ಟ್ವಿಟರ್ ಕ್ರಾಂತಿ!


ಟ್ವಿಟರ್! ಇದು ಅಂತರ್ಜಾಲ ಜಗತ್ತಿನಲ್ಲೆದ್ದರುವ ಹೊಸ ಬಿರುಗಾಳಿ, ಮೂಡಿರುವ ಹೊಸ ಸಂಚಲನ. ಏನಿದು ಟ್ವಿಟರ್? ಏನಿದು, social networking ಸೈಟಾ, ಇಲ್ಲ ಬ್ಲಾಗಾ, ಇಲ್ಲ ಎಸ್ಎಮೆಸ್ಸಾ? ಉತ್ತರಿಸಲು ಕಷ್ಟವಾಗುತ್ತಿದೆ. ಟ್ವಿಟರ್ ಎಲ್ಲವೂ ಹೌದು, ಯಾವುದೂ ಅಲ್ಲವೂ ಹೌದು. ಟ್ವಿಟರ್ ಎನ್ನುವುದು ಇದೆಲ್ಲದರ ಸಮ್ಮಶ್ರಣ. ಇದೊಂದು ಅತ್ಯುತ್ತಮ social networking ಸೈಟು, ಇದೊಂದು ಪುಟ್ಟ ಬ್ಲಾಗು, ಒಂದು ಪೋಸ್ಟ್ನ ಉದ್ದ ಕೇವಲ 140 ಅಕ್ಷರಗಳು! ಅಷ್ಟು ಕಿರಿದಾದರೆ ಇದು ಎಸೆಮ್ಮೆಸ್ಸಾಗುತ್ತದೆ ಅಂದಿರಾ, ಹೌದು ಇದು ಎಸ್ಸೆಮ್ಮೆಸ್ಸು ಕುಡ ಹೌದು! ಇದನ್ನು ಮೊಬೈಲಿನ
ಮೂಲಕವೂ ಉಪಯೊಗಿಸಬಹುದು. ಮೂಲತಃ ಇದೊಂದು ಅಂತರ್ಜಾಲದ ವೆಬ್ಸೈಟು. ಇದರ ಕಾನ್ಸೆಪ್ಟು ತುಂಬಾನೇ ಸಿಂಪಲ್ಲು ಕಣ್ರೀ. ನೀವು ಈಗೇನು ಮಡುತ್ತಿದ್ದೀರಾ ಎಂಬುದನ್ನು ನಿಮ್ಮ ಸ್ನೇಹಕೂಟಕ್ಕೆ ಸಣ್ಣಸಣ್ಣ ಮೆಸೇಜುಗಳ ಮೂಲಕ ತಿಳಿಸುವುದು, ಅದಕ್ಕೊಂದು ವೇದಿಕೆ ಬೇಕು ಅದನ್ನು ಟ್ವಿಟರ್ ಒದಗಿಸುತ್ತದೆ. ನೀವು ಬಿಡುವ ಪ್ರತಿ ಮೆಸೇಜನ್ನೂ ಟ್ವೀಟ್ ಎಂದು ಕರೆಯಲಾಗುತ್ತದೆ. ಅದನ್ನು ನೀವು ನಿಮ್ಮಿಚ್ಛೆಯಂತೆ ಸರ್ವರಿಗೂ ಅಥವಾ ನೀವಿಚ್ಛಿಸಿದವರಿಗೆ ಮಾತ್ರ ತೋರಿಸಬಹುದು. ಮೊದಲಿಗೆ ತೀರ ಸಾಧಾರಣವೆನ್ನಿಸುವ ಇದನ್ನು ನೀವೊಮ್ಮೆ ಶುರು ಮಾಡಿಕೊಂಡುಬಿಟ್ಟರೆ ಸಾಕು, ನಂತರ ಅದೊಂದು ಗೀಳಾಗಿ ಪರಿಣಮಿಸಿಬಿಡುತ್ತದೆ. ಸದ್ಯ ವಿಶ್ವದಲ್ಲಿ ಈ ಗೀಳನ್ನು ಅಂಟಿಸಿಕೊಂಡವರು ಸುಮಾರು 35 ಮಿಲಿಯನ್ ಮಂದಿಯೆಂಬುದೊಂದು ಅಂದಾಜು!

ಇಂದು ಸರ್ಕಾರಗಳ ಮುಖ್ಯಸ್ಥರಿಂದ ಹಿಡಿದು ಬೀದಿಯ ಮೇಲಿನ ಸಾಮಾನ್ಯನವರೆಗೂ ಇದು ವ್ಯಾಪಿಸಿಬಿಟ್ಟಿದೆ. ಇಂದಿನ ಸೆಲಿಬ್ರಿಟಿ ಯುಗದಲ್ಲಿ ಅನೇಕ ಸೆಲಿಬ್ರಿಟಿಗಳು ತಮ್ಮ ಜೀವನವನ್ನು ತಮ್ಮ ಅಭಿಮಾನಿಗಳೊಂದಿಗೆ ಟ್ವಿಟರ್ ಮೂಲಕ ಹಂಚಿಕೊಳ್ಳಲಾರಂಭಿಸಿದ ಮೇಲೆ ಟ್ವಿಟರ್ ಮತ್ತಷ್ಟು ಜನಪ್ರಿಯವಾಗತೊಡಗಿತು. ಮೊದಲಿಗೆ ಕೆಲವು ಸೆಲಿಬ್ರಿಟಿಗಳು ವೆಬ್ಸೈಟುಗಳನ್ನೂ, ಬ್ಲಾಗುಗಳನ್ನೋ ಮಾಡುತ್ತಿದ್ದರು ತಮ್ಮ ಅಭಿಮಾನಿಗಳೊಂದಿಗೆ ಟಚ್ನಲ್ಲಿರಲು. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಕಷ್ಟವಾಗಿ ಅರ್ಧಕ್ಕೆ ನಿಂತು, ಮೂರು ಮಧ್ಯಾನದ ಕೆಲಸವಾಗುತ್ತಿದ್ದವು. ಆದೆರ ಇದನ್ನು ಮುಂದುವರೆಸಿಕೊಂಡು ಹೊಗುವುದು ತೀರ ಸುಲಬೌಆದ್ದರಿಮದ, ಅನೇಕ ಸೆಲಿಬ್ರಿಟಿಗಳು ಟ್ವಿಟ್ ಮಾಡಲು ಶುರು ಮಾಡಿ, ಇದನ್ನು ಜನಪ್ರಿಯಗೊಳಿಸಿದರು. ಈಗ ಇದು ಸ್ಥಾಪಕರ ಕೈಮೀರಿ ಹೋಗಿದೆ. ಕೇವಲ ಮೆಸೇಜಿಂಗ್ ಸರ್ವೀಸ್ ಆಗಿ ಶುರುವಾದ ಇದು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಹೊಸದೊಂದು ಸಾಮಾಜಿಕ ಕ್ರಾಂತಿಯನ್ನೇ ಮಾಡುತ್ತಿದೆ. ಅದು ಸಮಾಚಾರ ಕ್ರಾಂತಿಯ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ!


ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಶಶಿ ತರೂರ್ ರೆಗ್ಯುಲರ್ ಟ್ವಿಟೆರಿಗ, ಮಂತ್ರಿಯಾದ ನಂತರ ಇದು ಜಾಸ್ತಿಯಾಗಿಬಿಟ್ಟಿದೆ! ಮೊದಲಿಂದಲೂ ಅನೇಕ ಪೇಪರ್ಗಳಿಗೆ ಅಂಕಣವಲ್ಲದೇ ಅನೇಕ ಪುಸ್ತಕಗಳನ್ನು ಬರೆಯುತ್ತಿದ್ದ ಶಶಿ ತರೂರ್ ಒಬ್ಬ ಉತ್ತಮ ಬರಹಗಾರ. ಮಂತ್ರಿಯಾದ ಮೇಲೆ ಈ ಎಲ್ಲ ಆಭಿ
ವ್ಯಕ್ತಿ ಸ್ವಾತಂತ್ರ್ಯಗಳೂ ಕಟ್ ಆಗಿ ಬಿಟ್ಟವು. ಅವರ ಅಭಿವ್ಯಕ್ತಿಗೆ ಕಿಟಕಿಯೇ ಸಿಗದಾಯಿತು. ತರೂರ್ಗೆ ಇದು ಉಸಿರುಕಟ್ಟಿಸುವಂತಾಯಿತು, ಇದಲ್ಲದೆ ವಿದೇಶಾಂಗ ಮಂತ್ರಾಲಯದ ರಾಜ-ಗಜ ಗಾಂಭೀರ್ಯ ಬೇರೆ. ತರೂರ್ ತಮ್ಮ ಅಭಿವ್ಯಕ್ತಿಗೆ ಅಂತೂ ಒಂದು ಕಿಟಕಿಯನ್ನು ಕಂಡುಕೊಂಡಿದ್ದಾರೆ - ಟ್ವಿಟರ್! ಹೌದು ಶಶಿ ತರೂರ್ ದಿನಕ್ಕೆ ಹಲವಾರು ಬಾರಿ ಟ್ವೀಟ್ ಮಾಡಲು ಶುರು ಮಾಡಿದರು. ಅವರೇನೂ ಸಚಿವಾಲಯದ ಕಾರ್ಯಚಟುವಟಿಕೆಗಳ ಕುರಿತು ಟ್ವೀಟ್ ಮಾಡುತ್ತಿಲ್ಲ ಬಿಡಿ, ಅವರು ತಿಂದ ಮಾವಿನ ಹಣ್ಣು, ಓದಿದ ಯಾವುದೋ ಉತ್ತಮ ಪುಸ್ತಕ ಹೀಗೆ ಎಲ್ಲವೂ ಚಿಲ್ಲರೆ ವಿಷಯಗಳೇ. ಆದರೆ ಇದರಿಮದ ಶಶಿಗೆ ಅವಶ್ಯವಾಗಿ ಬೇಕಿದ್ದ ವೇದಿಕೆಯೊಂದು ದೊರೆತಿದೆ. ಅದಕ್ಕೂ ಸೌತ್ ಬ್ಲಾಕ್ನ ಅಧಿಕಾರಿಗಳು ಹೌಹಾರಿದ್ದಾರೆ. ಇದು ಸಚಿವಾಲಯದ ಸೆಕ್ಯೂರಿಟಿಗೆ ಧಕ್ಕೆ ತರುತ್ತದೆಂದು ಪುಂಗಿ ಊದುತ್ತಿದ್ದಾರೆ. ಶಶಿ ಟ್ವೀಟಿಸುತ್ತಲೇ ಇದ್ದಾರೆ. ಇದು ಟ್ವಿಟರ್ ತೆರೆದುಕೊಳ್ಳಬಹುದಾದ ಅನೇಕ ಆಯಾಮಗಳಲ್ಲಿ ಒಂದನ್ನು ಅನಾವರಣ ಮಾಡುತ್ತದೆ.


ಇತ್ತೀಚೆಗೆ ಇರಾನ್ನಲ್ಲಿ ಅಹ್ಮದಿನೇಜಾದ್ನ ಚುನಾವಣಾ ಗೆಲುವಿನ ಕುರಿತು ಅನುಮಾನಗಳೆದ್ದಾಗ, ಜನ ಬೀದಿಗಿಳಿದು ಹೋರಾಡಿದರು. ಸರ್ಕಾರ ತನ್ನ ಉಕ್ಕು ಪಾದದಿಂದ ಎಲ್ಲ ಹೋರಾಟಗಳನ್ನೂ ಹೊಸಕಿಹಾಕಿತು. ಮೊದಲಿಗೆ ಅದು ಮಾಡಿದ ಕೆಲಸವೆಂದರೆ ಮೀಡಿಯಾ ಓಡಾಟವನ್ನು ನಿಯಂತ್ರಣಕ್ಕೆ ತೆಗೆದುಕೊಮಡದ್ದು, ವಿದೇಶೀ ಮಾಧ್ಯಮಗಳನ್ನು ಸಂಪೂರ್ಣವಾಗಿ ನಿಷೇಧಿಸಿತು. ಇರಾನ್ ಸರ್ಕಾರ ಸುದ್ದಿ ಹರಡದಂತೆ ತನ್ನ ಸುತ್ತಾ ಕೋಟೆ ಕಟ್ಟಿತು. ಆದರೆ ಕೋಟೆಯೊಳಗಿಂದಲೇ ಸುದ್ದಿಯ ಲೈವ್ ಟೆಲಿಕ್ಯಾಸ್ಟ್ ನಡೆಯುತ್ತಿತ್ತು. ಜಗತ್ತು ನೋಡುತ್ತಿತ್ತು. ಹೇಗೆ? - ಟ್ವಿಟರ್! ಇರಾನ್ನ ಬೀದಿಯ ಮೇಲಿನ ಸಾಮಾನ್ಯ ಜನರನ್ನು ಸಕರ್ಾರ ಮನಯೊಳಗೆ ಕೂಡಿಹಾಕಿದರೆ, ಅವರು ಟ್ವಿಟ್ ಮಡಲು ಶುರು ಮಾಡಿದರು. ಎಲ್ಲವೂ ಜಗಜ್ಜಾಹೀರಾಗಿ ಹೋಯಿತು. ಇರಾನ್ನ ಬೀದಿಯ ಮೇಲಿದ್ದವರಿಗೂ ಆ ಗೊಂದಲದಲ್ಲಿ ಅಂತಹುದೊಂದು ಹೊಲಿಸ್ಟಿಕ್ ಪಿಚರ್ ಸಿಗಲಿಲ್ಲ. ಅವರೆಲ್ಲರೂ ಅವರ ಅನುಭವಗಳನ್ನು ಟ್ವೀಟ್ ಮಾಡುತ್ತಿದ್ದರೆ ಜಗತ್ತಿಗೆ ಸಿಕ್ಕಿತ್ತು ಆ ಹೋಲಿಸ್ಟಿಕ್ ಪಿಚರ್. ಟ್ವಿಟರ್ ಕ್ರಾಂತಿ! ಚೈನಾ, ಇರಾನ್, ಇರಾಕ್, ಲಂಕಾ, ಪಾಕಿಸ್ತಾನ ಹೀಗೆ ಎಲ್ಲೆಲ್ಲಿ ಪರಿಸ್ಥಿತಿ ಕೈಮೀರಿ ಹೋಗಿ ಮಿಡಿಯಾಗೆ ಗ್ಯಗ್ ಆರ್ಡರ್ ನೀಡಲಾಗಿದೆಯೋ ಅಲ್ಲಿಂದಲೆಲ್ಲಾ ಸುದ್ದಿ ಹೊರಬರುತ್ತಿರುವುದೇ ಟ್ವಿಟರ್ನಿಂದಾಗಿ. ಎಲ್ಲ ಸರ್ವಾಧಿಕಾರಗಳಿಗೂ ಇದೊಂದು ಎಚ್ಚರಿಕೆಯ ಘಂಟೆ.

ಇಂತಹುದೊಂದು ಕ್ರಾಂತಿಯ ಹರಿಕಾರರಾದರೂ ಯಾರು? ಅಮೆರಿಕಾದ ಕಂಪೆನಿ ಟ್ವಿಟರ್ ಶುರುವಾಗಿದ್ದು 2006ರಲ್ಲಿ. ಸದ್ಯ ಆ ಕಂಪೆನಿಯಲ್ಲಿರುವುದು ಕೇವಲ 52 ಮಂದಿ ಉದ್ಯೋಗಿಗಳು! ಆ ಆಫೀಸಿನಲ್ಲಿ ಎಲ್ಲವೂ ಶಾಂತ. ಸೋಫಾದ ಮೇಲೆ ಕುತು ಕೆಲಸ ಮಾಡುವ ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಲ್ಯಾಪ್ ಟಾಪ್. ಮಿಕ್ಕೆಲ್ಲವೂ ಮೌನ, ಮೌನ, ಮೌನ. ಆದೆರ ಆ ವೆಬ್ಸೈಟಿನಲ್ಲಿನ ಗದ್ದಲವಿದೆಯಲ್ಲ ಅದು ಹೇಳತೀರದ್ದು. ಪ್ರತಿ ನಿಮಿಷವೂ ಸುಮಾರು 35 ಮಿಲಿಯನ್ ಮಂದಿ ಟ್ವಿಟರ್ ಅನ್ನು ಬಳಸುತ್ತಿರುತ್ತಾರೆ. ಅವರೆಲ್ಲರನ್ನೂ ಈ 52 ಮಂದಿ ಮಾಡರೇಟ್ ಮಾಡುತ್ತಿರುತ್ತಾರೆ ಅಷ್ಟೆ! ಅಸಲಿಗೆ ಟ್ವಿಟರ್ ಐಡಿಯಾ ಮೊದಲು ತಟ್ಟಿದ್ದು ಯಾರಿಗೆ? ಅದನ್ನು ಡೆವಲಪ್ ಮಾಡಿದುದು ಹೇಗೆ ಎಂಬೆಲ್ಲ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿದೆಯಲ್ಲವೇ?

ಅಸಲಿಗೆ ಟ್ವಿಟರ್ ಎಂಬುದೊಂದು ಆಕ್ಸಿಡೆಂಟ್! ಟ್ವಿಟರ್ನ ನಾಯಕರೆಲ್ಲರೂ ಚಿಕ್ಕದೊಂದು ತಂಡ ಕಟ್ಟಿಕೊಂಡು ಓಡಿಯೋ ಎಮಬ ಪ್ರಾಜೆಕ್ಟಿನ ಮೇಲೆ ಕೆಲಸ ಮಾಡುತ್ತಿದ್ದಾಗ, ಚರ್ಚೆಯಲ್ಲಿ ತೂರಿಬಂದದ್ದೇ ಸೂತ್ರಸಂಬಂಧವಿರದ ಒಂದು ಸಲಹೆ. ಜಾಕ್ ಡಾಸರ್ೆಗೆ ಅದೆಲ್ಲಿ ಹೊಲೆಯಿತೋ ಏನೋ? ಅವರು ಒಂದು ಸಲಹೆಯನ್ನು ಮುಂದಿಟ್ಟರು. ಅದು ಒಂದು ಸ್ನೇಹಿತರ ಗುಂಪು ಮೊಬೈಲಿನ ಮೂಲಕ ಮೆಸೇಜುಗಳನ್ನು ಹಂಚಿಕೊಳ್ಳುವ ಒಂದು ರಾಪಿಡ್ ಫೈರ್ ಮೆಸೇಜಿಂಗ್ ಸಿಸ್ಟಮ್. ಹುಳು ಎಲ್ಲರ ತಲೆ ಹೊಕ್ಕಿ ಕುಳಿತುಬಿಟ್ಟಿತು. ಆ ಪ್ರಾಜೆಕ್ಟಿನ ನಂತರ ಎಲ್ಲರು ಇದರ ಮೇಲೆ ಕೆಲಸ ಮಾಡಲು ಶುರು ಮಾಡಿದರು. ಅದು ಮೊಬೈಲಿನಿಂದ ಡಾಟ್ ಕಾಂಗೆ ಬಂದು ನಿಂತಿತು. ಟ್ವಿಟರ್ ಜನ್ಮ ತಾಳಿತು. ಅಸಲಿಗೆ ಈ ಟ್ವಿಟರ್ ತಂಡದಲ್ಲಿ ಯಾರೂ ಅಂತಹ ಹೇಳಿಕೊಳ್ಳುವಂತಹ ಓದು ಓದಿದವರೇ ಅಲ್ಲ. ಈ ತಂಡದ ಡಾಕ್ , ವಿಲಿಯಮ್ಸ್, ಸ್ಟೋನ್ಯಾರೂ ಗ್ರಾಜುಯೇಷನ್ ಮುಗಿಸಿದವರಲ್ಲ, ಎಲ್ಲರೂ ಕಾಲೇಜು ಡ್ರಾಪ್ ಔಟುಗಳು! ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸರುವುದು ಕೇವಲ ಅವರ ಶ್ರಮ, ಇಮೇಜಿನೇಷನ್ ಮತ್ತು ಹೊಸದೇನನ್ನಾದರೂ ಮಾಡಬೇಕೆನ್ನುವ ತುಡಿತ ಮಾತ್ರ. ಟ್ವಿಟರ್ ಮೊದಲಿಗೆ ಪ್ರಖ್ಯಾತವಾಗಿದ್ದು ಸೆಲಿಬ್ರಿಟಿಗಳು ಕಾಲಕಳೆಯುವ ಸೋಮಾರಿ ಕಟ್ಟೆಯಾಗಿ, ಮತ್ತು ಅವರ ಅಭಿಮಾನಿಗಳ ಒಡ್ಡೋಲಗವಾಗಿ. ಕೆಲವೇ ತಿಂಗಳಲ್ಲಿ ಇದು ಸಾಮಾಜಿಕ ಸಮಾಚಾರ ಕ್ರಾಂತಿಯನ್ನು ಟ್ರಿಗರ್ ಮಾಡಿ ಅದನ್ನು ಪೋಷಿಸುತ್ತಿರುವ ವೇದಿಕೆಯಾಗಿ ರೂಪುಗೊಂಡಿದೆ. ಮುಂದೇನೋ?....

ಇದನ್ನು ಟ್ವಿಟರ್ ಕ್ರಾಂತಿಯೆನ್ನುವುದಕ್ಕಿಂತ ಸಮಾಚಾರ ಕ್ರಾಂತಿಯ ಹೊಸದೊಂದು ಮಗ್ಗುಲೆನ್ನಬಹುದು. ಮಾಹಿತಿಯ ತಡೆರಹಿತ ಹೊಯ್ದಾಟ ಈ ಜಗತ್ತನ್ನು ಇನ್ನಿಲ್ಲದಂತೆ ಬದಲಾಯಿಸಿ ಬಿಸುಡುತ್ತದೆ. ಇದೊಂದು ಮೌನ ಕ್ರಾಂತಿ. ಇಲ್ಲೊಂದು ಕ್ರಾಂತಿ ನಡೆಯುತ್ತಿದೆಯೆಂದು ನೀವು ಗುರುತಿಸುವಷ್ಟರಲ್ಲಿ ಅದು ನಿಮ್ಮನ್ನು ಮೀರಿ ಎಷ್ಟೋ ದೂರ ಹೋಗಿಬಿಟ್ಟಿರುತ್ತದೆ. ಇದರಲ್ಲಿ ಎಲ್ಲ ಮಾಧ್ಯಮಗಳೂ ಭಾಗಿಗಳೇ - ಪ್ರಿಂಟ್ , ಟೀವಿ, ಅಂತಜಾಲವು ಈ ಕ್ರಾಂತಿಗೆ ಇಂಧನವಾಗಿ ಕೆಲಸ ನಿರ್ವಹಿಸುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಇಂದಿನ ಮೀಡಿಯಾ ತೀರ ವಯಕ್ತಿಕ ಮಟ್ಟದಲ್ಲೂ ಅದರ ಸವಿಯನನುಭವಿಸಲು ಅವಕಾಶ ಮಡಿಕೊಡುವುದರಿಂದ ಅದು ಸಾಗಬಹುದಾದ ದೂರ ಇನ್ನು ಬಹಳಷ್ಟಿದೆ. ಇದರಲ್ಲಿ ಗೂಗಲ್, ಆರ್ಕುಟ್ , ಫೇಸ್ಬುಕ್, ಬ್ಲಾಗುಗಳು, ಟ್ವಿಟರ್ ಎಲ್ಲವೂ ಪಾತ್ರಧಾರಿಗಳೇ. ಟ್ವಿಟರ್ ಇದಕ್ಕೊಂದು ಹೊಸ ಸೇರ್ಪಡೆ.
(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ)
ಅಂದಹಾಗೆ ನಾನು ಟ್ವಿಟರ್ನಲ್ಲಿದ್ದೀನೆ ಕಣ್ರೀ. ಇಲ್ಲೇ ಪಕ್ಕದಲ್ಲೇ ಇದೆ ನೋಡಿ ಟ್ವಿಟರ್ ಟ್ವಿಟರ್ - ಟ್ವೀಟ್ ಟ್ವೀಟ್! ಅಲ್ಲಿ ಕ್ಲಿಕ್ಕಿಸಿ ಸೀದ ಅಲ್ಲಿಗೆ ಹೋಗುತ್ತೀರಿ, ಅಂದ ಹಾಗೆ ನೀವು ಟ್ವಿಟರ್ ಬಳಸಲು ಶುರು ಹಚ್ಚಿದ್ದೀರ? ಇಲ್ಲವಾ ಬೀಗ ಬನ್ನಿ, ಇ-ಲೋಕದಲ್ಲಿ ಹಿಂದೆ ಬೀಳುವ ಹಾಗಿಲ್ಲ...

One thoughts on “ಟ್ವಿಟರ್ ಕ್ರಾಂತಿ!

Anonymous said...

its good

Proudly powered by Blogger
Theme: Esquire by Matthew Buchanan.
Converted by LiteThemes.com.