ದಿನದ ಓದು - Was there a renaissance really in India?

ಇಂದಿನ ನಮ್ಮ ಆಧುನಿಕ ಸಮಾಜದ ಸ್ಥಿತಿ - ನರೇಂದ್ರ ಶರ್ಮ ಎಂಬ ಯಾವನೋ ಮುಠ್ಠಾಳ ಶಕ್ತಿ ದೇವತೆ ಬಾಯ್ತೆರೆಯುತ್ತೆ ಐದು ಎಣ್ಣೆಗಳಿಂದ ದೀಪ ಹಚ್ಚಿಡಿ ಅಂದರೆ ಇಡೀ ಕರ್ನಾಟಕದ ಲೇಡಿ ಗಾಡ್ಸ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ನಮ್ಮದು ಆಧುನಿಕ ಸಮಾಜವಾ? ಆಗಬೇಕೆಂಬ ಆಸೆಯಿರಬಹುದು ಆದರೆ ಅಲ್ಲ ಎಂಬುದು ವಾಸ್ತವ. ಇಲ್ಲಿ ರಾಕೆಟ್ ಸೈನ್ಸ್ ಬೆಳೆಯುತ್ತಿರುವಷ್ಟೇ ವೇಗದಲ್ಲಿ ಶಿಕ್ಷಣವೂ ಅಷ್ಟೇ ವೇಗದಲ್ಲಿ ಅಂಧಶ್ರದ್ಧೆಯೂ ಬೆಳೆಯುತ್ತಿದೆ. ಅಸಲು ಈ paradox ಗೆ ಕಾರಣವಾದರೂ ಏನು? ಕೆ.ಎನ್. ಪಣಿಕ್ಕರ್ ಅವರು ಇದೆಲ್ಲದರ ಮೂಲವನ್ನು ನಮ್ಮ ರೆನೈಸಾನ್ಸ್ ಎಂದು ಕರೆಸಿಕೊಳ್ಳುವ ಸಮಾಜ ಪರಿವರ್ತನಾ ಚಳುವಳಿಯ ಅಪಕ್ವತೆ ಮತ್ತು ಅಪೂರ್ಣತೆಗಳಲ್ಲಿ ಹುಡುಕುತ್ತಾರೆ. 

ಅಸಲು ಭಾರತೀಯ ಆಧುನಿಕ ಮನೋಧರ್ಮ ಎಂಬುದು ರೂಪಿತವೇ ಆಗಿಲ್ಲ. ಇವತ್ತು ಆಧುನಿಕ ಎಂದು ಕರೆಸಿಕೊಳ್ಳುವುದು ವಸಾಹತು ಮತ್ತು ಪರಂಪರೆಯ ಪಳೆಯುಳಿಕೆಗಳು ಮಾತ್ರ. ಅವರು ರಾಜಾ ಋಆಮಾಮೋಹನ ರಾಯ್ ಅವರಾದಿಯಾಗಿ ಪೆರಿಯಾರ್ವರೆಗೂ ಈ ಸಾಮಾಜಿಕ ಪರಿವರ್ತನಾ ಚಳುವಳಿಯನ್ನು ಅತ್ಯಂತ ಸಮರ್ಥವಾಗಿ ವಿಶ್ಲೇಷಿಸುತ್ತಾ ಕೆಲವು ಅದ್ಭುತ ಹೊಳಹುಗಳನ್ನು ನೀಡುತ್ತಾರೆ. ಈ ಎಲ್ಲರೂ ಸಮಾಜ ಪರಿವರ್ತನೆಗಾಗಿ ಹೋರಾಡಿದವರೆ ಆದರೆ ಇವರೆಲ್ಲರೂ ಪರಂಪರೆ ವೇದಾಂತಗಳ ಚೌಕಟ್ಟುಗಳೊಳಗೆ ಮರುವ್ಯಾಖ್ಯಾನಕ್ಕಾಗಿ ಬಡಿದಾಡಿದವರು. ಅಸಲು ಇವರು ಅದನ್ನು ತಿರಸ್ಕರಿಸಲೇ ಇಲ್ಲ. ಹಾಗಂತ ಅದನ್ನು ಒಪ್ಪಲೂ ಇಲ್ಲ, ಅವರ ನವ ವಸಾಹತು ಶಿಕ್ಷಣದ ಅಮಲಿನಲ್ಲಿ ನಮ್ಮ ಪರಂಪರೆಯನ್ನು ಮರುವ್ಯಾಖ್ಯಾನಿಸಿ ಎಡಬಿಡಂಗಿಗಳಾದರು. ಅಸಲು ಯೂರೋಪ್ನಲ್ಲಾದಂತೆ ನಮ್ಮಲ್ಲಿ ನಿಜಕ್ಕೂ ರಿನೈಸಾನ್ಸ್ ಆಯಿತೇ? ಎನ್ನುವ ಮಹತ್ತರ ಪ್ರಶ್ನೆಯನ್ನೆತ್ತುತ್ತಾರೆ. ಚಿಂತನೆಗೆ ಹಚ್ಚುವ ಒಂದು ಅತ್ಯುತ್ತಮ ಲೇಖನ. ದಯವಿಟ್ಟು ಓದಿ. 


K.N. PANIKKAR, former Vice-Chancellor of the Sri Sankara University of Sanskrit, Kalady, Kerala.

Although the renaissance brought about a qualitative change in perspectives and practices, its impact was limited to a very small section of society. Yet, it did generate a cultural and intellectual break without which the later movements would not have been possible. In this sense, the regeneration of the 19th century was a precursor to modernity in India. Notwithstanding this positive contribution, the renaissance promoted by the colonial intelligentsia was not powerful enough to overcome the cultural backwardness of society. Many of the ills of contemporary Indian society can be traced to the unfinished agenda of the renaissance.


Proudly powered by Blogger
Theme: Esquire by Matthew Buchanan.
Converted by LiteThemes.com.