ದ್ರಾವಿಡ್ ಪುನರಾಗಮನ

ಹೌದು, ಭಾರತದ ಅಂತರಾಷ್ಟ್ರೀಯ ಏಕದಿನ ತಂಡದಲ್ಲಿ ದ್ರಾವಿಡ್ ಮರಳಿ ಸ್ಥಾನ ಪಡೆದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾದ ತ್ರಿಕೋಣ ಸರಣಿ ಮತ್ತು ದಕ್ಷಿಣಾಫ್ರಿಕಾದಲ್ಲಿ ನಡೆಯಲಿರುವ ಛಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳಿಗೆ ಮೊನ್ನೆ ಪ್ರಕಟಗೊಂಡ ತಂಡದ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಇದರೊಮದಿಗೆ ರಾಹುಲ್ ದ್ರಾವಿಡ್ರ ಎರಡು ವರ್ಷಗಳ ವನವಾಸ ಕೊನೆಗೊಂಡಂತಾಗಿದೆ. ಅವರು ಕಡೆಯ ಬಾರಿ ಏಕದಿನ ಪಂದ್ಯ ಆಡಿದ್ದು 2007ರಲ್ಲಿ. ಆಗ ಕೆಲ ತಿಂಗಳುಗಳ ಕಾಲ ಅವರು ಫಾಮರ್್ನಲ್ಲಿರಲಿಲ್ಲ. ಅವರು ಆಗ ಸತತವಾಗಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಾ ಬಂದರು. ಅಷ್ಟರಲ್ಲಿ ಇಡಯ ಕ್ರಿಕೆಟ್ಟನ್ನು ಟಿ-20 ಎಂಬ ಮಹಮ್ಮಾರಿ ಆವರಿಸಿಕೊಂಡು ಬಿಟ್ಟಿತು. ದ್ರಾವಿಡ್ ಒಬ್ಬ ಅತ್ಯುತ್ತಮ ಟೆಸ್ಟ್ ಆಟಗಾರ. ಅವರ ಆಟವನ್ನು ಗಮನಿಸಿದ ಯಾರಿಗಾದರೂ ಸರಿ ಅವರು 20-20 ಫಾರ್ಮಾಟ್ಗೆ ಹೊಂದಿಕೊಳ್ಳುವುದು ಕನಸಿನ ಮಾತೆಂಬುದು ತಿಳಿದಿತ್ತು. ನಿರೀಕ್ಷಿಸಿದಂತೆಯೇ ಅವರು ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಇದೆಲ್ಲವೂ ಸೇರಿ ಅವರನ್ನು ಎರಡು ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವೇ ಉಳಿಸಿತ್ತು. ಆದರೆ ಐಪಿಎಲ್ನ ಎರಡನೇ ಆವೃತ್ತಿಯ ವೇಳೆಗೆ ದೃಆವಿಡ್ ತಮ್ಮ ಫಾರ್ಮ್ನಲ್ಲಿ ಚೇತರಿಕೆ ಕಂಡುಕೊಂಡರು. ದಕ್ಷಿಣಾಫ್ರಿಕದಲ್ಲಿ ನಡೆದ ಐಪಿಎಲ್ನ ಎರಡನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅಂದಿನಿಂದಲೇ ಅಂತರಾಷ್ಟರೀಯ ಕ್ರಿಕೆಟ್ಗೆ ಅವರ ಪುನರಾಗಮನವನ್ನು ನಿರೀಕ್ಷಿಸಲಾಗಿತ್ತು. ಅದು ಇಮದು ಸಾಕಾರಗೊಂಡಿದೆ ಅಷ್ಟೆ. ದ್ರಾವಿಡ್ ಇದಕ್ಕೆ ಪ್ರತಿಕ್ರಿಯಿಸುತ್ತಾ ಆಯ್ಕೆದಾರರು ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲವೆಂದೂ ತನ್ನ ಅತ್ಯುತ್ತಮ ಆಟವನ್ನು ಆಡಲು ಪ್ರಯತ್ನಿಸುತ್ತೇನೆಂದೂ ಹೇಳಿದ್ದಾರೆ. ಅವರು ಅತ್ಯುತ್ತಮ ಆಟ ಪ್ರದರ್ಶಿಸಿ ತಮ್ಮ ಟೀಕಾಕಾರರೆಲ್ಲರಿಗೂ ತಮ್ಮ ಬೈಅಟಿನ ಮೂಲಕವೇ ಉತ್ತರಿಸಬೇಕೆಂಬುದು ನಮ್ಮೆಲ್ಲರ ಹಾರೈಕೆ. ಅವರಿಗೊಂದು ಗುಡ್ ಲಕ್!

ಸದ್ಯ ದ್ರಾವಿಡ್ಗೆ 36 ವರ್ಷ ವಯಸ್ಸು. ಅವರಲ್ಲಿ ಇನ್ನು ಎಷ್ಟು ವರ್ಷದ ಕ್ರಿಕೆಟ್ ಇದೆ? ತಿಳಿದಿಲ್ಲ. ಅವರು ಇದೇ ಫಾರ್ಮ್ ಅನ್ನು ಕಾಪಾಡಿಕೊಂಡರೆ ಸಚಿನ್ ಜೊತೆ ಭಾರತದಲ್ಲಿ ನಡೆಯುವ 2011ರ ಆ ವಿಶ್ವಕಪ್ ಅನ್ನು ಆಡುವುದರಲ್ಲಿ ಅನುಮಾನವಿಲ್ಲ. ಅದು ಭಾರತ ತಂಡದ ಬಹು ಮಂದಿ ಹಿರಿಯ ಆಟಗಾರರಿಗೆ ಕಟ್ಟಕಡೆಯ ವಿಶ್ವಕಪ್ ಆಗಲಿದೆ. ದ್ರಾವಿಡ್ ಅವರಲ್ಲಿ ಒಬ್ಬರಾ? ಕಾಲವೇ ಉತ್ತರಿಸಬೇಕು. ಏನೇ ಆಗಲೀ ಮರಳಿ ಬಂದ ಭಾರತದ ಗೋಡೆ, ಕನರ್ಾಟಕದ ಕುವರ ರಾಹುಲ್ ದ್ರಾವಿಡ್ರಿಗೆ ನಮ್ಮ ಕಡೆಯಿಂದ ಒಂದು ಆಲ್ ದಿ ಬೆಸ್ಟ್ ಶೂಭಾಕಾಂಕ್ಷೆಗಳಿರಲಿ. ಏನಂತೀರಿ?

2 thoughts on “ದ್ರಾವಿಡ್ ಪುನರಾಗಮನ

umesh desai said...

ದ್ರಾವಿಡ್ ಆಗಮನ ಫಲಪ್ರದ ಆಗುತ್ತೋ ಇಲ್ಲವೋ ಕಾಲ ನಿರ್ಧಾರ ಮಾಡುತ್ತದೆ. ಅನುಭವಕ್ಕೆ ಮಣೆ ಹಾಕುವುದು ಅನಿವಾರ್ಯ ಆಗಿತ್ತು ಆದರೆ ಅದು ಯಶಸ್ಸು ಕಂಡಾಗ ಮಾತ್ರ ಅದು ಒಳ್ಳೇ ನಡೆ ಅನಿಸಿಕೊಳ್ಳುತ್ತೆ ನೋಡೋಣ ಸೆಪ್ಟೆಂಬರ್ ದೂರ ಇಲ್ಲ....!

Unknown said...

ನಿಮ್ಮ ಬರಹ ಓದಿದೆ ಸರ್ ದ್ರಾವಿಡ್ ಮತ್ತೆ ಅವನ ಪುನರ್ಜನ್ಮ ಪಡೆದಿದ್ದಾನೆ ನೋಡೋಣ ಮುಂದೆ ಏನಾಗುತ್ತೋ......nanna blog nodi aditya
sahayaatri.blogspot.com

Proudly powered by Blogger
Theme: Esquire by Matthew Buchanan.
Converted by LiteThemes.com.