್ತು ಬಿಸಿಸಿಐ ಈ ಸಂದರ್ಭವನ್ನು ಬಳಸಿಕೊಂಡು ಎಲ್ಲಾ ಐಪಿಎಲ್ ತಂಡಗಳ ಹೂಡಿಕೆದಾರರು, ಅವರ ಹಿಡುವಳಿಗಳು, ಅವುಗಳ ರೆವಿನ್ಯೂ ಎಲ್ಲವನ್ನೂ ಜನರ ಮುಂದಿಟ್ಟು ಪಾರದರ್ಶಕತೆ ಮೆರೆಯಬೇಕು. ಕ್ರಿಕೆಟ್ ಆಟಕ್ಕೆ ಅದು ಉತ್ತಮ ಕೊಡುಗೆಯಾದೀತು. ಆಗಲೇ ಐಟಿ ಇಲಾಖೆ ಮತ್ತು enforcement directorate ಎಲ್ಲ ಐಪಿಎಲ್ ತಂಡದ ಹಿಡುವಳಿಗಳನ್ನು ತನಿಖೆಗೊಳಪಡಿಸುವ ಮಾತುಗಳು ಕೇಳಿ ಬರುತ್ತಿದೆ. ಆಗ್ಲೇ ಐಪಿಎಲ್ ಕೇಂದ್ರ ಕಚೇರಿ ಲಲಿತ್ ಮೋದಿಯ ಕಚೇರಿಯ ಮೇಲೆ ಐಟಿ ದಾಲಿಗಲಾಗಿವೆ. ಇದೊಂದು ಸ್ವಾಗತಾರ್ಹ ಬೆಳವಣಿಗೆಯೇ ಸರಿ.
ಇನ್ನು ಶಶಿ ತರೂರ್ ವಿಷಯ. ಶಶಿ ತರೂರ್ ಭಾರತೀಯ ರಾಜಕಾರಣಕ್ಕೆ ಒಬ್ಬ ಔಟ್ಸೈಡರ್. ಆತನಿಗೆ ರಾಜಕಾರಣ ತಿಳಿದಿಲ್ಲ ಎಂಬುದನ್ನು ಆತ ಬಾರಿ ಬಾರಿ ತೋರಿಸುತ್ತಿದ್ದಾನೆ. ಆತ ಈ ವಿಷಯದಲ್ಲಿ ಭ್ರಷ್ಟನೋ ಅಲ್ಲವೋ ಎಂದು ಸರ್ಕಾರ ತೀರ್ಮಾನಿಸಬೇಕು. ಭಾರತದ ರಾಜಕಾರಣ ಬಹಳ ಸೂಕ್ಷ್ಮ. ಇಲ್ಲಿ ನೈಜತೆಗಿಂತಲೂ perception ಬಹಳ ಮುಖ್ಯವಾಗುತ್ತದೆ. ಒಂದು ಇಮೇಜನ್ನು ರಾಜಕಾರಣಿ ಬಹಳ ಜಾಗರೂಕನಾಗಿ ಕಾಯ್ದುಕೊಂಡು ಬರಬೇಕಾಗುತ್ತದೆ. ಶಶಿ ತರೂರ್ ಅದರಲ್ಲಿ ಸ್ಪಷ್ಟವಾಗಿ ಎಡವಿದ್ದಾರೆ. ಕಾಂಗ್ರೆಸ್ನಲ್ಲೂ ಕೂಡ ಇವರೊಂದು ಎಂಬರಾಸ್ಮೆಂಟ್ ಆಗಿ ಮಾರ್ಪಟ್ಟಿದ್ದಾರೆ. ಅವರನ್ನು ಪಕ್ಷದಲ್ಲಿ ಏಕಾಂಗಿಯಾಗಿಸಲಾಗಿದೆ. ಆದರೆ ವಿದೇಶಾಂಗ ಖಾತೆಯ ಸಹಾಯಕ ಮಂತ್ರಿಯಾಗಿ ಶಶಿಯ ಕೆಲಸದ ಬಗ್ಗೆ ಕೆಮ್ಮಂಗಿಲ್ಲ. ಸದ್ಯ ಮನಮೋಹನ ಸಿಂಗರು ವಾಷಿಂಗ್ಟನ್ನಿಂದ ಹಿಂತಿರುಗಿದ ನಂತರ ಅವರ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ. ಕಾಂಗ್ರೆಸ್ ಅವರ ರಾಜೀನಾಮೆ ಪಡೆದದ್ದೇ ಆದರೆ, ಸಮಾಜದ ಇತರೆ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದವರು ರಾಜಕೀಯಕ್ಕೆ ಬರಬೇಕೆನ್ನುವ ಕೂಗಿನ ಸೊಲ್ಲಡಗುತ್ತದೆ. ಭಾರತೀಯ ನೇತಾ-ಬಾಬು ರಾಜ್ನಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ!

2 thoughts on “ಐಪಿಎಲ್ ಮತ್ತು ಶಶಿ ತರೂರ್”
ii vishayada bagge iivarege banda analysis galalli 'the best'.Tumba balanced mattu vishayada ell maggulugalannu teredu torisuva baraha.
illi ondu prashne mooduttade. Shashige yaavude vested interest illade hodare Kochi team swadheena viLambavagali ene aagali Lalit Modige phone yaake maadidru?
Iga mattondu kyaate thegiteeni nodi. Tharoor UN alli hesaru sampaadisiddare embudare bagge anumaaneve illa. (Allu onderadu "nepotism rumors" gaLiddavu, Christa Giles avarige hattiravaada kaaladalli). Aadare ivaru illiya minister aagi kelasa channagi nirvasiddarembudara bagge eradu abhiprayagalive. Ee kshetradalli avara saadhanegaLa paiki beraava mantriyoo saadhisaddenilla. Ashtallade "interlocutor" kaandadalli kandante avara tappilladiddaru Bharatakke embarrasment untu maadiddare.
Outsiders barabeku nija. Namma political systemna change maadbeku nija. Aadre adanna slow aagi oLaginda maadbeku. ekdum maadlikke hodre edavo saadhyate ide
Post a Comment