ಯಡ್ಡಿಯ ಪತನಕ್ಕೆ ಹತ್ತು ಸೂತ್ರಗಳು


ಮೂಲ ಲೇಖಕರು - ಸುಗತ ಶ್ರೀನಿವಾಸ ರಾಜು
ಕೃಪೆ - ಔಟ್ಲುಕ್
ಈ ಭಾನುವಾರದಲ್ಲಿ ಪ್ರಕಟಿತ

ಬಿಜೆಪಿಯಲ್ಲಿ ಉದ್ಭವವಾಗಿದ್ದ ಕ್ರೈಸಿಸ್ನ ಕಡೆಗೆ ಅಂತೂ ಇಂತೂ ಯಡ್ಯೂರಪ್ಪ ತಮ್ಮ ಖುರ್ಚಿ ಉಳಿಸಿಕೊಂಡಿದ್ದಾರೆ. ಅಷ್ಟೆ, ಆದರೆ ಆ ಖುರ್ಚಿಯೊಂದಿಗೆ ಬರುವ ಅಧಿಕಾರ ಇನ್ನೂ ಎಷ್ಟು ಉಳಿದಿದೆ ಯಡ್ಯೂರಪ್ಪನವರ ಬಳಿ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಯಡ್ಯೂರಪ್ಪ ತಮಗಾದ ಅವಮಾನಗಳನ್ನು ಒಪ್ಪಲು ತಯಾರಿಲ್ಲ, ಅವರನ್ನು ಖೆಡ್ಡಾಗೆ ದೂಡಿ ತಮ್ಮ ಸ್ವಾರ್ಥ ತೀರಿಸಿಕೊಂಡವರೂ ಸಹ ಏನೂ ಹೇಳುತ್ತಿಲ್ಲ. ನಾವು ಬರುವ ದಿನಗಳಲ್ಲಿ ಪರದೆ ಮೇಲೇ ನೋಡಿ ತಿಳಿಯಬೇಕು. ರಾಜಿ-ಪಂಚಾಯ್ತಿಯೆಲ್ಲಾ ಆದ ಮೇಲೆ ದೆಹಲಿಯಲ್ಲಿ ಯಡ್ಯೂರಪ್ಪ ಜನಾರ್ಧನ ರೆಡಿಯವರ ಕೈ ಮೇಲೆತ್ತಿ ಹಿಡಿದಾಗ ಆ ಹಿಡಿತದ ಬಿಗಿ ಅರಿವಿಗೆ ಬಂದಿರಬೇಕು. ಈ ಎಲ್ಲ ಪ್ರಹಸನದಲ್ಲಿ ಯಡ್ಯೂರಪ್ಪ ಬಹುದೊಡ್ಡ ಲೂಸರ್. ಯಾಕೆ ಅಂದರೆ, ಒಂದು ಹತ್ತು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ ನೋಡಿ -
- ಯಡ್ಯೂರಪ್ಪ ಇನ್ನು ಕರ್ನಾಟಕ ಬಿಜೆಪಿಯ ಪ್ರಶ್ನಾತೀತ ನಾಯಕರಲ್ಲ. ಈ ಸಂದರ್ಭ ಲಿಗಾಯಿತ, ಸ್ವಯಂಸೇವಕ ಮತ್ತು ಅಸೆಂಬ್ಲಿ ಸ್ಪೀಕರ್ ಜಗದೀಶ್ ಶೆಟ್ಟರ್ ಪರ್ಯಾಯ ನಾಯಕನಾಗಿ ರೂಪುಗೊಳ್ಳಲು ಸಹಕರಿಸಿದೆ. ಯಡ್ಯೂರಪ್ಪನವರನ್ನು ಕಿತ್ತೊಗೆದರೆ ಬಿಜೆಪಿಯ ಬೆನ್ನೆಲುಬಾಗಿರುವ ಲಿಂಗಾಯಿತ ಸಮುದಾಯದ ಬೆಂಬಲ ಕಳೆದುಕೊಳ್ಳುವ ಭೀತಿಯಿಲ್ಲ. ಈ ಎಲ್ಲ ಪ್ರಹಸನದಲ್ಲಿ ಶೆಟ್ಟರ್ ತಮ್ಮ ಹಿಂದೆಯೂ ಬೆಂಬಲಿಗ ಶಾಸಕರಿದ್ದು, ತಾವೂ ಸರ್ವಶಕ್ತ ಲಿಂಗಾಯಿತ ಮಠಗಳೊಂದಿಗೆ ಸತ್ಸಂಬಂಧಗಳನ್ನಿಟ್ಟುಕೊಮಡಿರುವುದಾಗಿ, ಮತ್ತು ಸಂಘ ಪರಿವಾರದ ಬೆಂಬಲವಿರುವುದಾಗಿ ತೋರಿಸಿಕೊಟ್ಟಿದ್ದಾರೆ.

- ಯಡ್ಯೂರಪ್ಪ ತಮಗರಿವಿಲ್ಲದೆಯೇ ತಮ್ಮ ರಾಜಕೀಯ ಕಡುವೈರಿ ಅನಂತಕುಮಾರ್ ಅವರ ಪುನರ್ವಸತಿಗೆ ಸಹಕರಿಸಿದ್ದಾರೆ. ದೆಹಲಿಯಲ್ಲಿ ಎನ್ಡಿಎ ಅಧಿಕಾರಕ್ಕೆ ಬರಲಿಲ್ಲ, ಅತ್ತ ಆರ್ಎಸ್ಎಸ್ ಕೂಡ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸುವುದಿಲ್ಲ ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿಬಿಟ್ಟಿದೆ. ಸದ್ಯ ಅನಂತಕುಮಾರ್ ಅವರಿಗೆ ಯಾವುದೇ ಕೆಲಸವಿರಲಿಲ್ಲ. ಈಗ ಯಡ್ಡಿ-ರೆಡ್ಡಿಗಳ ಕಿತ್ತಾಟವನ್ನು ತಣ್ಣಗಾಗಿಸಿ, ರಾಜಿ ಸಂಧಾನ ಮಾಡಿಸುವಲ್ಲಿ ಅನಂತಕುಮಾರ್ ಪಾತ್ರ ದೊಡ್ಡದು. ಇದು ಅವರನ್ನು ನೇರವಾಗಿ ಸರ್ವಶಕ್ತವಾಗಲಿರುವ co-ordination ಕಮಿಟಿಯಲ್ಲಿ ತಂದು ಕೂರಿಸಲಿದೆ. ಇದನ್ನು ಬಳಸಿಕೊಂಡು ಅನಂತಕುಮಾರ್ `ಸೂಪರ್ ಸಿಎಂ' ಆಗಲು ಪ್ರಯತ್ನಿಸಬಹುದು.
- ಯಡ್ಯೂರಪ್ಪ ರೆಡ್ಡಿಗಳಿಗೆ ಪಕ್ಷದಲ್ಲಿ ಒಂದು ಅಕ್ಸೆಪ್ಟಬಿಲಿಟಿ ಕೊಟ್ಟಿದ್ದಾರೆ. ರೆಡ್ಡಿಗಳು ಯಡ್ಯೂರಪ್ಪನವರಿಗೆ ಪರ್ಯಾಯವಾದ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದ್ದಾರೆ. ಅವರ ರಾಜಕೀಯ ನಡಾವಳಿಗಳು ರಾಷ್ಟ್ರೀಯ ಮಾಧ್ಯಮವನ್ನೂ ಆಕರ್ಷಿಸಿವೆ. ಸಿಎಂ ಬಣವನ್ನು ಪ್ರತಿ ಹಂತದಲ್ಲೂ ಅವರು ಸೋಲಿಸುತ್ತಿದ್ದರು. ಬಿಜೆಪಿಯ ರಾಷ್ಟರೀಯ ನಾಯಕರು ಅವರನ್ನು 15 ದಿನಗಳ ಕಾಲ ಕೂರಿಸಿಕೊಂಡು ರಾಜಿ ಮಾತುಕತೆ ಆಡಿ, ಅವರನ್ನು ಒಪ್ಪಿಸಿ ಕಳಿಸಿರುವುದೇ ಅವರ ಪಾಲಿಗೆ ಗೆಲುವು. ಇಷ್ಟು ದಿನ ಅವರಿಗೆ ಬರಿಯ ಗಣಿಧಣಿಗಳ ಇಮೇಜಿತ್ತು. ಇನ್ನೂ ಅದು ಮುಂದುವರೆಯುತ್ತದಾದರೂ ಅವರು ಎಂಥ ರಾಜಕಾರಣಿಗಳು ಅನ್ನೋದನ್ನೂ ಅವರು ತೋರಿಸಿಕೊಟ್ಟಿದ್ದಾರೆ. ಅವರು ಈ ಹಿಂದೆ ಕುಮಾರಸ್ವಾಮಿಯವರ ಮೇಲೆ 150 ಕೋಟಿ ಭ್ರಷ್ಟಾಚಾರದ ಆರೋಪ ಮಾಡಿದ ಹಾಗೆ ಹುಚ್ಚುಚ್ಚಾಗಿ ನಡೆದುಕೊಳ್ಳಲಿಲ್ಲ ಈ ಬಾರಿ. ಕಡೆಯಲ್ಲಿ ಪಕ್ಷದ ಹೈಕಮಾಂಡ್ನ ನಿರ್ಣಯಕ್ಕೆ ತಲೆಬಾಗುವುದರ ಮುಖಾಂತರ ತಮಗೂ ಪಕ್ಷನಿಷ್ಠೆಯೆನ್ನುವುದಿದೆ ಎಂದು ಅವರು ತೋರಿಸಿಕೊಟ್ಟರು. ಇದು ಅವರ ರಾಜಕೀಯ ಜೀವನದಲ್ಲಿ ದೊಡ್ಡ ತಿರುವಾಗಲಿದೆ.

- ಯಡ್ಯೂರಪ್ಪ ಸಂಪೂರ್ಣವಾಗಿ ಬಟಾಬಯಲಾಗಿದ್ದಾರೆ. ಅವರ ಸರ್ಕಾರದದ ಭ್ರಷ್ಟಾಚಾರ, ಅವರ ಕೋಪಾವೇಶ, ಅವರ ಸರ್ವಾಧಿಕಾರೀ ಧೋರಣೆ, ಅವರ ಸಂಬಂಧಗಳು ಎಲ್ಲವನ್ನೂ ಹಿರಿಯರು, ಜನರು ಪ್ರಶ್ನಿಸಿದ್ದಾರೆ. ತಾನು ಎಲ್ಲರನ್ನೂ ಜೊತೆ ಕರೆದುಕೊಮಡು ಹೋಗಲು ವಿಫಲನಾದೆ ಎಂದು ಒಪ್ಪಿಕೊಳ್ಳುವ ಮೂಲಕ ಯಡ್ಯೂರಪ್ಪನವರ ನಾಯಕತ್ವದ ಪ್ರಶ್ನಾರ್ಹವಾಗುತ್ತದೆ.

- ಸ್ವಯಂಸೇವಕ ಯಡ್ಯೂರಪ್ಪನವರನ್ನು ಆರ್ಎಸ್ಎಸ್ ರಕ್ಷಿಸಲಿಲ್ಲ. ಭಿನ್ನಮತ ಭುಗಿಲೆದ್ದ ಕೂಡಲೇ ಸಂಘ ಮಧ್ಯ ಪ್ರವೇಶಿಸಲಿಲ್ಲ. ಅವರು ಯಡ್ಯೂರಪ್ಪನವರ ಅಧಿಕಾರವನ್ನು ಪ್ರಶ್ನಿಸಲು, ಅವರ ಸಾರ್ವಜನಿಕ ಇಮೇಜಿನ ಮೇಲೆ ಕಲೆಗಳು ಮೂಡುವುದನ್ನು ತಡೆಯಲಿಲ್ಲ, ಸುಮ್ಮನಿದ್ದರು. ನಂತರ ಎಲ್ಲವೂ ಕಡೆಯ ಹಂತ ತಲುಪಿದಾಗ ಸದ್ಯಕ್ಕೆ ನೋಟೀಸು ಕೊಟ್ಟು ಯಡ್ಯೂರಪ್ಪನವರನ್ನು ಬಿಟ್ಟುಬಿಡುವಂತೆ ಆದೇಶಿಸಿ ಜೀವ ಹೋಗಿದ್ದವರನ್ನು ಅರೆ ಜೀವವಾಗಿಸಿದೆ. ಸಂಘ ಕೂಡ ಪೊಲಿಟಿಕಲಿ ಕರೆಕ್ಟ್ ಆಗಿರಲು ಪ್ರಯತ್ನಿಸಿತು. ಅವರು ಗಣಿರೆಡ್ಡಿಗಳಿಗೆ ತಲೆಬಾಗುವಂತಿರಬಾರದೆಂಬ ಅರಿವು ಅವರಿಗಿತ್ತು. ರೆಡ್ಡಿಗಳು ಭಿನ್ನಮತದ ನೇತೃತ್ವವನ್ನು ಜಗದೀಶ್ ಶೆಟ್ಟರ್ಗೆ ನೀಡಿ, ಎಲ್ಲ ಸಂಧಾನಗಳನ್ನೂ ಅವರೇ ನಡೆಸುವಂತಾಗಿದ್ದಿದ್ದರೆ ಫಲಿತಾಂಶಗಳೇ ಬೇರೆಯಿರುತ್ತಿದ್ದವು. ಮುಂದಿನ ರೌಂಡಿಗೆ ಇದು ರೆಡ್ಡಿಗಳಿಗೆ ಪಾಠ.

- ಯ್ಡಯೂರಪ್ಪನವರಿಗೆ ಮಾಡಲು ಇನ್ನಯಾವುದೇ ನೈತಿಕ ವಾದವೇ ಇರಲಿಲ್ಲ. ರೆಡ್ಡಿಗಳ ದುಡ್ಡನ್ನು ಅವರೂ ತಿಂದವರೇ. ಇಳಿಯಲಿಕ್ಕಾಗದಾಗ ಹುಲಿ ಸವಾರಿ ಯಾಕೆ ಮಾಡಿದಿರಿ ಅಂತ ಜನ ಪ್ರಶ್ನಿಸುವಂತಿತ್ತು.

- ಯಡ್ಯೂರಪ್ಪನವರು ಟಿವಿ ಕ್ಯಾಮೆರಾ ಮುಂದೆ ಅತ್ತುಬಿಟ್ಟರು. ಬಹುಮಂದಿ ಜನರಿಗೆ ಒಬ್ಬ ನಾಯಕ ಸಾರ್ವಜನಿಕವಾಗಿ ಅಳುವುದನ್ನು ಸ್ವೀಕರಿಸುವುದಿಲ್ಲ. ಅವರಿಗೆ ನಾಯಕನೆಂಬುವವನು ಗಟ್ಟಿಗಾರನಾಗಿರಬೇಕು, ಅಲುವುದು ಬಲಹೀನತೆಯ ಲಕ್ಷಣ. ಇನ್ನು ಯಡ್ಯೂರಪ್ಪ ಯಾತಕ್ಕಾಗಿ ಅತ್ತರು ಅನ್ನವುದೂ ಕೂಡ ಜನರಲ್ಲಿ ಸದಭಿಪ್ರಾಯ ಮೂಡಿಸಿಲ್ಲ. ಅವರು ಶೋಭಾ ಕರಂದ್ಲಾಜೆ ಮತ್ತು ವಿ.ಪಿ.ಬಳಿಗಾರ್ ಅವರನ್ನು ಕೈಬಿಡಲು ನೋವಾಗ್ತಿದೆ ಅಂತ ಕಣ್ಣೀರಾಗಿದ್ದರು. - ದೆಹಲಿಯಲ್ಲಿ ಯಡ್ಯೂರಪ್ಪನವರಿಗೆ ಅತಿ ಕಡಿಮೆ ಸ್ನೇಹಿತರಿರುವುದು ಈಗ ಅರಿವಿಗೆ ಬಂದಿದೆ. ನಿರ್ಗಮಿತ ಅಧ್ಯಕ್ಷ ರಾಜನಾಥ್ ಸಿಂಗ್ ಬಿಟ್ಟರೆ ಮಿಕ್ಕವರ್ಯಾರೂ ಯಡ್ಯೂರಪ್ಪನವರ ವಿಷಯವನ್ನು ತನ್ನದು ಎಮದು ಪರಿಗಣಿಸಿ ಹೋರಾಡಲೇ ಇಲ್ಲ. ಬಲ್ಲ ಮೂಲಗಳು ರಾಜನಾಥ್ ಕೂಡ ಅವರ ರಾಜಕೀಯಕ್ಕಾಗಿ ಯಡ್ಯುರಪ್ಪನವರ ಪರ ನಿಂತಿದ್ದರು ಎನ್ನುತ್ತವೆ.

- ಯಡ್ಯೂರಪ್ಪ ತಮ್ಮ ಖುರ್ಚಿಗಂಟಿ ಕೂತವರಂತೆ ಭಾಸವಾದರು, ಚಿಣ ಚಿಟಿಥಿ ಛಿಠಣ. ತ್ಯಾಗವೆನ್ನುವುದು ನಮ್ಮಲ್ಲಿ ಅತ್ಯುತ್ಕೃಷ್ಟ ನೈತಿಕ ಪ್ರಜ್ಞೆ ಅಂತಿರುವಾಗ ಯಡ್ಯೂರಪ್ಪ ತಮ್ಮ ಅಧಿಕಾರ ಉಳಿಸಿಕೊಳ್ಳಲು ಅದೂ ರೆಡ್ಡಿಗಳ ಮುಂದೆ ಮಂಡಿಯೂರಿ ಕುಳಿತಿದ್ದರು. ಭಿನ್ನಮತ ತಾರಕಕ್ಕೇರಿದ ಕೂಡಲೇ ಯಡ್ಯೂರಪ್ಪ ರಾಜೀನಾಮೆ ಬಿಸಾಡಿದ್ದರೆ? ತಾವು ರಾಜಕೀಯಕ್ಕೆ ಬಂದಿರುವುದು ಅಧಿಕಾರಕ್ಕಲ್ಲ ಎಮದು ನೈತಿಕ ನಿಲುವು ತಾಳಿದ್ದರೆ, ಯಡ್ಯೂರಪ್ಪ? ಸಂದೇಹವೇ ಬೇಡ, ಪಕ್ಷದಲ್ಲಿ ಅವರಿಗೆ ಬೆಂಬಲ ಮತ್ತು ಸಿಂಪಥಿ ಎರಡೂ ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿತ್ತು. ಇಡೀ ಪಕ್ಷ ಅವರ ಸುತ್ತಾ ನೆರೆದು ತಮ್ಮ ರಾಜೀನಾಮೆ ಹಿಂಪಡೆಯಲು ಬೇಡುತ್ತಿತ್ತು. ರೆಡ್ಡಿ ಬಣ ಮುಖ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗಾಗುತ್ತಿತ್ತು. ರೆಡ್ಡಿಗಳಿಗೆ ಯಡ್ಯೂರಪ್ಪನವರ ಅಧಿಕಾರ ದಾಹ ಎಂಥದೆಮದು ತಿಳಿದೇ ಇದಕ್ಕಿಳಿದಿದ್ದರು ಅಂತ ಕಾಣಿಸುತ್ತದೆ. ತ್ಯಾಗ ಒಬ್ಬ ಮನುಷ್ಯನಿಗೆ ಎಷ್ಟು ಶಕ್ತಿ ತುಂಬಬಲ್ಲದು ಎಂಬುದಕ್ಕೆ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಬಿಜೆಪಿಗರಿಗೆ ಸೋನಿಯಾ ಗಾಂಧಿಯ ಹೇಸರೆತ್ತಿದರೆ ಆಗುವುದಿಲ್ಲವಾದ್ದರಿಂದ ಅವರ ಹಳೆಯ ಸ್ನೇಹಿತ, ಈ ತ್ಯಾಗದ ದಾಳವನ್ನು ಅತ್ಯಂತ ಜಾಣ್ಮೆಯಿಂದ ಪರಾಕಾಷ್ಠೆಗೆ ಬಲಸಿಕೊಂಡ ರಾಮಕೃಷ್ಣ ಹೆಗಡೆಯವರ ಉದಾಹರಣೆ ಕೊಡೋಣ.

- ಯಡ್ಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ, ಅವರು ಇಂದು ಅಲ್ಲಿ ಒಬ್ಬಂಟಿಗರು.

2 thoughts on “ಯಡ್ಡಿಯ ಪತನಕ್ಕೆ ಹತ್ತು ಸೂತ್ರಗಳು

umesh desai said...

ಅದಿತ್ಯ ನಿಮ್ಮ ಅನುವಾದಿತ ಲೇಖನ ಚೆನ್ನಾಗಿತ್ತು ಆದರೆ ಅನುವಾದದ ಭರದಲ್ಲಿ "ಎಕ್ಸೆಪ್ಟಾಬಿಲಿಟಿ" ಈ ತರಹದ ಶಬ್ದ ತುರುಕಿದ್ದೀರಿ
ಮೇಲಿನ ಪದಕ್ಕೆ ಸಾಕಷ್ಟು ಕನ್ನಡ ಪದ ಇವೆ ಇನ್ನು ಲೇಖನ ಎಡ್ಡಿ ವೀಕ್ ಅಂತ ಹೇಳುತಿದೆ ಇದು ಎಲ್ಲರಿಗೂ ಗೊತ್ತಿರೋ ವಿಚಾರ
ಆದಿತ್ಯ್ ನಿಮ್ಮಿಂದ ಓರಿಜಿನಲ್ ಲೇಖ ಅಪೇಕ್ಷಿಸುತ್ತೇನೆ

ಜಲನಯನ said...

ಆದಿತ್ಯ ಸಮಯ-ಸೂಕ್ತ ಲೇಖನ, ಎಡ್ಡಿ ಎಗರಾಡಿದರೆ ರಂಪ ಮಾಡಿದ್ದು ರೆಡ್ಡಿ..ಇವಕ್ಕೆ ಜಗ್ಗಾಟದ ಜಟಾಪಟಿ ತಂದಿದ್ದು ಜಗದೀಶ...ಇವರೇ ಸಾಲ್ದು ಅನ್ನೋದ್ದಕ್ಕೆ ಅನಾಮಿಕ ಆವಾಂತರ ಅನ್ಂತಪ್ಪ.. ಚೆನ್ನಗಿದೆ ನಿಮ್ಮ ಲೇಖನ

Proudly powered by Blogger
Theme: Esquire by Matthew Buchanan.
Converted by LiteThemes.com.