ಯಡ್ಯೂರಪ್ಪನವರು ಮತ್ತು ಖುರ್ಚಿ

ಮೂಲ ಲೇಖಕರು - ಸುಗತ ಶ್ರೀನಿವಾಸರಾಜು
ಅನುವಾದ - ಕೈ.ವೆ.ಆದಿತ್ಯ ಭಾರದ್ವಾಜ
ಈ ಭಾನುವಾರದಲ್ಲಿ ಪ್ರಕಟಿತ
ಕೃಪೆ - ಔಟ್ಲುಕ್

ಕರ್ನಾಟಕದಲ್ಲಿ ಬಿಜೆಪಿಯ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ. ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಯಡ್ಯೂರಪ್ಪ ಮತ್ತು ರೆಡ್ಡಿಗಳ ಪರ ಇರುವ ಸಂಖ್ಯಾಬಲ ಮತ್ತು ಬಿಗಡಾಯಿಸುತ್ತಿರುವ ಅವರ ನಿಲುವುಗಳು ಪರಿಹಾರದ ಯಾವುದೇ ಆಸೆಯನ್ನೂ ಉಳಿಸುವುದಿಲ್ಲ. ಅತ್ತ ರೆಡ್ಡಿ ಬಣ 60-70 ಶಾಸಕರ ಬೆಂಬಲ ತಮಗಿದೆಯೆಂದು ಹೇಳಿಕೊಳ್ಳುತ್ತಿದ್ದರೆ, ಇತ್ತ ಮುಖ್ಯಮಂತ್ರಿಯ ಬಣದವರು 83 ಶಾಸಕರು ತಮ್ಮ ಪರವಿರುವುದಾಗಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಶಾಸಖಾಂಗ ಪಕ್ಷದ ಬಲ 117, ಅದಲ್ಲದೆ 6 ಸ್ವತಂತ್ರ್ಯರ ಬೆಂಬಲ. ಹಾಗಾದರೆ ಯಾವುದೋ ಒಂದು ಬಣ ತಮ್ಮ ಬೆಂಬಲಿಗರ ಸಂಖ್ಯೆಯನ್ನು ಉತ್ಪ್ರೇಕ್ಷಿಸುತ್ತಿದ್ದಾರೆ ಅಂತಲೇ ಅರ್ಥ. ಸರಿ ರೆಡ್ಡಿಗಳೇ ಹೀಗೆ ತಮ್ಮ ಬೆಂಬಲವನ್ನು ಉತ್ಪ್ರೇಕ್ಷಿಸುತ್ತಿದ್ದಾರೆ ಅಂದುಕೊಂಡು, ಅವರ ಬಣದಿಂದ ರ್ಯಾಂಡಮ್ ಆಗಿ 20 ಜನರನ್ನು ತೆಗೆದು ಹಾಕೋಣ. ಆದರೂ ಅವರ ಬಳಿ 40 ಶಾಸಕರಿರುತ್ತಾರೆ, ಮತ್ತು ಈ ಸಂಖ್ಯೆಯನ್ನು ಸಿಎಂ ಬಣ ಆಗಲೇ ಒಪ್ಪಿಕೊಂಡಿದೆ. ಸರ್ಕಾರವನ್ನು ಕೆಡವಲು ಇಲ್ಲ ನಾಯಕತ್ವ ಬದಲಾವಣೆ ತರಲು ಈ ಬಲ ಸಾಕು. ಕೇಸರೀ ಪಕ್ಷದ ಕೇಂದ್ರ ನಾಯಕತ್ವ ಆಯ್ಕೆಗಳೇ ಇಲ್ಲದ ಈ ವೈರುಧ್ಯದಲ್ಲಿ ಒಂದು ಆಯ್ಕೆ ಮಾಡಬೇಕಿದೆ. ಈಗ ಎಷ್ಟೇ ಬ್ಯಾಂಡೇಜು ಸುತ್ತಿದರೂ ಅದು ನಿರೀಕ್ಷೆಗಿಂತಲೂ ಬೇಗನೆ ಕಿತ್ತು ಬಂದು ಗಾಯ ಕಾಣಿಸಿಕೊಳ್ಳಬಹುದು. ಯಡ್ಯೂರಪ್ಪ ಸಿಎಂ ಆಗಿ ಮುಂದುವರೆದರೆ ಮಿಕ್ಕವರು ಆತ್ಮಹತ್ಯಾ ನಿರ್ಧಾರ ತೆಗೆದುಕೊಳ್ಳಬಹುದು, ಇಲ್ಲ ಮತ್ತೊಂದು ಅವಕಾಶಕ್ಕಾಗಿ ಕಾದು ಕುಳಿತು ಮೇಲೆರಗಬಹುದು. ಸ್ಪೀಕರ್ ಜಗದೀಶ್ ಶೆಟ್ಟರ್ ಸಿಎಂ ಆಗುವಲ್ಲಿ ಯಶಸ್ವಿಯಾದರೆ ಯಡ್ಯೂರಪ್ಪ ಮತ್ತೆ ರೆಬೆಲ್ ಆಗುತ್ತಾರೆ. ಹೊಸ ಸರ್ಕಾರವನ್ನು ಅಸ್ಥಿರಗೊಳಿಸಲು ತಮ್ಮ ಕೈಲಾದದ್ದೆಲ್ಲವನೂ ಮಾಡುತ್ತಾರೆ.

ಇಲ್ಲಿ ಯಾವುದೇ ನೈತಿಕತೆಯ ಪ್ರಶ್ನೆಯೂ ಇಲ್ಲ, ಏನಿದ್ದರೂ ಸಂಖ್ಯೆ - ಸೋಲಿಗೂ, ಗೆಲುವಿಗೂ. ಇದ್ದಕ್ಕಿದ್ದ ಹಾಗೆ ಸಿಎಂ ಬಣದವರಿಗೆ ರೆಡ್ಡಿಗಳ ಎಲ್ಲ ತಪ್ಪುಗಳ ಅರಿವಾಗತೊಡಗಿವೆ. ಅವರು ಗಣಿಧಣಿಗಳು, ಅಕ್ರಮ ಗಣಿಗಾರಿಕೆ ಅವರ ಸಂಪತ್ತಿನ ಮೂಲ, ಅವರು ಗೂಂಡಾಗಳು, ಅವರ ಮೇಲೆ ಕೇಸುಗಳಿವೆ ಎಂದು ಹೇಳುತ್ತಾ ಸಿಎಂ ಪರ ಸಾರ್ವಜನಿಕ ಅಭಿಪ್ರಾಯವನ್ನು ವಾಲಿಸಲು ನೋಡುತ್ತಿದ್ದಾರೆ. ಆದರೆ ಇದೇ ಗಣಿಧಣಿಗಳು 2008ರ ವಿಧಾನಸಭಾ ಚುನಾವಣೆಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು, ಮತ್ತು ಆಗ ಅವರ ನಿನಾದ ಯಡ್ಯೂರಪ್ಪನವರನ್ನು ಸಿಎಂ ಮಾಡುವುದೇ ಆಗಿತ್ತು. ಗೌಡರಿಂದ ಮೋಸ ಹೋದ ಇದೇ ಯಡ್ಯೂರಪ್ಪ ರೆಡ್ಡಿಗಳಿಗೆ ಉತ್ತರ ಮತ್ತು ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅವರಿಚ್ಛೆಯಂತೆ ಬಿಜೆಪಿ ಟಿಕೆಟ್ ಹಂಚಲು ಬಿಟ್ಟರು, ವಿಧಾನಸಭಾ ಚುನಾವಣೆಯಲ್ಲಿ ಕಂಡುಕೇಳರಿಯದಂತಹ ಹಣ ಖರ್ಚು ಮಾಡುವಂತೆ ನೋಡಿಕೊಂಡಿದ್ದರು. ಅಷ್ಟೇಕೆ ಮೊನ್ನೆಯ ಲೋಕಸಭಾ ಚುನಾವಣೆಯಲ್ಲೂ ರೆಡ್ಡಿ ದುಡ್ಡು ಚೆಲ್ಲಿದ್ದು ಒಂದು ಓಪನ್ ಸೀಕ್ರೆಟ್. ಇನ್ನು ಆಪರೇಷನ್ ಕಮಲದಲ್ಲಿ ಇತರೆ ಪಕ್ಷಗಳ ಶಾಸಕರನ್ನು ಎಳೆತಂದು ಬಿಜೆಪಿಯ ಶಕ್ತಿವರ್ಧನೆಗೆ ದುಡ್ಡು ಸುರಿದವರಾರೆಂಬುದೂ ಜಗತ್ತಿಗೇ ಗೊತ್ತು. ರೆಡ್ಡಿಗಳು ಈ ಬಿಜೆಪಿ ಸರ್ಕಾರಕ್ಕೆ ಮೊದಲಿಂದಲೂ venture-capitalistಗಳಾಗಿದ್ದರು, ಈಗ ಅವರ ಹೂಡಿಕೆಗೆ returns ನಿರೀಕ್ಷಿಸುತ್ತಿದ್ದಾರೆ ಅಷ್ಟೆ. ಈಗ ಮುತ್ಸದ್ಧಿಯ ಇಮೇಜು ಕಟ್ಟಿಕೊಳ್ಳಲು ಹೊರಟಿರುವ ಯಡ್ಯೂರಪ್ಪನವರು ಮೊದಲು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು.



ಯಡ್ಯೂರಪ್ಪನವರು ಮತ್ತು ಖುರ್ಚಿ


ಯಡ್ಯೂರಪ್ಪನವರು ಅವರ ಸುತ್ತ ಇರುವವರನ್ನು ಹೇಗೆ ನಡೆಸಿಕೊಂಡೆನೆಂದು ಒಮ್ಮೆ ಅವಲೋಕಿಸಿಕೊಳ್ಳುವುದೊಳಿತು. ಈ ಬಂಡಾಯದ ವಿಶೇಷವೆಂದರೆ ಬಂಡಾಯವೆದ್ದು ರೆಡ್ಡಿ ಬಳಗದಲ್ಲಿ ಗುರುತಿಸಿಕೊಂಡವರೆಲ್ಲರೂ ರೆಡ್ಡಿಗಳನ್ನು ನಾಯಕರಾಗಿ ನೋಡುವುದಿಲ್ಲ. ಅವರಿಗೆ ರೆಡ್ಡಿಗಳ ನಿಜಸ್ವರೂಪ ಗೊತ್ತು. ಆದರೆ ಅವರೆಲ್ಲರನ್ನೂ ಹಿಡಿದಿಟ್ಟುಕೊಂಡಿರುವುದು ಯಡ್ಯೂರಪ್ಪ ವಿರುದ್ಧದ ಆಕ್ರೋಶ. ಅವರ ಎಲ್ಲ ಅವಮಾನಗಳಿಗೆ ಸೇಡು ತೀರಿಸುವವರೊಬ್ಬರು ಬೇಕು. ಅವರು ರೆಡ್ಡಿಗಳೆಡೆಗಲ್ಲದೇ ಇನ್ನಾರ ಕಡೆ ನೋಡಿಯಾರು? ಯಡ್ಯೂರಪ್ಪನವರ ಜೊತೆಯಿರುವ ಅನೇಕ ಸಚಿವರು ಮತ್ತು ಶಾಸಕರೂ ಕೂಡ ಯಡ್ಯೂರಪ್ಪನವರ ನಾಯಕತ್ವದ ಬಗ್ಗೆ ಸಂಪೂರ್ಣ ತೃಪ್ತಿ ಹೊಂದಿಲ್ಲ. ಯಡ್ಯೂರಪ್ಪನವರು ಎಲ್ಲರನ್ನೂ ಜೊತೆ ತೆಗೆದುಕೊಂಡು ಹೋಗುವುದಿಲ್ಲ, ಸಚಿವರನ್ನು ಹೇಗೆ ಕಂಸಲ್ಟ್ ಕೂಡ ಮಾಡುವುದಿಲ್ಲ, ಹೇಗೆ ತಮಗೆ ತಮ್ಮ ಸಚಿವಾಲಯದ ಫೈಲುಗಳಿಗೆ ಸಹಿ ಹಾಕಲೂ ಸ್ವಾತಂತ್ರ್ಯ ಕೊಡುವುದಿಲ್ಲವೆಮದು off the record ಧಾರಾಳವಾಗಿ ಹೇಳುತ್ತಾರೆ. ಎಲ್ಲಾ ಕಂಟ್ರೋಲ್ ಯಡ್ಯೂರಪ್ಪನವರ ಇಬ್ಬರು ಮಕ್ಕಳು ಇಲ್ಲ ಮುಖ್ಯಮಂತ್ರಿಗಳ ಆಪ್ತ ಮಂತ್ರಿ ಶೋಭಾ ಕರಂದ್ಲಾಜೆಯ ಬಳಿ ಇದೆಯೆಂದು ಅವಲೊತ್ತುಕೊಳ್ಳುತ್ತಾರೆ.ರೆಡ್ಡಿಗಳು ಬಹುತೇಕ ಶಾಸಕರು ಹಾಗೂ ಸಚಿವರ ಈ ಅಸಮಾಧಾನವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ತಮ್ಮ ಹಣಬಲದ ಮೂಲಕ ಇದನ್ನು ಎನ್ಕ್ಯಾಷ್ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ.

ಈ ಬಂಡಾಯದ ಚಟುವಟಿಕೆಗಳು ಮೂರು ತಿಂಗಳುಗಳಿಂದ ನಡೆಯುತ್ತಿದ್ದವೆಂದು ಹೇಳಲಾಗುತ್ತಿದೆ. ಆದರೆ ಯಡ್ಯೂರಪ್ಪನವರಿಗೆ ತಮ್ಮ ಸಹೋಯೋಗಿಗಳ ಈ ಬಂಡಾಯ ಯಾವುದೂ ಕಣ್ಣಿಗೆ ಬೀಳಲಿಲ್ಲವೇ? ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ಇದನ್ನು ಸೂಚಿಸುವಂತಹ ಅನೇಕ ಕುರುಹುಗಳಿದ್ದವು. ಆದರೆ ಯಡ್ಯೂರಪ್ಪನವರ ದಬರ್ಾರಿನ ಹೊಗಳುಭಟ್ಟರು ಆತ್ಮವಂಚನೆಯ ಒಂದು ಜೇಡರ ಬಲೆಯನ್ನೇ ಹೆಣೆದುಬಿಟ್ಟರು ಅವರ ಮುಂದೆ. ಮೊದಲ ಪುಟದ ಹೊಗಳುವಿಕೆಯಿಂದ ಅವರನ್ನು ಅವರು ಲಾರ್ಜರ್ ಧೆನ್ ಲೈಫ್ ಎಂಬಂತೆ ನೋಡಿಕೊಳ್ಳುವ ಹಾಗೆ ಮಾಡಿಬಿಟ್ಟರು. ದುರಾದೃಷ್ಟವಶಾತ್ ಯಡ್ಯೂರಪ್ಪನವರು ಈ ಪುರಾಣವನ್ನು ನಂಬಿ ಬಿಟ್ಟರು, ರಾಜ್ಯದ ನಿವರ್ಿವಾದಿತ ಮಾಸ್ ಲೀಡರ್ ತಾನೆಂದು ಯಡ್ಯೂರಪ್ಪ ಭಾವಿಸಿ ಬಿಟ್ಟರು. ಈ ಕ್ರೈಸಿಸ್ನ ನಡುವೆಯೂ ಕೂಡ ಅವರಿನ್ನೂ ಆ ಕಲ್ಪನಾ ಲೋಕದಿಂದ ಹೊರಬರದೆ ವೀರಾವೇಶ ತೋರಿರುವುದು ಇದನ್ನೇ ಸೂಚಿಸುತ್ತದೆ. ಯಡ್ಯೂರಪ್ಪನವರ ಆಡಳಿತದ ಕಳೆದ 16 ತಿಂಗಳ ಅವಲೋಕನ ಅವರ ಸಕರ್ಾರ ಸ್ಥಳೀಯ ಮಾಧ್ಯಮಗಳಲ್ಲಿ ಮಾಡಿರುವ ಅಪಾರ ಜಾಹೀರಾತು ವೆಚ್ಚವನ್ನು ಹೊರಗೆಡವುತ್ತದೆ. ಇನ್ನು ಅವರು ನಾನಾ ಕಾರಣಗಳಿಗಾಗಿ ದೆಹಲಿಗೆ ನಿಯೋಗ ಕೊಂಡೊಯ್ದಿರುವುದು ಕೂಡ ಹಾಸ್ಯಾಸ್ಪದವಾಗಿ ಕಾಣುತ್ತದೆ. ಕಳೆದೊಂದೆರಡು ದಿನಗಳಿಂದ ಕೊಂಚ ವಿಚಲಿತರಾದಂತೆ ಕಂಡ ಯಡ್ಯೂರಪ್ಪ, ತಮ್ಮ ನಡವಳಿಕೆಯನ್ನು ಸುಧಾರಿಸಿಕೊಳ್ಳುವುದಾಗಿಯೂ, ಈಗಾಗಿರುವುದಕ್ಕೆ ಕ್ಷಮೆ ಯಾಚಿಸುವುದಾಗಿ ಅವಲತ್ತು ಕೊಂಡಿದ್ದಾರೆ. ಯಡ್ಯೂರಪ್ಪನವರ ಆಡಳಿತ ಭ್ರಷ್ಟಾಚಾರ ಮುಕ್ತವಾಗಿದ್ದೇ ಆದರೆ ಅವರ ಕೋಪ, ನೈತಿಕತೆಯ ಪಾಠಗಳು ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಬಹುದಿತ್ತು, ಆದರೆ ಅವರ ಆಡಳಿತ ಹಾಗಿಲ್ಲವೇ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಕ್ರೈಸಿಸ್ ಅನ್ನು ವಿಶ್ಲೇಷಿಸುವುದಾದರೆ, ತಮ್ಮ ಜೊತೆ ಗುರುತಿಸಿಕೊಳ್ಳಲು ಅನೇಕ ಶಾಸಕರಿಗೆ ಮುಜುಗರವಿರುವುದು ರೆಡ್ಡಿಗಳಿಗೂ ಗೊತ್ತು. ಬರಿಯ ದುಡ್ಡು ಅಧಿಕಾರ ತಂದು ಕೊಡುವುದಿಲ್ಲವೆನ್ನುವುದು ಅವರಿಗೂ ಗೊತ್ತಿದೆ. ಆದ್ದರಿಂದಲೇ ಅವರು ಈ ತಂತ್ರ ರೂಪಿಸಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಈ ಸರ್ಕಾರವನ್ನು ಕೆಡವಲು 3 ತಿಂಗಳುಗಳಿಂದ ಚಟುವಟಿಕೆಗಳು ಚಾಲೂ ಇವೆ. ರೆಡ್ಡಿಗಳು ಅವರಿಗೆ ಅಧಿಕಾರವನ್ನು ಕೇಳದೇ ಸ್ಪೀಕರ್ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಬೇಕೆಂದು ಹೇಳತ್ತಿರುವುದು ಈ ತಂತ್ರದ ಅತ್ಯಂತ ಪ್ರಮುಖ ಭಾಗವಾಗಿದೆ. ಶೆಟ್ಟರೇ ಯಾಕೆ? ಯಡ್ಯೂರಪ್ಪನವರಂತೆ ಶೆಟ್ಟರ್ ಕೂಡ ಲಿಂಗಾಯತ ಜನಾಂಗಕ್ಕೆ ಸೇರಿದವರು ಮತ್ತು ರಾಜ್ಯ ಬಿಜೆಪಿಯಲ್ಲಿ ಬಹುಶಃ ಯಡ್ಯೂರಪ್ಪನವರಷ್ಟೆ ಪಕ್ಷ ಮತ್ತು ವಿಧಾನಸಭೆಯಲ್ಲಿ ಅನುಭವವಿರುವ ಏಕೈಕ ನಾಯಕ ಶೆಟ್ಟರ್. ಎಸ್ಸೆಂ.ಕೃಷ್ಣರ ಕಾಲದಲ್ಲಿ ವಿರೋಧ ಪಕ್ಷದ ನಾಯಕ, ರಾಜ್ಯ ಬಿಜೆಪಿಯ ಅಧ್ಯಕ್ಷ, ಕುಮಾರಸ್ವಾಮಿ ಅಡಿಯಲ್ಲಿ ಕ್ಯಾಬಿನೆಟ್ ಸಚಿವ ಮತ್ತು ಈಗ ಸ್ಪೀಕರ್ ಆಗಿದ್ದಾರೆ ಶೆಟ್ಟರ್. ಇದೆಲ್ಲದರ ಮೇಲೆ ಅವರೊಬ್ಬ ಸ್ವಯಂಸೇವಕ್ ಮತ್ತು ಅವರು ಈವರೆಗೆ ಯಾವುದೇ ಚುನಾವಣೆಯಲ್ಲಿ ಸೋತಿಲ್ಲ. ಇನ್ನು ವ್ಯಕ್ತಿತ್ವದ ದೃಷ್ಟಿಯಿಂದ ನೋಡಿದರೆ ದೂರ್ವಾಸ ಮುನಿಯಂತಾಡುವ ಯಡ್ಯೂರಪ್ಪನವರ ಡೆಡ್ ಆಪೋಸಿಟ್ಟು. ಶೆಟ್ಟರ್ ಅತ್ಯಂತ ಸಂಭಾವಿತ, ನಿಧಾನ ಮತ್ತು ಮಹತ್ವಾಕಾಂಕ್ಷಿ ಅಲ್ಲ. ಆದರೆ ಸರ್ಕಾರದ ನೀತಿ-ನಿಯಮಗಳು ಮತ್ತು ಸಭಾ ನಡವಳಿಕೆಗಳ ಬಗ್ಗೆ ರಾಜ್ಯ ಬಿಜೆಪಿಯಲ್ಲೇ ಹೆಚ್ಚು ತಿಳಿದುಕೊಂಡವರು ಶೆಟ್ಟರ್. ಶೆಟ್ಟರ್ ಹೆಸರನ್ನು ಮುಂಚೂಣಿಗೆ ತಂದರೆ ಅವರ ಸಂಖ್ಯಾಬಲ ವೃದ್ಧಿಸುವುದೆಂಬುದು ರೆಡ್ಡಿಗಳಿಗೂ ಗೊತ್ತು. ಬಲ್ಲ ಮೂಲಗಳ ಪ್ರಕಾರ ಮೊದಲು ರೆಡ್ಡಿ ಬಣದ ಬಲ ಬರೀ 20. ಆದರೆ ಶೆಟ್ಟರ್ ಹೆಸರು ಮುಂಚೂಣಿಗೆ ಬರುವುದರೊಂದಿಗೆ ಅನೇಕರು ತಾವಾಗೇ ತಮ್ಮ ಬೆಂಬಲ ಸೂಚಿಸಿದರೆನ್ನಲಾಗಿದೆ. ಇನ್ನು ಜಗದೀಶ್ ಶೆಟ್ಟರ್ ಅವರಿಗೆ ಯಡ್ಯೂರಪ್ಪನವರು 2008ರಲ್ಲಿ ತಮಗೆ ಕ್ಯಾಬಿನೆಟ್ ಸ್ಥಾನವನ್ನು ನಿರಾಕರಿಸಿ ಸ್ಪೀಕರ್ ಸ್ಥಾನದಲ್ಲಿ ಕೂರಿಸಿದ್ದಕ್ಕಾಗಿ ಅಸಮಾಧಾನ ಇದ್ದೇ ಇತ್ತು. ಅದೂ ಕೂಡ ರೆಡ್ಡಿಗಳಿಗೆ ವರವಾಗಿ ಪರಿಣಮಿಸಿದೆ. ಯಡ್ಯೂರಪ್ಪ ಅಂದು ಶೆಟ್ಟರ್ರನ್ನು ಸ್ಪೀಕರ್ ಮಾಡುವ ಮೂಲಕ ಅವರು ಯಾರನ್ನು ತಮ್ಮ ಪ್ರತಿಸ್ಪರ್ಧಿಯೆಂದು ಭಾವಿಸುತ್ತಾರೆಂದು ಜಗತ್ತಿಗೆ ಸಾರಿದ್ದರು.

ಸದ್ಯ ಬಿಜೆಪಿಯನ್ನು ಅಲ್ಲಿ ಕೂರಿಸಿರುವ ಡೆಮೋಗ್ರಾಫಿಕ್ಸ್, ಸರ್ಕಾರದ ನೂತನ ನಾಯಕ ಕೂಡ ಲಿಂಗಾಯತ ಜನಾಂಗದವನೇ ಆಗಿರುವಂತೆ ಮಾಡುತ್ತದೆ, ಬೇರೆಯವರು ಸಲ್ಲ ಎಂಬ ಅಭಿಪ್ರಾಯವೊಂದಿದೆ. ಈ ಜನಾಂಗದ ಧೃಡ ಬೆಂಬಲವೇ ದಕ್ಷಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರದ ಗದ್ದುಗೆಯೇರುವಂತೆ ಮಾಡಿದ್ದು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಜನತಾ ಪರಿವಾರದ ಶಕ್ತಿ ಕ್ಷೀಣಿಸುತ್ತಾ ಹೋದಂತೆ ಲಿಂಗಾಯತರು ತಮ್ಮ ನಿಷ್ಠೆಯನ್ನು ಬಿಜೆಪಿಯೆಡೆಗೆ ತಿರುಗಿಸಿದರು. ಪಕ್ಷದ ಮೇಲೆ ಲಿಂಗಾಯತರ ನಿಷ್ಠೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲವೆಂಬುದು ಪಕ್ಷದಲ್ಲಿ ಎಲ್ಲರಿಗೂ ಗೊತ್ತು. ಬ್ರಾಹ್ಮಣ ಅನಂತ ಕುಮಾರ್ ಎಲ್ಲರನ್ನೂ ಹಿಂದಿಕ್ಕಿ ಆಶ್ಚರ್ಯಕರ ರೀತಿಯಲ್ಲಿ ಮುಖ್ಯಮಂತ್ರಿಯಾಗಿ ಬಿಡುವ ಗುಪ್ತ ಕಾರ್ಯಸೂಚಿ ಇದೇ ಕಾರಣಕ್ಕೆ ಅಮಲಾಗುವುದಿಲ್ಲ. ಅವರನ್ನು ನಾಯಕನೆಂದು ಬಿಂಬಿಸಿದರೆ, ಈಗಿರುವ ಸಂಖ್ಯಾಬಲ ಕರಗಿಹೋಗುತ್ತದೆ. ಅವರ ವಿಷಯವಾಗಿ ಪಕ್ಷದಲ್ಲಿ ನಂಬಿಕೆಯ ಕೊರತೆ ಕೂಡ ಇದೆ. ಅಬ್ಬಬ್ಬ ಅಂದರೆ ಅವರು ರೆಡ್ಡಿಗಳ ಜೊತೆ ನಿಂತು ಯಡ್ಯೂರಪ್ಪನವರ ರಾಜಕೀಯ ಜೀವನದ ಪತನಕ್ಕೆ ಕೊಡುಗೆ ನೀಡಬಹುದು ಅಷ್ಟೆ. ಅನಂತ ಕುಮಾರ್ ಮುಖ್ಯಮಂತ್ರಿಯಾಗುವುದೇ ಆದರೆ ಮೊದಲು ಶೆಟ್ಟರ್ ಅವರಿಗೊಂದು ಅವಕಾಶ ನೀಡಿ ಅವರು ಫೇಲ್ ಆಗುವುದಕ್ಕೆ ಬಿಟ್ಟು ನಂತರವೇ ಏನಿದ್ದರೂ....

ಗೌಡರ ಜೆಡಿಎಸ್ ತಮ್ಮ ಬದ್ಧ ವೈರಿಗಳಾದ ರೆಡ್ಡಿಗಳು 20-25 ಶಾಸಕರೊಂದಿಗೆ ಸರ್ಕಾರದಿಂದ ಹೊರಬಂದರೆ ಯಡ್ಯೂರಪ್ಪನವರೊಂದಿಗೆ ರಾಜಿ ಮಾಡಿಕೊಳ್ಳಲು ತಯಾರಿದೆ ಎಂಬ ಮತುಗಳು ಕೇಳಿ ಬರುತ್ತಿವೆ. ಆದರೆ ಹೊರಬರುವ ಶಾಸಕರ ಸಂಖ್ಯೆ ಇದನ್ನು ಮೀರಿದರೆ ಯಡ್ಯೂರಪ್ಪನವರನ್ನು ಕಾಪಾಡಲು ಜೆಡಿಎಸ್ ಬಳಿ ಸಂಖ್ಯಾಬಲವಿಲ್ಲ. ಇನ್ನು ಕಾಂಗ್ರೆಸ್. ಬಿಜೆಪಿ ಆತ್ಮಹತ್ಯಾ ಬಟನ್ ಅನ್ನು ಒತ್ತಿದ್ದಾಗಿದೆ, ಇನ್ನು ಬಿಜೆಪಿ ಗಾಳಿಯಲ್ಲಿ ಲೀನವಾಗುವುದು ಬರಿಯ ಸಮಯದ ಪ್ರಶ್ನೆ ಅಷ್ಟೆ ಅಂತ ಸುಮ್ಮನೆ ಕೂತಿದೆ. ಎಂದಿನಂತೆ ಕಾಂಗ್ರೆಸ್ ಅಯಾಚಿತವಾಗಿ ಗೆಲುವು ಸಾಧಿಸಲು ನೋಡುತ್ತಿದೆ, ಅದಕ್ಕಾಗಿ ಹೋರಾಡಲು ತಯಾರಿಲ್ಲ. ಯಡ್ಯೂರಪ್ಪನವರೇನಾದರೂ ಈ ಕ್ರೈಸಿಸ್ ಅನ್ನು ದಾಟಿದರು ಅಂತಲೇ ಇಟ್ಟುಕೊಂಡರೂ ಅವರು ರಾಜಿಗಳ ಹಾಸಿಗೆಯ ಮೇಲೆ ಮಲಗಲು ತಯಾರಾಗಬೇಕಾಗುತ್ತದೆ.

3 thoughts on “ಯಡ್ಯೂರಪ್ಪನವರು ಮತ್ತು ಖುರ್ಚಿ

Unknown said...

ಔಟ್ ಲುಕ್ ನ ಲೇಖನವನ್ನು ಕನ್ನಡದಲ್ಲಿ ಓದುವಂತೆ ಮಾಡಿದ್ದಕ್ಕೆ ಧನ್ಯವಾದಗಳು. ಲೇಖನದಲ್ಲಿ ಹೇಳಿರುವಂತೆ ಅತ್ತ ದರಿ ಇತ್ತ ಹುಲಿ ಎನ್ನುವಂತಹ ಪರಿಸ್ಥಿತಿ ಯಡಿಯೂರಪ್ಪನವರದು. ಅವರೇ ಸಾಕಿದ ಗಿಳಿ ಅವರನ್ನೇ ಕಚ್ಚುತ್ತಿದೆ. ಅಕ್ರಮ ಸಂಪತ್ತಿನ ಅಹಂಕಾರದಿಂದ ಕರ್ನಾಟಕದ ರಾಜಕಾರಣದ ಮೇಲೇ (ಮೊದಲು ಕುಮಾರಸ್ವಾಮಿಯ ಮೇಲೆ) ಹಿಡಿತ ಸಾಧಿಸ ಹೊರಟ ರೆಡ್ಡಿಗಳಿಗೆ ಅನೈತಿಕ ಬೆಂಬಲ ನೀಡಿದ್ದೇ ಆಧಂ್ರದ ರೆಡ್ಡಿ ಹಾಗೂ ಕರ್ನಾಟಕದ ಯಡ್ಡಿ. ಹಿಂದೆಲ್ಲಾ ರೆಡ್ಡಿಗಳ ಆಟವನ್ನು ವಿಜಯೋತ್ಸವ ೆನ್ನುವಂತೆ ಆಚರಿಸುತ್ತಿದ್ದ ಬಿ.ಜೆ.ಪಿಗೆ ಇದಕ್ಕೀಂತಹ ದುಸ್ಥಿತಿ ಮತ್ತೊಂದಿಲ್ಲ!

umesh desai said...

ಮುಖ್ಯವಾಗಿ ಬಿಜೆಪಿಯಲ್ಲಿ ಹೈ ಕಮಾಂಡ ಪ್ರಬಲವಾಗಿಲ್ಲ ದಿಲ್ಲಿಯಲ್ಲಿನರಿಗೇ ಬಿಲ್ಲಿ ಕಿಮ್ಮತ್ತಿಲ್ಲ ಇನ್ನು ಈ ತಲೆನೋವು ಅವರಿಗೆ
ಬೇಕಾಗಿಲ್ಲ ಆದರೆ ಶೆಟ್ಟರ್ ನಡೆದುಕೊಳ್ಳುತ್ತಿರುವ ರೀತಿ ನಿಂದನೀಯ

Me, Myself & I said...

ವಾಹ್
ಒಳ್ಳೇ ಅವಲೋಕನ, ನಿಮ್ಮ ಅನುವಾದಕ್ಕೆ ಧನ್ಯವಾದಗಳು. ರಾಜಕೀಯ ಅಂದ್ರೆನೇ ಇಷ್ಟು, ಯಾರನ್ನು ಯಾರು ಯಾವಾಗ ಮಲಗಿಸ್ತಾರೆ ಅಂತಾನೆ ಹೇಳೊಕ್ಕೆ ಹಾಗಲ್ಲ.
ರ‍ೆಡ್ಡಿಗಳತ್ರ ಇಷ್ಟೋಂದು ದುಡ್ಡು ಇದೇ ಅಂದ್ರೆ, ಅವ್ರು ಖುರ್ಚಿ ಮೇಲೆ ಕಣ್ಣಾಕಿರ‍ೋದು, ಮನುಷ್ಯನ ಸಹಜ ಗುಣ.

Proudly powered by Blogger
Theme: Esquire by Matthew Buchanan.
Converted by LiteThemes.com.