ದಿನದ ಓದು - ಇದು ಅಂಕಣ ಕಾಣಾ.....


ಅಂಕಣಗಳಿಂದಲೇ ಪತ್ರಿಕೆ ಎಂಬ ಸವಕಲು ನಾಣ್ಯವನ್ನೇ ಮರುಚಲಾವಣೆಗೆ ತರಲು ಹರಸಾಹಸಗಳು ನಡೆಯುತ್ತಿರುವ ಇವತ್ತಿನ ಈ ಸಂಧರ್ಭದಲ್ಲಿ ಅಂಕಣಗಳ ಕುರಿತು ಒಂದು ವಿಮರ್ಶೆ ಅಗತ್ಯ. ಅಂಥದೊಂದು ಚರ್ಚೆಯನ್ನು ಹುಟ್ಟು ಹಾಕುವ ದಿಸೆಯಲ್ಲಿ ಒಂದು ಸಣ್ಣ ಪ್ರಯತ್ನ ಈ ಲೇಖನ. ಅಕ್ಕ ಬರೆದದ್ದು..! ಸುಮಾರು ಐದು ತಿಂಗಳ ನಂತರ ಅಕ್ಕ ಮತ್ತೆ ಲೇಖನಿ ಹಿಡಿದಿದಾಳೆ..!!! ಅಕ್ಕನ ಬ್ಲಾಗಿಗೂ ಮತಿ ಮಾತು ಒಮ್ಮೆ ಹೋಗಿ ಬನ್ನಿ..

ಈ ಲೇಖನ ಇಂದು ಸಂಪಾದಕೀಯ ಬ್ಲಾಗಿನಲ್ಲೂ ಬಂದಿದೆ. ಈ ಕುರಿತು ಚರ್ಚೆ ನಡೆಯಲಿ..

ಇದು ಅಂಕಣ ಕಾಣಾ.....


ಕಣ' ಎಂದರೆ ಅತ್ಯಂತ ಸೂಕ್ಷ್ಮ ಪದಾರ್ಥ ಅಥವಾ ಅಣು ಅಂತೆ, 'ಅಂಕಣ' ಎಂದರೆ ಮನೆಯಲ್ಲಿನ ಎರಡು ಕಂಬಗಳ ನಡುವಣ ಪ್ರದೇಶ ಅಂತೆ, ಹೀಗಂತ ಕನ್ನಡ ನಿಘಂಟು ಹೇಳುತ್ತದೆ. ಇದನ್ನು ಪತ್ರಿಕೆಗಳಿಗೆ ಅನ್ವಯಿಸಿ ನೋಡುವುದಾದರೆ ಇತ್ತೀಚೆಗೆ ಪತ್ರಿಕೆಗಳ 'ಕಣವು' 'ಅಂಕಣಗಳಿಂದ' ತುಂಬಬೇಕು ಎಂಬ ಭಾವ ಎಲ್ಲೆಡೆ ಕಾಣುತ್ತಿದೆ. ಅಂಕಣಗಳಿಂದಲೇ ದಿನಪತ್ರಿಕೆಗಳ ಪ್ರಸಾರ ಸಂಖ್ಯೆ ನಿರ್ಧಾರವಾಗುತ್ತದೆ ಎಂಬ ಭಾವನೆ ಕೂಡ ಹುಟ್ಟುಹಾಕಲಾಗುತ್ತಿದೆ. ನಿತ್ಯ ಅದೇ ಚಡ್ಡಿ, ಯಡ್ಡಿ, ಹೊಡಿ, ಬಡಿ, ರಾಡಿ, ಚಾಡಿ ಸುದ್ದಿಗಳನ್ನು ಓದಿ ಓದಿ ಅಥವಾ ಓದಲಾರದೆ ಓದುಗ ಅಂಕಣಗಳಿಗೆ ಶರಣಾಗುತ್ತಾನೆ ಎಂಬ ಅನಿಸಿಕೆ ಕೂಡ ಇದೆ.

ಇಂದೇಕೆ ಅಂಕಣಗಳಿಗೆ ಇಷ್ಟು ಮಹತ್ವ? ಹಿಂದೆ ಅಂಕಣಗಳೇ ಇರಲಿಲ್ಲವೇ? ಅಥವಾ ಅಂಕಣಗಳನ್ನು ಜನ ಗುರುತಿಸಿರಲಿಲ್ಲವೇ? 'ಅಂಕಣ ಸಾಹಿತ್ಯ' ಸಾಧಾರಣ ಪತ್ರಿಕಾ ಸಾಹಿತ್ಯಕ್ಕಿಂತ ಭಿನ್ನವಾಗಿ ಮೂಡಿ ಬರುತ್ತಿದೆಯೇ? ಪ್ರಚಲಿತ ಅಂಕಣಗಳು ಏನನ್ನು ಹೇಳುತ್ತವೆ? ಅನ್ನುವಂತಹ ಪ್ರಶ್ನೆಗಳನ್ನು ಹಾಗೆ ಸುಮ್ಮನೆ ಅವಲೋಕನಕ್ಕೆ ಎಂದು ಕೇಳಿಕೊಂಡರೆ ಅಷ್ಟೇನೂ ಸಮಾಧಾನಕರ ಉತ್ತರ ದೊರೆಯುವುದಿಲ್ಲ. ಅಂತೆಯೇ... ಹಾಗೇ... ಕೆದಕಿ ಬೆದಕಿ ನೋಡಿದರೆ...

ದಶಕಗಳ ಹಿಂದೆ ಸಹ ಅಂಕಣಗಳು ಇದ್ದವು. ಹಾ.ಮಾ.ನಾಯಕರು ಪ್ರಜಾಮತಕ್ಕೆ ಬರೆಯುತ್ತಿದ್ದ ಅಂಕಣ, ಲಂಕೇಶರು ಪ್ರಜಾ ವಾಣಿ ಗೆ ಬರೆಯುತ್ತಿದ್ದ ಅಂಕಣ, ವೈ ಏನ್ ಕೆ, ಕಾರಂತರು, ವೈಕುಂಠರಾಜು, ಎಂ ವಿ ಕಾಮತ್, ರಾಮಚಂದ್ರ ರಾಯರು, ಸ ಕ್ರ ಪ್ರಕಾಶ್ ಇವರೆಲ್ಲರ ಅಂಕಣಗಳು ಮನಸ್ಸಿನಲ್ಲಿ ಸುಳಿದು ಹೋಗುತ್ತವೆ. 'ಸುಧಾ' ವಾರಪತ್ರಿಕೆಯಲ್ಲಿ ಬರುತ್ತಿದ್ದ 'ಕಾಮಧೇನು', 'ನೀವು ಕೇಳಿದಿರಿ' ಅಂಕಣಗಳು ಲಂಕೇಶ್ ಪತ್ರಿಕೆಗೆ ತೇಜಸ್ವಿ ಬರೆಯುತ್ತಿದ್ದ ಅಂಕಣ ಮರೆಯುವ ಹಾಗೆಯೇ ಇಲ್ಲ.

ಅಂಕಣಗಳು ನಿರ್ದಿಷ್ಟತೆ, ಸ್ವರೂಪ, ವಿಸ್ತಾರ, ಗುರಿ ಮತ್ತು ಬದ್ಧತೆಯನ್ನು ಹೊಂದಿರುತ್ತಿದ್ದವು. ಕೆಲವು 'ರಾಜಕೀಯ'ಕ್ಕಾಗಿಯೇ ಮೀಸಲಾದವು. ಇನ್ನು ಕೆಲವು ಪಕ್ಕಾ ವಿಡಂಬನೆಗಳು. ಇನ್ನು ಕೆಲವು ಪ್ರಶ್ನೋತ್ತರ ರೂಪದವು. ಮತ್ತೂ ಕೆಲವು ಸಾಂಸ್ಕೃತಿಕ ಲೋಕ, ಚಿತ್ರ ಲೋಕಕ್ಕೆ ಸಂಬಂಧ ಪಟ್ಟ ಅಂಥವು. ಅಂದರೆ ಅಂಕಣಗಳಿಗೆ ಹೆಸರು, ರೂಪ, ವಿಷಯ, ಇರುತ್ತಿತ್ತು. 'ಬರೆದವರು ಯಾರು' ಎನ್ನುವುದಕ್ಕಿಂತ ವಸ್ತು ವಿಷಯಕ್ಕೆ ಹೆಚ್ಚು ಸೆಳೆತ ಇರುತ್ತಿತ್ತು. 'ವಿಷಯ ಕೇಂದ್ರಿತ' ಅಂಕಣಗಳು ಕೆಲವಾದರೆ, 'ವ್ಯಕ್ತಿ ಕೇಂದ್ರಿತ' ಅಂಕಣಗಳೂ ಕೆಲವು. ವ್ಯಕ್ತಿ ಕೇಂದ್ರಿತ ಅಂಕಣಗಳಲ್ಲಿ ಈ ಬಾರಿ ಈತ ಏನೆನ್ನುತ್ತಾನೆ ಎಂಬ ಕುತೂಹಲ ಇರುತ್ತಿತ್ತು. ವ್ಯಕ್ತಿ ಕೇಂದ್ರಿತ ಅಂಕಣಗಳೂ ಸಹ, ಯಾವುದಾದರೂ ಸಾಮಾನ್ಯ ಪ್ರಚಲಿತ ವಿಚಾರಗಳ ಬಗ್ಗೆ ಬೆಳಕು ಬೀರುವ, ಪ್ರಜ್ಞಾದೀಪ ಹೊತ್ತಿಸುವ, ಮಂಥನ ನಡೆಸುವ ಪ್ರಣಾಳಿಕೆ ಹೊತ್ತಿರುತ್ತಿದ್ದವು.

ಕೆಲವು ಅಂಕಣಗಳು ಪತ್ರಕರ್ತರು ಖುದ್ದು ಬರೆಯುವುದು, ಮತ್ತೆ ಕೆಲವು ಇತರರಿಂದ ಬರೆಸುವುದು. ಪತ್ರಕರ್ತರು ಸದಾ ಅಖಾಡದಲ್ಲಿ ಇರುತ್ತಾರಾದ್ದರಿಂದ, ನಿರಂತರ ಸುದ್ದಿಮನೆಯ ಆಗು ಹೋಗುಗಳು ಅವರ ಗಮನಕ್ಕೆ ಬರುತ್ತದೆ ಆದ್ದರಿಂದ ಆಯಾ ವಾರದ ಸುದ್ದಿ ಹರಿವು ಆಸಕ್ತಿ, ಅರ್ಥ ಮಾಡಿಕೊಂಡು ಬರೆಯಬಲ್ಲರು. ಜನರ ನಾಡಿಯನ್ನು ಮಿಡಿಯಬಲ್ಲರು ಎನ್ನುವಂಥದ್ದು ಇತ್ತು. ಇತರರು ಅಂಕಣದ ಜವಾಬ್ದಾರಿ ಹೊತ್ತಾಗ ಅವರು ವಿಚಾರದ ಆಯ್ಕೆ ಮಾಡಿಕೊಂಡು, ಸಂಶೋಧನೆ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸೇರಿಸಿ, ಕ್ರೋಡೀಕರಿಸಿ ಬರೆಯುವಂಥದ್ದಾಗಿರುತ್ತಿತ್ತು. ಕೆಲವೊಮ್ಮೆ ಆ ವಿಚಾರ ಮಂಡನೆಯ ಶೈಲಿಗೆ ಅಥವಾ ಪ್ರಚಲಿತದ ವಿಮರ್ಶೆಗೆ, ಪ್ರಸಕ್ತದ ಅರ್ಥ ಮಾಡಿಕೊಳ್ಳುವಿಕೆಗೆ, ಅಂಕಣಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡವರಿದ್ದರು.

ಪಂಚೆ ಧರಿಸುವವರು ಪ್ಯಾಂಟ್, ಜೀನ್ಸ್ ಪ್ಯಾಂಟ್ ತೊಡಲು ಆರಂಭಿಸಿದರು. ಸೀರೆ ಸಲ್ವಾರ್ ಕಮೀಜ್ ಆಯಿತು. ಸಲ್ವಾರ್ ಹೋಗಿ ಮಿನಿ skirt ಬಂತು...

ಕಾಲ ಬದಲಾದ ಹಾಗೆಲ್ಲ ಪತ್ರಿಕೆಗಳೂ ಬದಲಾದವು. ನಾವಿನ್ಯತೆ ಪಡೆದವು. ಮಾಧ್ಯಮ ಉದ್ಯಮ ಆಯಿತು. ಪತ್ರಿಕೆ ಸರಕಾಯಿತು. ಅಂಕಣ ಅಂಕೆ ಮೀರಿತು. ಸಿನಿಮಾ ನಲ್ಲಿನ item song ನ ರೀತಿ ಪತ್ರಿಕೆಗೊಂದು ಅಂಕಣ! ಅದು ವಿಷಯ, ವಾದ, ಪ್ರತಿವಾದ, ಪೂರ್ವ ನಿರ್ಧಾರಿತ ಅಂಶಗಳು, ಸೆಳೆತಗಳು, ಸುಳಿವುಗಳು, ಎಲ್ಲವನ್ನು ಒಳಗೊಂಡಿರುತ್ತದೆ!! ವಾರದ ಅಂಕಣಗಳು, ನಿತ್ಯದ ಅಂಕಣಗಳು, ಸಿನಿಮಾ, ಉದ್ಯೋಗಪುಟಗಳಲ್ಲೂ ಅಂಕಣಗಳು, ವ್ಯಕ್ತಿತ್ವ ವಿಕಾಸನಕ್ಕಾಗಿಯೇ ಅಂಕಣಗಳು... ಅಂಕಣಗಳು ಹೊಸ ರೂಪ ಪಡೆದದ್ದು ನಿಜ. ಬಣ್ಣದ ಸೀರೆ ಉಟ್ಟು ತಂತ್ರಜ್ಞಾನದ ರವಿಕೆ ತೊಟ್ಟು ಅಂದ ಚಂದದ ಮೇಕ್-ಅಪ್ ಧರಿಸಿ ಅನುಭವದ ರಸ ಸಾರ ಕೊಡಲು ಬಂದ ಈ ಅಂಕಣಾoಗನೆಯನ್ನು ಕಂಡು ಓದುಗರು thrill ಆದದ್ದು ನಿಜ. ಆದರೆ...

ಆದರೆ, ಯವ್ವನ ಕಳೆದು ಮುಪ್ಪು ಅಡರುವಂತೆ ಅಂಕಣಗಳು ಹೊಳಪು ಕಳೆದುಕೊಳ್ಳುತ್ತಿವೆಯೇ? ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೇ ಅಂಕಣಗಳು ಈಗೀಗ ಯಾರನ್ನು ಮುಟ್ಟುತ್ತಿವೆ? ಅಂಕಣಗಳು ನಿಜವಾಗಿ ಅಂಕಣಗಳಾಗಿವೆಯೇ? ತಾಜಾತನವನ್ನು ಉಳಿಸಿಕೊಳ್ಳುತ್ತಿವೆಯೇ? ನಿಜವಾಗಿ ಓದುಗ ಅಂಕಣಕ್ಕಾಗಿ ಕಾಯುತ್ತಾನೆಯೇ? ತಾವು ಯಾರಿಗಾಗಿ ಬರೆಯುತ್ತಿದ್ದೇವೆ, ಏನು ಬರೆಯುತ್ತಿದ್ದೇವೆ, ಯಾಕಾಗಿ ಬರೆಯುತ್ತಿದ್ದೇವೆ ಎಂಬುದನ್ನು ಅಂಕಣಕಾರರು ಯೋಚಿಸುತ್ತಿದ್ದಾರೆಯೇ?

ಒಬ್ಬ ಕ್ರಿಕೆಟ್ ಆಟಗಾರ ಸತತ ಐದಾರು ಮ್ಯಾಚ್ ನಲ್ಲಿ ರನ್ ಹೊಡೆಯದಿದ್ದರೆ ಪಾಪ! ಅವನನ್ನು ಮನಬಂದಂತೆ ಬೈಯುತ್ತೇವೆ. ಟೀಂ ನಿಂದ ಕಿತ್ತುಹಾಕಬೇಕು ಎನ್ನುತ್ತೇವೆ. ಹಾಡುಗಾರ ತನ್ನ ವಯೋಧರ್ಮಕ್ಕೆ ತಲೆಬಾಗುತ್ತಿದ್ದಾಗ ಶಕ್ತಿ ಕುಂದಿ ಶ್ರುತಿ ತಪ್ಪಿದರೆ, ಆತ ಸ್ವಯಂ ನಿವೃತ್ತಿ ಪಡೆಯಬೇಕು 'ಕೇಳನೋ ಹರಿ, ತಾಳನೋ' ಎಂದು ಸಂಗೀತ ವಿಮರ್ಶಕರು ಬರೆದುಬಿಡುತ್ತಾರೆ. ಲೋಕಾರ್ಪಣೆಗೊಳ್ಳುವ ಪುಸ್ತಕಗಳ ಬಗ್ಗೆ ಪುಟಗಟ್ಟಲೆ ವಿಮರ್ಶೆಗಳು ಬರುತ್ತವೆ. ಮಾಧ್ಯಮ ಸಾಗುತ್ತಿರುವ ಬಗೆ ವಿವರಿಸಲು ನೂರಾರು ಬ್ಲಾಗ್ ಗಳು, ಚರ್ಚೆಗಳು, ಲೇಖನಗಳು, ಮಂಥನಗಳು ನಡೆದಿವೆ. ಆದರೆ ಈ ಅಂಕಣ ಸಾಹಿತ್ಯ ಯಾರ ಕೈಗೂ ಸಿಗದೇ ನುಸುಳಿ ಹೋಗುತ್ತಿದೆ.

ಸಾರವೇ ಇಲ್ಲದ ಅಂಕಣಗಳು ಹೆಚ್ಚಾಗುತ್ತಿವೆ. 'ನಾನು' ಕೇಂದ್ರಿತ ಅಂಕಣಗಳೇ ಹೆಚ್ಚಾಗುತ್ತಿವೆ. ಸಾಮಾಜಿಕ ವಿಷಯಗಳನ್ನು ಹೊತ್ತ ಅಂಕಣಗಳು ಮಾಯವಾಗುತ್ತಿವೆ. ತಾನು ಓದಿದ ಪುಸ್ತಕ. ತಾನು ಹೋದ ಸಭೆ-ಸಮಾರಂಭ, ತನ್ನ ಸ್ನೇಹಿತರ ಮನೆಗೆ ಪಾರ್ಟಿಗೆ ಹೋಗಿದ್ದು, ಇಂತಹ ಸ್ವ-ಪುರಾಣಗಳು ಅಂಕಣಗಳಲ್ಲಿ ಕಾಣುತ್ತಿವೆ. ಇವು ಆತ್ಮಕಥನಗಳೂ ಅಲ್ಲ, ಗಟ್ಟಿತನವಿರುವ 'ನಾನೂ' ಅಲ್ಲ. ಸುದ್ದಿಯಲ್ಲಿರಬೇಕೆಂದು ಬಯಸಿ ವಿವಾದ ಮಾಡುವ ರಾಜಕಾರಣಿಯಂತೆ, ಪ್ರಚಾರದ ಆಸೆಗೆ gossip ಮಾಡುವ ನಟ ನಟಿಯರಂತೆ ವಾರಕ್ಕೊಮ್ಮೆ ತನ್ನ ಹೆಸರು ಪತ್ರಿಕೆಯಲ್ಲಿ ಬರಬೇಕು ಎನ್ನುವ ಮೋಹಕ್ಕೆ ಅಂಕಣಕಾರ ಬೀಳುತ್ತಿದ್ದಾನೆ. ಅಂಕಣ, ವಿಷಯವನ್ನು ಬಿಟ್ಟು ಅಡ್ಡದಾರಿ ಹಿಡಿಯುತ್ತದೆ. ಅಂಕಣ ಒಂದು ಮೋಹಕ್ಕೆ ತಿರುಗಿದಾಗ ಸಂಪಾದಕರೂ ಏನೂ ಮಾಡಲಾರರು.

ಮೊದಮೊದಲು ಪ್ರತಿ ಪದವನ್ನೂ ಓದುತಿದ್ದ ಓದುಗ, ನಂತರ, ವಾಕ್ಯಗಳ ಮೇಲೆ ಕಣ್ಣಾಡಿಸುತ್ತಾನೆ. ನಂತರ ಪ್ಯಾರ ಎಗರಿಸಿ ಓದುತ್ತಾನೆ. ಬರುಬರುತ್ತಾ ಶೀರ್ಷಿಕೆ ಓದಿಯೇ ಅಂಕಣಕಾರನನ್ನು ಗ್ರಹಿಸಿ ಬಿಡುತ್ತಾನೆ. ಓದುಗ ಶೀರ್ಷಿಕೆ ಕೂಡ ಓದಲಾರದ ಮಟ್ಟಕ್ಕೆ ಬರುವ ಮೊದಲು ಅಂಕಣಕಾರ ಎಚ್ಚೆತ್ತುಕೊಂಡರೆ ಒಳಿತು.
ಸಂಪಾದಕರು ಅವರನ್ನು ತಮ್ಮ ಪತ್ರಿಕೆಗೆ ಬರೆಸಲು ಎಷ್ಟು ಶ್ರಮ ಪಡುತ್ತಾರೋ ಅವರನ್ನು ಪತ್ರಿಕೆಯಿಂದ ಬಿಡಿಸಲೂ ಕೂಡ ಅಷ್ಟೇ ಶ್ರಮ ಪಡಬೇಕಾಗುತ್ತದೆ. ಸರಸ ಸಲ್ಲಾಪ, ಪ್ರಲಾಪಕ್ಕೆ ತಿರುಗಿ ಬಿಡುತ್ತದೆ. ಅಂಕಣಕಾರ ಇನ್ನು ಹದಿನಾರು ಅಂಕಣ ಬರೆದರೆ 'ಐದನೇ ಪುಸ್ತಕ' ಸಿದ್ಧ ಎಂದು ಪ್ರಕಾಶಕರ ಮನೆ ಅಲೆಯುತ್ತಿರುತ್ತಾನೆ, ಸಂಪಾದಕ ಸುಸ್ತಾಗಿರುತ್ತಾನೆ, ಓದುಗ ಉಕ್ಕಿ ಬರುವ ನಗು ತಡೆಯುತ್ತಿರುತ್ತಾನೆ.

ಕೆಲವೊಮ್ಮೆ ಸಂಪಾದಕರೂ ತಮ್ಮ ಸ್ವಹಿತಕ್ಕೆ, ಅಪೇಕ್ಷಿತ ಲಾಭಗಳಿಗೆ, ಸ್ನೇಹಿತರಿಗೆ ಪ್ರಚಾರ ಕೊಡುವುದಕ್ಕೆ, ಅಂಕಣಕಾರರಿಗೆ ಪ್ರೋತ್ಸಾಹಿಸುವುದು ಉಂಟು. ಅಂಕಣಗಳು ವಿಷಯ ಪ್ರಧಾನವಾದಾಗ ಮೂಡಿ ಬರುವ ರೀತಿಯೇ ಬೇರೆ. ಬೆಂಗಳೂರಿನ ಬಗ್ಗೆ ಪತ್ರಿಕೆಯೊಂದರಲ್ಲಿ ಅಂಕಣ ಮೂಡಿ ಬಂತು. ಸಂಗೀತದ ರಾಗಗಳ ಬಗ್ಗೆ, ಸುದ್ದಿ ಮನೆಯ ವಿಚಾರಗಳನ್ನು ತಿಳಿಸುವ ಬಗ್ಗೆ, ವಿಜ್ಞಾನಿಗಳ ಜೀವನ ಚರಿತ್ರೆ, ಮರೆಯಾದ ಲೇಖಕಿಯರು, ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀ ವಿಚಾರಧಾರೆ, ಸಾಹಿತ್ಯ ನಡೆದು ಬಂದ ದಾರಿ, ಇಂತಹ ಅಂಕಣಗಳು ನಿರಂತರ ಕುತೂಹಲ ಉಳಿಸಿಕೊಳ್ಳುತ್ತವೆ. ಬರೆಯುವವ ಯಾರೇ ಇದ್ದರೂ ವಿಷಯದ ಸೆಳೆತ ಅಲ್ಲಿರುತ್ತದೆ. ರಾಜಕೀಯ ಅಂಕಣಗಳು ಪ್ರಸ್ತುತತೆ ಇಂದ ಜೀವಂತಿಕೆ, ಕಾಪಾಡಿಕೊಳ್ಳುತ್ತವೆ. ಆದರೆ ಕೆಲವು ಅಂಕಣಗಳು ಸ್ಟಾರ್-ಗಿರಿ ಇಂದಲೇ ಓಡಬೇಕು. ಕನ್ನಡ ಬಾರದ ನಟ-ನಟಿಯರನ್ನು ಆರಿಸಿ, ಕರೆಸಿ, dubbing ಕೊಟ್ಟು ಪಾತ್ರ ಮಾಡಿಸಿದ ಹಾಗೇ. ಅವರಿಗೆ ಅಕ್ಷರ ಗೊತ್ತೋ, ಬರೆಯಲು ಬರುತ್ತದೋ, ಇಲ್ಲವೋ, ಕೇಳುವ ಹಾಗೆಯೇ ಇಲ್ಲ. ಮತ್ತೆ ಕೆಲವರು ಬರೆಯುವ/ ಓದುವ ಗೋಜು ಬೇಡ ಎಂದು ನಿರೂಪಣೆಗೆ ಒಗ್ಗಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, ಮತ್ತೊಬ್ಬರು ಬರೆಯುತ್ತಾರೆ.

ಆದರೆ, ವಿಷಾದವೆಂದರೆ ಅಂಕಣಕಾರರು 'ಖಾಲಿ' ಆಗುವುದು. ಅದಕ್ಕಿಂತ ಇನ್ನೂ ದುಃಖದ ಸಂಗತಿ ಎಂದರೆ ತುಂಬಿಕೊಳ್ಳದಿರುವುದು. ಅಂಕಣಗಳು ಚನ್ನಾಗಿ ಮೂಡಿ ಬರಬೇಕಾದರೆ ಪತ್ರಿಕಾ ಸಂಪಾದಕರು ಒಬ್ಬ ಅಂಕಣಕಾರನಿಗೆ 'ನಿರ್ದಿಷ್ಟ ಅವಧಿಗೆ' ಮಾತ್ರ ಬರೆಯಲು ಹೇಳಬೇಕು. ವಿಷಯವನ್ನು ಸೂಚಿಸಬೇಕು. ಬಿಡುಗಡೆಯಾಗುವ ಪುಸ್ತಕಗಳ ವಿಮರ್ಶೆ, ಟಾಪ್ ಟೆನ್ ಬರುವ ಹಾಗೆ, TV ಗಳಲ್ಲಿ serial ಗಳಿಗೆ TRP ಇದ್ದಹಾಗೆ, ಚಿತ್ರಗೀತೆಗಳಲ್ಲಿ ಸೂಪರ್ ಹಿಟ್ ಇದ್ದ ಹಾಗೆ, ಎಲ್ಲ ಪತ್ರಿಕೆಗಳ ಎಲ್ಲ ಅಂಕಣಗಳ ಮೌಲ್ಯ ಮಾಪನ ನಡೆಯಬೇಕು. ಟಾಪ್ ಟೆನ್ ಅಂಕಣಗಳು ಯಾವುವು ಎನ್ನುವಂಥ ಚರ್ಚೆಗಳು ನಡೆಯಬೇಕು. ಆಗ ಅಂಕಣಕಾರರು ಮತ್ತು ಸಂಪಾದಕರು ಎಚ್ಚೆತ್ತುಕೊಳ್ಳುತ್ತಾರೆ. ಓದುಗ ನಿರಾಳವಾಗಿ ಉಸಿರಾಡುತ್ತಾನೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು?

ಈಗ ಹೇಳಿ, ಪತ್ರಿಕೆಗಳ ಪ್ರಸಾರ, ಅಂಕಣಗಳಿಂದ ಹೆಚ್ಚಾಗುತ್ತವೆಯೇ?

ದಿನದ ಓದು - ಪಿಂಕಿ ಅಭಿಮತ ಮತ್ತು ಕೊವೂರ್ ಉಯಿಲು




ಅರುಣಾ ಶಾನುಭಾಗ್ ಪರ ಸುಪ್ರೀಂ ಕೋರ್ಟ್ನಲ್ಲಿ ದಯಾಮರನಕ್ಕಾಗಿ ಅರ್ಜಿ ಸಲ್ಲಿಸಿದ, ಅರುಣಳ ಕಥೆಯನ್ನು ಮೊದಲ ಬಾರಿಗೆ ಜಗತ್ತಿಗೆ ಹೇಳಿದ ಲೇಖಕಿ ಪಿಂಕಿ ವಿರಾನಿ ತೀರ್ಪಿನ ಬಗ್ಗೆ ಔಟ್ಲುಕ್ನಲ್ಲಿ ಬರೆದಿರುವ ಲೇಖನ. ಈ ಲೇಖನದಲ್ಲಿ ಪಿಂಕಿ ಕೆಇಎಮ್ ಆಸ್ಪತ್ರೆಯ ಹಲವಾರು ದೋಷಗಳನ್ನು ಅರುಣಳ ಬದುಕಿನ ದುರಂತವನ್ನೂ ಆ ದುರಂತವನ್ನು ಬಳಸಿಕೊಳ್ಳುತ್ತಿರುವ ವ್ಯವಸ್ಥೆಯ ಕ್ರೌರ್ಯವನ್ನೂ ಬೊಟ್ಟು ಮಾಡಿ ತೋರಿಸಿದ್ದಾರೆ. ಇದು ಅರುಣಳ ಇಂದಿನ ಬದುಕಿನ ನಿಜ ಕಥೆ....
You Are Herewith Sentenced To Life
Let Aruna die? No, with her alive, there’s more power, media attention. Hence, the politics of mercy in medicine.




ಈ ಕೆಳಗಿನದು ಪ್ರಖ್ಯಾತ ಮನೋವಿಜ್ಞಾನಿ ಮತ್ತು ನಾಸ್ತಿಕವಾದಿ ಡಾ. ಅಬ್ರಹಂ ಕೊವೂರ್ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದಾಗ ತಾವು ಕಡೆಯ ದಿನಗಳಲ್ಲಿ ಹಾಸಿಗೆ ಹಿಡಿದು ವೆಜಿಟೆಟಿವ್ ಅವಸ್ಥೆಗೆ ಸೇರಿಬಿಟ್ಟರೆ ಅನಾವಸರವಾಗಿ ವೈದ್ಯಕೀಯದ ಕ್ರೌರ್ಯವನ್ನು ತಮ್ಮ ಮೇಲೆ ಪ್ರಯೋಗಿಸದೆ ಒಂದಷ್ಟು ನಿದ್ರೆ ಮಾತ್ರೆ ಕೊಟ್ಟುಬಿಡಿ ಎಂದು ಅವರು ಪ್ರಾಣ ಬಿಡುವ ಕೆಲ ದಿನಗಳ ಹಿಂದೆ ಬರೆದಿಟ್ಟ ಉಯಿಲು. ವೈದ್ಯಕೀಯದ ಕ್ರೌರ್ಯದ ಬಗೆಗೆ ಉದಾಹರಣೆ ಸಮೇತ ಅವರು ವಾದಕ್ಕಿಳಿಯುತ್ತಾರೆ. ಪರೋಕ್ಷ ದಯಾಮರಣದ ಪರ ಒಂದು ಭಾವನಾತ್ಮಕ ಆದರೆ ನೈಜ ವಾದ. ನೆನಪಿರಲಿ ಇದು ರೋಗಿಯೊಬ್ಬ ಪರೋಕ್ಷ ದಯಾಮರನಕ್ಕೆ ಕೋರಿ ಬರೆದಿಟ್ಟ ಉಯಿಲು..

OF EUTHANASIA 


Euthanaisa is the mercifull act of painlessly terminating the life of an organism suffering from an incurable disease or wound. Though there is no objection in practicing euthanasia on animals, it is prohibited in the case of men. This is due to the fallacious Judaic, Christian and Islamic beliefs that, unlike animals, man alone was created by hands of clay, and life was blown into it through his nostrils by God. Thus, according to them, God alone has the right to take life from man. In countries dominated by the influences of these religions, doctors are not allowed to practice euthanasia even with the written permission of the suffering patient.

In Sri Lanka and India where majority of people believe in rebirth, euthanasia should be considered a meritorious act that should be encouraged. It is more sensible for those who believe in rebirth to prohibit the present practice of doctors prolonging the life by medication of a person suffering from an incurable disease than prohibiting euthanasia, because by medication the doctors are only delaying the sick men’s chance of discarding their deceased bodies to be reborn in younger and healthier bodies.

Once I witnessed the cruel act of a doctor administering oxygen to a cancer patient struggling between life and death. Probably his religious upbringing did not make him realize the cruelty of his act of making the dying person suffer a few more hours. How sensible it would have been if, instead of administering oxygen, he had given the patient an overdose of sleeping drug.

On another occasion a doctor of very low intelligence was triumphantly boasting about the success he and his alcoholic doctor son achieved in reviving a lady who was in deep coma as a result of cancer in her lungs, by giving her glucose drip. Although I told him I would not like such a cruel act done even to my pet dog, the foolish doctor obsessed by his religious delusions, continued to boast about how he and his drunkard son succeeded in keeping the sick lady conscious until her death.

The cancer specialist who was told that his patient was in a state of coma, was happy to know that she was not able to feel any pain during the last hours of her life. He said that nature was doing what he himself would have done if law permitted. He was thoroughly annoyed at the uncalled for interference of the two misguided quacks in making his patient suffer for a few more days.

My 80-year old body has cancer in its bladder, and as a result of it I am suffering from frequent haematuria.  In view of my old age doctors have ruled out surgery and radiotherapy. They are treating me by chemotherapy and blood transfusion in an attempt to keep me alive for a few more weeks or months, and not years. They have succeeded a good deal in this respect, and I am thankful to them. I am able to attend my normal work, although at a lesser scale.

Before long when I am bedridden and become useless to my fellow beings and myself, I will not allow my good doctors to prolong my life and suffering any more. Unfortunately, my doctors are prevented from an antediluvian law from terminating my suffering by putting me to sleep permanently, even if I request to do so.
My rational mind will not permit me to eat the so called holy ash given by the juggler sai baba, or drink my urine every morning as curative medicines for cancer at the advice of gullible sai baba devptees and Sri Morarji Desai!

My only hope of escaping the forthcoming agony is in some of my sincere friends who foolishly believe in rebirth even though there is no evidence for it. I appeal to them to compassionately help me put an end to my suffering by getting me a liberal supply of sleeping tablets, when I am completely bedridden.

It being a meritorious karma they need not hesitate to violate an outmoded law. In addition to helping me to get rid of my cancerous body to be reborn into a healthy young body, they themselves will be adding one more merit to their credit. Even Mahatma Gandhi did not hesitate to break the laws for doing good for his fellow men. 
(taken from the book Gods, Demons and Spirits - Dr. Abraham Kovoor, pg 107.)

ದಿನದ ಓದು - ಉದಯ ಇಟಗಿ ಅವರ ಲಿಬಿಯಾ ಕಥನ

ಉದಯ ಇಟಗಿ ನಮ್ಮ ಯಲಬುರ್ಗದ ಮುಧೋಳದವರು. ವೃತ್ತಿಯಿಂದ ಇಂಗ್ಲೀಶ್ ಪ್ರಾಧ್ಯಾಪಕರಾಗಿರುವ ಇವರು ಕಳೆದ ಮೂರೂವರೆ ವರ್ಷಗಳಿಂದ ಲಿಬಿಯಾದ ಸೇಭಾ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುತ್ತಿದ್ದಾರೆ. ಇತ್ತ ಇವರು ಮಧ್ಯಂತರ ರಜೆಯ ಮೇಲೆ ಊರಿಗೆ ಬಂದರೆ ಅತ್ತ ಲಿಬಿಯಾದಲ್ಲಿ ದಂಗೆ ಪ್ರಾರಂಭವಾಗಿದೆ. ಟ್ಯುನೀಸಿಯ, ಈಜಿಪ್ಟ್ ನ ನಾಗರೀಕ ದಂಗೆಗಳಿಗೂ ಲಿಬಿಯಾದ ದಂಗೆಗೂ ಸಾಕಷ್ಟು ವ್ಯತ್ಯಾಸವಿದೆ. ಅಸಲು ಲಿಬಿಯಾದಲ್ಲಿ ದಂಗೆಗೆ ಕಾರಣವಾದರೂ ಏನು? ಇದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಲಿಬಿಯಾದ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಲು ಅಮೆರಿಕ ನಡೆಸುತ್ತಿರುವ ಹುನ್ನಾರವಿದು ಎಂಬ ಕೂಗುಗಳೂ ಇವೆ. ಇದಕ್ಕೆ ಸರಿಯಾಗಿ NATO ಎದ್ದು ಕೂತಿದೆ. ಲಿಬಿಯಾ ಮತ್ತೊಂದು ಅಫಾಘಾನಿಸ್ತನ ಇರಾಕ್ ಆಗಲಿದೆಯಾ? ಕಳೆದ ಮೂರೂವರೆ ವರ್ಷಗಳಿಂದ ಲಿಬಿಯಾದಲ್ಲಿ ನೆಲೆಸಿದ್ದ ಉದಯ್ ಇಟಗಿ ಬರೆದಿರುವ ಅಪರೂಪದ ವಿಶಿಷ್ಠ ಅನುಭವ ಮತ್ತು ಒಳನೋಟಗಳನ್ನೊಳಗೊಂಡ ಅಪರೂಪದ ಲೇಖನ, ಅವರ ಬಿಸಿಲಹನಿ ಬ್ಲಾಗಿನಲ್ಲಿ....

ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ

ದಿನದ ಓದು - ideological enemy?


ಇದು ಪಾಕಿಸ್ತಾನದ ಪ್ರಮುಖ ದೈನಿಕ ದಿ ಡಾನ್ ಪತ್ರಿಕೆಯಲ್ಲಿ ಬಂದ ಸಂಪಾದಕೀಯ. 



CERTAIN Pakistani circles argue strongly that India is Pakistan’s ideological enemy and Pakistan should therefore minimise cultural and economic linkages with India. Clearly, there is mutual enmity, but is it ideological?

ದಿನದ ಓದು - Kalidasa in Kolar


BYLANES
The bard's classic play resonates in a different context and in a different culture

ಕಾಳಿದಾಸನ ಶಾಕುಂತಲ ನಮ್ಮೂರಲ್ಲೂ ಇದೆ ಸ್ವಾಮಿ. ಅದೂ ಶಾಕುಂತಲಕ್ಕೂ ಮೊದಲಿರಬಹುದು. ಅಸಲು ಕಾಳಿದಾಸ ಶಾಕುಂತಲವನ್ನು ಬರೆಯಲು ನಮ್ಮೂರಿನ ಜಾನಪದ ಕೂಡ ಪ್ರೇರಣೆಯಾಗಿರಬಹ್ದುದು!! ಸುಗತ ಅವರ ಅದ್ಭುತ ಲೇಖನ - ಕೋಲಾರದಲ್ಲಿ ಕಾಳಿದಾಸ. 

ದಿನದ ಓದು - Corporate socialism's 2G orgy


Corporate socialism's 2G orgy

P.SAINATH

The Union budget writes off Rs.240 crore in corporate income tax every single day on average — the same amount leaves India each day in illicit fund flows to foreign banks. 




ಇದು ನಮ್ಮ ಇಂದಿನ ನೈಜ ಎಕನಾಮಿಕ್ಸ್, ಮನಮೋಹನಾಮಿಕ್ಸ್. ಈ ಹಿಂದೆ ಸಾಯಿನಾಥ್ ಹೇಳಿದ್ದರು. its the professor who mislead all his students. ದೇಶದ ಬಡಬಗ್ಗರಿಗೆ ಕೊಡಮಾಡುತ್ತಿರುವ ಆಹಾರ ಧಾನ್ಯ ಮತ್ತು ನಮ್ಮ ರೈತರಿಗೆ ನೀಡಲಾಗುತ್ತಿರುವ ರಸಗೊಬ್ಬರ ಸಬ್ಸಿಡಿಗಳನ್ನು 2G spectrum  ಹಗರಣದ ಜೊತೆ ತಳಕು ಹಾಕುವ ಮನಮೋಹನರಿಗೆ ಈ ಸಬ್ಸಿಡಿ ಕಾಣುತ್ತಿಲ್ಲವೇ? ಕೇಳಿ ನೋಡಿ ಇದನ್ನು ಅವರು ಸಬ್ಸಿಡಿಗಳಿಗೆ ಹೋಲಿಸುವುದಿಲ್ಲ. it is an incentive to the industry you know!! 

ದಿನದ ಓದು - Cat on a Hot Tin Roof

Our life and future is tied in with the decisions of the environment ministry. SHOMA CHAUDHURY on why we should be interested in the high-voltage story of Jairam Ramesh 

ಕೇಂದ್ರ ಪರಿಸರ ಇಲಾಖೆಯ ನಿಜ ಸತ್ವವನ್ನು ಸಾರಿದವರು ನಮ್ಮ ಕನ್ನಡಿಗರೇ ಆದ ಜಯರಾಂ ರಮೇಶ್. ಇವತ್ತು ಪರ್ಯಾವರಣ ಭವನ `ಅಭಿವೃದ್ಧಿ' ಯಾ ಪ್ರಗತಿ ಎಂಬ ಇಂದಿನ ಬಹುಮುಖ್ಯ ಸಂವಾದದ ಕೇಂದ್ರ ವೇದಿಕೆಯಾಗಿದೆ. growth for the sake of growth is the philosophy of cancer cells. ಅಂತಾನೆ ಎಡ್ವರ್ಡ್ ಎಬ್ಬೆ. ಇವತ್ತಿನ ನಮ್ಮ gung -ho growth ನ ಹುಚ್ಚು  ಅಮಲಿನ sermon ನಲ್ಲಿ ಇಂಥದೊಂದು ವಿವೇಕವನ್ನು ತುಂಬಲೆತ್ನಿಸುವುದಿದೆಯಲ್ಲ, ಅದು ಸಾಗರದ ವಿರುದ್ಧ ಈಜುವ ಸಾಹಸ. ಅಂಥದೊಂದು ಸಾಹಸದಲ್ಲಿ ನಮ್ಮ ಜಯರಾಂ ರಮೇಶ್ ನಿರತ. ಬೃಹತ್ ಕೈಗಾರಿಕೆಗಳನ್ನು ಮತ್ತು ರಾಷ್ಟ್ರದ ನೈಸರ್ಗಿಕ ಸಂಪತ್ತಿನ ದೋಚುವಿಕೆಗೊಂದು check dam ನಿರ್ಮಿಸಿ ಅತ್ತ ಅವರನ್ನು ಎದುರು ಹಾಕಿಕೊಳ್ಳುತ್ತಿದ್ದರೆ ಇತ್ತ ಅವರು ಒಂದು ಪ್ರಾಜೆಕ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟರೂ ನಮ್ಮ ಹೋರಾಟಗಾರರು ಹುಯಿಲೆಬ್ಬಿಸುತ್ತಾರೆ. ಆದರೆ ಯಾವುದೂ ಬ್ಲಾಕ್ & ವೈಟ್ ಅಲ್ಲ. ಪ್ರತಿಯೊಂದರಲ್ಲೂ ಒಂದು ಕೊಡು ಕೊಳ್ಳುವಿಕೆಯ balancing act ನಡೆದಿರುತ್ತದೆ. ರಮೇಶ್ ಮಾಡುತ್ತಿರುವುದೂ ಅದನ್ನೇ. ಈವರೆಗೂ ೩ ಬಾರಿ ಅವರು ಕೆಲಸ ಕಳೆದುಕೊಳ್ಳುತ್ತಿದ್ದರು. ಇದು ನಾಲ್ಕನೆಯ ಪರೀಕ್ಷೆ. ಈ ಹಿನ್ನೆಲೆಯಲ್ಲಿ ಜಯರಾಂ ರಮೇಶ್ ಅವರ ಮತ್ತು ವಿಸ್ತಾರವಾಗಿ ಅಭಿವೃದ್ಧಿ ಯಾ ಪ್ರಗತಿಯ ಕುರಿತು ನಡೆಯುತ್ತಿರುವ ಸಂವಾದದ ಮೇಲೊಂದು ಕ್ಷಕಿರಣ. 

ದಿನದ ಓದು - Was there a renaissance really in India?

ಇಂದಿನ ನಮ್ಮ ಆಧುನಿಕ ಸಮಾಜದ ಸ್ಥಿತಿ - ನರೇಂದ್ರ ಶರ್ಮ ಎಂಬ ಯಾವನೋ ಮುಠ್ಠಾಳ ಶಕ್ತಿ ದೇವತೆ ಬಾಯ್ತೆರೆಯುತ್ತೆ ಐದು ಎಣ್ಣೆಗಳಿಂದ ದೀಪ ಹಚ್ಚಿಡಿ ಅಂದರೆ ಇಡೀ ಕರ್ನಾಟಕದ ಲೇಡಿ ಗಾಡ್ಸ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ನಮ್ಮದು ಆಧುನಿಕ ಸಮಾಜವಾ? ಆಗಬೇಕೆಂಬ ಆಸೆಯಿರಬಹುದು ಆದರೆ ಅಲ್ಲ ಎಂಬುದು ವಾಸ್ತವ. ಇಲ್ಲಿ ರಾಕೆಟ್ ಸೈನ್ಸ್ ಬೆಳೆಯುತ್ತಿರುವಷ್ಟೇ ವೇಗದಲ್ಲಿ ಶಿಕ್ಷಣವೂ ಅಷ್ಟೇ ವೇಗದಲ್ಲಿ ಅಂಧಶ್ರದ್ಧೆಯೂ ಬೆಳೆಯುತ್ತಿದೆ. ಅಸಲು ಈ paradox ಗೆ ಕಾರಣವಾದರೂ ಏನು? ಕೆ.ಎನ್. ಪಣಿಕ್ಕರ್ ಅವರು ಇದೆಲ್ಲದರ ಮೂಲವನ್ನು ನಮ್ಮ ರೆನೈಸಾನ್ಸ್ ಎಂದು ಕರೆಸಿಕೊಳ್ಳುವ ಸಮಾಜ ಪರಿವರ್ತನಾ ಚಳುವಳಿಯ ಅಪಕ್ವತೆ ಮತ್ತು ಅಪೂರ್ಣತೆಗಳಲ್ಲಿ ಹುಡುಕುತ್ತಾರೆ. 

ಅಸಲು ಭಾರತೀಯ ಆಧುನಿಕ ಮನೋಧರ್ಮ ಎಂಬುದು ರೂಪಿತವೇ ಆಗಿಲ್ಲ. ಇವತ್ತು ಆಧುನಿಕ ಎಂದು ಕರೆಸಿಕೊಳ್ಳುವುದು ವಸಾಹತು ಮತ್ತು ಪರಂಪರೆಯ ಪಳೆಯುಳಿಕೆಗಳು ಮಾತ್ರ. ಅವರು ರಾಜಾ ಋಆಮಾಮೋಹನ ರಾಯ್ ಅವರಾದಿಯಾಗಿ ಪೆರಿಯಾರ್ವರೆಗೂ ಈ ಸಾಮಾಜಿಕ ಪರಿವರ್ತನಾ ಚಳುವಳಿಯನ್ನು ಅತ್ಯಂತ ಸಮರ್ಥವಾಗಿ ವಿಶ್ಲೇಷಿಸುತ್ತಾ ಕೆಲವು ಅದ್ಭುತ ಹೊಳಹುಗಳನ್ನು ನೀಡುತ್ತಾರೆ. ಈ ಎಲ್ಲರೂ ಸಮಾಜ ಪರಿವರ್ತನೆಗಾಗಿ ಹೋರಾಡಿದವರೆ ಆದರೆ ಇವರೆಲ್ಲರೂ ಪರಂಪರೆ ವೇದಾಂತಗಳ ಚೌಕಟ್ಟುಗಳೊಳಗೆ ಮರುವ್ಯಾಖ್ಯಾನಕ್ಕಾಗಿ ಬಡಿದಾಡಿದವರು. ಅಸಲು ಇವರು ಅದನ್ನು ತಿರಸ್ಕರಿಸಲೇ ಇಲ್ಲ. ಹಾಗಂತ ಅದನ್ನು ಒಪ್ಪಲೂ ಇಲ್ಲ, ಅವರ ನವ ವಸಾಹತು ಶಿಕ್ಷಣದ ಅಮಲಿನಲ್ಲಿ ನಮ್ಮ ಪರಂಪರೆಯನ್ನು ಮರುವ್ಯಾಖ್ಯಾನಿಸಿ ಎಡಬಿಡಂಗಿಗಳಾದರು. ಅಸಲು ಯೂರೋಪ್ನಲ್ಲಾದಂತೆ ನಮ್ಮಲ್ಲಿ ನಿಜಕ್ಕೂ ರಿನೈಸಾನ್ಸ್ ಆಯಿತೇ? ಎನ್ನುವ ಮಹತ್ತರ ಪ್ರಶ್ನೆಯನ್ನೆತ್ತುತ್ತಾರೆ. ಚಿಂತನೆಗೆ ಹಚ್ಚುವ ಒಂದು ಅತ್ಯುತ್ತಮ ಲೇಖನ. ದಯವಿಟ್ಟು ಓದಿ. 


K.N. PANIKKAR, former Vice-Chancellor of the Sri Sankara University of Sanskrit, Kalady, Kerala.

Although the renaissance brought about a qualitative change in perspectives and practices, its impact was limited to a very small section of society. Yet, it did generate a cultural and intellectual break without which the later movements would not have been possible. In this sense, the regeneration of the 19th century was a precursor to modernity in India. Notwithstanding this positive contribution, the renaissance promoted by the colonial intelligentsia was not powerful enough to overcome the cultural backwardness of society. Many of the ills of contemporary Indian society can be traced to the unfinished agenda of the renaissance.


ದಿನದ ಓದು - The Un-Victim - the Arundhati Roy interview


The Un-Victim


Amitava Kumar interviews Arundhati Roy, GUERNICA, February 2011

In the wake of sedition threats by the Indian government, Arundhati Roy describes the stupidest question she gets asked, the cuss-word that made her respect the power of language, and the limits of preaching nonviolence.
ROY's rare insights into her writing both fiction and political non-fiction and the ways and means of resistence. a good one do read...

Proudly powered by Blogger
Theme: Esquire by Matthew Buchanan.
Converted by LiteThemes.com.