ಮೋದಿ ತರೂರ್ - ಒಬ್ಬರು ಹಿಟ್ ವಿಕೆಟ್, ಮತ್ತೊಬ್ಬರು ರನ್ ಔಟ್ !!!



ಟ್ವಿಟರ್ನಲ್ಲಿ ಲಲಿತ್ ಮೋದಿ ಎಬ್ಬಸಿದ ಬಂಡಾಯ, ಶಶಿ ತರೂರ್ ಮನಿಸ್ಟ್ರಿಯ ಕೊರಳಿಗೆ ಸುತ್ತಿಕೊಳ್ಳತೊಡಗಿದಾಗ ಇದನ್ನು ಬಹುತೇಕರು storm in the tea cup ಎಂತಲೇ ಭಾವಿಸಿದ್ದರು. ಆದರೆ ದಿನಗಳುರುಳಿದಂತೆ ಈ ವಿಷಯ ತನ್ನದೇ ಆದಂತಹ momentum ಅನ್ನು ಪಡೆದುಕೊಳ್ಳುತ್ತಾ ಸಾಗಿ ನಿಜವಾದ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ಈ ಬಿರುಗಾಳಿಗೆ ಮೊದಲ ಬಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ಶಶಿ ತರೂರ್. ಕಡೆಗೂ ಶಶಿ ತರೂರ್ ತಲೆದಂಡವಾಗಿದೆ. ಅದು ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಬಿಡಿ. ಕಡೆಯ ಪ್ರಯತ್ನೆವೆಂಬಂತೆ ಶಶಿ ತರೂರ್ನ ಮನದನ್ನೆ ಸುನಂದಾ ಪುಷ್ಕರ್ ತನಗೆ ದೊರೆತ ಸ್ವೆಟ್ ಈಕ್ವಿಟಿಯನ್ನು ವಾಪಸು ನೀಡಿ, ನೋಡಿ ತಮ್ಮದೇನೂ ಇಲ್ಲ, ಲಂಚವಾಗಿದ್ದರೆ ವಾಪಸು ನೀಡುತ್ತಿದ್ದವೇ ಎಂದು ಪ್ರಶ್ನಿಸುವಂತೆ ನಿಂತರು. ಇದರಲ್ಲೂ ಶಶಿ ತರೂರ್ನ ರಾಜಕೀಯ ಮೌಢ್ಯತೆ ಎದ್ದು ತೋರುತ್ತಿತ್ತು. ಸುನಂದಾ ತನ್ನ ಸ್ವೆಟ್ ಈಕ್ವಿಟಿಯನ್ನು ವಾಪಸ್ಸು ನೀಡಿದ್ದು ಸುನಂದಾ ಶಶಿಯ ಅಣತಿಯಂತೆ ನಡೆದುಕೊಳ್ಳುತ್ತಿದ್ದಾಳೆ ಎಂಬುದನ್ನು ಜಗಜ್ಜಾಹೀರುಗೊಳಿಸಿಬಿಟ್ಟಿತು. ಅಲ್ಲಿಗೆ ಶಶಿ ತರೂರ್ನ ಡಿಫೆನಸ್ಸಿಗೆ ಬೆಲೆಯಿಲ್ಲದಂತಾಯಿತು. ಸರ್ಕಾರಕ್ಕೆ  ಮತ್ತಷ್ಟು ಮುಜುಗರ ತಪ್ಪಿಸಲು ಪ್ರಧಾನಿ ಮನಮೋಹನ ಸಿಂಗರು ಶಶಿ ತರೂರ್ ಅವರ ರಾಜೀನಾಮೆ ಪಡೆದುಕೊಂಡರು.

ಎಲ್ಲರೂ ಇದು ಇಲ್ಲಿಗೆ ಮುಗಿಯುತ್ತದೆ ಎಂದುಕೊಂಡಿದ್ದರು, ಲಲಿತ್ ಮೋದಿಯೂ ಸೇರಿ. ಆದರೆ ಒಬ್ಬ ಕಾಂಗ್ರೆಸ್ ಸಚಿವನ ರಾಜೀನಾಮೆಗೆ ಕಾರಣವಾದ ಇಶ್ಯೂವನ್ನು ಕಾಂಗ್ರೆಸ್ ಅಷ್ಟು ಸುಲಭವಾಗಿ ಬಿಟ್ಟುಕೊಡುತ್ತದೆಯೇ, ಅದೂ ಅದರಲ್ಲಿ ಬಿಜೆಪಿ ಮತ್ತು ಎನ್ಸಿಪಿ ಪಕ್ಷಗಳ ರಾಜಕೀಯ ದಾಳಗಳಾಗಿರುವಾಗ? ಸಾಧ್ಯವೇ ಇಲ್ಲ. ಅದರಲ್ಲೂ ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುತ್ತಿರುವ, ಬಿಜೆಪಿ ಮತ್ತು ಎನ್ಸಿಪಿಯ ಪರವಾಗಿ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡುತ್ತಿರುವ ಲಲಿತ್ ಮೋದಿಯನ್ನು ಬಿಡುವುದುಂಟೆ? ಐಪಿಎಲ್ ಕೊಚ್ಚಿ ತಂಡದ ಮೂಲಗಳ ಬಗ್ಗೆ ಮೋದಿ ಎತ್ತಿದ ಪ್ರಶ್ನೆಗಳು ಈಗ ಇಡಿಯ ಐಪಿಎಲ್ನ ಕೊರಳಿಗೆ ಬಂದು ಸುತ್ತುವರೆದಿದೆ. ಐಪಿಎಲ್ನಲ್ಲಿ ಸದ್ಯಕ್ಕಂತೂ ಯಾವ ತಂಡವೂ ದುಡ್ಡು ಮಾಡುತ್ತಿಲ್ಲ, ಆದರೂ ಅದು ಹೇಗೆ ಇಷ್ಟು ಅಗಾಧ ಪ್ರಮಾಣದ ದುಡ್ಡು ಹರಿದು ಬರುತ್ತಿದೆ? ಈ ಐಪಿಎಲ್ ತಂಡಗಳ ನಿಜವಾದ ಒಡೆಯರಾರು? ಅವರ ಆದಾಯ ಮೂಲಗಳೇನು? ಇದರಲ್ಲಿ ಭೂಗತ ಜಗತ್ತಿನ ಪಾತ್ರವೇನು? ಇದರಲ್ಲಿ ಹವಾಲಾ ದುಡ್ಡಿದೆಯಾ? ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ನ ಆರೋಪಗಳು ಎಷ್ಟು ನಿಜ? ಇಂಥ ಹಲವಾರು ಪ್ರಶ್ನೆಗಳೆದ್ದಿವೆ ಈಗ. ಇಡಿಯ ಐಪಿಎಲ್ ಅನ್ನು ತನ್ನ ಫೀಫ್ಡಂ ಏನೋ ಎಂಬಂತೆ ನಡೆಸುತ್ತಿರುವ ಲಲಿತ್ ಮೋದಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಬಲ್ಲ!  ಈ ಎಲ್ಲ ಆರೋಪಗಳೂ ಆತನ ಮೇಲೂ ಇವೆ.

ಕಾಂಗ್ರೆಸ್ ಸಚಿವನೊಬ್ಬನ ತಲೆದಂಡ ಪಡೆದ ಲಲಿತ್ ಮೋದಿಯ ತಲೆದಂಡವೂ ಆಗಲೇಬೇಕು. ಸದ್ಯ ಅದು ಕಾಂಗ್ರೆಸ್ನ ಸಿಂಗಲ್ ಪಾಯಿಂಟ್ ಅಜೆಂಡಾ ಇದ್ದ ಹಾಗಿದೆ. ಹಿಂದಿನ ವರ್ಷ ಗೃಹ ಮಂತ್ರಿ ಚಿದಂಬರಂ ಅವರನ್ನು ಎದುರು ಹಾಕಿಕೊಂಡ ಲಲಿತ್ ಮೋದಿ, ಸರ್ಕಾರವನ್ನೇ ಕೇರ್ ಮಾಡದೇ ಐಪಿಎಲ್ ಅನ್ನು ದಕ್ಷಿಣಾಫ್ರಿಕಾಗೆ ಸ್ಥಳಾಂತರಿಸಿದಾಗಲೇ ಸರ್ಕಾರದ ಐಟಿ ಮತ್ತು ಇಡಿ ಖಾತೆಗಳು ಲಲಿತ್ ಮೋದಿಯ ಬೆನ್ನ ಹಿಂದೆ ಬಿದ್ದು, ಆತನ ಕರಾಳ ಸಾಮ್ರಾಜ್ಯದ ಒಂದು ವರದಿಯನ್ನು ತಯಾರು ಮಾಡಿಟ್ಟಿದೆ. ಆದರೆ ಅದರ ಮೇಲೆ ಈವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಇಂಥ ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆದು ಕಾಂಗ್ರೆಸ್ಗೆ ಮುಜುಗರ ಮಾಡಿದ್ದಕ್ಕಾಗಿ ಸರ್ಕಾರ ಈ ವರದಿಯನ್ನು ಕೋಲ್ಡ್ ಸ್ಟೋರೇಜ್ನಿಂದ ಹೊರತೆಗೆದಿದೆ! ಮೋದಿ ತರೂರ್ ಪ್ರಕರಣದಲ್ಲಿ ತಾನೇನೋ ವಿಷಲ್ ಬ್ಲೋವರ್ ಎಂಬಂತೆ ಪೋಸು ಕೊಟ್ಟ. ಆದರೆ ಒಬ್ಬ ವಿಷಲ್ ಬ್ಲೋವರ್ ಮೊದಲು ಎದುರಿಸಬೇಕಾದ್ದು ತನ್ನ ಸತ್ಯಾಸತ್ಯತೆಯ ಬಗೆಗಿನ ಅನುಮಾನ, ವಿಚಾರಣೆಗಳನ್ನು ಎಂಬುದು ಲಲಿತ್ ಮೋದಿಗೆ ತಿಳಿದಿರುವ ಹಾಗೆ ಕಾಣೆ! ಈಗ ಅನುಭವಿಸುತ್ತಿದ್ದಾರೆ. ಕೂಡಲೇ ಲಲಿತ್ ಮೋದಿಯ ಕಛೇರಿಯ ಮೇಲೆ ಐಟಿ ದಾಳಿ ನಡೆದಿದೆ. ಜಾರಿ ನಿರ್ದೇಶನಾಲಯ ಲಲಿತ್ ಮೋದಿಯನ್ನು ಪ್ರಶ್ನಿಸಲು ಕಾಯುತ್ತಿದ್ದಾರೆ. ಸರ್ಕಾರ ಎಲ್ಲಾ ಐಪಿಎಲ್ ತಂಡಗಳ ಬಿಡ್ಗಳು, ಫ್ರಾಂಚೈಸಿ ಪೇಪರ್ಗಳು, ಪ್ಲೇಯರ್ ಕಾಂಟೃಆಕ್ಟುಗಳು, ಹೂಡಿಕೆದಾರರ ಸಂಪೂರ್ಣ ವಿವರ, ಬಿಸಿಸಿಐನ ಬ್ಯಾಲೆನ್ಸ್ ಷೀಟು ಎಲ್ಲವನ್ನೂ ವಶಪಡಿಸಿಕೊಂಡಿದೆ. ಇನ್ನುಳಿದಂತೆ ಜಾರಿ ನಿರ್ದೇಶನಾಲಯ ಐಪಿಎಲ್ಗೆ ಹರಿದು ಬರುತ್ತಿರುವ ದುಡ್ಡಿನ ಮೂಲಗಳನ್ನು ಅರಸುತ್ತಾ ಮಾರಿಷಸ್ಗೆ ಹೊರಟು ನೀಂತಿದೆ! ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆಯೆಂದರೆ ಹವಾಲಾ ಮುಖಾಂತರ ಮನಿ ಲಾಂಡ್ರಿಂಗ್ ನಡೆಯುತ್ತಿರುವ ಅನುಮಾನ ಇದೆಯೆಂತಲೇ ಅರ್ಥ!

ಇರಲಿ ಬಿಡಿ ಐಟಿ ಇಲಾಖೆಗಳು ಲಲಿತ್ ಮೋದಿಯ ಕರಾಳ ಸಾಮ್ರಾಜ್ಯದ ಬಗ್ಗೆ ತಯಾರು ಮಾಡಿರುವ ಆ ವರದಿಯಲ್ಲಿ ಇನ್ನೂ ಏನೇನಿದೆ? "ಏನೇ ಈವತ್ತು ಆತನನ್ನು ಬಿಸಿನೆಸ್ ಗುರು ಎಂದು ಕರೆದರೂ ಕಳೆದ ನಾಲ್ಕು ವರ್ಷಗಳವರೆಗೆ ಲಲಿತ್ ಮೋದಿಯದು ಎಲ್ಲ ಚಿತ್ರಾನ್ನದ ವೆಂಚರ್ಗಳೇ. ಆದರೆ ಐಪಿಎಲ್ಗೆ ಕೈಯಿಟ್ಟು ಕೂತ ಮೂರೇ ವರ್ಷಗಳಲ್ಲಿ ಆತನ ಲೈಫ್ಸ್ಟೈಲೇ ಬದಲಾಗಿ ಹೋಗಿದೆ. ಆತನ ಬಳಿ ಒಂದು ಪ್ರೈವೇಟು ಜೆಟ್ ವಿಮಾನ, ಲಕ್ಷುರಿ ಹಡಗು, ಅಸಂಖ್ಯ ಬಿಎಂಡಬ್ಲ್ಯೂ ಕಾರುಗಳು ಎಲ್ಲವೂ ಇವೆ. ಇವೆಲ್ಲವನ್ನೂ ಆತ ಕಳೆದ ಮೂರು ವರ್ಷಗಳಲ್ಲೇ ಕೊಂಡುಕೊಂಡಿದ್ದಾನೆ, ಮೂರು ವರ್ಷಗಳ ಹಿಂದೆ ಕೆಲವೇ ಕೆಲವು ಲಕ್ಷಗಳಷ್ಟು ಐಟಿ ಟ್ಯಾಕ್ಸ್ ಕಟ್ಟುತ್ತಿದ್ದ ಇದೇ ಲಲಿತ್ ಮೋದಿ ಈ ವರ್ಷ 11 ಕೋಟಿಗಳಷ್ಟು ಅಡ್ವಾನ್ಸ್ ಟ್ಯಾಕ್ಸ್ ಚೆಲ್ಲಿಸಿದ್ದಾನೆ." ಐಟಿ ವರದಿ ಶುರುವಾಗುವುದೇ ಈ ಸಾಲುಗಳಿಂದ. ಅಲ್ಲಿಗೆ ಈ ವರದಿಯ ಟೋನ್ ಎಂತಹುದು ಎಂಬುದು ನಿಮಗೆ ಅರ್ಥವಾಗಿರುತ್ತದೆ. ಇನ್ನೂ ಮುಂದುವರೆದು ಲಲಿತ್ ಮೋದಿ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿರುವ ಕುರಿತು ಅನುಮಾನಗಳಿರುವುದಾಗಿ ಹೇಳಿಕೊಳ್ಳುತ್ತದೆ. ಬ್ರಿಟನ್ನಲ್ಲಿ ಬೆಟ್ಟಿಂಗ್ ಕಾನೂನು ಬದ್ಧ. ಅಲ್ಲಿನ ಬೆಟ್ ಫೇರ್ ಎಂಬ ಕಂಪೆನಿಯಲ್ಲಿ ಮೋದಿ ಐಪಿಎಲ್ ಬೆಟ್ಟಿಂಗ್ ರಿಂಗ್ ನಡೆಸುತ್ತಿದ್ದಾರೆ ಎಂದಿದೆ ವರದಿ. ಸಮೀರ್ ತುಕ್ರಾಲ್ ಎಂಬ ಡೆಲ್ಲಿ ಮೂಲದ ಉದ್ಯಮಿ, 30 ವರ್ಷಗಳ ಮೋದಿಯ ಖಾಸಾ ಗೆಳೆಯ ಆತನ ಪರವಾಗಿ ಬೆಟ್ ಫೇರ್ನಲ್ಲಿ ಬೆಟ್ಟಿಂಗ್ ಮಾಡುತ್ತಿರುವದಕ್ಕೆ ಆಧಾರಗಳಿವೆ. ಆದೇನಾದರೂ ನಿಜವಾದಲ್ಲಿ ಲಲಿತ್ ಮೋದಿಗಿಂತಲೂ ಐಪಿಎಲ್ ಬಗ್ಗೆ ಇನ್ಸೈಡರ್ ಇನ್ಫರ್ಮೇಷನ್ ಬಲ್ಲ ಮತ್ತೊಬ್ಬನಿರಲಾರ. ಇದೇ ಕೋವಿನಲ್ಲಿ ಆತನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪಗಳೂ ಇವೆ. ಇದಲ್ಲದೆ ಆತನಿಗೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಇಲೆವೆನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಫ್ರಾಂಚೈಸುಗಳಲ್ಲಿ ಗುಪ್ತವಾಗಿ ಬೇನಾಮಿ ಹಿಡಿತಗಳಿವೆ ಎನ್ನುತ್ತದೆ ವರದಿ. ಮೋದಿಯ ಆಪ್ತರ ಕಂಪೆನಿಗಳಲ್ಲೊಂದಾದ ಐಎಂಜಿಗೆ ಐಪಿಎಲ್ನ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಟಿವಿ ರೈಟ್ಸ್ ಅನ್ನು ಬಿಕರಿ ಮಾಡಲಾಗಿದ್ದು, ಕಂಪೆನಿಗೆ ಶೇ.10ರಷ್ಟನ್ನು ಮ್ಯಾನೇಜ್ಮೆಂಟ್ ಫೀ ಎಂದು ನೀಡಲಾಗಿದೆ. ಇದೇ ಸುಮಾರು 80 ಮಿಲಿಯನ್ ಡಾಲರ್ಗಳಷ್ಟಾಗುತ್ತದೆ!

ಈ ಆರೋಪಗಳದು ಒಂದು ತೂಕವಾದರೆ ಮತ್ತೊಂದೆಡೆ ರಾಜಸ್ಥಾನದಲ್ಲೂ ಮೋದಿಗೆ ನೆಮ್ಮದಿಯಿಲ್ಲ. ಲಲಿತ್ ಮೋದಿ ರಾಜಸ್ಥಾನದ ಪದಚ್ಯುತ ಮುಖ್ಯಮಂತ್ರಿ, ಬಿಜೆಪಿಯ ವಸುಂಧರಾ ರಾಜೆ ಸಿಂಧ್ಯಾ ಅವರಿಗೆ ಪರಮಾಪ್ತರು. ಎಷ್ಟರಮಟ್ಟಿಗೆ ಎಂದರೆ ಆ ಅವಧಿಯಲ್ಲಿ ಮೋದಿಯನ್ನು ಬಹುತೇಕರು ಶಾಡೋ ಸಿಎಂ ಎಮದು ಕರೆಯುತ್ತಿದ್ದರು. ಆ ಹಯಾಮಿನಲ್ಲಿ ಆತ ಎಸ್ಇಜೆಡ್, ಇಂಡಸ್ಟ್ರಿ, ಅದೂ ಇದೂ ಅಂತ ಅನೇಕ ಭೂ ಹಗರಣಗಳನ್ನು ಮಾಡಿಕೊಂಡಿದ್ದಾನೆ. ಈಗ ಅಲ್ಲಿರುವುದು ಕಾಂಗ್ರೆಸ್ ಸಕರ್ಾರ. ಹಿರಿಯ ಅನುಭವಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿದ್ದಾರೆ. ಅವರು ವಸುಂಧರಾ ಅವರ ಕಾಲದಲ್ಲಿ ನಡೆದಿದೆಯೆನ್ನಲಾದ ಎಲ್ಲ ಭೂ ಗಹರಣಗಳ ತನಿಖೆಗೆ ಮಾಥುರ್ ಕಮೀಷನ್ ಅನ್ನು ನೇಮಿಸಿದೆ. ಈಗ ಅದರ ವರದಿಯಲ್ಲೂ ಮೋದಿ ವಿಲನ್ ನಂ.1 ಆಗಿ ಹೊರಹೊಮ್ಮಿದ್ಧಾರೆ. ಒಟ್ಟಿನಲ್ಲಿ ಹೀಗೆ ಗಾಜಿನ ಮನೆಯಲ್ಲಿದ್ದು ಶಶಿಗೆ ಕಲ್ಲೆಸೆಯ ಹೋಗಿ, ಅದು ತಿರುಗಿ ಬಿದ್ದು ಆತನಿಗೇ ಬಡಿದ ಸ್ಥಿತಿ ಲಲಿತ್ ಮೋದಿಯದು.

ಈಗ ಲಲಿತ್ ಮೋದಿಯ ವಿಚಾರವಾಗಿ ಬಿಸಿಸಿಐನಲ್ಲಿ ರಾಜಕೀಯ ಗರಿಗೆದರಿದೆ. ತಾನು ಐಪಿಎಲ್ನ ಹರಿಕಾರ, ಬಿಸಿಸಿಐ ದುಡ್ಡು ನೋಡಿದ್ದೇ ತಾನು ಬಂದ ಮೇಲೆ, ಐಪಿಎಲ್ ಎನ್ನುವುದು ತನ್ನ ಸಾಮ್ರಾಜ್ಯ ಇಲ್ಲಿ ತನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಬೀಗುತ್ತಿದ್ದ ಲಲಿತ್ ಮೋದಿಗೆ ಊರೆಲ್ಲಾ ಶತ್ರುಗಳೇ. ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಶಶಾಂಕ್ ಮನೋಹರ್, ನಿರಂಜನ್ ಷಾ, ರಾಜೀವ್ ಶುಕ್ಲಾ, ರತ್ನಾಕರ್ ಶೆಟ್ಟಿ, ಎಂ.ಶ್ರೀನಿವಾಸನ್ ಎಲ್ಲರನ್ನೂ ಮೋದಿ ಒಂದಲ್ಲಾ ಒಂದು ಕಾರಣಕ್ಕೆ ಕೆರಳಿಸಿದವನೇ. ಆದರೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿದ್ದಂತಹ ರಾಜಕಾರಣಿಗಳಾದ ಶರದ್ ಪವಾರ್, ಅರೂಣ್ ಜೇಟ್ಲಿ ಮತ್ತು ಫಾರೂಕ್ ಅಬ್ದುಲ್ಲಾರನ್ನು ತನ್ನ ಬೆನ್ನ ಹಿಂದೆ ನಿಲ್ಲಿಸಿಕೊಂಡಿದ್ದ ಬುದ್ಧಿವಂತ ಲಲಿತ್ ಮೋದಿ. ಆತನಿಗೆ ಅದೇ ಧೈರ್ಯ. ಆದರೆ ರಾಜಕೀಯದ ಚದುರಂಗದಾಟ ಲಲಿತ್ ಮೋದಿಯನ್ನು ಬಹಳ ಸುಲಭವಾಗಿ ಓವರ್ ಟೇಕ್ ಮಾಡಿಬಿಟ್ಟಿದೆ.

ಮೋದಿ ಕಛೇರಿ ಮೇಲೆ ಐಟಿ ದಾಳಿ ನಡೆದಾಗ, ಮಿಕ್ಕೆಲ್ಲಾ ಕಾಗದ ಪತ್ರಗಳು ಸಿಕ್ಕಿವೆಯಾದರೂ ಅನುಮಾನಕರ ರೀತಿಯಲ್ಲಿ ಕೊಚ್ಚಿ ತಂಡದ ಇತರೆ ಬಿಡ್ಡರ್ಗಳ ಅತಿಮುಖ್ಯ ಎರಡು ಫೈಲ್ಗಳು ಮಿಸ್ಸಿಂಗ್! ಸಿಸಿ ಟಿವಿ ಫುಟೇಜ್ನಲ್ಲಿ ಮೋದಿ ಆಫೀಸಿನಿಂದ ಒಬ್ಬ ಮಧ್ಯವಯಸ್ಕ ಹೆಂಗಸು ಐಟಿ ದಾಳಿ ನಡೆಯುವ ಕೆಲವೇ ನಿಮಿಷಗಳ ಹಿಂದೆ ಕೆಲವು ಫೈಲುಗಳನ್ನು ಹೊತ್ತೊಯ್ದಿರುವ ದೃಶ್ಯಗಳಿವೆ. ಆಕೆ ವಿಜಯ ಮಲ್ಯನ ಮಲ ಮಗಳು! ಆಕೆ ಮೋದಿ ಕಂಪೆನಿಯಲ್ಲಿ ಸಿಇಒ! ಈಗ ಬಯಲಾಗುತ್ತಿರುವ ಅಂಶವೆಂದರೆ ಐಪಿಎಲ್ ತಂಡ ಪಡೆಯಲು ವಿಫಲವಾದ ಆ ವಿಡಿಯೋಕಾನ್ ಮುನ್ನಡೆಸಿದ ಬಿಡ್ನಲ್ಲಿ ಶರದ್ ಪವಾರ್ ಅಳಿಯ, ಸುಪ್ರಿಯಾ ಸುಳೆಯ ಗಂಡ ಮತ್ತು ಎನ್ಸಿಪಿಯ ಮತ್ತೊಬ್ಬ ನಾಯಕ ಕೇಂದ್ರದ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರ ಪಾಲೂ ಇತ್ತು! ಇವರು ಅಹಮದಾಬಾದ್ ಇಲ್ಲ ನಾಗಪುರಕ್ಕೆ ಐಪಿಎಲ್ ತಂಡವನ್ನು ಹೊತ್ತೊಯ್ಯಬೇಕೆಂದು ಆಶಿಸಿದ್ದರು. ಲಲಿತ್ ಮೋದಿ ರಾನ್ದೆವೋ ಸ್ಪೋರ್ಟ್ಸ್ಗೆ 300 ಮಿಲಿಯನ್ ಡಾಲರ್ಗಳಿಗೆ ಬಿಡ್ ಮಾಡಿ ಸಾಕು, ಮಿಕ್ಕಿದ್ದು ತಾನು ನೊಡಿಕೊಳ್ಳುತ್ತೇನೆ ಎಂದು ಸಲಹೆ ಮಡಿದನೆನ್ನಲಾಗಿದೆ. ಆದರೆ ರಾನ್ದೆವೋ ಸ್ಪೋರ್ಟ್ಸ್ 333.33 ಮಿಲಿಯನ್ ಡಾಲರ್ಗಲಿಗೆ ಬಿಡ್ ಮಾಡಿತು. ವೀಡಿಯೋಕಾನ್ 319 ಮಿಲಿಯನ್ ಡಾಲರ್ ಕೋಟ್ ಮಾಡಿತ್ತು! ನಂತರ ಶರದ್ ಪವಾರ್ ರಾನ್ದೆವೋ ಸ್ಪೋರ್ಟ್ಸ್ ಅನ್ನು ಕರೆದು ಮಾತನಾಡಿದ್ದಾರೆ ಕೂಡ. ಈಗ ಅರ್ಥವಾಯಿತಲ್ಲ? ಲಲಿತ್ ಮೋದಿಯ ಕಾನ್ಫಿಡೆನ್ಸಿಗೆ ಕಾರಣ.

ಈ ಸೂಕ್ಷ್ಮವನ್ನರಿತ ಕಾಂಗ್ರೆಸ್ ಶರದ್ ಪವಾರ್ ಅವರನ್ನು ಕರೆಸಿ, ಮಾತನಾಡಿಸಿದೆ. ಈ ಮೀಟಿಂಗಿನಲ್ಲಿ ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ  ಶರದ್ ಪವಾರ್ ಅವರನ್ನು ತಾವೂ ಸಹ ರಾಜೀನಾಮೆ ನೀಡಬಹುದಲ್ಲವೆ ಎಂದು ಕೇಳಿದೆ. ಅಲ್ಲಿಗೆ ಸಂದೇಶ ಸ್ಪಷ್ಟ - ಲಲಿತ್ ಮೋದಿಯನ್ನು ಕಿತ್ತೊಗೆಯಿರಿ, ಇಲ್ಲದಿದ್ದರೆ ಇದು ತಮ್ಮ ಬುಡಕ್ಕೇ ಬರುತ್ತದೆ. ಶರದ್ ಪವಾರ ಅವರು ಲಲಿತ್ ಮೊದಿಯೊಂದಿಗೆ ನಡೆಸಿದರೆನ್ನಲಾದ ಟೆಲಿಫೋನ್ ಸಂಭಾಷಣೆಯನ್ನು ಸರ್ಕಾರ ಟ್ಯಾಪ್ ಮಾವಿಸಿ ರೆಕಾರ್ಡ್ ಮಾಡಿದ್ದು, ಅದನ್ನು ಬಳಸಿ ಪವಾರ್ ಅವರನ್ನು blackmail ಮಾಡಿದೆಯೆನ್ನುವ ಆರೋಪ ಕೇಳಿ ಬರುತ್ತಿದೆ. ಮೀಟಿಂಗ್ ಒಳಹೊಕ್ಕಾಗಲೂ ಮೋದಿಯನ್ನು ಸಮರ್ಥಿಸುತ್ತಿದ್ದ ಶರದ್ ಪವಾರ್, ಹೊರಬರುವಷ್ಟರಲ್ಲಿ ಮೋದಿ ರಾಜೀನಾಮೆ ನೀಡುವುದೇ ಸೂಕ್ತ ಎಂದು ಉಲಿಯ ತೊಡಗಿದ್ದಾರೆ. ಅಲ್ಲಿಗೆ ಲಲಿತ್ ಮೋದಿಗಿದ್ದ ಕಡೆಯ ಹುಲ್ಲು ಕಡ್ಡಿಯ ಆಸರೆಯೂ ಇಲ್ಲದಂತಾಯಿತು. ನಿನ್ನೆ ಅಂದರೆ ಏಪ್ರಿಲ್ 26ರಂದು ನಡೆದ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮೀಟಿಂಗಿನಲ್ಲಿ ಲಲಿತ್ ಮೋದಿಯನ್ನು ಐಪಿಎಲ್ ಕಮೀಷನರ್ ಹುದ್ದೆಯಿಂದ ಕಿತ್ತೊಗೆಯಲಾಯಿತು. ಆತನಿಗೆ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಕೂಡ ಅವಕಾಶವಿಲ್ಲದೆ!

ಆದರೆ ಮೋದಿಯನ್ನು ಹೊರಗೆಳೆಯುವುದು ಅಷ್ಟು ಸುಲಭದ ಮಾತಲ್ಲ. he is not going to go without a fight . ಈಗಾಗಲೇ ಮೋದಿ ವರ್ಸೆಸ್ ಥಿ ರೆಸ್ಟ್ ಎಂಬಂತಹ ಯುದ್ಧವೊಂದು ಚಾಲ್ತಿಯಲ್ಲಿದೆ. ಇದು ಬಿಚ್ಚಿಕೊಳ್ಳುತ್ತಿರುವುದು ಮೀಡಿಯಾದಲ್ಲಿ. ಶಶಿ ತರೂರ್ ಒಂದು ಲೀಕ್ ಕೊಟ್ಟರೆ, ಮೊದಿ ಕ್ಯಾಂಪಿನವರು ಎರಡು ಲೀಕ್ ಕೊಡುತ್ತಾರೆ. ಇತ್ತ ಕಾಂಗ್ರೆಸ್ ಮೋದಿ ವಿರುದ್ಧದ ಐಟಿ ವರದಿಯನ್ನು ಸೆಲೆಕ್ಟಿವ್ ಆಗಿ ಮೀಡಿಯಾಗೆ ಲೀಕ್ ಮಡುತ್ತಿದ್ದರೆ, ಅತ್ತ ಲಲಿತ್ ಮೋದಿ ಐಪಿಎಲ್ ಬಗ್ಗೆ ನಾನು ಕೆಲವು ಹಿರಿಯ ರಾಜಕಾರಣಿಗಳ ಜೊತೆ ನಡೆಸಿರುವ ಸಂಭಾಷಣೆಯನ್ನು ಟೇಪ್ ಮಾಡಿಟ್ಟುಕೊಂಡಿದ್ದೇನೆ, ಫೋನ್ ಮಾತುಕತೆ ರೆಕಾರ್ಡ್ ಆಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲಿಗೆ ಅವರು ಕೊಡುತ್ತಿರುವ ಸಂದೇಶ ಸ್ಪಷ್ಟ - ನಾನು ಮೂಳುಗುವುದೇ ನಿಜವಾದರೆ, ನಾನೊಬ್ಬನೇ ಯಾಕೆ, ಎಲ್ಲರನ್ನೂ ಜೊತೆಗೆಳೆದುಕೋಮಡೇ ಮೂಳುಗುತ್ತೇನೆ ಹುಷಾರ್! ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿದ್ದೂ ಕೂಡ ಇದಾವುದನ್ನೂ ಈವರೆಗೂ ಪ್ರಶ್ನಿಸದ ಇವರು ಈಗ ಇದ್ದಕ್ಕಿದ್ದ ಹಾಗೇ ಪತಿವ್ರೆತೆಗಳಾಗ ಹೊರಟರೆ? ಇಷ್ಟು ದಿನ ಪ್ರಶ್ನಿಸದೇ ಉಳಿದರು ಎಂದರೆ ಇವರಿಗೂ ಅದರಿಂದ ಲಾಭವಿತ್ತು ಅಂತಲ್ಲವೇ? ಇದರ ಪುರಾವೆಗಳಿಲ್ಲದಿರುತ್ತವೆಯೇ ಲಲಿತ್ ಮೋದಿಯ ಬಳಿ? ಹಾಗಾಗಿ ಲಲಿತ್ ಮೋದಿಯನ್ನು ಕ್ರಿಕೆಟ್ನಿಂದ ಹೊರಹಾಕುವುದು ಅಷ್ಟು ಸುಲಭವಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಆತನನ್ನು ಐಪಿಎಲ್ ಕಮೀಷನರ್ ಹುದ್ದೆಯಿಂದ ಕೆಳಗಿಲಿಸಲಾಗಿದೆಯಾದರೂ ಆತನನ್ನು ಬಹುಶಃ  ಬಿಸಿಸಿಐನಡಿಯಲ್ಲಿ ಬರುವ ಯಾವುದಾದರೂ ಸಬ್ ಕಮಿಟಿಯನ್ನು ಮೋದಿಗೆ ಕೊಡಬಹುದು. ಆದರೆ ಇದನ್ನು ಲಲಿತ್ ಮೋದಿ ಹೇಗೆ ಸ್ವೀಕರಿಸುತ್ತಾನೋ ನೋಡಬೇಕು.

ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನ ಅನುಕರಣೆಯಾಗಿ, ಕಪಿಲ್ ದೇವ್ರ ಸಕಾರಣ ಬಂಡಾಯದಿಂದ ಉಗಮವಾದ ಐಸಿಎಲ್ಗೆ ಸೆಡ್ಡು ಹೊಡೆಯಲೋಸುಗ, ಬಿಸಿಸಿಐನ ಲಲಿತ್ ಮೋದಿ ಎಂಬ ಉದ್ಯಮಿಯ ಮಸ್ತಿಷ್ಕದಲ್ಲಿ ಮೂಡಿದ್ದೇ ಐಪಿಎಲ್ನ ಐಡಿಯಾ. ಇದು ಐ.ಸಿ.ಎಲ್ನ ಯಥಾವತ್ ನಕಲು. ಅಪಾರ ಪ್ರಮಾಣದ ಹಣದ ಠಿಠಣಜಟಿಣಚಿಟ ಇರುವ ಮಾರುಕಟ್ಟೆಯಾಗಿ ಕಂಡ ಇದನ್ನು ಬಿಸಿಸಿಐ ಜಾರಿಗೆ ತಂದಿತು ಅಷ್ಟೆ. ಆದರೆ ಮೀಡಿಯಾದ ಹುಚ್ಚು ಹೊಗಳು ಬಟ್ಟತನದಲ್ಲಿ ತೇಲಿ ಹೋದ ಲಲಿತ್ ಮೋದಿ ತಾನೇನೋ ಹೊಸದನ್ನು ಹುಟ್ಟು ಹಾಕಿಬಿಟ್ಟಿದ್ದೇನೆ. ತಾನೊಬ್ಬ ಜೀನಿಯಸ್ ಪಯನಿಯರ್ ಎಂಬುದನ್ನು ತಲೆಗೆ ಹಚ್ಚಿಕೊಂಡು ಬಿಟ್ಟ. ಆತನ ತಲೆ, ಕತ್ತಿನ ಮೇಲೆ ನಿಲ್ಲದಾಯಿತು. ಅದೇ ದುರಹಂಕಾರ, ಹಣದ ಮದ ಇಂದು ಆತನನ್ನು ಬೀದಿಗೆ ತಂದು ನಿಲ್ಲಿಸಿದೆ.

ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಲಲಿತ್ ಮೋದಿಯ ಕರಾಳ ಸಾಮ್ರಾಜ್ಯ, ಶರದ್ ಪವಾರ್ನ ರಾಜಕೀಯ  ಚದುರಂಗದಾಟಗಳ ನಡುವೆ ಜಾಗತಿಕ ಕ್ರಿಕೆಟ್ನ ಸಂಚಲನ ಐಪಿಎಲ್ ಮಸಿ ಬಳಿದುಕೊಂಡು ಕೂತಿದೆ. ಅದರ ವಿಶ್ವಾಸಾರ್ಹತೆ ಪಾತಾಳ ಮುಟ್ಟಿದೆ. ಹಿಂದೊಮ್ಮೆ ಮ್ಯಾಚ್ ಫಿಕ್ಸಿಂಗ್ನ ಬಿರುಗಾಳಿ ಬೀಸಿದಾಗ ಕ್ರಿಕೆಟ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತ್ತು. ಕ್ರಿಕೆಟ್ ಮರಳಿ ಒಂದು ರೆಸ್ಪೆಕ್ಟಬಲ್ ಗೇಮ್ ಆಗಲು ವರ್ಷಗಳೇ ಹಿಡಿಯಿತು. ಜಾಗತಿಕ ಕ್ರಿಕೆಟ್ ಮತ್ತೂ ಮುಖ್ಯವಾಗಿ ಐಪಿಎಲ್ ಇಂದು ಮರಳಿ ಅದೇ ಕವಲುದಾರಿಗೆ ಬಂದು ನೀಂತಿರುವುದು ವಿಷಾದನೀಯ.

ಭಾರತದ ಹಾಕಿ - ತಿಪ್ಪೆಗೆ ಹಾಕಿ!!!!!?

ಈ ಬಾರಿಯ ಹಾಕಿ ವಿಶ್ವಕಪ್ ದೆಹಲಿಯಲ್ಲಿ ನಡೆಯುತ್ತೆ ಅಂದಾಗಲೇ ಏನೋ ರೋಮಾಂಚನ. ಭಾರತದ ಹಾಕಿ ಚರಿತ್ರೆಯ ಸುವರ್ಣ ಘಟ್ಟಗಳು ನೆನಪಿಗೆ ಬಂದು ಏನೋ ಒಂದು ರೀತಿಯ ಖುಷಿ, ಬೆಟದಷ್ಟು ನಿರೀಕ್ಷೆ. ಆದರೆ ಎಲ್ಲವೂ ಮಣ್ಣುಪಾಲಾಗಿದೆ. ಕಳೆದ 30 ವರ್ಷಗಳಂತೆ ಭಾರತ ಈ ಬಾರಿಯ ವಿಶ್ವಕಪ್ನಲ್ಲಿ ತಾನು ಟಾಪ್ 8ನಲ್ಲಿ ಉಳಿಯುತ್ತೇನಾ ಇಲ್ಲ, ಅದಕ್ಕೂ ಮೇಲ್ಪಟ್ಟ ರಾನ್ಕಿಂಗಾ ನಮ್ಮದು? ಅಂತ ಕಾದು ಕುಳಿತಿರುವ ಕರುಣಾಜನಕ ಸ್ಥಿತಿ. ಈ ಬಾರಿ ದೆಹಲಿಯಲ್ಲಿ ವಿಶ್ವಕಪ್ ನಡೆಯುವುದರಿಂದ ದೇಶದಲ್ಲಿ ಹಾಕಿಗೆ ಹೆಚ್ಚು ಪ್ರಚಾರ, ಪ್ರೋತ್ಸಾಹ ಸಿಗಲಿದೆ. ನಮ್ಮವರು ಹೋಂಗ್ರೌಂಡ್ನಲ್ಲಿ ಆಡುತ್ತಾರಾದ್ದರಿಂದ ಎಲ್ಲೋ ಮನಸ್ಸಿನ ಮೂಲೆಯಲ್ಲೊಂದು ಗೆಲುವಿನ ಆಶಾದೀಪ ಸಣ್ಣಗೆ ಬೆಳಗುತ್ತಿತ್ತು. ಭಾರತ ಪಾಕಿಸ್ತಾನವನ್ನು 4-1 ಗೋಲ್ಗಳ ಅಂತರದಿಂದ ಬಗ್ಗು ಬಡಿದಾಗ ಈ ಸಣ್ಣ ಆಶಾದೀಪ ಜ್ಯೋತಿಯಾಗಿ ಬೆಳಗಿತು. ಓಹ್!..ಇಂಡಿಯನ್ ಹಾಕಿ ಈಸ್ ಬ್ಯಾಕ್ ಇನ್ ಫಾರ್ಮ್ ಅಂತ ಉದ್ಗರಿಸಿದವರೆಷ್ಟೋ? ಆದರೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ನಾವು ಕಂಡದ್ದು ಭಾರತ ಹಾಕಿ ತಂಡದ ಎಡೆಬಿಡದ ಅವನತಿ. ಇಂಗ್ಲೆಂಡ್, ದಕ್ಷಿಣಾಫ್ರಿಕಾ...ವಿರುದ್ಧ ಆಡಿದ ನಂತರದ ಎಲ್ಲ ಪಂದ್ಯಗಳನ್ನೂ ಭಾರತ ಯಾವುದೇ ಪ್ರಬಲ ಪ್ರತಿರೋಧ ಒಡ್ಡದೆ ಹೀನಾಯವಾಗಿ ಸೋತಿತು. ಎಲ್ಲರ ನಿರೀಕ್ಷೆಗಳು ಮಣ್ಣುಪಾಲಾಯಿತು.

ಭಾರತ ಹಾಕಿಯ ಚರಿತ್ರೆ ಎಂತಹುದಿದೆ. ಅದು ಸುವರ್ಣಾಕ್ಷರಗಳಲ್ಲಿ ಬರೆದಿಡತಕ್ಕಂಥದ್ದು! ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ, ಹಿಂದೊಮ್ಮೆ ಭಾರತ ಹಾಕಿಯ ತವರುಮನೆಯಂತಿತ್ತು. ಇತರೆ ಎಲ್ಲ ದೇಶಗಳಿಗೂ ಇದು ಮಾದರಿಯಾಗಿತ್ತು. ಆರಂಭದ ದಿನಗಳಲ್ಲಿ ವಿಶ್ವ ಹಾಕಿಯಲ್ಲಿ ಭಾರತದ್ದು ಆಲ್ಮೋಸ್ಟ್ ಮನೋಪಲಿ - ಏಕಚಕ್ರಾಧಿಪತ್ಯ! 1928ರಿಂದ ಆರಂಭವಾಗಿ ಭಾರತ ಸತತ 6 ಒಲಂಪಿಕ್ಸ್ ಕ್ರೀಡಾ ಕೂಟಗಳಲ್ಲಿ ಚಿನ್ನದ ಪದಕ ಪಡೆದಿತ್ತು. 1928, 1932, 1936, 1948, 1952, 1956! ಆದರೆ 1960ರ ರೋಮ್ ಒಲಂಪಿಕ್ಸ್ನಲ್ಲಿ ಭಾರತ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಭಾರತದ ಮನೋಪಲಿ ಮೊದಲ ಬಾರಿಗೆ ಸಡಿಲವಾಗಿತ್ತು. ಮತ್ತೆ 1964ರಲ್ಲಿ ಚಿನ್ನ, ನಂತರದ ಎರಡು ಒಲಂಪಿಕ್ಸ್ನಲ್ಲಿ ಕಂಚು, ಮತ್ತೆ 1980ರಲ್ಲಿ ಚಿನ್ನ! ಅಷ್ಟೆ ಅದೇ ಕೊನೆ, ನಂತರ ಭಾರತ ಹಾಕಿಗೆ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಒಂದೇ ಒಂದು ಪದಕವೂ ಬಂದಿಲ್ಲ. ಅತ್ಯಂತ ಅವಮಾನಕರ ಸಂಗತಿಯೆಂದರೆ, ಹೀಗೆ ಒಂದು ಕಾಲಕ್ಕೆ ವಿಶ್ವ ಹಾಕಿಯನ್ನು ಮೇಲಾಗಿ ಒಲಂಪಿಕ್ಸ್ ಅನ್ನು ಒಂದೇ ಕೈಯಲ್ಲಿ ಆಳಿದ್ದ ಭಾರತ 2008ರ ಬೀಜಿಂಗ್ ಒಲಂಪಿಕ್ಸ್ನಲ್ಲಿ ಆಡಲು ಅರ್ಹತೆಯನ್ನೇ ಪಡೆಯಲಿಲ್ಲ! ಅರ್ಹತಾ ಸುತ್ತಿನಲ್ಲೇ ಭಾರತ ಸೋತು ಮನೆಗೆ ಮರಳಿತು! ಏತನ್ಮಧ್ಯೆ ಹಾಕಿ ವಿಶ್ವಕಪ್ ಅನ್ನು ಭಾರತ ಒಮ್ಮೆ ಮಾತ್ರ ಅದೂ 1975ರಲ್ಲಿ ತನ್ನದಾಗಿಸಿಕೊಂಡಿತ್ತು. ಮತ್ತೆ ಈಗ ಹಾಕಿ ವಿಶ್ವಕಪ್ನ ಆತಿಥ್ಯ ನಮಗೆ ಬಂದಿದ್ದರಿಂದ ಸಣ್ಣ ನಿರೀಕ್ಷೆಯೊಂದು ಜನ್ಮ ತಾಳಿತ್ತು. ಆದರೆ ಅದೆಲ್ಲವೂ ನದಿಯಲ್ಲಿ ಹುಣಿಸೆಹಣ್ಣು ತೊಳೆದಂತಾಯಿತು!

ಒಂದರ್ಥದಲ್ಲಿ ಇದೂ ಕೂಡ ನಿರೀಕ್ಷಿತವೇ! ಹೌದು ಭಾರತ ಹಾಕಿಯ ಅಧಃಪತನ ಇಂದು ನಿನ್ನೆಯದಲ್ಲ, ನಿನ್ನೆ ಮೊನ್ನೆಯ ತಪ್ಪುಗಳಿಂದಲ್ಲ, ಈ ಅಧಃಪತನಕ್ಕೇ ಸುಮಾರು ದಶಕಗಳ ಇತಿಹಾಸವಿದೆ. ಹಾಕಿ ಭಾರತದ ರಾಷ್ಟ್ರ ಕ್ರೀಡೆ. ಇಂದು ಹಲವರಿಗೆ ಇದು ತಿಳಿದಿರುವಂತಿಲ್ಲ. ಎಲ್ಲರೂ ಕ್ರಿಕೆಟ್ಟೇ ನಮ್ಮ ರಾಷ್ಟ್ರ ಕ್ರೀಡೆ ಎಂದು ಭಾವಿಸಿರುವಂತಿದೆ. ಅದೇ ಹಾಕಿಯ ಸಮಸ್ಯೆ ಕೂಡ. ಮೊದಲಿಗೆ ನಮ್ಮಲ್ಲಿ ಕ್ರಿಕೆಟ್ ಅಷ್ಟು ಗ್ಲಾಮರಸ್ ಆಗಿಯೂ ಇರಲಿಲ್ಲ, ಅದಕ್ಕೆ ಇಷ್ಟು ಮನ್ನಣೆಯೂ ಇರಲಿಲ್ಲ. ಆಗ ಹಾಕಿಯದ್ದೇ ಮೇಲುಗೈ. ಆದರೆ ಅದೂ ಸಹ ಒಂದು ಕಾಲಘಟ್ಟ ಅಷ್ಟೆ. 70ರ ದಶಕದ ಕೊನೆಯ ದಿನಗಳು ಮತ್ತು 80ರ ದಶಕದಲ್ಲಿ ವಿಶ್ವದಾದ್ಯಂತ ಕ್ರಿಕೆಟ್ ಮನೆಮಾತಾಯಿತು. ಅಷ್ಟರಲ್ಲಿ ಭಾರತದ ಹಾಕಿಯ ಸುವರ್ಣ ಅಧ್ಯಾಯವೂ ಮುಗಿದಿತ್ತು. 1980 ಅದು ಭಾರತ ಹಾಕಿಯ ಕಡೆಯ ದಿಗ್ವಿಜಯ. ಜನಕ್ಕೆ ಥ್ರಿಲ್ ಕೊಡಬಹುದಾದ ಒಂದು ಆಟ ಬೇಕಿತ್ತು. ಅದೇ ಸಂಧಿಗ್ಧ ಸಮಯದಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಅನ್ನು ತನ್ನ ಮುಡಿಗೇರಸಿಕೊಂಡಿತು. ಭಾರತದಲ್ಲಿ ಕ್ರಿಕೆಟ್ ಇನ್ನಿಲ್ಲದಂತೆ ಮನೆಮಾತಾಯಿತು. ಹಾಕಿ ತೆರೆ ಮರೆಗೆ ಸರಿಯಿತು. ಇಂದಿಗೂ ಅದು ತೆರೆಯ ಮರೆಯಲ್ಲೇ ಇದೆ. ನಮ್ಮ ಮೀಡಿಯಾಗಳು ಕೂಡ ಕ್ರಿಕೆಟ್ನ ಹುಚ್ಚು ಅಮಲಿನಲ್ಲಿ ಮಿಂದೇಳುತ್ತಿವೆಯೇ ಹೊರತು ಹಾಕಿಯೆಡೆಗೆ ಒಮದು ಪರೀಕ್ಷಣಾರ್ಥ ಚಿಕಿತ್ಸಕ ದೃಷ್ಟಿಯನ್ನು ಬೀರಲೇ ಇಲ್ಲ. ಭಾರತದ ಹಾಕಿಯನ್ನು ಒಂದು ಪಾಸಿಟಿವ್ ಕ್ರಿಟಿಸಿಸಂನಿಂದ ಕೂಡ ವಂಚಿಸಲಾಯಿತು.

ಮೊದಲೇ ಬಳಲುತ್ತಿದ್ದ ಭಾರತೀಯ ಹಾಕಿಗೆ ಗೆದ್ದಲು ಹಿಡಿಸಿದ್ದು, ನಮ್ಮ ಕ್ರೀಡಾ ವ್ಯವಸ್ಥೆ. ಹೌದು ಇದರಲ್ಲಿ ಅನುಮಾನವೇ ಇಲ್ಲ. ಹಾಕಿ ಫೆಡರೇಶನ್ ಆಫ್ ಇಂಡಿಯಾಗೆ ಹಲವು ದಶಕಗಳಿಂದ ಸೂಪರ್ ಕಾಪ್ ಎನಿಸಿದ್ದ ಕೆಪಿಎಸ್ ಗಿಲ್ ಅಧ್ಯಕ್ಷ. ಯಾವುದೇ ರೀತಿಯಲ್ಲಿ ಎಣಿಸಿ ನೋಡಿದರೂ ಹಾಕಿ ಆಟಕ್ಕೆ ಸಂಬಂಧವೇ ಇಲ್ಲದ ಈ ಮನುಷ್ಯನನ್ನು ಈತನ ಎಲ್ಲಾ ತುಘಲಕ್ ದರ್ಬಾರುಗಳೊಂದಿಗೆ ಬಾರತೀಯ ಹಾಕಿ ಇನ್ನೂ ಸಾಕುತ್ತಿದೆ. ಈತನಿಗೆ ಇದೊಂದು ಪ್ರೆಸ್ಟೀಜ್ ಇಲ್ಲವೇ ವೈಯಕ್ತಿಕ ತೆವಲು ಅಷ್ಟೆ. ಆದರೆ ಇದರಲ್ಲಿ ಬಲಿಯಾದದ್ದು ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ! ಯಾವ ಮಟ್ಟಿಗೆ ಭಾರತೀಯ ಹಾಕಿಗೆ ಗೆದ್ದಲು ಹಿಡಿಸಲಾಗಿದೆಯೆಂದರೆ, ಮೊನ್ನೆ ದೆಹಲಿಯ ಹಾಕಿ ವಿಶ್ವಕಪ್ಗೂ ಮುನ್ನಾ ದಿನಗಳಲ್ಲಿ ಭಾರತೀಯ ಹಾಕಿ ಟೀಂನ ಎಲ್ಲಾ ಆಟಗಾರರೂ ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಆ ತರಬೇತಿ ಶಿಬಿರದಲ್ಲಿ ಆಟಗಾರರು ಬಂಡೆದ್ದರು. ತಮಗೆ ಮ್ಯಾಚ್ ಫೀಸ್ ಅನ್ನು ಕೂಡ ಕೊಡುತ್ತಿಲ್ಲ, ನಮ್ಮ ಬಾಕಿಗಳನ್ನು ಹಾಗೆ ಉಳಿಸಿ ಕೊಳ್ಳಲಾಗಿದೆ, ನಮಗೂ ಸಂಸಾರಗಳಿವೆ, ಅದೆಲ್ಲವನ್ನೂ ಬಿಟ್ಟು ಸೋಷಿಯಲ್ ಸರ್ವೀಸ್ಗಾಗಿ ನಾವಿಲ್ಲಿ ಅಡುತ್ತಿಲ್ಲ. ನಮ್ಮ ಮ್ಯಾಚ್ ಫೀಸ್ ಕೊಡುವವರೆಗೆ ನಾವು ಯಾವುದೇ ಪಂದ್ಯದಲ್ಲಿ ಆಡುವುದಿಲ್ಲ. ವಿಶ್ವಕಪ್ ಅನ್ನು ಕೂಡ ಬಹಿಷ್ಕರಿಸುತ್ತೇವೆ ಎಂದು ಭೀಷ್ಮಿಸಿ ಕೂತು ಬಿಟ್ಟರು! ಆಗಲೇ ಭಾರತ ಹಾಕಿಯ ಎಲ್ಲಾ ಹುಳುಕುಗಳೂ ಹೊರಜಗತ್ತಿಗೆ ಅರಿವಾಗಲಾರಂಭಿಸಿದ್ದು. ನಂತರ ನಡೆದದ್ದು ಆಟಗಾರರು ಮತ್ತು ಹಾಕಿ ಫೆಡರೇಷನ್ ನಡುವಿನ ಹದಿನೈದು ದಿನಗಳ ಜಟಾಪಟಿ. ನ್ಯಾಯವಾಗಿ ಅವರಿಗೆ ಬರಬೇಕಾದ್ದನ್ನು ಕೇಳಿದ್ದಕ್ಕೆ, ಆಟಗಾರರನ್ನು ಇವರು ಬೆದರಿಸಿದ್ದೇನು? ಅದಾಗದಿದ್ದಾಗ ಮುದ್ದಿಸಲು ಪ್ರಯತ್ನಿಸಿದ್ದೇನು? ಕಡೆಗೆ ಇಂಡಿಯನ್ ಒಲಂಪಿಕ್ ಫೆಡೆರೆಶನ್ನ ಸುರೇಶ ಕಲ್ಮಾಡಿ ಇಳಿದು ಬಂದು ರಾಜಿ ಮಾಡಿಸಿ, ಆಟಗಾರರಿಗೆ ನ್ಯಾಯವಾಗಿ ಸಲ್ಲಬೇಕಾದ ಹಣ ಸಂದಾಯವಾಗುವಂತೆ ನೋಡಿಕೊಂಡರು. ಇಲ್ಲದಿರೆ ದೆಹಲಿಯಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ಗೆ ಬಾರತದ ಹಾಕಿ ತಂಡ ಬಹಿಷ್ಕಾರ ಹಾಕುತ್ತಿತ್ತು!

ಯಾಕೆ ಹೀಗೆ? ಹಾಕಿ ಫೆಡರೇಶನ್ ಆಫ್ ಇಂಡಿಯಾವನ್ನು ಕೇಳಿ ನೋಡಿ, ಅವರು ಬರಿಗೈಯನ್ನು ತೊರಿಸುತ್ತಾರೆ. ಇಂದು ಹಾಕಿಯ ಬಗ್ಗೆ ನಮ್ಮ ಜನರಲ್ಲಿ ಹೆಚ್ಚು ಆಸಕ್ತಿಯಿಲ್ಲ, ಎಲ್ಲರೂ ಕ್ರಿಕೆಟ್ನ ಅಂಗಳದಲ್ಲಿ ಮುಳುಗಿ ಹೋಗಿದ್ದಾರೆ. ಆದ್ದರಿಂದ ರೆವಿನ್ಯೂ ಜೆನರೇಷನ್ ಎನ್ನುವುದು ಕನಸಿನ ಮಾತು. ಮತ್ತೊಂದೆಡೆ ಸರ್ಕಾರ ಕೂಡ ಇದೇ ಬುದ್ದಿಗೇಡಿ ಕೆಲಸವನ್ನು ಮಾಡುತ್ತಿದೆ. ಅದೂ ಕೂಡ ಕ್ರಿಕೆಟ್ನಲ್ಲೇ ಮುಳುಗಿಹೋಗಿದೆ. ಇನ್ನು ಮೀಡಿಯಾಗಳ ವಿಷಯ ಹೇಳುವುದೇ ಬೇಡ. ಹಾಕಿಯಲ್ಲಿ ಭಾರತ ಚಿನ್ನದ ಪದಕ ತಮದರೂ, ಅಸಲಿಗೆ ಅದು ಒಲಂಪಿಕ್ಸ್ಗೆ ಅದು ಅರ್ಹತೆಯೇ ಪಡೆಯದಿದ್ದರೂ ಅದರದು ಒಂದೇ ಪ್ರತಿಕ್ರಿಯೆ - ಕಡೆಯ ಪೇಜಿನಲ್ಲೊಂದು ಬಾಕ್ಸ್ ಐಟಂ! ಇದೇ ಭಾರತದ ಹಾಕಿಯನ್ನು ಕೊಂದಿರುವುದು.

ಇನ್ನು ಈ ವಿಶ್ವಕಪ್ನ ನಂತರ ಶುರುವಾಗಲಿದೆ ನೋಡಿ ಫೈರಿಂಗ್! ಆಗಲೇ ಭಾರತ ಹಾಕಿ ತಂಡದ ಕೋಚ್ ಬಾಸ್ರಾ ತನ್ನ ಬ್ಯಾಗುಗಳು ಯಾವಾಗಲೂ ಪ್ಯಾಕ್ ಆಗೇ ಇರುತ್ತವೆ ಎನ್ನುವ ಮೂಲಕ ತಾನು ಮಾನಸಿಕವಾಗಿ ಫ್ಯರಿಂಗ್ ಆರ್ಡರ್ಸ್ಗೆ ಸಿದ್ಧ ಎನ್ನುವುದನ್ನು ತಿಳಿಸಿದ್ದಾನೆ. ಆದರೆ ಸಮಸ್ಯೆ ಇದಲ್ಲ. ವಿಶ್ವ ಹಾಕಿ ಮುಂದೆ ಮುಂದೆ ಹೋಗುತ್ತಿದ್ದರೂ ಭಾರತದ ಹಾಕಿ ಮಾತ್ರ ಅದಕ್ಕೆ ಒಗ್ಗಿಕೊಳ್ಳದೆ ಇನ್ನೂ ತನ್ನ ಪಾಸ್ಟ್ ಗ್ಲೋರಿಯಲ್ಲೇ ಬದುಕುತ್ತಿದೆ. ಇನ್ನೂ ಭಾರತದ ಹಾಕಿ ಸಿಂಥಟಿಕ್ ಪಿಚ್ ಅನ್ನು ಒಪ್ಪಿಲ್ಲವೆಂದರೆ ಲೆಕ್ಕ ಹಾಕಿ. ಹಾಕಿಯಂಗಳಲದಲಿ ಹುಲ್ಲುಗಾವಲು ಮಾಯವಾಗಿ 30 ವರ್ಷಗಳಾಗುತ್ತಾ ಬಂದವು!

ಸಮಸ್ಯೆಯೆಂದರೆ ಪ್ರತಿ ಬಾರಿ ನಾವು ಆಮೂಲಾಗ್ರ ಬದಲಾವಣೆ ಅಂತ ಮಾತು ಶುರು ಮಾಡಿದರೂ, ಅದೇ ಗೆದ್ದಲು ಹತ್ತಿದ ವ್ಯವಸ್ಥೆ ಕೋಚ್ ಮತ್ತು ಆಟಗಾರರ ಮೇಲೆ ಕ್ರಮಕ್ಕೆ ಮುಂದಾಗುತ್ತದೆ. ಸಮಸ್ಯೆ ಕೋಚೂ ಅಲ್ಲ ಅಟಗಾರರೂ ಅಲ್ಲ, ಸಮಸ್ಯೆ ಅದೇ ವ್ಯವಸ್ಥೆ! ಯಾವುದೇ ಬದಲಾವಣೆ ಟಾಪ್ ಟು ಬಾಟಂ ಆಗಬೇಕು, ಅಭಿವೃದ್ಧಿ ಗ್ರಾಸ್ ರೂಟ್ ಲೆವಲ್ನಲ್ಲಿ ಆಗಬೇಕು. ನಮ್ಮಲ್ಲಿ ಬದಲಾಗಬೇಕಿರುವುದು ಈ ಗೆದ್ದುಲು ಹಿಡಿದ ವ್ಯವಸ್ಥೆ! ಅದಾದರೆ ಮಾತ್ರ ಭಾರತದ ಹಾಕಿಗೆ ಭವಿಷ್ಯವುಂಟು, ಇಲ್ಲದಿರೆ.......?!!

ಕ್ರಿಕೆಟ್ ಕಳಕೊಂಡ ಇಬ್ಬರು ದೈತ್ಯರು

ಸಾಧಾರಣವಾಗಿ ಕ್ರಿಕೆಟ್ನಲ್ಲಿ ಆಟಗಾರರೇ ಸ್ಟಾರ್ಗಳು, ಸೂಪರ್ ಸ್ಟಾರ್ಗಳು. ಆದರೆ ವಿಶ್ವ ಕ್ರಿಕೆಟ್ ರಂಗದಲ್ಲಿ ಆಟಗಾರರಷ್ಟೇ ಇಲ್ಲ., ಇರಲಾರರು. ಅಲ್ಲಿ, ಕಾಮೆಂಟೇಟರುಗಳಿದ್ದಾರೆ, ಅಂಪೈರುಗಳಿದ್ದಾರೆ, ಟೆಕ್ನೀಷಿಯನ್ಗಳಿದ್ದಾರೆ, ಬರಹಗಾರರಿದ್ದಾರೆ, ಹೀಗೇ ಇನ್ನೂ ಸಾಕಷ್ಟು ಮಂದಿಯಿಂದ ಕೂಡಿದ ವ್ಯವಸ್ಥೆ ಈ ಜಾಗತಿಕ ಕ್ರಿಕೆಟ್ ರಂಗ. ಆದರೆ ಬಹುಪಾಲು ಇವರೆಲ್ಲಾ ತೆರೆಯ ಹಿಂದೆಯೇ ಕೆಲಸ ಮಾಡುವುದರಿಂದ ಆವರಾರೂ ಜನರ ಜೊತೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳುವುದೇ ಇಲ್ಲ. ಅಷ್ಟೆಲ್ಲಾ ಏಕೆ, ವಿಶ್ವ ಕ್ರಿಕೆಟ್ ರಂಗದ ಸೂಪರ್ ಸ್ಟಾರ್ಗಳಾರು ಅಂತ ತೆಗದು ನೋಡಿ, ಬಹುಪಾಲು ಅದರಲ್ಲಿ ಬ್ಯಾಟ್ಸಮನ್ಗಳೇ ಇರ್ತಾರೆ, ಇಲ್ಲೇ ಹೀಗಿರುವಾಗ ಇನ್ನು ಇಂತಹ ಮಿಕ್ಕವರ ಗತಿಯೇನು? ಆದರೆ ಇಲ್ಲಿಬ್ಬರು ಅಪವಾದಗಳಿದ್ದಾರೆ ನೋಡಿ. ಒಬ್ಬರು ದಂತಕಥೆಯಾದ ಅಂಪೈರು ಡೇವಿಡ್ ಶೆಪರ್ಡ್ ಮತ್ತು ಭಾರತದ ಅತ್ಯಂತ ಹಿರಿಯ ಕ್ರಿಕೆಟ್ ಬರಹಗಾರ ರಾಜನ್ ಬಾಲ. ಆದರೆ ಅತೀವ ದುಃಖದ ಸಂಗತಿಯೆಂದರೆ ಇವರಿಬ್ಬರ ಬಗ್ಗೆ ಮಾತನಾಡಲು ನಾವು ಕುಳಿತುಕೊಂಡಿರುವುದು ಅವರ ಸಾವಿನ ಸೂತಕದಲ್ಲಿ! ಹೌದು ಮೊನ್ನೆ ಡೇವಿಡ್ ಶೆಪರ್ಡ್ ಲಂಗ್ ಕ್ಯಾನ್ಸರ್ನಿಂದ ತಮ್ಮ 69ನೇ ವಯಸ್ಸಿಗೆ ತೀರಿಕೊಂಡರೆ, ಬೆಂಗಳೂರಿನವರೇ ಆದ ರಾಜನ್ ಬಾಲ ಅಕ್ಟೋಬರ್ ಎಂಟರಂದು ತೀರಿಕೊಂಡರು. ಇಬ್ಬರ ಸಾವೂ ಕೂಡ ನಮ್ಮ ಸೆಲಿಬ್ರಿಟಿ ಮೀಡಿಯಾದಲ್ಲಿ ಒಳಪುಟಗಳ box-item ಗಳಷ್ಟೇ ಆದದ್ದು ಮಾತ್ರ ವಿಷಾದ.

ಡೇವಿಡ್ ಶೆಪರ್ಡ್, ಆ ಹೆಸರು ಕೇಳಿದ ತಕ್ಷಣ ಹಲವರಿಗೆ ಹೊಲಗಳಲ್ಲಿ ನಿಲ್ಲಿಸಿರುವ ದೃಷ್ಟಿಬೊಂಬೆ ನೆನಪಾಗುತ್ತಿತ್ತು, ಕಲೆವರಿಗೆ ನಗು ಬರುತ್ತಿತ್ತು, ಆತನ ಸಾಮರ್ಥ್ಯ ಬಲ್ಲವರಿಗೆ ಗೌರವ ಮೂಡುತ್ತಿತ್ತು, ಅಂತೂ ಡೇವಿಡ್ ಶೆಪರ್ಡ್ ಅಂದರೆ ನಮಗೊಂದು ಆತ್ಮೀಯ ಭಾವ ಮೂಡುತ್ತಿತ್ತು. ಅವರ ಆ ಸ್ಥೂಲ ಕಾಯ, ಅದರ ಮೇಲಿನ ಆ ಗುಂಡು ಮೊಗ. ಒಟ್ಟಿನಲ್ಲಿ ಅವರನ್ನು ನೋಡಿದವರಿಗೆ ಲಾರೆಲ್ & ಹಾರ್ಡಿಯ, ಹಾರ್ಡಿಯನ್ನು ನೋಡಿದ ಹಾಗಾಗುತ್ತಿತ್ತು. ಒಬ್ಬ ಅಂಪೈರು ಹೀಗೂ ಇರಬಹುದೇ? ಅಂತ ಅನ್ನಿಸುವುದಿತ್ತು. ಆದರೆ ವೃತ್ತಿಗೆ ಸಂಬಂಧ ಪಟ್ಟಂತೆ ಡೇವಿಡ್ ಶೆಪರ್ಡ್ ನಿಜಕ್ಕೂ ದೈತ್ಯ. ಆತನ ಕೆರಿಯರ್ನುದ್ದಕ್ಕೂ ಎಂದಿಗೂ ವಿವಾದಕ್ಕೊಳಗಾದವರಲ್ಲ, ಯಾವುದೋ ಒಂದು ದೇಶದ ಪರ ನಿರ್ಧಾರ ಕೊಡುತ್ತಾರೆ ಅಂತ ಅನ್ನಿಸಿಕೊಂಡವರಲ್ಲ. ಅವರ ಅಂಪೈರಿಂಗೇ ಅತ್ಯಂತ ವಿಶಿಷ್ಟ. ಅವರು ಎಲ್ಲ ನಿರ್ಧಾರಗಳನ್ನೂ ನಿಧಾನವಾಗಿ ಆಲೋಚಿಸಿ ಅಳೆದು ತೂಗಿ ತೆಗೆದುಕೊಳ್ಳುತ್ತಿದ್ದರು. ಅವರು ಅಂಪೈರಿಂಗ್ಗೆ ನಿಂತರೆಂದರೆ ಅವರಷ್ಟು ಆ ಆಟವನ್ನು ಬಹುಶಃ ಆಟಗಾರರೂ ಎಂಜಾಯ್ ಮಾಡುತ್ತಿರಲಿಲ್ಲ, ಅಂತ ಕಾಣುತ್ತೆ, ಹಾಗಿತ್ತು ಅವರ ಕ್ರಿಕೆಟ್ ಪ್ರೀತಿ. ಈಗಿನ ಅಂಪೈರುಗಳಂತೆ ಅವರೆಂದೂ ಜಿಮ್ಗಳಲ್ಲಿ ಕಾಲ ಕಳೆದವರೇ ಅಲ್ಲ, ಅವರ ಸ್ಥೂಲ ಕಾಯವನ್ನೂ ಅವರು ಎಂಜಾಯ್ ಮಾಡುತ್ತಿದ್ದರು, ಅವರನ್ನು ಅವರೇ ಗೇಲಿ ಮಾಡಿಕೊಳ್ಳುತ್ತಿದ್ದರು, ತಮ್ಮ ವಿಶಿಷ್ಟ ಅಂಗ ಚೇಷ್ಟೆಗಳ ಮೂಲಕ ಜನರ ಮುಖದ ಮೇಲೆ ಒಂದು ಮಂದಹಾಸ ಮೂಡಿಸುತ್ತಿದ್ದರು. ಆಟದ ಸ್ಕೋರ್ 111, 222, 333...ಆದಾಗ, ಅದು ಶೆಪರ್ಡ್ ಟೈಮ್. ಈ ಸ್ಕೋರ್ಗಳು ಬ್ಯಾಟ್ಸಮನ್ಗಳಿಗೆ ದುರಾದೃಷ್ಟಕರ ಎಂಬುದು ಅವರ ನಂಬಿಕೆ. ಅದನ್ನು ಹೋಗಲಾಡಿಸಲವರು ಒಂದು ಕಾಲನ್ನು ಮೇಲೆತ್ತಿ ಒಂದು ಕುಣಿತ ಹಾಕುತ್ತಿದ್ದರು, ಅದನ್ನು ನೋಡೇ ಸವಿಯಬೇಕು. ಅವರು 1981ರಿಂದ ಅಂಪೈರಿಂಗ್ ಆರಂಭಿಸಿದರು. ಅಂದಿನಿಂದ ಅವರು 2005ರಲ್ಲಿ ನಿವೃತ್ತಿ ಹೊಂದುವವರೆಗೆ 172 ಒಡಿಐ ಮತ್ತು 82 ಟೆಸ್ಟ್ ಮ್ಯಾಚ್ಗಳಿಗೆ ಅಂಪೈರಿಂಗ್ ಮಾಡಿದ್ದರು. ಸತತ ಮೂರು ವಿಶ್ವಕಪ್ ಫೈನಲ್ಗಳಿಗೆ ಅಂಪೈರಿಂಗ್ ಮಾಡಿದ ಘನತೆ ಶೆಪರ್ಡ್ಗೆ ಮಾತ್ರ ಸ್ವಂತ. 2005ರ ನಿವೃತ್ತಿಯ ನಂತರ 2008ರಲ್ಲಿ ತಮ್ಮ ಚಿರಕಾಲ ಒಡನಾಡಿ ಜೆನ್ನಿಯನ್ನವರು ಮದುವೆಯಾಗಿದ್ದರು. ಆದರೆ ಅಷ್ಟರಲ್ಲಾಗಲೇ ಲಂಗ್ ಕ್ಯಾನ್ಸರ್ ಅವರನ್ನು ಕಿತ್ತು ತಿನ್ನಲಾರಂಭಿಸಿತ್ತು. ಕ್ಯಾನ್ಸರ್ ವಿರುದ್ಧ ಒಂದು ಸುಧೀರ್ಘ ಹೋರಾಟದ ನಂತರ ಶೆಪರ್ಡ್ ಮೊನ್ನೆ ಉಸಿರು ಚೆಲ್ಲಿಬಿಟ್ಟರು.

ಇನ್ನು ರಾಜನ್ ಬಾಲ. ಭಾರತದ ಅತ್ಯುನ್ನತ ಮಟ್ಟದ ಕ್ರಿಕೆಟ್ ಬರಹಗಾರ. ಅದಕ್ಕೂ ಮಿಗಿಲಾಗಿ ಅವರೊಬ್ಬ ಕ್ರಿಕೆಟ್ ರೊಮ್ಯಾಂಟಿಕ್. ಅವರಿಗೆ ಅದು ಬಿಟ್ಟರೆ ಬೇರೆ ಜಗತ್ತಿದ್ದಂತೆ ಅನ್ನಿಸುವುದಿಲ್ಲ. ಅವರು ಮೂಲತಃ ಒಬ್ಬ ಕ್ರಿಕೆಟಿಗ. ಅವರ ಯೌವನ್ನದ ದಿನಗಳಲ್ಲಿ ಯೂನಿವರ್ಸಿಟಿ ಲೆವೆಲ್ನಲ್ಲಿ ಆಡಿದವರವರು. ಆದ್ದರಿಂದ ಅವರಿಗೆ ಆಟದ ಬಗ್ಗೆ ಸಂಪೂರ್ಣ ನೈಪುಣ್ಯತೆ ಇತ್ತು. ನೈಪುಣ್ಯತೆ ಅಷ್ಟೇ ಅಲ್ಲ, ಇಡೀ ಆಟದ ಬಗ್ಗೆ ಅವರು ತಾಂತ್ರಿಕವಾಗಿ ಚರ್ಚಿಸಬಲ್ಲಷ್ಟು ಸಮರ್ಥರಾಗಿದ್ದರು. ಅವರ ಮೂಲ ಹೆಸರು ನಟರಾಜನ್ ಬಾಲಸುಬ್ರಮಣ್ಯಮ್. ಅವರು ಇಂಡಿಯನ್ ಎಕ್ಸ್ಪ್ರೆಸ್, ದಿ ಹಿಂದೂ ಮತ್ತು ಬಹುಕಾಲ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಕ್ರಿಕೆಟ್ ಕರೆಸ್ಪಾಂಡೆಂಟ್ ಆಗಿ, ನಂತರ ಸ್ಪೋರ್ಟ್ಸ್ ಎಡಿಟರ್ ಆಗಿ ಕೆಲಸ ನಿರ್ವಹಿಸಿದ್ದರು. ಅವರಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ, ಅವರೆಂದೂ ಕ್ರಿಕೆಟಿಗರ ಬಗ್ಗೆ ಬರೆಯುತ್ತಿರಲಿಲ್ಲ, ಅವರು ಬರೆಯುತ್ತಿದ್ದದ್ದು ಕ್ರಿಕೆಟ್ನ ಬಗ್ಗೆ. ಒಬ್ಬ ಆಟಗಾರನಲ್ಲಿ ಪ್ರತಿಭೆಯಿದೆ ಅಂತ ಅವರು ಗುರುತಿಸಿದರೆಂದರೆ ಆತನ ಪ್ರದರ್ಶನದ ಹೊರತಾಗಿಯೂ ಅವರು ಆತನನ್ನು ಪ್ರಮೋಟ್ ಮಾಡುತ್ತಿದ್ದರು. ಗವಾಸ್ಕರ್, ಸಚಿನ್, ವಾಡೇಕರ್ ಹೀಗೆ ಇನ್ನೂ ಅನೇಕ ಮಂದಿಯನ್ನು ದಂತಕಥೆಗಳನ್ನಾಗಿ ರೂಪಿಸುವಲ್ಲಿ ರಾಜನ್ ಬಾಲಾರ ಪೆನ್ನಿನ ಪಾತ್ರ ಬಹಳ ಹಿರಿದು. ಇಂತಹ ರಾಜನ್ ಬಾಲ ತಿಂಗಳ ಹಿಂದೆ ನ್ಯೂಸ್-9 ಛಾನೆಲ್ಲಿನಲ್ಲಿ ಕ್ರಿಕೆಟ್ ಅನಾಲಿಸಿಸ್ ಮಾಡುತ್ತಿದ್ದಾಗ ಅಲ್ಲೇ ಅವರಿಗೆ ಹೃದಯಾಘಾತವಾಗಿ, ಅವರು ಕೋಮಾಗೆ ಸರಿದುಬಿಟ್ಟರು. ಆದರೆ ಅವರು ಮತ್ತೆಂದೂ ಕಣ್ಣು ಬಿಡದಿದ್ದುದು ಮಾತ್ರ ದುಃಖಕರ.

ಭಾರತದ ಆಟದ ಅಂಗಳದಲ್ಲಿ ಅಬ್ಬರದ ವೀಕೆಂಡ್ ದೀಪಾವಳಿ


ಬಾಕ್ಸಿಂಗ್ನಲ್ಲಿ ವಿಜೇಂದರ್ ವಿಕ್ರಮ
ವಿಜೇಂದರ್ ಸಿಂಗ್ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಸದ್ಯ ವಿಜೇಂದರ್ ಸಿಂಗ್ ವಿಶ್ವ ಬಾಕ್ಸಿಂಗ್ ರ್ಯಾಕಿಂಗ್ನಲ್ಲಿ ಎರಡನೇ ಶ್ರೇಯಾಂಕಿತರಾಗಿದ್ದಾರೆ. ಇಟಲಿಯ ಮಿಲಾನ್ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಛಾಂಪಿಯನ್ಶಿಪ್ನಲ್ಲಿ ಮೊದಲಿಂದಲೂ ಅತ್ಯುತ್ತಮ ಸಾಧನೆ ಮಾಡುತ್ತಾ ಬಂದ ವಿಜೇಂದರ್ ಸಿಂಗ್ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಫಲರಾದರು. ಸೆಮಿಫೈನಲ್ನಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ತೋರಿದರಾದರೂ ಗೆಲುವು ಕೈಗೂಡಲಿಲ್ಲ. ಆದರೇನಂತೆ ವಿಶ್ವ ಬಾಕ್ಸಿಂಗ್
ಛಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ ತಲುಪಿ ಕಂಚಿನ ಪದಕ ಪಡೆದ ಮೊದಲ ಭಾರತೀಯನೆನಿಸಿಕೊಂಡಿದ್ದಾರೆ. ಯಾರು ಈ ವಿಜೇಂದರ್ ಸಿಂಗ್ ಅಂದಿರಾ? ಮೊನ್ನೆಯ ಚೈನಾ ಒಲಂಪಿಕ್ಸ್ನಲ್ಲಿ ಬೆಳಕಿಗೆ ಬಂದ ಬಾಕ್ಸಿಂಗ್ ಪ್ರತಿಭೆ ಇವರು. ಚೀನಾ ಒಲಂಪಿಕ್ಸ್ನಲ್ಲೂ ಕೂಡ ಕಂಚಿನ ಪದಕ ಗೆದ್ದು ಭಾರತದ ವಿಜಯ ಪತಾಕೆಯನ್ನೆಗರು ಹಾಕಿದ ಧೀಮಂತ ಅಪ್ಪಟ ದೇಸೀ ಕ್ರೀಡಾ ಪ್ರತಿಭೆಯಿವರು.

ವಿಜೇಂದರ್ ಸಿಂಗ್ ಅತ್ಯಂತ ಕೆಳ ಮಧ್ಯಮ ವರ್ಗದಿಂದ ಬಂದವರು. ತಂದೆ ಒಬ್ಬ ಬಸ್ ಚಾಲಕ. ಮಗನ ಬಾಕ್ಸಿಂಗ್ ತರಬೇತಿಗೆ ದುಡ್ಡು ಹೊಂಚಲು ಒಂದೇ ದಿನ ಎರಡೂ ಷಿಫ್ಟುಗಳಲ್ಲಿ ದುಡಿಯುತ್ತಿದ್ದವರು. ವಿಜೇಂದರ್ ಹುಟ್ಟಿ ಬೆಳೆದದ್ದೆಲ್ಲವೂ ಹರ್ಯಾಣದ ಭಿವಾನಿ ಬಳಿಯ ಕಲುವಾಸ್ ಹಳ್ಳಿಯಲ್ಲಿ. ಇದ್ದದ್ದು ಒಂದು ಸೈಕಲ್ಲು, ಅಣ್ಣನೊಂದಿಗೆ ಅದನ್ನು ಹಂಚಿಕೊಳ್ಳುತ್ತಾ ಬೆಳೆದವ ಇಂದು ಬಾಕ್ಸಿಂಗ್ನಲ್ಲಿ ವಿಶ್ವದಲ್ಲೇ ಎರಡನೇ ಶ್ರೇಯಾಂಕಿತರಾಗುವವರೆಗೆ ಬೆಳೆದಿದ್ದಾರೆ. ಆದರೆ ನಮ್ಮ ವ್ಯವಸ್ಥೆ ಇಂತಹ ಅಪ್ಪಟ ಪ್ರತಿಭೆಯನ್ನು ಹೇಗೆ ನಡೆಸಿಕೊಂಡಿದೆ? ಅದು ಹೇಳದಿರುವುದೇ ಉತ್ತಮವೇನೋ. ಒಲಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಸಿರಿ ಶ್ರೀಮಂತ ಅಭಿನವ ಭಿಂಧ್ರಾನೆಡೆಗೆ ಎಲ್ಲರ ಗಮನವೂ ಕೇಂದ್ರೀಕರಿಸಿತ್ತೇ ವಿನಃ ಕಂಚಿನ ಪದಕ ಗೆದ್ದು ತಂದ ವಿಜೇಂದರ್ ಸಿಂಗ್ ಮತ್ತು ಸುಶೀಲ್ ಕುಮಾರ್ರನ್ನು ನಮ್ಮ ಮೀಡಿಯಾ ಆಗಲೀ ಸರ್ಕಾರವಾಗಲೀ ಗುರುತಿಸಿದ್ದು ಕಡಿಮೆಯೇ. ಒಲಂಪಿಕ್ಸ್ನಿಂದ ಮರಳಿದಾಗ ಅಭಿನವ ಭಿಂಧ್ರಾಗೆ ಭವ್ಯ ಸ್ವಾಗತ ದೊರೆಯಿತು, ಮಿಕ್ಕವರಿವರಿಬ್ಬರೂ ಆಟೋ ರಿಕ್ಷಾಗಳಲ್ಲಿ ಮನೆ ಸೇರಿದರು. ನಂತರ ಗಣರಾಜ್ಯ ದಿನದ ಸಂದರ್ಭದಲ್ಲಿ ಅಭಿನವ ಭಿಂಧೃಆಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಶೀಲ್ ಕುಮಾರ್ ಮತ್ತು ವಿಜೇಂದರ್ ಸಿಂಗ್ರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗುವುದೆಂದು ತಿಳಿಸಿ ನಂತರ ಕಡೇಕ್ಷಣದಲ್ಲಿ ನಿರಾಕರಿಸಲಾಯಿತು. ಒಟ್ಟಿನಲ್ಲಿ ಇವರೆಡೆಗೆ ಒಂದು ಮಲತಾಯಿ ಧೋರಣೆಯೆನ್ನುವುದಿದ್ದೇ ಇದೆ. ಇದೆಲ್ಲದರ ನಡುವೆ ಸ್ಪೆನ್ಸರ್ಸ್ ಕಂಪೆನಿಯವರು ಮುಂದೆ ಬಂದು ವಿಜೇಂದರ್ ಸಿಂಗ್ರನ್ನು ಜಾಹೀರಾತೊಂದಕ್ಕೆ ಬುಕ್ ಮಾಡಿರುವುದರಿಂದ ಸದ್ಯ ಒಂದಷ್ಟು ದುಡ್ಡು ನೋಡುವಂತಾಗಿದೆ. ವಿಜೇಂದರ್ ಸಿಂಗ್, ಸುಶೀಲ್ ಕುಮಾರ್, ಸೈನಾ ನೆಹ್ವಾಲ್ರಂಥ ದೇಸೀ ಪ್ರತಿಭೆಗಳನ್ನು ಬೆಳೆಸುವುದು ವ್ಯವಸ್ಥೆಯ ಬಾಧ್ಯತೆಯಾಗುತ್ತದೆ. ಅವರಿಗೆ ಬೇಕಾದ ಪ್ರೋತ್ಸಾಹ ನೀಡದೆ, ಒಲಂಪಿಕ್ಸ್ ಆದಾಗಲೆಲ್ಲಾ ನೂರಾಹದಿನೈದು ಕೋಟಿ ಭಾರತಕ್ಕೆ ಮೆಡಲುಗಳೇ ಇಲ್ಲವಾ, ನೋಡ್ರೀ ಕ್ಯೂಬಾ, ಇಥಿಯೋಪಿಯಾನ ನೋಡಿ ಕಲೀಬೇಕು.....ಎಂಬಂತೆ ಗೊಣಗುವುದರಲ್ಲಿ ಅರ್ಥವಿಲ್ಲ.

ಟೆನಿಸ್ - ಉಭಯ ಪ್ರಶಸ್ತಿಯೂ, ಉಭಯ ಸಂಕಟವೂ........
ಮೊನ್ನೆ ಭಾನುವಾರದ ಯುಎಎಸ್ ಒಪನ್ ಟೆನಿಸ್ ಟೂರ್ನಿಯ ಮೆನ್ಸ್ ಡಬಲ್ ಫೈನಲ್ ಪಂದ್ಯವು ಅತ್ಯಂತ ರೋಚಕವೂ, ತೃಪ್ತಿಕರವೂ, ಅಷ್ಟೇ ಸಂಕಟಕರವೂ ಆಗಿತ್ತು. ಅಲ್ಲ ಒಂದೇ ಪಂದ್ಯ ಏಕಕಾಲದಲ್ಲಿ ಇಷ್ಟೆಲ್ಲಾ ಆಗಿರಲು ಹೇಗೆ ಸಾಧ್ಯ ಅಂತೀರಾ? ಈ ಪಂದ್ಯದ ವಿಶೇಷತೆಯೇ ಅದು. ಯುಎಸ್ ಓಪನ್ ಮೆನ್ಸ್ ಡಬಲ್ ಫೈನಲ್ಸ್ನಲ್ಲಿ ಈ ಬಾರಿ ಎದುರಾಗಿದ್ದು ನಮ್ಮ ಲಿಯಾಂಡರ್ ಪೇಸ್ ಮತ್ತು ಜೆಕ್ ಗಣರಾಜ್ಯದ ಲೂಕಾಸ್ ಡ್ಲೂಹಿ ತಂಡ ಒಂದೆಡೆಯಾದರೆ ಮತ್ತೊಂದು ಕಡೆ ನಮ್ಮ ಮಹೇಶ್ ಭೂಪತಿ ಮತ್ತು ಬಹಮಾಸ್ನ ಮಾರ್ಕ್ ನೋಲ್ಸ್ ಜೋಡಿ. ಮೊಟ್ಟಮೊದಲ ಬಾರಿಗೆ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಜೋಡಿ ಗ್ರಂಡ್ಸ್ಲಾಮ್ ಫೈನಲ್ಲಿನಲ್ಲಿ ಎದುರಾಗಿದ್ದರು.ಮೊದಲ ಸೆಟ್ಟಿನ್ನು ಭೂಪತಿ ಜೋಡಿ ಗೆದ್ದು ಒಳ್ಳೆ ಆರಂಭ ಪಡೆಯಿತು. ಇದರಿಂದ ಛಲಕ್ಕೆ ಬಿದ್ದ ಲಿಯಾಂಡರ್ ಪೇಸ್ ಜೋಡಿ ಎರಡನೇ ಸೆಟ್ಟನ್ನು ಜಿದ್ದಿಗೆ ಬಿದ್ದು ತಮ್ಮದಾಗಿಸಿಕೊಂಡು ಸಮಬಲ ಸಾಧಿಸಿದರು. ಮೂರನೇ ಸೆಟ್ಗೆ ರೋಚಕತೆ ಬೆಳೆದು ಬೆಟ್ಟವಾಗಿತ್ತು. ಅತ್ಯಂತ ರೋಚಕವಾಗಿ ನಡೆದ ಮೂರನೇ ಸೆಟ್ಟನ್ನು ಲಿಯಾಂಡರ್ ಪೇಸ್ ಜೋಡಿ 6-2 ಬೃಹತ್ ಅಂತರದಿಂದ ತನ್ನದಾಗಿಸಿಕೊಂಡಿತು. ಇದರೊಂದಿಗೆ ಪೇಸ್ ತನ್ನ 10ನೇ ಗ್ರಾಂಡ್ಸ್ಲಾಮ್ ಟೈಟಲ್ಲನ್ನು ಪಡೆದು ಬೀಗಿದರು. ಮಹೇಶ್
ಭೂಪತಿ ಜೋಡಿ ಉತ್ತಮ ಪ್ರದರ್ಶನ ತೋರಿದರಾದರೂ ನಿರಾಶರಾಗುಳಿಯಬೇಕಾಯಿತು.
ಪಂದ್ಯ ಶುರುವಾಗುವ ಮೊದಲೇ ಒಂದು ಸಮಾಧಾನವಿತ್ತು. ಯಾವ ಜೋಡಿ ಗೆದ್ದರೂ ಮೆನ್ಸ್ ಡಬಲ್ಸ್ ಟೈಟಲ್ ಅನ್ನು ಗೆಲ್ಲುವುದು ಭಾರತದ ತಂಡವೇ. ಆ ಸಮಾಧಾನವಿತ್ತಾದರೂ ಮಾಜಿ ಶ್ರೇಷ್ಠ ಡಬಲ್ಸ್ ಜೊತೆಗಾರರು, ಸ್ನೇಹಕ್ಕೆ ಮತ್ತೊಂದು ಹೆಸರಿನಂತಿದ್ದವರು ಗ್ರಾಂಡ್ಸ್ಲಾಮ್ ಫೈನಲ್ನಲ್ಲಿ ಎದುರಾಬದುರಾಗಿ ನಿಂತು ಬಡಿದಾಡಿದಾಗ ಯಾರು ಗೆಲ್ಲುವರೋ ಎಂಬ ರೋಚಕತೆ ಸಹಜವೇ ಸರಿ, ಹಾಗೆ ಕಳೆದುಹೋದ ಸಂಬಂಧವೊಂದರ ಸಂಕಟವನ್ನೂ ಭಾರತೀಯರು ಅಂದು ಅನುಭವಿಸಿದರು. ಟೆನಿಸ್ನಲ್ಲಿ ಭಾರತದ ವಿಜಯಪತಾಕೆಯನ್ನು ಎಗರಿಹಾಕಿದ ಮೊದಲಿಗರು ಈ ಇಬ್ಬರು. ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯವರ ಡಬಲ್ಸ್ ಜೋಡಿಯೆಂದರೆ ಒಂದು ಕಾಲದಲ್ಲಿ ಅಜೇಯರು ಎಂಬ ಮಾತು ಚಾಲ್ತಿಯಲ್ಲಿತ್ತು. ಅವರಿಬ್ಬರೂ ಸೇರಿ ಮೊಟ್ಟಮೊದಲ ಬಾರಿಗೆ ವಿಶ್ವ ಟೆನಿಸ್ ಲಾನ್ನಲ್ಲಿ ಭಾರತಕ್ಕೊಂದು ಗೌರವಯುತ ಸ್ಥಾನ ದೊರಕಿಸಿಕೊಟ್ಟರು. ಅವರಿಬ್ಬರ ಸ್ನೇಹವೂ ಅಷ್ಟೇ ಸುಮುಧರವೂ ಆಗಿತ್ತು, ಮನೆಮಾತಾಗಿತ್ತು ಕೂಡ. ಅವರು ಹಲವಾರು ಯುವಕರಿಗೆ ಆದರ್ಶವಾಗಿದ್ದರು. 5ನೇ ಕ್ಲಾಸಿನ ಪಠ್ಯ ಪುಸ್ತಕಗಳಲ್ಲಿ ಇವರ ಜೀವನ-ವಿಕ್ರಮಗಳ ಬಗ್ಗೆ ಪಾಠ ಸೇರಿಸಲಾಗಿತ್ತು. ಹಾಗಿದ್ದವರು ಅವರು.

ಆದರೆ,....ಅದೇನಾಯಿತೋ ಬರಬರುತ್ತಾ ಅವರಿಬ್ಬರ ನಡುವೆ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ಅದ್ಯಾಕೋ ಗೊತ್ತಿಲ್ಲ ಆ ಡಬಲ್ಸ್ ಜೋಡಿಯಲ್ಲಿ ಮೊದಲಿನ ಮ್ಯಾಜಿಕ್ ಇರಲಿಲ್ಲ, ಕೆಮಿಸ್ಟ್ರಿ ಮೋದಲೇ ಇರಲಿಲ್ಲ. ಅಸಲಿಗೆ ಇವರಿಬ್ಬರ ನಡುವೆ ಬಿರುಕು ಕಾಣಿಸಿಕೊಂಡಿತಾದರೂ ಯಾಕೆ? ಇಬ್ಬರಲ್ಲಿ ಯಾರು ಉತ್ತಮ ಆಟಗಾರ, ಜೊತೆಯಾಗಿ ಸಾಧಿಸಿಸದ ವಿಕ್ರಮಗಳಲ್ಲಿ ಯಾರ ಪಾಲು ಹೆಚ್ಚು, ಹೀಗೆ ಶುರುವಾಯಿತು ನೋಡಿ ಜಗಳ......ಲಿಯಾಂಡರ್ ಪೇಸ್ ಮೊದಲಿಂದಲೂ ಮೀಡಿಯಾ ಫ್ರೆಂಡ್ಲಿ, ಮೀಡಿಯಾದಲ್ಲಿ ಮಿಚುತ್ತಿದ್ದ ಪೇಸ್ ಈ ಎಲ್ಲ ವಿಕ್ರಮಗಳೂ ತನ್ನೊಬ್ಬನದೇನೇನೋ ಎನ್ನುವಂತೆ ವರ್ತಿಸತೊಡಗಿದ, ಮಹೇಶ್ ಕುಂಗಿ ಹೋದ. ಬರಬರುತ್ತಾ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯರ ನಡುವೆ ಮಾತು ಕಡಿಮೆಯಾಯಿತು. ಮಧ್ಯವತರ್ಿಗಳ ಮೂಲಕ ಮಾತನಾಡತೊಡಗಿದರು. ಅಲ್ಲಿಗಾಯಿತು, ಜಗಳ ಊರಗಳವಾಗಿ ಮಧ್ಯೆ ಗೋಡೆಯೊಮದು ಎದ್ದು ಕೂತಿತ್ತು. ಬಹಿರಂಗವಾಗಿ ಒಬ್ಬರಿಗೊಬ್ಬರು ಬೈದುಕೊಂಡರು. ಮಿಡಿಯಾ ಅದನ್ನು ಇನ್ನೂ ದೊಡ್ಡದು ಮಾಡಿತು. ಕಡೆಗೊಂದು ದಿನ ಇಬ್ಬರೂ ಇನ್ನು ಮುಂದೆ ತಾವಿಬ್ಬರೂ ಒಟ್ಟಿಗಾಡುವುದಿಲ್ಲವೆಂದು ಘೋಷಿಸಿಬಿಟ್ಟರು. ಇದನ್ನು ದೊಡ್ಡ ಸುದ್ದಿ ಮಡಿ ಆಡಿಕೊಂಡು ನಕ್ಕಿತ್ತು ಮಿಡಿಯಾ! ಆದರೆ ಇವೆಲ್ಲವುಗಳಲ್ಲಿ ನಷ್ಟವಾಗಿದ್ದು ಮಾತ್ರ ಭಾರತದ ಟೆನಿಸ್ ಕ್ಷೇತ್ರಕ್ಕೆ. ಈ ಭಲೇ ಜೋಡಿಯ ಮ್ಯಾಜಿಕ್ ಇಲ್ಲದೇ ಸದ್ಯ ಇದು ಕಳೆಗುಂದಿದೆ.

ಕ್ರಿಕೆಟ್ - ವಾಮನನ ತ್ರಿವಿಕ್ರ
ಭಾರತದ ಕ್ರಿಕೆಟ್ ಜೈತ್ರಯಾತ್ರೆ ಅಭಾಧಿತವಾಗಿ ಮುಂದುವರಿಯುತ್ತಿದೆ. ಲಂಕಾದಲ್ಲಿ ಕಾಂಪಾಕ್ ಸೀರೀಸ್ ಅನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ಭಾರತ ಸದ್ಯ ಏಕದಿನ ರ್ಯಾಕಿಂಗ್ಗಳಲ್ಲಿ ಎರಡನೇ ಸ್ಥಾನಕ್ಕೇರಿದೆ. ಸರಣಿ ಮಧ್ಯೆ ಒಮ್ಮೆ ಭಾರತ ವಿಶ್ವದ ಅತ್ಯುತ್ತಮ ಏಕದಿನ ತಂಡದ ಗೌರವಕ್ಕೆ ಪಾತ್ರವಾಗಿತ್ತು. ಆದರೆ ಮರುದಿನವೇ ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಹೀನಾಯವಾಗಿ ಸೋಲುವುದರೊಂದಿಗೆ ಈ ಕಿರೀಟ ಕೇವಲ 24 ಘಂಟೆಗಳಲ್ಲಿ ಉರುಳಿ ಬಿತ್ತು. ಲಂಕಾದಲ್ಲಿ ನಡೆದ ಕಾಂಪಾಕ್ ತ್ರಿಕೋನ ಸರಣಿಯಲ್ಲಿ ಭಾರತ, ಶ್ರೀಲಂಕಾ ಮತ್ತು ನ್ಯೂಜೀಲ್ಯಾಂಡ್ ಭಾಗವಹಿಸಿದ್ದವು. ಈ ಸರಣಿಯಲ್ಲಿ ಅಚ್ಚರಿಯೆಂಬಂತೆ ಅತ್ಯಂತ ಸಮರ್ಥ ತಂಡವಾದ ನ್ಯೂಜೀ ಲ್ಯಾಂಡ್ ತೀರ ಕಳಪೆ ಪ್ರದರ್ಶನ ನೀಡಿಬಿಟ್ಟಿತು. ಹಾಗಾಗಿ ಸರಣಿಯ ಆರಂಭದಿಂದಲೇ ಈ ಸರಣಿ ಬರಿಯ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವೈಪಾಕ್ಷಿಕ ಸರಣಿಯಂತೆ ಭಾಸವಾಗುತ್ತಾ ಹೋಯಿತು. ಭಾರತ ಅತ್ಯುತ್ತಮ ಪ್ರದರ್ಶನ ಪ್ರದಶರ್ಿಸುತ್ತಾ ಬಂದು ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲನೇ ಸ್ಥಾನಕ್ಕೂ ಏರಿಬಿಡ್ತು. ಆದರೆ ಮಾರನೆಯ ದಿನವೇ ಭಾರತ ಶ್ರೀಲಂಕಾ ಎದುರು 160ಕ್ಕೂ ಹೆಚ್ಚು ರನ್ಗಳ ಭಾರೀ ಅಂತರದಿಂದ ಹೀನಾಯ ಸೋಲು ಕಂಡು ಗರ್ವಭಂಗ ಮಾಡಿಸಕೊಂಡಿತು, ಇದೊಂದು ರೀತಿಯಲ್ಲಿ ಒಳ್ಲೆಯದೇ ಆಯಿತೆನ್ನಿ. ಮೊನ್ನೆ ಭಾನುವಾರ ನಡೆದ ಫೈನಲ್ ಪಂದ್ಯವನ್ನು ಭಾರತೀಯ ತಂಡ ಯಾವುದೇ ಅಹಂಕಾರ, ಹಮ್ಮ-ಬಿಮ್ಮುಗಳಿಲ್ಲದೇ ಸೀರಿಯಸ್ ಆಗಿ ತೆಗೆದುಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ದೊರೆತಾಗ ಓಪನರ್ಸ್ ಆಗಿ ಫೀಲ್ಡಿಗಿಳಿದದ್ದು ಭಾರತದ ವಾಮನ ಸಚಿನ್ ತೆಂಡೂಲ್ಕರ್ ಮತ್ತು ಗೋಡೆ ರಾಹುಲ್ ದ್ರಾವಿಡ್. ಎಲ್ಲರಿಗೂ ಆಶ್ಚರ್ಯ. ಕೆಲವರು ಮೂಗು ಮುರಿದರಾದರೂ ಸುಮಾರು 6-7 ವರ್ಷಗಳ ಹಿಂದಿನ ಟೈಟನ್ಸ್ ಆಟವನ್ನು ಹಾಗೇ ಮತ್ತೆ ಸವಿಯುವ ಸದಾವಕಾಶ ಅಭಿಮಾನಿಗಳಿಗೆ. ..ಶ್ರೀಲಂಕಾದ ಅರಿ-ಭಯಂಕರ ಬೌಲರ್ಗಳೆನಿಸಿಕೊಂಡವರೆಲ್ಲಾ ಅತ್ತ ಸಚಿನ್ ಇತ್ತ ದ್ರಾವಿಡ್ ನಿಂತು ಆಡುತ್ತಿದ್ದರೆ ಉತ್ತರವಿಲ್ಲದೆ ಅಂಡಲೆಯುತ್ತಿದ್ದು, ಅವರ ಅರೆಬೆಂದ `ಮಿಸ್ಟರಿ ಟೆಕ್ನಿಕ್ಕುಗಳಿಗೆ' ಉತ್ತರದಂತಿತ್ತು ಮೊದಲ ಬಾಲಿನಿಂದಲೇ ಆಕ್ರಮಣಕಾರಿ ದಾಳಿಗಿಳಿದ ಈ ಜೋಡಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಆದರೆ ಅತ್ಯಂತ ನಿರ್ಣಾಯಕ ಹಂತದಲ್ಲಿ ದ್ರಾವಿಡ್ 38 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಮುಂದೆ ಸಚಿನ್ಗೆ ಜೊತೆಯಾದವರು ಧೋನಿ. ಅಷ್ಟರಲ್ಲಾಗಲೇ ಸಚಿನ್ ಪಟಾಕಿ ಸಿಡಿಸಲಾರಂಭಿಸಿದ್ದರು. ಧೋನಿ ಆ ಎಂಡಿನಲ್ಲಿ ನಿಂತು ಸಚಿನ್ ಆಟಕ್ಕೆ ಸಾಥ್ ನೀಡುತ್ತಾ ಸಾಗಿದರು. ಅಷ್ಟೇ ನೋಡನೋಡುತ್ತಲೇ ಸಚಿನ್ ಏಕದಿನ ಪಂದ್ಯಗಳಲ್ಲಿ ತಮ್ಮ ಅಖಂಡ 44ನೇ ಸೆಂಚುರಿಯನ್ನು ಪೂರ್ಯಸಿ ಹಬ್ಬ ಮಾಡಿದರುರಿತ್ತ ಧೋನೀದು ಕೂಡ ಅರ್ಧಶತಕ ಪೂರ್ಣವಾಗಿತ್ತು. ಇನ್ನು ಆಯ್ತು ಲಂಕಾದ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಧೋನಿ ಔಟಾಗಿ ಹೋದರು. ಆದರೂ ನಂತರ ಬಂದವರೆಲ್ಲರು ಸೇರಿ ಲಂಕಾ ವಿರುದ್ಧ ಛಾಲೆಂಜಿಂಗ್ ಎನ್ನಬಹುದಾದ 315 ರನ್ಗಳ ಮೊತ್ತವನ್ನು ಗುಡ್ಡೆ ಹಾಕಿದರು. ಸಚಿನ್ 138 ರನ್ ಗಳಿಸಿ ಔಟಾದರು.

ಲಂಕಾ ಸಿಂಹಳೀಯರು ಬ್ಯಾಟಿಂಗ್ಗೆ ಬಂದಾಗ ಅದರ ಹಿಂದಿನ ಮ್ಯಾಚಿನಲ್ಲಿ 370 ರನ್ ಹೊಡೆದು ಭಾರತವನ್ನು ಮಣಿಸಿದ್ದೆವು ಅಂತಲೋ ಏನೋ ಅವರಲ್ಲಿ ಒಮದು ಕಾನ್ಫಿಡೆನ್ಸ್ ಇತ್ತು. ಆದರೆ ಶುರುವಿನಲ್ಲೇ ಯಾರನ್ನೂ ಸೆಟ್ಲ್ ಆಗಲು ಬಿಡದೆ ಒಂದರ ಹಿಂದೊಂದರಂತೆ ಇಬ್ಬರು ಓಪನರ್ಸ್ ವಿಕೆಟ್ಗಳನ್ನೂ ಹರ್ಭಜನ್ ಸಿಂಗ್ ಕಿತ್ತುಬಿಟ್ಟರು. ಅಲ್ಲಿಗೆ ಲಂಕಾಧಿಪತಿಗಳು ದಿಕ್ಕು ತಪ್ಪಿಬಿಟ್ಟರು. ಇನ್ನು ಅವರಿಗೆ ಈ ಮ್ಯಾಚ್ ಗೆಲ್ಲಲು ಇದ್ದ ಒಂದೇ ಆಸರೆಯೆಂದರೆ ಸನತ್ ಜಯಸೂರ್ಯ. ಅವರು ಬಂದದ್ದೇ ನಮ್ಮ ಬೌಲರ್ಗಳನ್ನು ಯದ್ವಾತದ್ವಾ ಓಡಿಸಲಾರಂಭಿಸಿದರು. ಇನ್ನು ಇವರು ಹೀಗೆ ಕಚ್ಚಿಕೊಂಡರೆ ಮ್ಯಾಚ್ ಕೈತಪ್ಪಿಹೋಗುತ್ತದೆ ಎಂದು ಚಿಂತಿಸುತ್ತಿರುವಷ್ಟರಲ್ಲೇ ಜಯಸೂರ್ಯ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ತೆರಳಿದರು. ಇನ್ನು ಅಲ್ಲಿಂದ ಮುಂದಕ್ಕೆ ಲಂಕಾ ತಂಡ ಗೌರವಯುತ ಪ್ರದರ್ಶನವನ್ನೇ ತೋರಲಿಲ್ಲ, ಮಿಕ್ಕೆಲ್ಲರೂ ಹೋದ ಪುಟ್ಟ, ಬಂದ ಪುಟ್ಟ ಅಂತ ತೊಪತೊಪ ವಿಕೆಟ್ ಒಪ್ಪಿಸಿದರು. ಹರ್ಭಜನ್ ಸಿಂಗ್ 5 ವಿಕೆಟ್ ಪಡೆದು ಅತ್ಯುತ್ತಮ ಪ್ರದರ್ಶನ ತೋರಿದರು. 68 ರನ್ಗಳಿಂದ ಜಯ ದಾಖಲಿಸಿ ದಿಗ್ವಿಜಯದ ನಗೆ ಬೀರಿತು. ಸಚಿನ್ ಮ್ಯಾನ್ ಆಫ್ ದಿ ಸೀರೀಸ್ ಆಗಿ ರಾರಾಜಿಸಿದರು.

ಸಚಿನ್ಗೀಗ 36 ವರ್ಷ, ಇನ್ನೂ ಅವರಲ್ಲಿ ಎಷ್ಟು ವರ್ಷಗಳ ಕ್ರಿಕೆಟ್ ಇದೆಯೋ ಬಲ್ಲವರಿಲ್ಲ. ಆದರೆ ಈ ವಯಸ್ಸಿನಲ್ಲೂ ಆ ಕ್ಲಾಸಿಕ್ ಎನ್ನುವಂತಹ ಬ್ಯಾಟಿಂಗ್, ಆ ಸ್ಟ್ರೋಕ್ಗಳು, 44ನೇ ಏಕದಿನ ಶತಕ ಇವೆಲ್ಲವೂ ಕೇವಲ ನಮ್ಮ ಸಚಿನ್ ತೆಂಡೂಲ್ಕರ್ ಕೈಯಿಂದ ಮಾತ್ರ ಸಾಧ್ಯ. 16 ವರ್ಷಗಳ ಹಿಂದೆ ಮೊದಲ ಬಾರಿಗೆ ಕ್ರೀಸಿಗೆ ಬಂದಾಗ ಹೇಗೆ ಆಡುತ್ತಿದ್ದರೋ ಈಗಲೂ ಅದೇ ಮೊನಚು, ಅದೇ ಸ್ಟೈಲು, ಅದೇ ಬೀಸು, ಅದೇ ನಮ್ರತೆ. ನಮಗಿನ್ನೇನೂ ಅಂತ ಆಸೆಯಿಲ್ಲ ಕಣ್ರೀ - ಸಚಿನ್ 2011ರಲ್ಲಿ ಬಾರತ ಉಪಖಂಡದಲ್ಲಿ ನಡೆಯುವ ಕ್ರಿಕೆಟ್ ವಿಶ್ವಕಪ್ನಲ್ಲೂ ಇದ್ದು ಹೀಗೇ ಆಡಿ, ಬೌಲರ್ಗಳಿಗೆ ಬೆವರಿಳಿಸಿ ಭಾರತಕ್ಕೇ ಆ ವಿಶ್ವಕಪ್ ಅನ್ನು ಜಯಿಸಿ ತಂದುಕೊಟ್ಟುಬಿಡಲಿ, ಆಮೇಲೆ ಅವರು ರಿಟೈರ್ ಆಗಲಿಕ್ಕೆ ನಮಗೇನೂ ಅಭ್ಯಂತರವಿಲ್ಲ...ಏನಂತೀರಾ.

ಭಾರತದ ಫುಟ್ಬಾಲ್ ವಿಕ್ರಮ


ಭಾರತದ ಫುಟ್ಬಾಲ್ ಕಡೆಗೂ ಮಿಂಚುತ್ತಿದೆ, ಮಿನುಗುತ್ತಿದೆ. ಮೊನ್ನೆ ಸೋಮವಾರ ಸಂಜೆ ದೆಹಲಿಯ ಡಾ. ಅಂಬೇಡ್ಕರ್ ಸ್ಟೇಡಿಯಮ್ ಕ್ಕಿಕ್ಕಿರಿದು ತುಂಬಿತ್ತು. ಹಲವಾರು ಟಿಕೆಟ್ಗಳು ಬ್ಲಾಕ್ನಲ್ಲಿ ಸೇಲಾಗಿಹೋಗಿದ್ದವು. ಆಶ್ಚರ್ಯ ಅಲ್ಲಿ ನಡೆಯುತ್ತಿದ್ದದ್ದು ಕ್ರಿಕೆಟ್ ಮ್ಯಾಚಲ್ಲ ಬದಲಿಗೆ ನೆಹರೂ ಕಪ್ ಫುಟ್ಬಾಲ್ ಟೂರ್ನಿ ಫೈನಲ್ಸ್! ಹೌದು ಫುಟ್ಬಾಲ್ ಮ್ಯಾಚ್ ನೋಡಲು ದೆಹಲಿಯ ಜನ ಬ್ಲಾಕ್ನಲ್ಲಿ ಟಿಕೆಟ್ ತೆಗೆದುಕೊಂಡು ಬಂದು ಕುಂತಿದ್ದರು. ವ್ಹಾ, ಕ್ಯಾ ಸೀನ್ ಹೈ....! ಭಾರತ ಸಿರಿಯಾ ತಂಡಗಳ ನಡುವೆ ನಡೆದ ಈ ಫೈನಲ್ಸ್ ಅತ್ಯಂತ ಜಿದ್ದಾಜಿದ್ದಿನಿಂದಲೂ ಆಸಕ್ತಿಕರವಾಗಿಯೂ ನಡೆದದ್ದು ವಿಶೇಷ. ಸದ್ಯ ಭಾರತ ಫುಟ್ಬಾಲ್ ರಾಂಕಿಂಗ್ನಲ್ಲಿ 156ನೇ ಸ್ಥಾನದಲ್ಲಿದ್ದರೆ, ಸಿರಿಯಾ 94ನೇ ಸ್ಥಾನದಲ್ಲಿದೆ. ಈ ಲೆಕ್ಕದ ಪ್ರಕಾರ ಸಿರಿಯಾ ಭಾರತಕ್ಕಿಂತಲೂ ಉತ್ತಮ ತಂಡ. ಆದರೆ ಇದೇ ಸಿರಿಯಾವನ್ನು 2007ರ ನೆಹರೂ ಕಪ್ ಫೈನಲ್ಸ್ನಲ್ಲಿ ಭಾರತ ಸೋಲಿಸಿ ಕಪ್ಪನ್ನು ಕೈವಶಪಡಿಸಿಕೊಂಡದ್ದು ಇನ್ನೂ ನೆನಪಿನಿಂದ ಮಾಸಿಲ್ಲ. ಅಂತೂ ಪಂದ್ಯ ಶುರು.


90 ನಿಮಿಷಗಳ ನಿಗದಿತ ಅವಧಿಯ ಪಂದ್ಯದಲ್ಲಿ ಎರಡೂ ತಮಡಗಳು ಅತ್ಯುತ್ತಮ ಪ್ರದರ್ಶನ ತೋರಿದರೂ, ಪಂದ್ಯ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದರೂ ಈರ್ವರು ತಂಡಗಳೂ ಗೋಲು ಹೊಡೆಯುವಲ್ಲಿ ವಿಫಲವಾದವು. ನಂತರದ 15 ನಿಮಿಷಗಳ ಹೆಚ್ಚುವರಿ ಸಮಯದಲ್ಲೂ ಕೂಡ ಎರಡೂ ತಂಡಗಳು ಗೋಲು ಹೊಡೆಯುವಲ್ಲಿ ವಿಫಲವಾದವು. ಆಟ ಆಸಕ್ತಿ ಕೆರಳಿಸಿತ್ತು. ಮತ್ತೊಂದು 15 ನಿಮಿಷಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು. 9 ನಿಮಿಷಗಳ ಆಟ ಕಳೆಯುವಷ್ಟರಲ್ಲೇ ದೊರೆತ ಫ್ರೀಕಿಕ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರೆನಡಿ ಸಿಂಗ್ ಗೋಲು ಗಳಿಸಿ ತಂಡ ಗೆಲುವಿನತ್ತ ಮುಖ ಮಾಡುವಂತೆ ಮಾಡಿದರು. ಆದರೆ ಕೆಲವೇ ನಿಮಿಷಗಲಲ್ಲಿ ಸಿರಿಯನ್ನರು ಕೂಡ ಗೋಲು ಗಳಿಸುವುದರೊಂದಿಗೆ ಸಮಬಲ ಸಾಧಿಸಿ ಪಂದ್ಯವನ್ನು ಮತ್ತೆ ಮೊದಲಿಗೆ ತಂದರು. ಪಂದ್ಯ ಪೆನಾಲ್ಟಿಗೆ ಹೋಗಿ ನಿಂತಿತು. ಎಲ್ಲರೂ ಉಸಿರು ಬಿಗಿ ಹಿಡಿದು ನಿಂತಿದ್ದರು. ಭಾರತದ ಪರ ಸುನೀಲ್ ಛೆಟ್ರಿ, ಸ್ಟೀವನ್ ಡಯಾನ್, ಅನ್ವರ್ ಮತ್ತು ಸುರ್ಕುಮಾರ್ ಸಿಂಗ್ ಪೆನಾಲ್ಟಿಯಲ್ಲಿ ಗೋಲುಗಳಿಸಿ ಭಾರತವನ್ನು ದಡ ಸೇರಿಸಿದರಾದರೂ ಅಂತಿಮವಾಗಿ ಭಾರತದ ವಿಜಯ ಪತಾಕೆಯನ್ನು ಎಗರಿಹಾಕಿದ್ದು ತಂಡದ ಗೋಲ್ಕೀಪರ್ ಸುಬ್ರತಾ ಪಾಲ್. ಸಿರಿಯನ್ನರ ಮೂರೂ ಪೆನಾಲ್ಟಿ ಶಾಟ್ಗಳನ್ನು ಗೋಲುಗಳಾಗದಂತೆ ತಡೆದು ಮ್ಯಾಚ್ ವಿನ್ನರ್ ಎನಿಸಿಕೊಂಡರು. ಇದರೊಂದಿಗೆ ನೆಹರೂ ಕಪ್ ಅನ್ನು ಅತಿಥೇಯ ಭಾರತ ತಂಡ ಸತತ ಎರಡನೇ ಬಾರಿಗೆ ತನ್ನದಾಗಿಸಿಕೊಂಡ ಕೀರ್ತಿ ಸಾಧಿಸಿತು. ಈ ವಿಕ್ರಮವನ್ನು ಸಾಧಿಸಿದ ಮೂರನೇ ದೇಶ ಭಾರತ. ಈ ಫುಟ್ಬಾಲ್ ವಿಕ್ರಮಕ್ಕೆ ಭಾರತದಾದ್ಯಂತ ಸಿಕ್ಕ ಮನ್ನಣೆ, ಪ್ರೋತ್ಸಾಹ ಅಪೂರ್ವ. ಇದು ಭಾರತದಲ್ಲಿ ಫುಟ್ಬಾಲನ್ನು ಮತ್ತಷ್ಟು ಪ್ರೊಮೋಟ್ ಮಾಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಬೈಚುಂಗ್ ಭೂಟಿಯಾ ಇಂದು ಯಾವ ಕ್ರಿಕೆಟಿಂಗ್ ಸ್ಟಾರ್ಗಿಂತಲೂ ಕಡಿಮೆಯಿಲ್ಲವೆಂಬಂತೆ ಮನೆಮಾತಾಗಿದ್ದಾರೆ.

ಇದು ಭಾರತದ ಫುಟ್ಬಾಲ್ ಇತಿಹಾಸದಲ್ಲೇ ಸುವಣರ್ಾಕ್ಷರಗಳಲ್ಲಿ ಬರೆದಿಡತಕ್ಕಂತಹ ಗೆಲುವು. ಇಂತಹುದೊಂದು ರೋಚಕ ಗೆಲುವನ್ನು ನೋಡಿ ಸುಮಾರು ಕಾಲು ಶತಮಾನವೇ ಸಂದು ಹೋಗಿತ್ತೇನೋ? 1970ರ ಏಷಿಯಾಡ್ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು. ಅದು ಭಾರತ ಫುಟ್ಬಾಲ್ನ ಮೊದಲ ಗೆಲುವು. ನಂತರವೂ ಅನೇಕ ಗೆಲುವುಗಳನ್ನು ದಾಖಲಿಸಿದೆಯಾದರೂ ಯಾವ ಗೆಲುವೂ ಕೂಡ ಅಷ್ಟು ರೊಚಕವಲ್ಲ. 2007ರಲ್ಲಿ ನೆಹರೂ ಕಪ್ ಅನ್ನು ಭಾರತ ಗೆಲ್ಲುತ್ತದೆಂದು ಯಾರೂ ಭಾವಿಸಿರಲಿಲ್ಲ. ನಮ್ಮವರು ತಮ್ಮ ನೈಜ ಆಟ ಪ್ರದರ್ಶಿಸಿದರು ಅಷ್ಟೆ. 2007ರ ನೆಹರೂ ಕಪ್ ನಮ್ಮದಾಯಿತು. ಭಾರತದಲ್ಲಿ ಫುಟ್ಬಾಲ್ ಬಗ್ಗೆ ಮೊದಲ ಬಾರಿಗೆ ಗುಸುಗುಸು ಕೇಳ ಹತ್ತಿತು. ಆದರೆ ಈ ಬಾರಿಯ ಆಟವೇ ಬೇರೆ ರೀತಿಯದ್ದು. ಹೋದ ಬರಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಆದ್ದರಿಂದ ಯಾವುದೇ ಒತ್ತಡಗಳೂ ಇರಲಿಲ್ಲ. ಆದರೆ ಈ ಬಾರಿ ಗೆಲುವಿನ ನಿರೀಕ್ಷಗಳಿದ್ದವು. ಅದು ಮೀಡಿಯಾದಲ್ಲಿರಬಹುದು, ಸಾಮಾನ್ಯ ಜನರಲ್ಲಿರಬಹುದು, ವ್ಯವಸ್ಥೆಯಲ್ಲಿರಬಹುದು, ಕೋಚ್ ಇರಲಿ ಸ್ವತಃ ಆಟಗಾರರಲ್ಲೇ ಇತ್ತು. ಹೋದ ಬಾರಿ ಫೈನಲ್ಸ್ನಲ್ಲಿ ಮಣಿಸಿದ್ದ ಸಿರಿಯಾನೇ ಮತ್ತೆ ಫೈನಲ್ನಲ್ಲಿ ಎದುರಾಗಿತ್ತು. ಅವರಿಗಿದು ಸೇಡು ತೀರಿಸಿಕೊಳ್ಳಲು ಸದಾವಕಾಶವಾಗಿದ್ದರೆ, ಭಾರತಕ್ಕೆ ತನ್ನ ಮಾನ ಉಳಿಸಿಕೊಳ್ಳುವ ತವಕ. ಡಿಫೆಂಡಿಂಗ್ ಛಾಂಪಿಯನ್ನರ ಮೇಲಿರುವ ಒತ್ತಡವದು. ಒಂದೊಮ್ಮೆ ನಮ್ಮವರು ಸೋತುಬಿಟ್ಟಿದ್ದರೆ ನಮ್ಮ ಕ್ರೀಡಾ ವ್ಯವಸ್ಥೆ ಫುಟ್ಬಾಲಿನ ಮೇಲೆ ತೀರ ಇತ್ತೀಚೆಗೆ ಮಾಡಿರುವ ಚಿಲ್ಲರೆ ಖಚರ್ಿನ ಔಚಿತ್ಯವನ್ನೂ ಪ್ರಶ್ನಿಸುತ್ತಿತ್ತು. ಭಾರತದ ಫುಟ್ಬಾಲ್ ಮತ್ತೆ ನಗೆಪಾಟಲಿಗೀಡಾಗುತ್ತಿತ್ತು. ಆದರೆ ನಮ್ಮವರು ಗೆದ್ದರು. ಈಗ ಸೀನೇ ಬದಲಾಗಿ ಹೋಗಿದೆ. ಎಲ್ಲರೂ ಬೈಚುಂಗ್ನನ್ನು ಹಾಡಿ ಹೊಗಳುವವರೇ. ಎಲ್ಲರೂ ಗೆದ್ದೆತ್ತಿನ ಬಾಲಗಳು...ಆದರೆ ದುನಿಯಾ ಇರೋದೆ ಹೀಗೆ. ಇದು ವಾಸ್ತವ.

ಎರಡು ವರ್ಷಗಳಿಗೊಮ್ಮೆ ನಡೆಯುವ ನೆಹರೂ ಕಪ್ ಫುಟ್ಬಾಲ್ ಟೋನರ್ಿಯನ್ನು ಭಾರತವೇ ನಡೆಸಿಕೊಡುತ್ತದೆ. ಇಂದು ಇದು ಫುಟ್ಬಾಲ್ ಪ್ರಪಂಚದ ಪ್ರಮುಖ ಟೋನರ್ಿಯಾಗಿದೆ. 2007ರಲ್ಲಿ ಭಾರತ ನೆಹರೂ ಕಪ್ ಅನ್ನು ತನ್ನದಾಗಿಸಿಕೊಂಡಾಗ ಇಡಿಯ ಭಾರತಕ್ಕೆ ಅದೇನೋ ಪುಳಕ. ಅಂತೂ ಫುಟ್ಬಾಲ್ನಲ್ಲೂ ನಮ್ಮವರು ಬೆಳಗುತ್ತಿದ್ದಾರಲ್ಲ ಅನ್ನುವ ಸಂಭ್ರಮ. ಆಗ ನಮ್ಮ ಬಹುಪಾಲು ಮಂದಿಗೆ ಅಸಲು ಫುಟ್ಬಾಲ್ ಅಂದರೆ ಏನೆಂಬುದೇ ಗೊತ್ತಿರಲಿಲ್ಲ. ನಾಲ್ಕು ವರ್ಷಗಳಿಗೊಮ್ಮೆ ಫೀಫಾ ವಲ್ರ್ಡಕಪ್ ನಡೆಯುತ್ತೆ ವಿಶ್ವವೆಲ್ಲಾ ಗುಲ್ಲಾಗುತ್ತೆ, ಈ ಆಟದಲ್ಲಿ ಸಥರನ್ ಅಮೆರಿಕನ್ ದೇಶಗಳಾದ ಬ್ರೆಜಿಲ್, ಚಿಲಿ, ಅರ್ಜೆಂಟಿನ ಮತ್ತು ಇಟಲಿ ದೇಶಗಳದೇ ಪಾರುಪತ್ತೆ, ಭಾರತ ಅಸಲು ಈ ವಿಶ್ವಕಪ್ಗೆ ಕ್ವಾಲಿಫೈ ಕೂಡ ಆಗುವುದಿಲ್ಲ, ಇಲ್ಲಿ ಅದೇನಿದ್ದರು ಕ್ರಿಕೆಟ್ನಲ್ಲಿ ಹಾಲ್ಯಾಂಡ್ ಇದ್ದ ಹಾಗೆ ಎಂಬಷ್ಟೇ ಗೊತ್ತಿತ್ತು. ಇಂದಿಗೂ ಇದರ ಬಹುಪಾಲು ನಿಜವೂ ಕೂಡ.

ಆದರೆ ಭಾರತದ ಕೆಲವು ಪ್ರಾಂತ್ಯಗಳಲ್ಲಿ ಮೊದಲಿಂದಲೂ ಕೊಂಚ ಫುಟ್ಬಾಲ್ ಮೇನಿಯಾ ಇದ್ದದ್ದೇ. ಈ ಕಮ್ಯೂನಿಸ್ಟರಿಗೂ ಫುಟ್ಬಾಲ್ಗೂ ಅದೇನು ಸಂಬಂಧವೋ ನಾ ಕಾಣೆ, ಇವರು ಬಲವಾಗಿರುವ ಕೇರಳ, ಪಶ್ಚಿಮ ಬಂಗಾಳ, ತ್ರಿಪುರಗಳಲ್ಲಿ ಕ್ರಿಕೆಟ್ ಮೇನಿಯಾ ಬದಲಾಗಿ ಫುಟ್ಬಾಲ್ ಮೇನಿಯಾ ಇದೆ. ಈ ಪ್ರದೇಶಗಳಲ್ಲದೆ ಪೂರ್ವೂತ್ತರ ಭಾರತದ ಸಪ್ತ ಸೋದರಿಯರ ನಾಡು ಮತ್ತು ಸಿಕ್ಕಿಂ, ಅರುಣಾಚಲಗಳಲ್ಲಿ ಫುಟ್ಬಾಲ್ಗೆ ಹೆಚ್ಚೆಚ್ಚು ಜನ ಆಕರ್ಷಿತರಾಗಿದ್ದಾರೆ. ಇವತ್ತಿನ ಭಾರತದ ಫುಟ್ಬಾಲ್ ತಂಡವನ್ನು ಗಮನಿಸಿದರೂ ಇದು ನಮಗೆ ಮನವರಿಕೆಯಾಗುತ್ತದೆ. ತಂಡದ ನಾಯಕ ಬೈಚುಂಗ್ ಭೂಟಿಯಾ ಸದ್ಯದ ನೂತನ ಸ್ಟಾರ್. ಈತ ಸಿಕ್ಕಿಂನವನು. ಈತ ಇಂದು ಭಾರತದ ಫುಟ್ಬಾಲ್ ಇತಿಹಾಸದ ದಂತಕಥೆಯಾಗಿದ್ದಾನೆ. ಆದರೆ...........

ಇಷ್ಟೆಲ್ಲ ಇದ್ದಾಗ್ಯೂ ಭಾರತದಲ್ಲಿ ಫುಟ್ಬಾಲ್ನೆಡೆಗೆ ಮಲತಾಯಿ ಧೋರಣೆ ಇದ್ದದ್ದೇ! ಬೈಚುಂಗ್ ಭೂಟಿಯಾ ಇಂದು ಒಂದು ದಂತಕಥೆ. ಆದರೆ ಇಂದಿಗೂ ಆತನಿಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿಲ್ಲ. ಸತತ 6 ವರ್ಷಗಳಿಂದ ಕ್ರೀಡಾ ಪುರಸ್ಕಾರಗಳಲ್ಲಿ ಒಬ್ಬನೇ ಒಬ್ಬ ಫುಟ್ಬಾಲಿಗನಿಲ್ಲ. ಅದು ಸಕರ್ಾರ ನಮ್ಮ ದೇಶದ ಫುಟ್ಬಾಲ್ಗೆ ಕೊಡುತ್ತಿರುವ ಪ್ರೋತ್ಸಾಹ. ಅದೇ ಕ್ರಿಕೆಟ್ನ ಚಿಲ್ಟೂ ಪಿಲ್ಟೂಗಳಿಗೆಲ್ಲ arjuna, ಖೇಲ್ ರತ್ನ, ಪದ್ಮ ಎಲ್ಲವೂ ಬಂದಾಗಿರುತ್ತದೆ. ಸಾನಿಯಾಗೂ ಪದ್ಮ, ಅಭಿನವ್ ಭಿಂದ್ರಾಗಂತೂ ಪದ್ಮಭೂಷಣ, ಬೈಚುಂಗ್ನಂತಹ ತಳಮಟ್ಟದ ನೈಜ ಆಟಗಾರನಿಗೆ, ಸುಬ್ರತಾ ಪಾಲ್ನಂತಹ ಕೆಚ್ಚೆದೆಯ ಕುಶಲ ಆಟಗಾರರನ್ನು ಸರ್ಕಾರ ಗುರುತಿಸುವುದೇ ಇಲ್ಲ. ಇನ್ನು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ಗೋ ದಶಕಗಳ ಕಾಲ ಪ್ರಿಯ ರಂಜನ್ ದಾಸ್ ಮುನ್ಶಿ ಅಧ್ಯಕ್ಷರಾಗಿದ್ದರು. ಆಗ ಸ್ವಲ್ಪ ಕೆಲಸವೂ ನಡಿಯಿತೆನ್ನಿ. ನಂತರ ಈಗ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ಲ ಪಟೇಲ್ ಅಧ್ಯಕ್ಷರಾಗಿದ್ದಾರೆ. ಈ ಫೆಡರೇಷನ್ ರಾಜಕೀಯದ ಅಡುಂಬೋಲವೇ ಹೊರತು ಅದು ಕ್ರೀಡಾ ಫೆಡರೇಷನ್ ಎನ್ನುವುದನ್ನು ಸಾಕಷ್ಟು ಮಂದಿ ಮರೆತುಹೋಗಿದ್ದಾರೆ. ಹಾಗಿದೆ ಅದರ ಕಾರ್ಯಕಲಾಪಗಳು. ಇದು ನಮ್ಮ ದೇಶದ ಬಹುಪಾಲು ಕ್ರೀಡಾ ಫೆಡರೇಷನ್ಗಳ ಗೋಳಾಗಿದೆ ಬಿಡಿ. ಭಾರತ ಫುಟ್ಬಾಲ್ನ ಮತ್ತೊಂದು ಪ್ರಮುಖ ಸಮಸ್ಯೆ ಪ್ರಾಯೂಜಕರದು.

ಇಂದಿನ ದಿನಮಾನಸದಲ್ಲಿ ಯಾವುದೇ ಒಂದು ಕ್ರೀಡೆಗೆ ವಾಣಿಜ್ಯದ ಬೆಂಬಲ ಅತ್ಯಗತ್ಯ. ಅದಿಲ್ಲದೆ ಆ ಕ್ರೀಡೆ ಬಧ್ರವಾಗಿ ನೆಲೆನಿಲ್ಲುವುದು ಅನುಮಾನವೇ ಸರಿ. ಎಲ್ಲ ಕಂಪೆನಿಗಳೂ ಕ್ರಿಕೆಟ್ನಲ್ಲೇ ಮುಳುಗಿರುವಾಗ ಇತ್ತ ನೋಡುವವರಾದರೂ ಯಾರು? ಸದ್ಯ ನೆಹರೂ ಕಪ್ ಅನ್ನು ಓಎನ್ಜಿಸಿ ಸಂಸ್ಥೆ ನಡೆಸಿಕೊಡುತ್ತಿದೆ. ಇದಲ್ಲದೆ ಜೀ ಸ್ಪೋಟ್ಸ ಛಾನೆಲ್ನೊಡನೆ ಪಂದ್ಯಗಳ ಟೆಲಿಕ್ಯಾಸ್ಟ್ ರೈಟ್ಸ್ನ ಒಪ್ಪಂದವೂ ಇದೆ. ಈ ವಿಜಯದ ನಂತರ ಕೋಕಾ ಕೋಲಾ ಜೂನಿಯರ್ಸ್ ಟೂನರ್ಿಯನ್ನು ಪ್ರಾಯೋಜಿಸಲು ಮುಂದೆ ಬಂದಿರುವುದು ಬರಲಿರುವ ದಿನಗಳ ಸೂಚನೆಯಂತಿದೆ. ಇನ್ನು ಸಲ್ಮಾನ್ ಖಾನ್ ನಯಾಪೈಸೆಯನ್ನೂ ತೆಗೆದುಕೊಳ್ಳದೆ ಭಾರತದ ಫುಟ್ಬಾಲ್ಗೆ ಬ್ರಾಂಡ್ ಅಂಬಾಸಿಡರ್ ಆಗಲು ಒಪ್ಪಿರುವುದು ಕೂಡ ಶುಭ ಸೂಚಕವೇ ಸರಿ. ಈ ಎಲ್ಲ ಇಲ್ಲಗಳ ನಡುವೆ ಭಾರತ ತಂಡದ ಪ್ರಮುಖ ಬಲವಾಗಿ ಕಾಣುತ್ತಿರುವುದು ನಾಯಕ ಬೈಚುಂಗ್ ಭೂಟಿಯಾ ಮತ್ತು ಕೋಚ್ ಬಾಬ್ ಹಾಗ್ಟನ್. ಬಾಬ್ ತಂಡದ ಬೆನ್ನುಲುಬಾಗಿ ದುಡಿಯುತ್ತಿದ್ದಾರೆ. ಮೊದಲ ಬಾರಿಗೆ ಭಾರತದ ಫುಟ್ಬಾಲ್ ರಂಗದಲ್ಲಿ ನಾವು ಗೆಲ್ಲಬಲ್ಲವೆಂಬ ಆತ್ಮವಿಶ್ವಾಸವನ್ನೂ, ಗೆಲ್ಲುವ ವಾತಾವರಣವನ್ನೂ ಹುಟ್ಟುಹಾಕಿರುವುದು ಮಹತ್ತರ ಸಾಧನೆಯೇ ಸರಿ. ಹಾಗೇ ಅವರು ಬರುವ ಏಷಿಯನ್ ಗೇಮ್ಸ್ನಲ್ಲೂ ತಂಡವನ್ನು ಹೀಗೆ ಮುನ್ನಡೆಸಿಬಿಟ್ಟರೆ, ಆಹಾ..ಹಾಗೇ ಬರುವ ಫೀಫಾ ವಿಶ್ವಕಪ್ನಲ್ಲಿ ಭಾರತವನ್ನು ಕ್ವಾಲಿಫೈ ಮಾಡಿಸಿ ಆಡಿಸಿಬಿಟ್ಟರೆನಾ..ಆಸೆಗಳು ನೂರಾರು.....ಬೈಚುಂಗ್ ಮತ್ತು ಬಾಬ್ ಕೇಳುತ್ತಿದ್ದಾರಾ?

ಭಾರತದ ಕ್ರೀಡಾರಂಗಕ್ಕೆ ಕ್ರಿಕೆಟ್ ಮೇನಿಯಾ ಹಿಡಿದಿರುವುದು ಸ್ಪಷ್ಟ. ಇಂದು ಭಾರತದಲ್ಲಿ ಕ್ರೀಡೆಯೆಂದರೆ ಕ್ರಿಕೆಟ್. ಕಡೆಗೆ ರಾಷ್ಟ್ರೀಯ ಆಟ ಹಾಕಿಯ ಬಗ್ಗೆಯೂ ಕ್ಯಾರೇ ಅನ್ನುವವರಿಲ್ಲ. ಅದೇನು ಈ ಆಟಗಳಲ್ಲಿ ಗೆಲುವಿನ ಬರವಿರುವುದರಿಂದ ಆಟ ಅಷ್ಟು ಪ್ಯಾಪುಲರ್ ಅಲ್ಲವೋ ಅಥವಾ ಪ್ರೋತ್ಸಾಹದ ಬರ ಗೆಲುವಿನ ಬರವಾಗಿ ಪರಿವತಿತವಾಗಿದೆಯೋ ಗೊತ್ತಿಲ್ಲ. ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ ಅನ್ನೋ ರೀತಿ ಈ ಇತರ ಆಟಗಳಿಗೆ ಗೆಲುವೂ ಇಲ್ಲ, ಪ್ರೋತ್ಸಾಹವೂ ಇಲ್ಲ. ಆದರೆ ನಿಧಾನವಾಗಿ ಇದು ಬದಲಾಗುತ್ತಿದೆ. ಭಾರತದ ಕ್ರೀಡಾಭಿಮಾನಿಗಳು ಹಾಕಿ, ಫಾಮರ್ುಲಾ 1, ಫುಟ್ಬಾಲ್ ಮತ್ತಿತರ ಟೀಂ ಇಂಡಿಯಾಗಳ ಸುತ್ತಲೂ ನೆರೆಯತೊಡಗಿದ್ದಾರೆ. ಇದಕ್ಕೆ ಪ್ರತಿಸ್ಪಂದಿಸುವಂತೆ ಅವೂ ಕೂಡ ಮಗುವಿನ ಮೊದಲ ಹೆಜ್ಜೆಗಳಂತೆ ಮೊದಮೊದಲ ಗೆಲುವುಗಳನ್ನು ದಾಖಲಿಸತೊಡಗಿವೆ. ಅಸಲಿಗೆ ಭಾರತದಂತಹ ದೇಶದ ಇಂದಿನ ದಿನಮಾನಸದಲ್ಲಿ ಆಟಗಳು ಬೆಳೆಯುವುದೇ ಹೀಗೆ. ಈ ಬೆಳವಣಿಗೆಗೆ ಮೀಡಿಯಾದ ಗೊಬ್ಬರ, ಮಸಾಲೆ ಜೊತೆಗೆ ಸಕರ್ಾರದ ನೀರೂ ಹರಿದುಬಿಟ್ಟರೆ ಅಲ್ಲೊಂದು ಮಹಾವೃಕ್ಷ ಕಾಣಸಿಗುತ್ತದೆ. ಭಾರತದಲ್ಲಿ ಇಂದು ಈ ಪ್ರಾಸೆಸ್ ಶುರುವಾಗಿದೆ ಅಂತಲೇ ಹೇಳಬಹುದು. ಮೊನ್ನೆ ಚೆಂಡನ್ನು ಬ್ಯಟಿನ ಬದಲಿಗೆ ಕಾಲಲ್ಲಿ ಒದೆಯುತ್ತಿದ್ದ ಹನ್ನೊಂದು ಆಟಗಾರರ ಸುತ್ತಲೂ ದೇಶವೇ ನೆರೆದು ಹುರಿದುಂಬಿಸಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆ.

ದ್ರಾವಿಡ್ ಪುನರಾಗಮನ

ಹೌದು, ಭಾರತದ ಅಂತರಾಷ್ಟ್ರೀಯ ಏಕದಿನ ತಂಡದಲ್ಲಿ ದ್ರಾವಿಡ್ ಮರಳಿ ಸ್ಥಾನ ಪಡೆದಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಶ್ರೀಲಂಕಾದ ತ್ರಿಕೋಣ ಸರಣಿ ಮತ್ತು ದಕ್ಷಿಣಾಫ್ರಿಕಾದಲ್ಲಿ ನಡೆಯಲಿರುವ ಛಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳಿಗೆ ಮೊನ್ನೆ ಪ್ರಕಟಗೊಂಡ ತಂಡದ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಇದರೊಮದಿಗೆ ರಾಹುಲ್ ದ್ರಾವಿಡ್ರ ಎರಡು ವರ್ಷಗಳ ವನವಾಸ ಕೊನೆಗೊಂಡಂತಾಗಿದೆ. ಅವರು ಕಡೆಯ ಬಾರಿ ಏಕದಿನ ಪಂದ್ಯ ಆಡಿದ್ದು 2007ರಲ್ಲಿ. ಆಗ ಕೆಲ ತಿಂಗಳುಗಳ ಕಾಲ ಅವರು ಫಾಮರ್್ನಲ್ಲಿರಲಿಲ್ಲ. ಅವರು ಆಗ ಸತತವಾಗಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಾ ಬಂದರು. ಅಷ್ಟರಲ್ಲಿ ಇಡಯ ಕ್ರಿಕೆಟ್ಟನ್ನು ಟಿ-20 ಎಂಬ ಮಹಮ್ಮಾರಿ ಆವರಿಸಿಕೊಂಡು ಬಿಟ್ಟಿತು. ದ್ರಾವಿಡ್ ಒಬ್ಬ ಅತ್ಯುತ್ತಮ ಟೆಸ್ಟ್ ಆಟಗಾರ. ಅವರ ಆಟವನ್ನು ಗಮನಿಸಿದ ಯಾರಿಗಾದರೂ ಸರಿ ಅವರು 20-20 ಫಾರ್ಮಾಟ್ಗೆ ಹೊಂದಿಕೊಳ್ಳುವುದು ಕನಸಿನ ಮಾತೆಂಬುದು ತಿಳಿದಿತ್ತು. ನಿರೀಕ್ಷಿಸಿದಂತೆಯೇ ಅವರು ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಇದೆಲ್ಲವೂ ಸೇರಿ ಅವರನ್ನು ಎರಡು ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರವೇ ಉಳಿಸಿತ್ತು. ಆದರೆ ಐಪಿಎಲ್ನ ಎರಡನೇ ಆವೃತ್ತಿಯ ವೇಳೆಗೆ ದೃಆವಿಡ್ ತಮ್ಮ ಫಾರ್ಮ್ನಲ್ಲಿ ಚೇತರಿಕೆ ಕಂಡುಕೊಂಡರು. ದಕ್ಷಿಣಾಫ್ರಿಕದಲ್ಲಿ ನಡೆದ ಐಪಿಎಲ್ನ ಎರಡನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅಂದಿನಿಂದಲೇ ಅಂತರಾಷ್ಟರೀಯ ಕ್ರಿಕೆಟ್ಗೆ ಅವರ ಪುನರಾಗಮನವನ್ನು ನಿರೀಕ್ಷಿಸಲಾಗಿತ್ತು. ಅದು ಇಮದು ಸಾಕಾರಗೊಂಡಿದೆ ಅಷ್ಟೆ. ದ್ರಾವಿಡ್ ಇದಕ್ಕೆ ಪ್ರತಿಕ್ರಿಯಿಸುತ್ತಾ ಆಯ್ಕೆದಾರರು ತನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲವೆಂದೂ ತನ್ನ ಅತ್ಯುತ್ತಮ ಆಟವನ್ನು ಆಡಲು ಪ್ರಯತ್ನಿಸುತ್ತೇನೆಂದೂ ಹೇಳಿದ್ದಾರೆ. ಅವರು ಅತ್ಯುತ್ತಮ ಆಟ ಪ್ರದರ್ಶಿಸಿ ತಮ್ಮ ಟೀಕಾಕಾರರೆಲ್ಲರಿಗೂ ತಮ್ಮ ಬೈಅಟಿನ ಮೂಲಕವೇ ಉತ್ತರಿಸಬೇಕೆಂಬುದು ನಮ್ಮೆಲ್ಲರ ಹಾರೈಕೆ. ಅವರಿಗೊಂದು ಗುಡ್ ಲಕ್!

ಸದ್ಯ ದ್ರಾವಿಡ್ಗೆ 36 ವರ್ಷ ವಯಸ್ಸು. ಅವರಲ್ಲಿ ಇನ್ನು ಎಷ್ಟು ವರ್ಷದ ಕ್ರಿಕೆಟ್ ಇದೆ? ತಿಳಿದಿಲ್ಲ. ಅವರು ಇದೇ ಫಾರ್ಮ್ ಅನ್ನು ಕಾಪಾಡಿಕೊಂಡರೆ ಸಚಿನ್ ಜೊತೆ ಭಾರತದಲ್ಲಿ ನಡೆಯುವ 2011ರ ಆ ವಿಶ್ವಕಪ್ ಅನ್ನು ಆಡುವುದರಲ್ಲಿ ಅನುಮಾನವಿಲ್ಲ. ಅದು ಭಾರತ ತಂಡದ ಬಹು ಮಂದಿ ಹಿರಿಯ ಆಟಗಾರರಿಗೆ ಕಟ್ಟಕಡೆಯ ವಿಶ್ವಕಪ್ ಆಗಲಿದೆ. ದ್ರಾವಿಡ್ ಅವರಲ್ಲಿ ಒಬ್ಬರಾ? ಕಾಲವೇ ಉತ್ತರಿಸಬೇಕು. ಏನೇ ಆಗಲೀ ಮರಳಿ ಬಂದ ಭಾರತದ ಗೋಡೆ, ಕನರ್ಾಟಕದ ಕುವರ ರಾಹುಲ್ ದ್ರಾವಿಡ್ರಿಗೆ ನಮ್ಮ ಕಡೆಯಿಂದ ಒಂದು ಆಲ್ ದಿ ಬೆಸ್ಟ್ ಶೂಭಾಕಾಂಕ್ಷೆಗಳಿರಲಿ. ಏನಂತೀರಿ?

ಡೆಲ್ಲಿ ರಣಜಿಲ್ಲಿ ವೀರು ಬಿರುಗಾಳಿ

ಕಳೆದ ಒಂದು ವಾರದಿಂದ ವೀರೇಂದ್ರ ಸೆಹ್ವಾಗ್ರದೇ ಸುದ್ದಿ. ವೀರು ದೆಹಲೀ ರಣಜಿ ತಂಡದ ನಾಯಕನಾಗಿರುವುದು, ಈಗ ಆತ ದೆಹಲಿ ತಂಡವನ್ನು ತ್ಯಜಿಸಿ ಹರ್ಯಾಣ ರಣಜಿ ತಂಡಕ್ಕೆ ಹೋಗಿ ಸೇರುವುದಾಗಿ ಬೆದರಿಸಿರುವುದು, ತಂಡದ ಸುಮಾರು 8-9 ಆಟಗಾರರು ವೀರೂನನ್ನು ಹಿಂಬಾಲಿಸಲು ತಯಾರಾಗಿ ನಿಂತಿರುವುದು - ಬರೀ ಇದರದೇ ಸುದ್ದಿ. ಇದೆಲ್ಲಾ ನೋಡುತ್ತಲಿದ್ದರೆ, ದೆಹಲೀ ಕ್ರಿಕೆಟ್ ಸಂಕಷ್ಟದಲ್ಲಿರುವುದಂತೂ ಖಚಿತ. ಹಾಗೆ ನೋಡಿದರೆ ದೆಹಲೀ ಕ್ರಿಕೆಟ್ ಬಹುದಿನಗಳಿಂದ ಸಮಸ್ಯೆಯಲ್ಲಿದೆ. ಏನು ಅಂಥಾ ಸಮಸ್ಯೆ? - ಮಾಮೂಲೇ - ರಾಜಕೀಯ, ಭ್ರಷ್ಟಾಚಾರ ಮತ್ತು ತಂಡದ ಕಳಪೆ ನಿರ್ವಹಣೆ. ಇವೆಲ್ಲಾ ದೆಹಲೀ ರಣಜಿ ತಂಡದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.


ಹೋದ ವರ್ಷದ ರಣಜಿ ಪಂದ್ಯಾವಳಿಯನ್ನು ದೆಹಲೀ ತಂಡ ಗೆದ್ದುಕೊಂಡಿತ್ತು. ಆದರೆ ಈ ಬಾರಿ ಅದೇ ತಂಡ ನಾಕೌಟ್ ಸುತ್ತಿಗೂ ಕೂಡ ಅರ್ಹತೆ ಗಳಿಸಿಕೊಳ್ಳಲಾಗದೆ, ಅತ್ಯಂತ ಹೀನಾಯ ಮತ್ತು ಅವಮಾನಕಾರಿ ಸೋಲು ಕಂಡಿತು. ಹೋಗಲೀ ಸರಿಯಾದ ಆಟಗಾರರರಿಲ್ಲವೇ ಅಂದರೆ, ಅದೂ ಇದೆ. ಭಾರತ ಕಂಡ ಅತ್ಯಂತ ಸ್ಫೋಠಕ ಓಪನರ್ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಇವರಲ್ಲದೆ ಭಾರತ ಅಂತರಾಷ್ಟ್ರೀಯ ತಂಡದಲ್ಲಿ ಪ್ರಜ್ವಲವಾಗಿ ಬೆಳಗುತ್ತಿರುವ ಮತ್ತೊಬ್ಬ ಸ್ಫೋಠಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಮತ್ತು ಅತ್ಯುತ್ತಮ ಬೌಲರ್ ಈಶಾಂತ್ ಶರ್ಮರಲ್ಲದೆ ಭಾರತವನ್ನು ಬಹುದಿನಗಳ ಕಾಲ ಪ್ರತಿನಿಧಿಸಿದ ಆಶಿಷ್ ನೆಹ್ರಾ ಇದ್ದಾರೆ. ಹೀಗೆ ದೆಹಲೀ ತಂಡದಲ್ಲಿ ಅತಿ ಹೆಚ್ಚು ನಾಲ್ಕು ಅಂತರಾಷ್ಟ್ರೀಯ ಆಟಗಾರರರಿದ್ದಾರೆ. ಆದರೂ ಸೋತರು ಯಾಕೆ? ಈಗ ಅದೇ ಪ್ರಶ್ನೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ನಾಯಕ ವೀರೇಂದ್ರ ಸೆಹ್ವಾಗ್ ಅದಕ್ಕೆ ಉತ್ತರವೀಯುವ ಮತ್ತು ಅದನ್ನು ಸರಿಪಡಿಸುವ ಪ್ರಯತ್ನದಲ್ಲಿದ್ದಾರೆ ಅಂತಲೇ ಹೇಳಬಹುದು.

ಅಸಲಿಗೆ ಸೆಹ್ವಾಗ್ ಹೇಳಿರುವುದಾದರೂ ಏನು? ದೆಹಲೀ ಕ್ರಿಕೆಟ್ನಲ್ಲಿ ನಡೆಯುತ್ತಿರುವ ಅಪಾರ ಭ್ರಷ್ಟಾಚಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವಲ್ಲಿ ತಂಡದ ಮ್ಯಾನೇಜರರು ಮತ್ತು ಆಡಳಿತದ ಉಸ್ತುವಾರಿ ಹೊತ್ತುಕೊಂಡಿರುವವರ ಅತೀವ ಹಸ್ತಕ್ಷೇಪವನ್ನು ಅವರು ಬಯಲಿಗೆಳೆದಿದ್ದಾರೆ. ರಣಜಿಗಿಂತಲೂ ಹೆಚ್ಚಾಗಿ ಅಮಡರ್ 16 ಮತ್ತು ಅಂಡರ್ 19 ತಂಡಗಳ ಆಯ್ಕೆ ಅಪಾರ ಪ್ರಮಾಣದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ನಡೆಯುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪ್ರತಿ ಬಾರಿ ಒಂದಿಲ್ಲೊಂದು ಕಾರಣ ನೀಡಿ ಎರಡು ಮೂರು ಅಟಗಾರರನ್ನು ಹೀಗೆ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಇಲ್ಲಿ ಪ್ರತಿಭೆಗೆ ಬೆಲೆ ಇಲ್ಲದಂತಾಗಿದೆ. ಯಾರು ದೊಡ್ಡವರ ಬಳಿ ರೆಕಮೆಂಡೇಷನ್ ತರುತ್ತಾರೋ ಅಥವ
ಯಾರ ಬಳಿ ಹೆಚ್ಚು ದುಡ್ಡಿದಡಯೋ ಅವರು ಸರಾಗವಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದವರನೇಕರು ತಂಡದಲ್ಲಿ ಸ್ಥಾನ ಪಡೆಯುವುದೇ ಇಲ್ಲ. ಈ ಎಲ್ಲ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸದಿದ್ದರೆ, ತಾವು ದೆಹಲೀ ತಂಡವನ್ನು ತ್ಯಜಿಸಿ ಹರಿಯಾಣ ತಂಡದ ಪರ ಆಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದು ಸದ್ಯ ದೆಹಲೀ ಅಷ್ಟೆ ಅಲ್ಲದೆ ರಾಷ್ಟ್ರದ ಕ್ರಿಕೆಟ್ ರಂಗದಲ್ಲೇ ಹೊಸದೊಂದು ಸಂಚಲನ ಮೂಡಿಸಿದೆ. ಭ್ರಷ್ಟ ಆಡಳಿತದ ವಿರುದ್ಧ ದಂಗೆಯೆದ್ದಿರುವ ಸೆಹ್ವಾಗ್ರ ಕ್ರಮವನ್ನು ಯಾರೂ ಕೂಡ ಸದ್ಯ ಬಹಿರಂಗವಾಗಿ ಸ್ವಾಗತಿಸುತ್ತಿಲ್ಲವಾದರೂ ವ್ಯವಸ್ಥೆಯ ವಿರುದ್ಧ ಆಕ್ರೋಶಗೊಂಡಿರುವ ಅನೇಕರು ಸೆಹ್ವಾಗ್ರನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ.

ವೀರೇಂದ್ರ ಸೆಹ್ವಾಗ್ ದೆಹಲೀ ಕ್ರಿಕೆಟ್ಗೆ ಬಹುದಿನಗಳ ನಂತರ ಸಿಕ್ಕ ಅತ್ಯಂತ ಯಶಸ್ವಿ ಸ್ಟಾರ್ ಆಟಗಾರ. ಈಗ ಸೆಹ್ವಾಗ್ರನ್ನು ಬಿಟ್ಟುಕೊಡುವುದು ದೆಹಲೀ ಕ್ರಿಕೆಟ್ಗೆ ಅತ್ಯಂತ ದುಬಾರಿಯೆನಿಸಲಿದೆ. ಬಹು ಅಂತರಾಷ್ಟ್ರೀಯ ಅಸೈನ್ಮೆಂಟುಗಳು ಇರುವ ಕಾರಣ ಸೆಹ್ವಗ್ ಅಷ್ಟಾಗಿ ರಣಜಿ ಕ್ರಿಕೆಟ್ ಆಡದೇ ಇರಬಹುದು. ಆದರೆ ಸೆಹ್ವಾಗ್ ದೆಹಲೀ ತಂಡದ ಹಿಂದಿನ ಮುಖ್ಯ ಇನ್ಸ್ಪಿರೇಷನ್. ಸೆಹ್ವಗ್ ಇಲ್ಲದ ದೆಹಲೀ ತಂಡ ಅತ್ಯಮತ ನೀರಸವೂ, ಕಳಪೆಯೂ ಆಗುತ್ತದೆ. ಇದಲ್ಲದೆ ತಂಡದ ಇತರೆ ಅಂತರಾಷ್ಟ್ರೀಯ ಆಟಗಾರರಾದ ಆಶಿಷ್ ನೆಹ್ರಾ, ಇಶಾಂತ್ ಶರ್ಮ ಮತ್ತು ಗೌತಮ್ ಗಂಭೀರ್ ಅವರೆಲ್ಲರೂ ತಾವು ಸೆಹ್ವಾಗ್ನ ಹಿಂದೆ ಇರುವುದಾಗಿ, ಆತನ ಹೋರಾಟಕ್ಕೆ ತಮ್ಮ ಬೆಂಬಲವಿರುವುದಾಗಿಯೂ ಘೋಷಿಸಿದ್ದಾರೆ. ಇದಲ್ಲದೆ ಒಂದೊಮ್ಮೆ ಸೆಹ್ವಾಗ್ ದೆಹಲೀ ತಂಡ ಬಿಟ್ಟು, ಹರ್ಯಾಣ ತಂಡವನ್ನು ಆಶ್ರಯಿಸಲು ನಿಶ್ಚಯಿಸಿದರೆ ತಾವೂ ಕೂಡ ಸೆಹ್ವಾಗ್ನನ್ನು ಹಿಂಬಾಲಿಸುವುದಾಗಿ ಘೋಷಿಸಿದ್ದಾರೆ. ಸದ್ಯ ದೆಹಲಿ ತಂಡದ ಮೂರು ದಿನಗಳ ತರಬೇತಿ ಶಿಬಿರ ನಡೆಯುತ್ತಿದೆ. ಈ ಶಿಬಿರಕ್ಕೆ 15 ಆಟಗಾರರಲ್ಲಿ 9 ಮಂದಿ ಗೈರಾಗಿದ್ದಾರೆ. ಸೆಹ್ವಾಗ್ ಸದ್ಯ ಭುಜದ ಗಾಯಕ್ಕೆ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲದೆ ಮೇಲೆ ಹೆಸರಿಸಿದ ಯಾವುದೇ ಆಟಗಾರರೂ ಈ ತರಬೇತಿ ಶಿಬಿರಕ್ಕೆ ಹಾಜರಾಗಿಲ್ಲ. ಇದು ಆಟಗಾರರು ಒಗ್ಗಟ್ಟಾಗಿರುವುದು ಮತ್ತು ಅವರ ಧೃಢ ನಿರ್ಧಾರವನ್ನು ತೋರಿಸುತ್ತದೆ. ಇಧೇ ಸಮಯದಲ್ಲಿ ದೆಹಲೀ ಕ್ರಿಕೆಟ್ ಅಸೋಸಿಯೇಷನ್ನ ಉಪಾಧ್ಯಕ್ಷ ಭಾರತದ ಮಾಜೀ ಆಟಗಾರ ಚೇತನ್ ಛೌಹಾಣ್ ಸೆಹ್ವಾಗ್ರೊಂದಿಗೆ ಏಕೀಭವಿಸಿದ್ದಾರೆ. ಖಾಸಗೀ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಸೆಹ್ವಾಗ್ ಅವರು ಮಾಡಿರುವ ಎಲ್ಲ ಆರೋಪಗಳೂ ವಾಸ್ತವವೆಂದೂ ಅವರ ಹೋರಾಟಕ್ಕೆ ತಮ್ಮ ಬೆಂಬಲವಿರುವುದಾಗಿಯೂ ಹೇಳಿದ್ದಾರೆ. ಸ್ವತಃ ಉಪಾಧ್ಯಕ್ಷರಿಂದ ಬಂದ ಈ ಹೇಳಿಕೆ ಸೆಹ್ವಾಗ್ ಮತ್ತು ಸಂಗಡಿಗರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದಕ್ಕೆ ದೆಹಲೀ ಕ್ರಿಕೆಟ್ ಆಡಳಿತ ಹೇಗೆ ಪ್ರತಿಕ್ರಿಯಿಸಿದೆ? ಅವರ ಪ್ರಕಾರ ಸೆಹ್ವಾಗ್ ಮಾಡುತ್ತಿರುವುದು ಬರಿಯ ಪ್ರೆಷರ್ ಟ್ಯಾಕ್ಟಿಕ್ಸು ಅಷ್ಟೆ. ಅವರಿಗೆ ಅವರ ಹುಡುಗರಾದ ಮಾನ್ಯಂಕ್ ತೆಹ್ಲಾನ್ ಮತ್ತು ಪ್ರದೀಪ್ ಸಾಂಗ್ವಾನ್ರನ್ನು ಕೂಡಲೇ ತಂಡಕ್ಕೆ ಸೇರಿಸಬೇಕಿದೆ. ಸದ್ಯ ಅದು ಆಗದೇ ಇರುವುದರಿಂದ ಸೆಹ್ವಾಗ್ ಹೀಗೆ ಬೆದರಿಕೆಯೊಡ್ಡುತ್ತಿದ್ದಾರೆ. ಇದಲ್ಲದೆ ಅವರು ಮತ್ತೊಂದು ಕಡೆ ದೆಹಲೀ ಕ್ರಿಕೆಟ್ ಅನ್ನುವುದು ಒಂದು ಕುಟುಂಬವಿದ್ದಂತೆ, ಏನೇ ಸಮಸ್ಯೆ ಬಂದರೂ ನಾವು ನಾವೇ ಬಗೆಹರಿಸಿಕೊಳ್ಲಬೇಕೇ ಹೊರತು ಅದನ್ನು ನೆರೆಹೊರೆಯವರಿಗೆ ತಗುಲಿಸಬಾರದು ಎಂದು ಹೇಳುತ್ತಿದ್ದಾರೆ. ಇದು ಯಾವುದೇ ಆಡಳಿತ ವ್ಯವಸ್ಥೆಯ ರೆಡಿಮೆಡ್ ಹೇಳಿಕೆ. ಇಲ್ಲ ದೆಹಲಿ ಕ್ರಿಕೆಟ್ ಆಡಳಿತ ಮಾಡುತ್ತಿರುವುದೂ ಅದೇ. ಅಸಲಿಗೆ ಅಲ್ಲಿ ನಡೆಯುತ್ತಿರುವುದು ಶುದ್ಧ ರಾಜಕೀಯ ಮತ್ತು ಸಣ್ಣತನ. ಆಡಳಿತದ ವಿರುದ್ಧ ಬಂಡೆದ್ದ ಆಟಗಾರರಿಗೆ ಉಪಾಧ್ಯಕ್ಷರ ಬೆಂಬಲ! ಅಲ್ಲಿಗೆ ಅಧ್ಯಕ್ಷರ ಪೀಠಕ್ಕೆ ಕುತ್ತು ಬಂತು ಅಂತಲೇ ಅರ್ಥ.
ದೆಹಲಿಯ ಕ್ರಿಕೆಟ್ ಅನ್ನು ಕಳೆದ ಸರಿಸುಮಾರು ಒಂದು ದಶಕದಿಂದ ಆಳುತ್ತಿರುವುದು ಸದ್ಯ ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ. ಅವರು ಕಳೆದ ಸುಮಾರು ಒಂದು ದಶಕದಿಂದ ದೆಹಲೀ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷರಾಗಿದ್ದಾರೆ. ಸಮಸ್ಯೆಯಿರುವುದು ಇವರದ್ದಾ, ಇಲ್ಲ ಅವರು ಬ್ಯುಸಿಯಾಗಿದ್ದಾಗ ಅವರ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವವರದ್ದಾ? ಅದು ಇನ್ನೂ ತಿಳಿಯಬೇಕಿದೆ. ಸದ್ಯ ಸೆಹ್ವಗ್ ಮತ್ತು ಸಂಗಡಿಗ ಆಟಗಾರರು ತಮ್ಮ ನಿರ್ಧಾರವನ್ನು ಕೆಲ ದಿನಗಳ ಕಾಲ ತಡೆಹಿಡಿದಿದ್ದಾರೆ. ಸದ್ಯ ಅರುಣ್ ಜೇಟ್ಲಿ ಬಿಜೆಪಿಯ ಚಿಂತನ್ ಬೈಠಕ್ನಲ್ಲಿ ಪಾಲ್ಗೊಳ್ಲಲು ಶಿಮ್ಲಾಗೆ ತೆರಳಿದ್ದಾರೆ. ಅವರು ಹಿತುರಿಗಿದ ತಕ್ಷಣವೇ ಸೆಹ್ವಾಗ್ ಮತ್ತು ಅವರ ನಡುವಿನ ಭೇಟಿಯನ್ನು ಆಯೋಜಿಸಲಾಗಿದೆ. ಅರುಣ್ ಜೇಟ್ಲಿ ಆಗಲೇ ಸೆಹ್ವಾಗ್ರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ್ದಾರೆಂಬ ಸುದ್ದಿಗಳಿವೆ. ಬಹುಷಃ ಆಗಸ್ಟ್ 22 ರಂದು ನಡೆಯಲಿರುವ ಆ ಭೇಟಿಯ ನಂತರ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ಸೆಹ್ವಾಗ್ ಘೋಷಿಸಿದ್ದಾರೆ.

ಆಟಗಾರರಿಲ್ಲದೇ ಆಡಳಿತಕ್ಕೆ, ಆಡಳಿತ ನಡೆಸಲು ಯಾವ ಕ್ರಿಕೆಟ್ಟೂ ಇರುವುದಿಲ್ಲ. ಅದನ್ನು ಮನಗಂಡು ದೆಹಲೀ ಕ್ರಿಕೆಟ್ ಆಡಳಿತ ಆಟಗಾರರ ಬೇಡಿಕೆಗಳಿಗೆ ತಲೆಬಾಗುತ್ತದಾ? ಊಹಿಸುವುದು ಕಷ್ಟ. ಈ ಆಡಳಿತ ವ್ಯವಸ್ಥೆಯಿದೆಯಲ್ಲ ಅದೊಮಥರಾ ಸೊಕ್ಕಿದ ಆನೆ ಇದ್ದ ಹಗೆ ಅದನ್ನು ಪಳಗಿಸುವುದು ತೀರ ಕಷ್ಟ. ಭಾರತ ಕ್ರೀಡಾರಂಗದಲ್ಲಿ ಈ ಹಿಮದೆ ಇಂಥ ಹಲವಾರು ಪ್ರಯತ್ನಗಳನ್ನು ಮಾಡಿದ ಅತಿರಥ ಮಹಾರಥರಿದ್ದಾರೆ - ಕಪಿಲ್, ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಪ್ರಕಾಶ ಪಡುಕೋಣೆ, ಮೀರ್ ರಂಜನ್ ನೇಗಿ..., ಎಲ್ಲರೂ ಕಡೆಗೆ ಸೋಲೊಪ್ಪಿಕೊಂಡವರೇ. ಈ ಬಾರಿ ಸೆಹ್ವಾಗ್ ಗೆಲ್ಲುತ್ತಾರಾ? ಕಾದು ನೋಡಬೇಕಿದೆ.

ಲಿಟ್ಲ್ ಮಾಸ್ಟರ್ಗೆ 60!

ಮೊದಲಿಗೆ `ಲಿಟ್ಲ್ ಮಾಸ್ಟರ್' ಎಂಬ ಬಿರುದು ಸಂದಾಯವಾಗಿದ್ದು ಗವಾಸ್ಕರ್ಗೆ, ಅವರ ನಿವೃತ್ತಿಯ ನಂತರವೇ ಸಚಿನ್ ಆ ನಾಮಾಂಕಿತರಾದದ್ದು. ಆದ್ದರಿಂದ ರಿಯಲ್ `ಲಿಟ್ಲ್ ಮಾಸ್ಟರ್' ಅವರೇ - ಕ್ರಿಕೆಟ್ ಜಗತ್ತಿನ
ಜೀವಂತ ದಂತಕಥೆ ಸುನೀಲ್ ಮನೋಹರ್ ಗವಾಸ್ಕರ್ - ನಲ್ಮೆಯ `ಸನ್ನಿ!' ಹೌದು ಕ್ರಿಕೆಟ್ ಜಗತ್ತಿನ ಜೀವಂತ ದಂತಕಥೆ, ಜೆಂಟಲ್ಮ್ಯಾನ್ ಗವಾಸ್ಕರ್ ಇತ್ತೀಚೆಗಷ್ಟೇ ತಮ್ಮ ಅರವತ್ತನೇ ಹುಟ್ಟುಹಬ್ಬವನ್ನು ಸರಳವಾಗಿ ಪುಟ್ಪರ್ತಿಯಲ್ಲಿ ಆಚರಿಸಿಕೊಂಡಿದ್ದಾರೆ. ಅವರು ಕ್ರಿಕೆಟ್ಟಿನಲ್ಲಂತೆ ತಮ್ಮ ಜೀವನದಲ್ಲೂ ಸೆಂಚುರಿ ಬಾರಿಸಲೆಂಬುದು ನಮ್ಮೆಲ್ಲರ ಆಶಯ. ಆ ಉತ್ಸಾಹ ಜೀವನ್ಮುಖತೆ ಮತ್ತು ಆರೋಗ್ಯ ಅವರಲ್ಲಿ ಉಕ್ಕುಕ್ಕಿ ತುಳುಕುತ್ತಿರುವುದು ನಮ್ಮನ್ನು ಆಶಾಜನಕರನ್ನಾಗಿಸಿದೆ.

ಗವಾಸ್ಕರ್ - ಬಹುಶಃ ಭಾರತ ಕಂಡ ಮೊದಲ ಸೂಪರ್ ಸ್ಟಾರ್ ಕ್ರಿಕೆಟಿಗ ಇವರೇ ಇರಬೇಕು. ಅವರು ಆ ಪಟ್ಟಕ್ಕೆ ಅರ್ಹರಾಗಿದ್ದರು, ಹಾಗಿತ್ತು ಅವರ ಆಟ. ಗವಾಸ್ಕರ್ ಜನಿಸಿದ್ದು ಮುಂಬೈನಲ್ಲಿ. ಮೊದಲಿಂದಲೂ ಅವರಿಗೆ ಕ್ರಿಕೆಟ್ ಮೇಲೆ ಎಲ್ಲಿಲ್ಲದ ಆಸಕ್ತಿ. ಅವರ ಮೊದಲ ಗುರು ಅವರ ತಾಯಿ. ಇದನ್ನು ಅವರ ಆತ್ಮಚರಿತ್ರೆಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ. ಹೀಗೆ ಕ್ರಿಕೆಟ್ ಆಡುವಾಗ ಅವರ ಅಮ್ಮನ ಮೂಗಿಗೆ ಅವರು ಮಾಡಿದ ಗಾಯ ಇನ್ನೂ ಇದೆ. ಶಾಲಾ ಕಾಲದಲ್ಲೇ ಭರತೀಯ ಶಾಲಾ ಬಾಲಕರ ಕ್ರಿಕೆಟ್ ತಂಡದ ನಾಯಕರಾಗುತ್ತಾರೆ ಗವಾಸ್ಕರ್! ಲಂಡನ್ ಸ್ಕೂಲ್ ಬಾಯ್ಸ್ ಮೇಲೆ ಅಮೋಘ ವಿಜಯ ದಾಖಲಿಸುತ್ತಾರೆ. ನಂತರ ಪ್ರಖ್ಯಾತ ಸೇಂಟ್ ಗ್ಜೇವಿಯರ್ ಕಾಲೇಜಿನ ಮೆಟ್ಟಿಲತ್ತಿದ ನಂತರ ಕಾಲೇಜು ತಂಡದಲ್ಲಿ ಸ್ಥಾನ ಪಡೆದು ಅವರ ಪ್ರತಿಭೆಯನ್ನು ಪ್ರದರ್ಶಿಸಿದರು. ನಂತರ ಮುಂಬೈ ವಿಶ್ವವಿದ್ಯಾಲಯ, ದಾದರ್ ಯೂನಿಯನ್ ತಂಡಗಳ
ಪರ ಆಡಿ ಅವರ ಆಟವನ್ನು ಹುರಿಗೊಳಿಸಿಕೊಂಡರು. ಆಗಿನ ಕ್ರಿಕೆಟ್ ನಿಪುಣರೆನಿಸಿಕೊಂಡಿದ್ದವರ ಗರಡಿಯಲ್ಲಿ ಪಳಗಿದ ಗವಾಸ್ಕಾರ್ಗೆ ಮುಂದೆ ಇದು ತನ್ನ ಕೆರಿಯರ್ನಲ್ಲಿ ಎಷ್ಟೋ ಸಹಾಯಕ್ಕೆ ಬಂತು. ಅಂತೂ-ಇಂತೂ ಬಹುನಿರೀಕ್ಷಿತವಾಗಿದ್ದ ಅವರ
ಅಂತರಾಷ್ಟ್ರೀಯ ಕ್ರಿಕೆಟ್ ಅರಂಗ್ರೇಟಂ ನಡೆದದ್ದು 1970-71 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ. ಅಂದು ಕ್ರಿಕೆಟ್ನಲ್ಲಿ ವಿಂಡೀಸ್ ಪ್ರಶ್ನಾತೀತರಾಗಿದ್ದರು. ಅವರ ಬೌಲಿಂಗ್ ದಾಳಿಗೆ ದೈತ್ಯರೇ ತತ್ತರಿಸುತ್ತಿದ್ದರು. ಇನ್ನು ಗವಾಸ್ಕರ್ಗೆ ಆಗ 22-23 ವರ್ಷ. ಹುಡುಗನಿಗೆ ಭಯ ಎಂಬುದೇ ಗೊತ್ತಿಲ್ಲ, ಸೋಲನ್ನು ಹೇಟ್ ಮಾಡುವ, ಅನಿಸಿದ್ದನ್ನು ಸಾಧಿಸುವ ಛಲವಂತ. ಆ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಹುಡುಗ ಕುದುರಿಕೊಳ್ಳುವ ಹೊತ್ತಿಗೇ ಡಕ್ ಔಟು! ಎಲ್ಲರೂ ನಗಾಡಿದರು. ಗವಾಸ್ಕರ್ ಎದೆಗುಂದಲಿಲ್ಲ. ಆ ಟೆಸ್ಟ್ನ ನಂತರದ ಎರು ಇನ್ನಿಂಗ್ಸ್ಗಳಲ್ಲೂ ಸೆಂಚುರಿ ಬಾರಿಸಿ ಪಂದ್ಯ ಭಾರತದ ಪಾಲಾಗುವಂತೆ ನೋಡಿಕೊಂಡ. ಗವಾಸ್ಕರ್ನ ಅಪ್ರತಿಮ ಆಟದಿಂದ ಭಾರತ ಮೊದಲ ಬಾರಿಗೆ ವಿಂಡೀಸ್ ನೆಲದಲ್ಲಿ ಟೆಸ್ಟ್ ಸರಣಿ ವಿಜಯ ದಾಖಲಿಸಿತು. ಗವಾಸ್ಕರ್ ಬೆಳಗಾಗುವುದರೊಳಗೆ ಮನೆಮಾತಾಗಿಬಿಟ್ಟ. ಅದೇ ವರ್ಷದ ಇಂಗ್ಲೆಂಡ್ ವಿರುದ್ಧದ ಮತ್ತೊಂದು ಐತಿಹಾಸಿಕ ಸರಣಿ ವಿಜಯದ ನಂತರ ಗವಾಸ್ಕರ್ ಮೇಲೆ ಒತ್ತಡ ಹೆಚ್ಚಾಗಿ ಅದನ್ನವರು ಸರಿದೂಗಿಸಲು ವಿಫಲರಾದರು. ನಂತರ ತಮ್ಮ ಕೆರಿಯರ್ನಲ್ಲಿ ಅನೇಕ
ಏಳು-ಬೀಳುಗಳನ್ನು ಕಂಡರೂ ಒಟ್ಟಾರೆ ಅವರ 17 ವರ್ಷಗಳ ಕ್ರಿಕೆಟಿಂಗ್ ಕೆರಿಯರ್ ಗ್ರಾಫ್ ಅತ್ಯಮೋಘ. ಅವರು ಮಾಡದ ದಾಖಲೆಗಳಿಲ್ಲ. ಟೆಸ್ಟ್ ಇತಿಹಾಸದಲ್ಲಿ 10,000 ರನ್ ಶೇಖರಿಸಿದ ವಿಶ್ವದ ಮೊದಲ ಆಟಗಾರ. ಇದಲ್ಲದೆ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು - 34 ಸೆಂಚುರಿಗಳನ್ನು ದಾಖಲಿಸಿದ ಮಹಾವೀರ. ಒಂದೇ ಎರಡೇ, ಅನೇಕ ದಾಖಲೆಗಳು. ತಲೆಗೆ ಹೆಲ್ಮೆಟ್ಟೇ ಇಲ್ಲದ ಆ ಕಾಲದಲ್ಲಿ ಇದೆಲ್ಲವೂ ದುಸ್ಸಾಧ್ಯವೆನಿಸಿತ್ತೇ ಸರಿ..ಆದರೆ ಅದೆಲ್ಲವೂ ಗವಾಸ್ಕರ್ಗೆ ಅನ್ವಯಿಸುತ್ತಿರಲಿಲ್ಲ.

ಗವಾಸ್ಕರ್ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲೊಬ್ಬ. ಅನೇಕ ಬಾರಿ ಆತ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡದ್ದಿದೆ. ಆತನ ನಾಯಕತ್ವದಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿತ್ತು. ಗವಾಸ್ಕರ್ ತನ್ನ ಟೀಮಿನಲ್ಲಿ ಗೆಲ್ಲುವ ಆರದ ಕಿಚ್ಚನ್ನು ಹಚ್ಚುತ್ತಿದ್ದ. ಆತ ಸೋಲನ್ನು ದ್ವೇಷಿಸುತ್ತಿದ್ದ. ಆತ ಅತ್ಯದ್ಭುತ ಮೋಟಿವೇಟರ್. ಆತ ಹಚ್ಚಿಸಿದ ಕಿಚ್ಚಿನಿಂದ ಆವೃತರಾದ ಆಟಗಾರರು ಕ್ರೀಡಾಂಗಣದಲ್ಲಿ ಹುಲಿಗಳಂತೆ ಹೋರಾಡುತ್ತಿದ್ದರು. ಗೆಲುವು ಅ
ಲವಟಾಯಿತು. ತಂಡ ಮೈಮರೆಯಿತು, ಗೆಲುವು ಮರೀಚಿಕೆಯಾಯಿತು, ಬಿಸಿಸಿಐ ಛಾಟಿ ಬೀಸಿತು. ಅಷ್ಟರಲ್ಲಿ ಭಾರತ ಕ್ರಿಕೆಟ್ ರಂಗದಲ್ಲಿ ಬಿರುಗಾಳಿಯೆಬ್ಬಿಸಿದ್ದನೊಬ್ಬ 23 ವರ್ಷದ ಪೋರ. ಆತನೇ ಕಪಿಲ್ ದೇವ್! ಬಿಸಿಸಿಐ ಗವಾಸ್ಕರ್ರನ್ನು ನಾಯಕತ್ವದಿಂದ ಕೆಳಗಿಳಿಸಿ ಗವಾಸ್ಕರ್ಗಿಂತಲೂ ಬಹುವರ್ಷ ಜೂನಿಯರ್ ಆಗಿದ್ದ ಕಪಿಲ್ರನ್ನು ಪದವಿಗೆ ತಂದಿತು. ಅಲ್ಲಿಂದ ಶುರುವಾಯಿತು ಮ್ಯೂಸಿಕಲ್ ಛೇರ್! ಕಪಿಲ್ನಡಿಯಲ್ಲಿ ಸೋತರೆ, ಮುಂದಿನ
ಪಂದ್ಯಕ್ಕೆ ಗವಾಸ್ಕರ್ ನಾಯಕ, ಗವಾಸ್ಕರ್ನಡಿಯಲಿ ಸೋತರೆ ಕಪಿಲ್ ನಾಯಕ! ಕಪಿಲ್ ದೇವ್ ಇದನ್ನು ನೆನಪಿಸಿಕೊಳ್ಳುತ್ತಾ - ಆಗ ತಂಡದ ಆಯ್ಕೆದಾರರೇ ನಮ್ಮ ಆಟವನ್ನೂ ಆಡುತ್ತಿದ್ದರು, ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಗವಾಸ್ಕರ್ ಮತ್ತು ಕಪಿಲ್ರ ಸ್ನೇಹಸಂಬಂಧದಲ್ಲಿ ಬಿರುಕುಗಳು ಕಾಣಿಸಿಕೊಂಡವಾದರೂ, ಅವರೆಂದೂ ಅದನ್ನು ಕೈತಪ್ಪುವ ಹಂತದವರೆಗೂ ಕೊಮಡಯ್ಯಲೇ ಇಲ್ಲ. ಮೀಡಿಯಾಗಂತೂ ಆಗ ಇದು ಸಮೃದ್ಧ ಸುದ್ದಿಮೂಲವಾಯಿತಷ್ಟೆ. ಹೀಗಿದ್ದಾಗಲೇ 1983ರ ವಿಶ್ವಕಪ್ ಬಂತು. ಗವಾಸ್ಕರ್ ಫರ್ಮನಲ್ಲಿರಲಿಲ್ಲ. ಕಪಿಲ್ ತಂಡದ ನಾಯಕರಾದರು. ಮುಂದಿನದೆಲ್ಲವೂ ಇತಿಹಾಸ. ಭಾರತ ತಂಡ ಎಲ್ಲರ ನಿರೀಕ್ಷೆಗಳನ್ನೂ ಮೀರಿ ವಿಶ್ವಕಪ್ನ ಕಿರೀಟವನ್ನು ಮುಡಿಗೇರಿಸಿಕೊಂಡು, ಭಾರತೀಯರನ್ನೆಲ್ಲರನು ಆನಂದಾಶ್ಚರ್ಯಗಳಲಿ ಮುಳುಗೇಳಿಸಿತು. ಕಪಿಲ್ ದಂತಕಥೆಯಾದರು, ಕಪಿಲ್ನ ನೂತನ ಪ್ರಭಾವಳಿಯಲ್ಲಿ ಗವಾಸ್ಕರ್ ಮಂಕಾದರೆ, ಎಂದು ಯೋಚಿಸುವಷ್ಟರಲ್ಲಿ ಗವಾಸ್ಕರ್ ಮರಳಿ ಪುಟಿದೆದ್ದರು. ತಾನೇನೆಂದು ಮತ್ತೊಮ್ಮೆ ತೊರಿಸಿಕೊಟ್ಟರು. ನಾಲ್ಕನೇ ಇನ್ನಿಂಗ್ಸ್ನಲ್ಲಿ ನಿಂತು ಘಂಟೆಗಟ್ಟಲೇ ಆಡಿ ಕೈತಪ್ಪಿಹೋಗಬಹುದಾಗಿದ್ದ ಪಂದ್ಯವನ್ನು ಡ್ರಾ ಮಾಡಿಸಲು ಹೆಣಗಿದವರು ಗವಸ್ಕರ್. ಅವರು ಪಟ್ಟಾಗಿ ನಿಂತರೆಂದರೆ ಅವರ ವಿಕೆಟ್ ಅನ್ನು ಉರುಳಿಸುವುದು ಎಂತಹ ಅರಿಭಯಂಕರ ಬೌಲರ್ಗಳಿಗೂ ದುಸ್ಸಾಧ್ಯವಾಗಿತ್ತು. 75ರ ವಿಶ್ವಕಪ್ನ ಇಂಗ್ಲೇಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ನಿಂದ ಕಡೆಯ 60ನೇ ಓವರ್ವರೆಗೂ ಕ್ರೀಸ್ನಲ್ಲುಳಿದು ಕೇವಲ 36 ರನ್ ಮಾಡಿದ್ದರು. ಬೌಲರ್ಗಳೆಲ್ಲಾ ಅಂದು ಮೈಪರಚಿಕೊಂಡಿದ್ದರು. ಈ ದಾಖಲೆ ಇಂದಿಗೂ ಗವಾಸ್ಕರ್ದೇ ಸ್ವಂತ. ಇದನ್ನು ಇನ್ನೂ ಯಾರೂ ಮುರಿಯಲಾಗಿಲ್ಲ. ಇದೇ ಗವಾಸ್ಕರ್ 1987ರ ವಿಶ್ವಕಪ್ನ ನಿರ್ಣಾಯಕ ಪಂದ್ಯವೊಂದರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಶರವೇಗದಲ್ಲಿ ಶತಕ ಸಿಡಿಸಿ ಭಾರತಕ್ಕೆ ವಿಜಯ ಮಾಲೆಯನ್ನು ತೊಡಗಿಸಿದರು. ಅದು ಗವಾಸ್ಕರ್ರ ಏಕದಿನ ಪಂದ್ಯದ ಏಕೈಕ ಶತಕ.
ಮುಂದೆ 1987ರಲ್ಲಿ 17 ವರ್ಷಗಳ ತೃಪ್ತಿಕರ ವೃತ್ತಿಜೀವನದ ನಂತರ ಗವಾಸ್ಕರ್ ನಿವೃತ್ತರಾದರು. ಗವಾ
ಸ್ಕರ್ ಒಬ್ಬ ಕ್ರಿಕೆಟಿಂಗ್ ಲೆಜೆಂಡ್. ಆದರೂ ಅವರನ್ನು ಅನೇಕ ವಿವಾದಗಳು ಬೆನ್ನತ್ತಿ ಕಾಡಿದವು. ಗವಾಸ್ಕರ್ ಮೊದಲಿಂದಲೂ ನೇರ, ನಿಷ್ಠುರಿ. ಅನ್ಯಾಯ ಸಹಿಸಿ ಮೂಕನಾಗಿರುವ ಜಾಯಮಾನದವರಲ್ಲ ಅವರು. ಅವರ ಜೊತೆ ಅವರ ಕೋಪವೂ ದಂತಕಥೆಯ ಪ್ರಮಾಣಗಳನ್ನು ಪಡೆದುಕೊಂಡಿದೆ. ಅವರಿಗೆ ಸದಾ ಮೂಗಿನ ಮೇಲೆಯೇ ಕೋಪ - ದೂರ್ವಾಸ ಮುನಿ. ಅದರ ಒಂದು ಸ್ಯಾಂಪಲ್ಲು ಇಲ್ಲಿದೆ ನೊಡಿ - 1980ರ ಆಸ್ಟ್ರೇಲಿಯಾ ಸರಣಿಯಲ್ಲಿ ಅವರು ಫಾರ್ಮ್ ಕಳಕೊಂಡಿದ್ದರು. ಆದರೆ ಮೇಲ್ಬೌರ್ನ್ ಟೆಸ್ಟ್ನಲ್ಲಿ ಉತ್ತಮವಾಗಿ ಆಡುತ್ತಿದ್ದಾಗ ಡೆನ್ನಿಸ್ ಲಿಲಿರವರ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಎಂದು ಅಂಪೈರ್ ತಪ್ಪಾಗಿ ತೀರ್ಪಿತ್ತರು. ಇದನ್ನು ಗವಾಸ್ಕರ್ ಪ್ರತಿಭಟಿಸಿದರು. ಲಿಲಿಯೂ ಸೇರಿದಂತೆ ಅನೇಕ ಆಸ್ಟ್ರೇಲಿಯನ್ ಆಟಗಾರರು ಗವಾಸ್ಕರ್ರನ್ನು ಕ್ರೀಡಾಂಗಣದಲ್ಲೇ ಹೀಯಾಳಿಸಿದರು. ಕುಪಿತಗೊಂಡ ಗವಾಸ್ಕರ್ ಸ್ಫೋಠಗೊಂಡರು. ಜೊತೆ ಆಟಗಾರ ಚೇತನ್ ಛೌಹಾಣ್ರನ್ನು ಎಳೆದುಕೊಂಡು ಪೆವಿಲಿಯನ್ನತ್ತ ಹೊರಳಿದರು. ಮ್ಯಾಚನ್ನು ಬಿಟ್ಟುಕೊಡಲು ಅವರು ನಿರ್ಧರಿಸಿದ್ದರು. ಆದರೆ ತಂಡದ ಮ್ಯಾನೇಜರ್ರ ಸಮಯೋಚಿತ ವರ್ತನೆಯಿಂದ ಇದು ತಪ್ಪಿತು. ದಟ್ ಈಸ್ ಗವಾಸ್ಕರ್! ತನಗನಿಸದ್ದನ್ನು ಮಾಡಲು ಹಿಂಜರಿಯದವ, ಆದರೆ ಅತ್ಯಂತ ಸಭ್ಯ, ಜೆಂಟಲ್ಮ್ಯಾನ್. ವೃತ್ತಿಪರತೆ ಅವರ ರಕ್ತಗಂಟಿದ ಗುಣ. ಅವರು ತಮ್ಮ ಕಡೆಯ ಪಂದ್ಯದವರೆಗೂ ಅಷ್ಟೆ, ಅವರು ಫೀಲ್ಡಿಗಿಳಿಯುವ ಮೊದಲು, 15 ನಿಮಿಷಗಳು ತಮ್ಮ ಮತಿಯೆನ್ನೆಲ್ಲವನೂ ಆಟದ ಮೇಲೆ ಕೇಂದ್ರೀಕರಿಸುತ್ತಿದ್ದರು. ಆಗ ಅವರನ್ನು ಯಾರೂ ಸಹ ಮಾತನಾಡಿಸುತ್ತಿರಲಿಲ್ಲ. ವೃತ್ತಿಪರತೆಯೆಂದರೆ ಅದು. ಅವರ ಬ್ಯಾಟಿಂಗ್ ಎಮದಿಗಾದರೂ ನೋಡಲೇ ಒಂದು ಸೊಗಸು, ಅದು ಕಲಾತ್ಮಕವಾಗಿಯೂ, ಕುಶಲವಾಗಿಯೂ ಇರುತ್ತಿತ್ತು. ಕರ್ನಾಟಕದ ಗುಂಡಪ್ಪ ವಿಶ್ವನಾಥ್ ಮತ್ತು ಅವರ ಓಪನರ್ಸ್ ಜೋಡಿಯದೂ ಒಂದು ದಂತಕಥೆಯೇ. ಗುಂಡಪ್ಪನವರ ಕಾವ್ಯಾತ್ಮಕ ಬ್ಯಾಟಿಂಗ್ ಮತ್ತು ಗವಾಸ್ಕರ್ರ ಕುಶಲಾತ್ಮಕ ಬ್ಯಾಟಿಂಗ್ ಜೊತೆಯಾದರೆ ಅಭಿಮಾನಿಗಳಿಗದು ರಸದೌತಣವೇ ಸರಿ. ಗವಾಸ್ಕರ್ ಮತ್ತು ಗುಂಡಪ್ಪ ವಿಶ್ವನಾಥ್ರ ಸ್ನೇಹ
ವೂ ಅಷ್ಟೆ ಮಧುರವಾದದ್ದು. ಅವರು ಅದನ್ನು ಸಂಬಂಧವಾಗಿಯೂ ಪರಿವರ್ತಿಸಿಕೊಂಡರು. ಗವಾಸ್ಕರ್ ಮದುವೆಯಾಗಿರುವುದು ಗುಂಡಪ್ಪ ತಂಗಿಯನ್ನ. ಗವಾಸ್ಕರ್ ಸ್ನೇಹಕ್ಕೆ ಕೊಟ್ಟ ಬೆಲೆಯದು. ಗವಾಸ್ಕರ್ ಕ್ರಿಕೆಟ್ ಆಟದ ಶ್ರೇಷ್ಟ ಚಿಂತಕರು. ಗವಾಸ್ಕರ್ ನಿವೃತ್ತರಾದ ಮೇಲೂ ಕೂಡ ಕ್ರಿಕೆಟ್ನಿಂದ ದೂರವುಳಿಯಲಿಲ್ಲ. ನಂತರ ಅವರು ಕ್ರಿಕೆಟ್ ವಿಶ್ಲೇಷಕರಾದರು, ಪತ್ರಿಕೆಗಳಿಗೆ ಅಂಕಣಕಾರರಾದರು, ಆತ್ಮಚರಿತ್ರೆ ಬರೆದರು, ಕ್ರಿಕೆಟ್ನ ಕುರಿತಾಗಿ ಅವರು ಅನೇಕ ಪುಸ್ತಕಗಳನ್ನು ಬರೆದರು, ಬರೆಯುತ್ತಿದ್ದಾರೆ, ಟೀವಿ ಕ್ರಾಂತಿಯ ನಂತರ ಕ್ರಿಕೆಟ್ ಪಂದ್ಯಗಳ ಹಿನ್ನಲೆ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಗವಾಸ್ಕರ್ರ ಆತ್ಮಚರಿತ್ರೆ ಸೊಗಸಾಗಿದೆ. ಕ್ರಿಕೆಟ್ನ ಹೊರತಾಗಿಯೂ ಅದೊಂದು ಉತ್ತಮ ಓದು. ಅವರು ಇಷ್ಟೆ ಅಲ್ಲದೆ ವಿಶ್ವದ ಸರ್ವಶ್ರೇಷ್ಠ ಕ್ರಿಕೆಟ್ ಸಂಸ್ಥೆ ಐಸಿಸಿಯ ಕ್ರಿಕೆಟ್ ಅಕಾಡಮಿಯ ಅಧ್ಯಕ್ಷರಾಗಿದ್ದರು. ಕಳೆದ ವರ್ಷದ ಆಸ್ಟ್ರೇಲಿಯಾ ಸರಣಿಯಲ್ಲಿನ ಅನೇಕ ಅಂಪೈರಿಂಗ್ ತಪ್ಪುಗಳನ್ನು ಮುಚ್ಚುಮರೆಯಿಲ್ಲದೇ ಟೀಕಿಸಿದರು. ಐಸಿಸಿ ಸಮಿತಿಯಲ್ಲಿದ್ದುಕೊಂಡು ಅಂಪೈರುಗಳನ್ನು ಹೀಗೆ ಮೀಡಿಯಾದಲ್ಲಿ ಕಮೆಂಟ್ ಮಾಡುವುದು ಸರಿಬರುವುದಿಲ್ಲವೆಂದು ಅನೇಕರು ಅಭಿಪ್ರಾಯವಿತ್ತಾಗ, ಗವಾಸ್ಕರ್ ಆ ಕಮಿಟಿಯ ಸದಸ್ಯತ್ವವನ್ನು ಎಡಗಾಲಲ್ಲಿ ಒದ್ದು ಎದ್ದು ಬಂದರು. ಗವಾಸ್ಕರ್ ಅಂದರೆ ಅದು.
ಇನ್ನು ಸಾಮಾನ್ಯವಾಗಿ ಗವಾಸ್ಕರ್ ವಿರುದ್ಧ ಕೇಳಿ ಬರುವ ಆರೋಪವೆಂದರೆ, ಅವರು ತಮ್ಮ ವಯಕ್ತಿಕ ದಾಖಲೆಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದರೆಂಬುದು. ಸಾಮಾನ್ಯವಾಗಿ ಎಲ್ಲ ದಾಖಲೆ ವೀರರನ್ನೂ ಬೆನ್ನತ್ತುವ ಆರೋಪವೇ ಇದು. ಒಂದೊಮ್ಮೆ ಹಾಗಾಗಿದ್ದರೂ ಅವರ ಪ್ರತಿಭೆಯ ಮುಂದೆ ಇದೆಲ್ಲವೂ ಗೌಣವಾಗುತ್ತದೆ. ಭಾರತದ ಆಟಗಾರರಿಗೆ ವಯಕ್ತಿಕವಾಗಿ ಪ್ರಾಯೋಜಕರನ್ನು ಹುಡುಕಿಕೊಳ್ಳಬೇಕೆಂದು ಹೇಳಿಕೊಟ್ಟವರೇ ಗವಾಸ್ಕರ್. 1983ರ ವಿಮಡೀಸ್ ವಿರುದ್ಧದ ಪಂದ್ಯವೊಂದರಲ್ಲಿ ಬ್ಯಾಟಿಂಗ್ಗೆ ಹೋಗುವ ಮೊದಲು ತಮ್ಮ ಬ್ಯಾಟಿನ ಹಿಂಭಾಗದಲ್ಲಿ ಎಂಆರ್ಎಫ್ ಸ್ಟಿಕ್ಕರಂಟಿಸಿ ಎಲ್ಲರನ್ನೂ ಚಕಿತಗೊಳಿಸಿದರು. ಇದು ಆಟದ ವ್ಯಾಪಾರೀಕರಣ ಎಂದು ಎಲ್ಲರೂ ಟೀಕಿಸಿದರು. ಆದರೆ ಗವಸ್ಕರ್ ಇದಕ್ಕೆಲ್ಲಾ ಎಂದಿಗೂ ತಲೆಕೆಸಿಕೊಂಡವರೇ ಅಲ್ಲ. ಈ ಪರಿಪಾಠ ಇಂದು ಎಷ್ಟು ವ್ಯಾಪಕವಾಗಿದೆಯೆಂದು ಎಲ್ಲರೂ ಬಲ್ಲರು. ಸಚಿನ್ ಬ್ಯಾಟಿನ ಹಿಂಭಾಗದಲ್ಲಿ ಇಂದಿಗೂ ಎಂಆರೆಫ್ ಸ್ಟಿಕ್ಕರ್ ಇದ್ದೇ ಇರುತ್ತದೆ. ಅಂತರಾಷ್ಟ್ರೀಯ ಕ್ರಿಕೆಟಿಗನೊಬ್ಬನ ಕೆರಿಯರ್ ಕಾಲಾವಧಿ ಅತ್ಯಲ್ಪ. ನೂರು ವರ್ಷಗಳ ಜೀವನದಲ್ಲಿ ಕ್ರಿಕೆಟ್ ಕೇವಲ ಇಪ್ಪತ್ತು ವರ್ಷಗಳಿರುತ್ತದೆ ಅಷ್ಟೆ. ಆದ್ದರಿಂದ ಆತ ನಡೆಯುತ್ತಿದ್ದಾಗಲೇ ಜೀವನಕ್ಕಾಗುವಷ್ಟು ಹಣ ಸಂಪಾದಿಸಬೇಕೆಂಬುದು ಅವರ ವಾದ. ಎಷ್ಟು ಸತ್ಯವಲ್ಲವೇ? ಇನ್ನು ನಮ್ಮ ಕ್ರಿಕೆಟಿಗರು ತಮ್ಮ ನಿವೃತ್ತ ಜೀವನವನ್ನು ಹೇಗೆ ಕ್ರಮಬದ್ಧವಾಗಿ ಆಯೋಜಿಸಿಕೊಳ್ಳಬೇಕೆಂಬುದರಲ್ಲೂ ಗವಾಸ್ಕರ್ ಮತ್ತು ಕಪಿಲ್ ದೇವ್ ಇತರರಿಗೆ ಮಾದರಿ.
ಇಂತಿಪ್ಪ ಸುನೀಲ್ ಮನೋಹರ ಗವಾಸ್ಕರ್ 60 ವರ್ಷದ ಹೊಸ್ತಿಲನ್ನು ದಾಟಿದ್ದಾರೆ. ಅವರಿಗೆ ದೇವರು ಮತ್ತಷ್ಟು ಆರೋಗ್ಯ ಆಯಸ್ಸು ನೀಡಿ ಹರಸಲೆಂಬುದೇ ಅಭಿಮಾನಿಗಳೆಲ್ಲರ ಹಾರೈಕೆ...

Proudly powered by Blogger
Theme: Esquire by Matthew Buchanan.
Converted by LiteThemes.com.